Sri Mangaladevi Annual Jathra Festival 2022 – Day 2

Blissful Darshan

ಮಂಗಳಾದೇವಿ ವರ್ಷಾವಧಿ ಜಾತ್ರ ಮಹೋತ್ಸವದ ಫಾಲ್ಗುಣ ಕೃಷ್ಣ ಚತುರ್ಥಿಯ ಇಂದಿನ ದ್ವಿತೀಯ ದಿನದ ಸೋಮವಾರದ ಪುಣ್ಯೋತ್ಸವದ ಸುಸಂದರ್ಭದಂದು ಮೇರು ವೈಭವದ ಅಲಂಕಾರದಲ್ಲಿ ಸಂಭ್ರಮಿತಳಾಗಿರುವ ಶ್ರೀ ಮಂಗಳಾದೇವಿ ಅಮ್ಮನವರು. 🌷

ದಿವ್ಯ ಮಂಗಳ ಸ್ವರೂಪಳಾಗಿ ಸಕಲ ಸ್ವರ್ಣ ವಸ್ತ್ರಾಭರಣ ಭೂಷಿತೆಯಾಗಿ ಮೈದೋರಿದ ವೈಭವೋಪೇತ ಅಲಂಕಾರದಲ್ಲಿ ಭಕ್ತ ಸಂರಕ್ಷಣಾರ್ಥ ಸರ್ವ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ಸಿಂಹಾಸನಸ್ಥಿತಳಾಗಿ ದರ್ಶನವನ್ನಿತ ಮಹಾದೇವಿ ಮಹಾದಿವ್ಯ ಶೋಭೆಯಿಂದ ತೇಜೋಮಯಳಾಗಿ ಬೆಳಗುತ್ತಾ ಕುಂಕುಮ-ಕೇಸರಿ ಮಿಶ್ರಿತ ವರ್ಣವುಳ್ಳ ಸೀರೆಯನ್ನು ತೊಟ್ಟು ಚತುರ್ಭಾಹುಗಳಿಂದ ಸುಶೋಭಿತಳಾದ ಪರಮೇಶ್ವರಿಯು ಅಭಯ-ವರದ ಹಸ್ತಳಾಗಿ ಸುಮ-ಪುಷ್ಪ ಹಾರಾದಿಗಳಿಂದ ಶೋಭಿಸುತ್ತಾ ತನ್ನ ದ್ವಿಬಾಹು’ಗಳಲ್ಲಿ ಚಕ್ರ ಪರಶುವನ್ನು ಧರಿಸಿ, ತ್ರಿಶೂಲವನ್ನು ಧಾರಣೆಮಾಡಿಕೊಂಡು ಸಿಂಹಾರೂಢಳಾಗಿ ಸಂಪೂರ್ಣ ಗರ್ಭಗೃಹವನ್ನ ವ್ಯಾಪಿಸಿಕೊಂಡು ರಾಜ ಗಾಂಭೀರ್ಯದಿಂದ ಅಲಂಕೃತಳಾಗಿದ್ದಾಳೆ 👏

𝘖𝘯 𝘵𝘩𝘦 𝘚𝘦𝘤𝘰𝘯𝘥 𝘥𝘢𝘺 𝘰𝘧 𝘵𝘩𝘦 𝘑𝘢𝘵𝘩𝘳𝘢 𝘔𝘢𝘩𝘰𝘵𝘴𝘢𝘷 𝘥𝘶𝘳𝘪𝘯𝘨 𝘵𝘩𝘦 𝘱𝘩𝘢𝘭𝘨𝘶𝘯𝘢 𝘮𝘰𝘯𝘵𝘩 𝘤𝘩𝘢𝘵𝘶𝘳𝘵𝘩𝘪 𝘰𝘯 𝘵𝘩𝘦 𝘧𝘢𝘥𝘪𝘯𝘨 𝘱𝘩𝘢𝘴𝘦 𝘰𝘧 𝘵𝘩𝘦 𝘮𝘰𝘰𝘯, 𝘎𝘰𝘥𝘥𝘦𝘴𝘴 𝘚𝘳𝘪 𝘔𝘢𝘯𝘨𝘢𝘭𝘢𝘥𝘦𝘷𝘪 𝘈𝘮𝘮𝘢 𝘰𝘯 𝘵𝘩𝘪𝘴 𝘰𝘤𝘤𝘢𝘴𝘴𝘪𝘰𝘯, 𝘴𝘩𝘦 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘴𝘢𝘧𝘧𝘳𝘰𝘯 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘵𝘰𝘥𝘢𝘺 𝘢𝘯𝘥 𝘤𝘢𝘯 𝘣𝘦𝘦𝘯 𝘴𝘦𝘦𝘯 𝘩𝘰𝘭𝘥𝘪𝘯𝘨 𝘩𝘦𝘳 𝘩𝘢𝘯𝘥𝘴 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢. 𝘞𝘦𝘢𝘳𝘪𝘯𝘨 𝘫𝘦𝘸𝘦𝘭𝘳𝘺 𝘢𝘱𝘵 𝘵𝘰 𝘩𝘦𝘳 𝘴𝘢𝘳𝘦𝘦 𝘤𝘰𝘭𝘰𝘶𝘳, 𝘴𝘩𝘦 𝘤𝘢𝘯 𝘣𝘦 𝘴𝘦𝘦𝘯 𝘩𝘰𝘭𝘥𝘪𝘯𝘨 𝘥𝘪𝘴𝘤 𝘢𝘯𝘥 𝘢 𝘢𝘤𝘦 𝘪𝘯 𝘩𝘦𝘳 𝘣𝘢𝘤𝘬 𝘢𝘳𝘮𝘴.🌙

𝘚𝘩𝘦 𝘤𝘢𝘯 𝘢𝘭𝘴𝘰 𝘣𝘦 𝘴𝘦𝘦𝘯 𝘸𝘦𝘢𝘳𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘬𝘪𝘯𝘥𝘴 𝘰𝘧 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘴𝘵𝘶𝘥𝘥𝘦𝘥 𝘸𝘪𝘵𝘩 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴 𝘪𝘯 𝘪𝘵 𝘢𝘯𝘥 𝘩𝘰𝘭𝘥𝘪𝘯𝘨 𝘩𝘦𝘳 𝘧𝘰𝘳𝘦 𝘢𝘳𝘮𝘴 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴 𝘵𝘩𝘢𝘵 𝘵𝘩𝘦𝘺 𝘯𝘦𝘦𝘥 𝘯𝘰𝘵 𝘣𝘦 𝘸𝘰𝘳𝘳𝘪𝘦𝘥 𝘢𝘣𝘰𝘶𝘵 𝘢𝘯𝘺𝘵𝘩𝘪𝘯𝘨 𝘸𝘩𝘪𝘭𝘦 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘱𝘳𝘰𝘵𝘦𝘤𝘵 𝘢𝘯𝘥 𝘧𝘶𝘭𝘭𝘧𝘪𝘭𝘭 𝘢𝘭𝘭 𝘵𝘩𝘦𝘪𝘳 𝘸𝘪𝘴𝘩𝘦𝘴 𝘢𝘯𝘥 𝘥𝘦𝘴𝘪𝘳𝘦𝘴. 𝘚𝘩𝘦 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘢 𝘧𝘭𝘰𝘸𝘦𝘳 𝘮𝘢𝘥𝘦 𝘰𝘧 𝘭𝘰𝘵𝘶𝘴 𝘢𝘯𝘥 𝘤𝘢𝘯 𝘣𝘦 𝘴𝘦𝘦𝘯 𝘳𝘪𝘥𝘪𝘯𝘨 𝘰𝘯 𝘭𝘪𝘰𝘯 𝘢𝘯𝘥 𝘩𝘰𝘭𝘥𝘪𝘯𝘨 𝘢 𝘵𝘳𝘪𝘥𝘦𝘯𝘵 𝘪𝘯 𝘩𝘦𝘳 𝘩𝘢𝘯𝘥. 𝘚𝘱𝘢𝘯𝘯𝘪𝘯𝘨 𝘵𝘩𝘦 𝘸𝘩𝘰𝘭𝘦 𝘴𝘢𝘯𝘤𝘵𝘶𝘮 𝘴𝘢𝘯𝘤𝘵𝘰𝘳𝘶𝘮, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘤𝘢𝘯 𝘣𝘦 𝘴𝘦𝘦𝘯 𝘩𝘦𝘳 𝘪𝘯 𝘣𝘦𝘢𝘶𝘵𝘪𝘧𝘶𝘭 𝘢𝘵𝘵𝘪𝘳𝘦 𝘭𝘪𝘬𝘦 𝘵𝘩𝘢𝘵 𝘰𝘧 𝘢 𝘳𝘰𝘺𝘢𝘭 𝘲𝘶𝘦𝘦𝘯.

Sankatahara Chaturthi Alankara

✨🌕ಜಾತ್ರಾ ಪರ್ವಕಾಲದಲ್ಲಿ ಮಂಗಳಾದೇವಿ ಶ್ರೀ ಮಹಾಗಣಪತಿ ದೇವರ ಸಂಕಷ್ಟ ಹರ ಚತುರ್ಥಿಯ ಅಲಂಕಾರ🌕✨

ಶ್ರೀ ಮಂಗಳಾದೇವಿ ಜಾತ್ರಾ ಮಹೋತ್ಸವದ ದ್ವಿತೀಯ ದಿವಸ ವಿಶೇಷವಾಗಿ ಫಾಲ್ಗುಣ ಮಾಸದ ಸಂಕಷ್ಟಹರ ಚತುರ್ಥಿಯ ಇಂದಿನ ಪುಣ್ಯ ದಿನದಂದು ಸರ್ವಾಲಂಕೃತನಾದ ಶ್ರೀ ಮಹಾಗಣಪತಿ ದೇವರು.

ಬಹುಳಾ ಬಾಲಚಂದ್ರ ಸಂಕಷ್ಟಹರ ಚತುರ್ಥಿ🐁🐀
೨೧- ೩ -೨೦೨೨ ಸೋಮವಾರ.
ಚಂದ್ರೊದಯ: ರಾತ್ರಿ 9.49’ಕ್ಕೆ

✨🌹ಓಂ ಶ್ರೀ ಮಹಾಗಣಪತಯೇ ನಮಃ🌹✨🎋

ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ಭಕ್ತಾವಾಸಂ ಸ್ಮರೇನಿತ್ಯಂ ಆಯುಷ್ಕಾಮಾರ್ಥ ಸಿದ್ಧಯೇ

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ ತೃತೀಯಂ ಕೃಷ್ಣ ಪಿನ್ಗಾಕ್ಷಂ ಗಜವಕ್ತ್ರಂ ಚತುರ್ಥಕಂ

ಲಂಬೋದರಂ ಪಂಚಕಂ ಚ ಷಷ್ಠಂ ವಿಕಟಮೇವ ಚ ಸಪ್ತಮಂ ವಿಘ್ನರಾಜೇಂದ್ರಂ ಧುಮ್ರವರ್ನಂ ತಥಾಷ್ಟಮಂ

ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧೀಕರ ಪ್ರಭೋ

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಂ

ಜಪೆದ್ಗಣಪತಿಸ್ತೋತ್ರಂ ಷಡಭಿರ್ಮಾಸೇ ಫಲಂಲಭೇತ್ ಸಂವತ್ಸರೇಣ ಸಿಧ್ದೀಂಚ ಲಭತೇ ನಾತ್ರಸಂಶಯಃ

ಅಷ್ಟೇಭ್ಯೋ ಬ್ರಾಹ್ಮಣೇಭ್ಯಸ್ಚ ಲಿಖಿತ್ವಾ ಯಃ ಸಮರ್ಪಯೇತತಸ್ಯ ವಿದ್ಯಾ ಭಾವೇತ್ಸರ್ವಾ ಗಣೇಶಸ್ಯ ಪ್ರಸಾದತಃ

🌸|| ಇತಿ ಶ್ರೀನಾರದಪುರಾಣೇ ಸಂಕಟನಾಶನಂ ನಾಮ ಶ್ರೀ ಗಣಪತಿಸ್ತೋತ್ರಂ ಸಂಪೂರ್ಣಂ ||🌸

Ashtotra Shatha Narikela Ganayaga

🌰✨ಅಷ್ಟೋತ್ತರ ಶತ ನಾರಿಕೇಳ ಗಣಯಾಗ✨🌰

🌸✨ ಶ್ರೀ ಮಂಗಳಾದೇವಿ ದೇವಳದಲ್ಲಿ ಜಾತ್ರಾ ಪರ್ವಕಾಲದ ಇಂದಿನ ಸೋಮವಾರದ ಸಂಕಷ್ಟ ಹರ ಚತುರ್ಥಿಯಂದು ೧೦೮’ಕಾಯಿ ನಾರಿಕೇಳ ಗಣಯಾಗವು ಶ್ರೀ ಮಹಾಗಣಪತಿ ದೇವರ ಪ್ರೀತ್ಯರ್ಥವಾಗಿ ನೆರವೇರಿತು.✨🌸

Mangalarathi