Sri Mangaladevi Annual Jathra Festival 2022 – Day 3

Blissful Darshan

Shatha Rudrabhisheka

°°ಶ್ರೀ ದೇವಿಗೆ ಶತ ರುದ್ರಾಭಿಷೇಕ°°

🔹ლ..ಮಂಗಳಮ್ಮನಿಗೆ ಶತ ರುದ್ರಾಭಿಷೇಕ..ლ🔹

🌹🌸ವರ್ಷಾವಧಿ ಜಾತ್ರಾ ಉತ್ಸವದ ಪ್ರಯುಕ್ತ ಶ್ರೀ ಮಂಗಳಾದೇವಿ ಅಮ್ಮನವರಿಗೆ ಇಂದು ಪ್ರಾತಃಕಾಲ ಶತ ರುದ್ರಾಭಿಷೇಕ ಸೇವೆಯು ನೆರವೇರಿತು🌸🌹

ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ನಾಲ್ಕನೆಯ ಕಾಂಡದಲ್ಲಿ ಬರುವ ‘ರುದ್ರಾಧ್ಯಾಯದ ರುದ್ರ ನಮಕ’ ಹಾಗೂ ‘ರುದ್ರ ಚಮಕ’ ಮಹಾ ಮಂತ್ರಗಳ ಪಠಣದೊಂದಿಗೆ ಮುಖ ಮಂಟಪದಿ ೧೧’ಮಂದಿ ವಿಪ್ರೋತ್ತಮರಿಂದ ರುದ್ರ ಪಠಣದ ನೂರು ಆವರ್ತನ ಸಹಿತ ಶತ ರುದ್ರಾಭಿಷೇಕವು ಶ್ರೀ ದೇವಿಗೆ ನಡೆಯಿತು.

ರುದ್ರ’ ಎಂದರೆ ಲಯಕರ್ತ ( ರೋದಯತೀತಿ ರುದ್ರಃ) ಎಂದರ್ಥ. ಅಥವಾ ಮಹಾ ರೋಗವನ್ನು, ಸಂಸಾರ ದುಃಖವನ್ನೂ ನಾಶ ಮಾಡುವವನು ರುದ್ರ ( ರುಜಂ ಸಂಸಾರ ದುಃಖಂ ದ್ರಾವಯತೀತಿ ರುದ್ರಃ) ಸರ್ವರ ಕಷ್ಟ ಕಾರ್ಪಣ್ಯವನ್ನು ಕಳೆದು ಕಾಯುವವನೇ ರುದ್ರ. 🔱📿📿

ರುದ್ರ ನಮಕ-ಚಮಕಗಳು ಲೋಕಹಿತಂಕರನಾದ ಶ್ರೀ ಪರಶಿವನ ಪರಮ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ. ರುದ್ರಪಾರಾಯಣ ಮಾಡುವ ಸರ್ವರಿಗೂ ಶಿವಾನುಗ್ರಹವಾಗುವಂತೆ ಮಾಡಿ ಸಂಪೂರ್ಣ ಬದುಕನ್ನು ಶಿವಮಯಗೊಳಿಸುವ ಶಕ್ತಿಯಿದ್ದು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದಲ್ಲಿ ನಮ್ಮೆಲ್ಲರನ್ನು ಸಕಲ ಸಂಕಷ್ಟದಿಂದ ಪಾರುಮಾಡಿ, ಸೌಭಾಗ್ಯ ಸಹಿತ ಮನೋಭೀಷ್ಟೆಯ ಕೊಟ್ಟು ಆಶೀರ್ವದಿಸುವನು.

_ರುದ್ರಾಧ್ಯಾಯ’ವು ಯಜುರ್ವೇದ ಸಂಹಿತೆಯ ಒಂದು ಅಂಗ. ಕೃಷ್ಣ ಯಜುರ್ವೇದ ತೈತ್ತರೀಯ ಸಂಹಿತೆಯ ಚತುರ್ಥ ( ವೈಶ್ವ ದೇವಂ ಕಾಂಡಮ್‌) ಕಾಂಡದ ಪಂಚಮ ಪ್ರಪಾಠಕ (ಅಧ್ಯಾಯ)ವೇ ‘ರುದ್ರಾಧ್ಯಾಯ’ ಅಥವಾ

Play Video

Mangalarathi

Play Video

Bali

Day 3 - Bali Videos
1/2 videos
1
Mangaladevi Annual Jathra Festival day 3 - Bali
Mangaladevi Annual Jathra Festival day 3 - Bali
2
Mangaladevi Annual Jathra Festival day 3 - Bali (Extra Footage)
Mangaladevi Annual Jathra Festival day 3 - Bali (Extra Footage)