Sri Mangaladevi Annual Jathra Festival 2022 – Day 4

Blissful Darshan

ಭಾರ್ಗವ ಕ್ಷೇತ್ರದ ಪ್ರಜಾ ಪರಿಪಾಲಕಳಾಗಿ ಮೆರೆಯಲ್ಪಡುವ ಮಂಗಳಾಪುರದ ಸಾಮ್ರಾಜ್ಞೆ ಶ್ರೀ ಮಂಗಳಾದೇವಿ ಅಮ್ಮನಿಗೆ ವಾರ್ಷಿಕ ಜಾತ್ರಾ ಮಹೋತ್ಸವದ ಫಾಲ್ಗುಣ ಕೃಷ್ಣ ನಾಲ್ಕನೇಯ ದಿನವಾದ ಇಂದಿನ ಷಷ್ಠಿಯ ಬುಧವಾರದಂದು ಚತುರ್ಥ ದಿನದ ಉತ್ಸವ. 🌹

ಶ್ವೇತ ವರ್ಣದ ಸೀರೆಯನ್ನು ಧರಿಸಿ ಸರ್ವಾಭರಣ ಭೂಷಿತೆಯಾಗಿ ಶೋಭಿಸುತ್ತಾ ಗುಲಾಬಿ ಕೆಂಪು ವರ್ಣದ ಪೀತಾಂಬರವನ್ನು ಉತ್ತರೀಯವನ್ನಾಗಿ ವ್ಯಾಪಿಸಿಕೊಂಡಿರುವ ಸರ್ವ ಮಂಗಳೆಯು ಸರ್ವಾಭರಣ ಭೂಷಿತಳಾಗಿ ಚತುರ್ಭುಜೆಯಾದ ದೇವಿಯು ಶಂಖ-ಚಕ್ರ ಪಾಣಿಯಾಗಿ ರಾಜೋಲ್ಲಾಸದಿಂದ ಕಾಲಂದುಗೆಯ ಮೇಲೆ ಪಾದವನ್ನು ಚಾಚಿ ಸುಖಾಸೀನಳಾಗಿ ರಾಜ ಗತ್ತಿನಿಂದ ನಿಂತ ಭಂಗಿಯಲ್ಲಿ ಸಿಂಹಾರೋಹಣಗೈದು ವೈಭವಿತಳಾಗಿದ್ದಾಳೆ.

ಇಂದು ಶ್ರೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಬಯನ ಬಲಿ ಉತ್ಸವದ ಕೊನೆಯ ದಿನ. ಪುಷ್ಪ ಕನ್ನಡಿಯ ಅಮೋಘ ಅಲಂಕಾರದಲ್ಲಿ ಗರ್ಭಗೃಹದಿಂದ ಉತ್ಸವದ ಸಲುವಾಗಿ ಹೊರಬಂದು ಸಾಯಂಕಾಲದ ಗೋಧೋಳಿ ಮುಹೂರ್ತಕ್ಕೆ ಸೌಭಾಗ್ಯದಾಯಿನಿಯಾಗಿ ಒಲಿದು ಬರುವ ಸನ್ನಿವೇಶ ಪುಣ್ಯಪ್ರದ ವಾದುದು.
ಸಾಯಂಕಾಲ ೬.೩೦’ಕ್ಕೆ ಬಲಿ ಹೊರಟು ತಂತ್ರವು ನೆರವೇರಿ ದೇವಳದ ರಾಜಾಂಗಣದಲ್ಲಿ ವೈಶಿಷ್ಠ್ಯಪೂರ್ಣ ಉಡುಕೆ ಸುತ್ತು, ಚೆಂಡೆ ಸುತ್ತು, ಸ್ಯಾಕ್ಸೋಫೋನ್ ಸುತ್ತು, ಬ್ಯಾಂಡ್ ವಾದ್ಯಾದಿ ಸುತ್ತುಗಳೊಂದಿಗೆ ವಿಶೇಷವಾಗಿ ಯಕ್ಷಗಾನ ಸುತ್ತು ಇಂದಿನ ಬಯನ ಬಲಿಯ ಪ್ರಧಾನ ಆಕರ್ಷಣೆ ಹಾಗೂ ಸಣ್ಣಭಂಡಿ ಸುತ್ತಿನ ಉತ್ಸವಗಳು ನಡೆಯಲಿದೆ 👏

ರಾಜೋಲ್ಲಾಸದಿಂದ ನಾಗಸ್ವರದ ವಿಶೇಷ ಸ್ವರ ನಾದ-ವಿನೋದದ ಆಲಾಪದಲ್ಲಿ ಉಡುಕೆ, ಚೆಂಡೆ, ಡೋಲು, ತಾಳಗಳ ಹಿಮ್ಮೇಳದಲ್ಲಿ ಸ್ವರ ತರಂಗಳ ಕರ್ಣಾಕರ್ಷಕ ನಿನಾದವು ಮಾರ್ದನಿಸುತ್ತಿರಲು ನಮ್ಮ ಶ್ರೀ ಕ್ಷೇತ್ರವೇ ವರ್ಣರಂಜಿತವಾಗಿ ಝೇಂಕರಿಸಲ್ಪಡುತ್ತಿದೆ.

ರಾಜ ವೈಭವದಲ್ಲಿ ವಿವಿಧ ವಾಧ್ಯಘೋಷಾದಿಗಳು… ಸಿಂಹ ದಂಡ, ಛತ್ರ ಚಾಮರ, ಬಿರುದಾವಳಿಯ ಸಹಿತ ವೖೆಭವದಿಂದ ಎರಡೂ ಬದಿಯ ದೀವಟಿಕೆಗಳ ಬೆಳಕಿನಲ್ಲಿ ಶ್ರೀ ದೇವಿಯು ಬಲಿಯ ಉತ್ಸವದಲ್ಲಿ ತನ್ನ ಭಕ್ತರ ಸಂಗಡ ತನ್ನ ದೇವಾಲಯದಲ್ಲಿ ಮೆರೆಯಲ್ಪಡುವ ಮಹಾ ಸಮ್ಮೇಳನವಾದ ಬಯನ ಬಲಿ ಉತ್ಸವವನ್ನು ಕಣ್ತುಂಬಿಕೊಂಡು ಧನ್ಯತಾ ಭಾವದೊಂದಿಗೆ ಆ ಮಹಾ ತಾಯಿಯನ್ನು ಭಕ್ತಿಭಾವದಲ್ಲಿ ಕಂಡು ಕೈಮುಗಿದು ಶರಣೆನುವ ಆ ಸಂದರ್ಭವು ಮಾತಿಗೆ ನಿಲುಕದ್ದಾಗಿದ್ದು ಇಂದಿನ ಕೊನೆಯ ಬಯನ ಬಲಿ ಉತ್ಸವವು ಸಾಕ್ಷಿಯಾಗಲಿದೆ.

ಬನ್ನಿ ಸಂಭ್ರಮಿಸಿ, ಇಂದಿನ ನಾಲ್ಕನೇಯ ಬಯನ ಬಲಿ ಉತ್ಸವದ ಪ್ರಧಾನ ಆಕರ್ಷಣೆಗೆ ಸಾಕ್ಷೀ ಕರ್ತೃರಾಗೋಣ.

ಕಾಲಾವಧಿ ಮಹೋತ್ಸವಗಳಲ್ಲಿ ಪಾಲ್ಗೊಂಡು ತಾಯಿಯ ದರ್ಶನದಿಂದ ಕರ್ಮಗಳು ಕಳೆದು ಪುಣ್ಯ ಸಂಚಯವಾಗುತ್ತಿದೆ. ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಎಲ್ಲವನ್ನೂ ಮೀರಿ ತಾಯಿಯ ಮೇಲೆ ಪೂರ್ಣ ವಿಶ್ವಾಸದಿಂದ ಆಗಮಿಸತಕ್ಕ ಭಜಕ ವೃಂದವೇ ಕ್ಷೇತ್ರದ ಕಾರಣೀಕಕ್ಕೆ ಸಾಕ್ಷಿಯಾಗಿದೆ. ನಮ್ಮ ಭವಿಷ್ಯದ ದಾರಿ ದೀಪವಾಗಿ ಕಲ್ಪವೃಕ್ಷದಂತೆ ಭಕ್ತಾಭೀಷ್ಟಪ್ರದಳಾಗಿ ಶ್ರೀ ದೇವಿಯು ಅನುಗ್ರಹಿಸುತ್ತಿರಲು ಅವಳ ಕರುಣಾ ಕಟಾಕ್ಷ ಮಾತ್ರದಿಂದಲೇ ಆಯು೯ರಾರೋಗ್ಯ ಸರ್ವ ಸಂಪತ್ತುಗಳು ಲಭಿಸಿ ಸನ್ಮಂಗಳವು ಸಂಪ್ರಾಪ್ತವಾಗಲಿ.

𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝖠𝗆𝗆𝖺 𝗐𝗁𝗈 𝖿𝗎𝗅𝖿𝗂𝗅𝗅𝗌 𝖺𝗅𝗅 𝗍𝗁𝖾 𝗐𝗂𝗌𝗁𝖾𝗌 𝗈𝖿 𝗁𝖾𝗋 𝖽𝖾𝗏𝗈𝗍𝖾𝖾𝗌 𝖺𝗇𝖽 𝗐𝗁𝗈 𝗌𝗍𝖺𝗇𝖽𝗌 𝖺𝗌 𝖺 𝗀𝗎𝗂𝖽𝖾 𝖺𝗇𝖽 𝖺𝗌 𝖺 𝗉𝗋𝗈𝗍𝖾𝖼𝗍𝗈𝗋 𝗍𝗈 𝗍𝗁𝖾 𝗈𝗇𝖾𝗌 𝗐𝗁𝗈 𝗌𝗎𝗋𝗋𝖾𝗇𝖽𝖾𝗋 𝗍𝗁𝖾𝗆𝗌𝖾𝗅𝗏𝖾𝗌 𝖼𝗈𝗆𝗉𝗅𝖾𝗍𝖾𝗅𝗒 𝗍𝗈 𝗁𝖾𝗋 𝗁𝖺𝗌 𝖻𝖾𝖾𝗇 𝗈𝖿𝖿𝖾𝗋𝖾𝖽 𝖺 𝖼𝗈𝗅𝗈𝗎𝗋𝖾 𝖡𝗅𝗎𝖾 𝗌𝖺𝗋𝖾𝖾 𝗈𝗇 𝗍𝗁𝖾 𝖿𝗈𝗎𝗋𝗍𝗁 𝖽𝖺𝗒 𝗈𝖿 𝗍𝗁𝖾 𝖠𝗇𝗇𝗎𝖺𝗅 𝖼𝖺𝗋 𝖿𝖾𝗌𝗍𝗂𝗏𝖺𝗅 𝗐𝗁𝗂𝖼𝗁 𝖿𝖺𝗅𝗅𝗌 𝗈𝗇 𝗍𝗁𝖾 𝗌𝗁𝖺𝗌𝗍𝗂 𝗍𝗁𝗂𝗍𝗁𝗂 (𝗌𝗂𝗑𝗍𝗁 𝖽𝖺𝗒) 𝗈𝖿 𝖯𝗁𝖺𝗅𝗀𝗎𝗇𝖺 𝗆𝗈𝗇𝗍𝗁. 𝖳𝗁𝖾 𝖻𝖾𝖺𝗎𝗍𝗒 𝗈𝖿 𝗍𝗁𝖾 𝗆𝗂𝗀𝗁𝗍 𝗊𝗎𝖾𝖾𝗇 𝗈𝖿 𝗍𝗁𝗂𝗌 𝗐𝗈𝗋𝗅𝖽 𝗁𝖺𝗌 𝖻𝖾𝖾𝗇 𝖻𝗋𝗈𝗎𝗀𝗁𝗍 𝗈𝗎𝗍 𝖻𝗒 𝗈𝖿𝖿𝖾𝗋𝗂𝗇𝗀 𝗁𝖾𝗋 𝗐𝗂𝗍𝗁 𝖺𝗅𝗅 𝗍𝗁𝖾 𝗀𝗈𝗅𝖽𝖾𝗇 𝗈𝗋𝗇𝖺𝗆𝖾𝗇𝗍𝗌, 𝗍𝗁𝖾 𝗉𝗎𝗌𝗁𝗉𝖺 𝖬𝖺𝖺𝗅𝖺 𝖺𝗇𝖽 𝖺𝗅𝗅 𝗍𝗒𝗉𝖾 𝗈𝖿 𝖩𝖾𝗐𝖾𝗅𝗋𝗒 𝗈𝖿𝖿𝖾𝗋𝖾𝖽 𝗍𝗈 𝗁𝖾𝗋 𝖼𝖺𝗇 𝖻𝖾 𝗌𝖾𝖾𝗇 𝗀𝗅𝗂𝗍𝗍𝖾𝗋𝗂𝗇𝗀 𝖿𝗋𝗈𝗆 𝗁𝖾𝗋 𝖻𝗈𝗌𝗈𝗆.

𝘞𝘦𝘢𝘳𝘪𝘯𝘨 𝘢 𝘉𝘭𝘶𝘦 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘢𝘯𝘥 𝘰𝘳𝘯𝘢𝘮𝘦𝘯𝘵𝘴 𝘮𝘢𝘥𝘦 𝘶𝘱 𝘰𝘧 𝘨𝘰𝘭𝘥 𝘢𝘯𝘥 𝘰𝘵𝘩𝘦𝘳 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴, 𝘵𝘩𝘦 𝘘𝘶𝘦𝘦𝘯 𝘰𝘧 𝘵𝘩𝘦 𝘤𝘪𝘵𝘺 𝘰𝘧 𝘔𝘢𝘯𝘨𝘢𝘭𝘶𝘳𝘶, 𝘤𝘢𝘯 𝘣𝘦 𝘴𝘦𝘦𝘯 𝘔𝘢𝘫𝘦𝘴𝘵𝘪𝘤𝘢𝘭𝘭𝘺 𝘳𝘪𝘥𝘪𝘯𝘨 𝘰𝘯 𝘢 𝘭𝘪𝘰𝘯 𝘢𝘯𝘥 𝘤𝘢𝘳𝘳𝘺𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘸𝘦𝘢𝘱𝘰𝘯𝘴 𝘭𝘪𝘬𝘦 𝘈𝘹𝘦, 𝘔𝘢𝘤𝘦, 𝘚𝘸𝘰𝘳𝘥, 𝘉𝘰𝘸 𝘢𝘯𝘥 𝘈𝘳𝘳𝘰𝘸 𝘪𝘯 𝘩𝘦𝘳 𝘶𝘱𝘱𝘦𝘳 𝘩𝘢𝘯𝘥𝘴, 𝘸𝘩𝘪𝘭𝘦 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘢𝘳𝘦 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢 𝘢𝘭𝘰𝘯𝘨 𝘸𝘪𝘵𝘩 𝘢 𝘛𝘳𝘪𝘥𝘦𝘯𝘵.

𝘏𝘰𝘭𝘥𝘪𝘯𝘨 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴, 𝘯𝘰𝘵 𝘵𝘰 𝘣𝘦 𝘴𝘤𝘢𝘳𝘦𝘥 𝘰𝘧 𝘢𝘯𝘺𝘵𝘩𝘪𝘯𝘨, 𝘸𝘩𝘪𝘭𝘦 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘴𝘢𝘧𝘦𝘨𝘶𝘢𝘳𝘥 𝘵𝘩𝘦𝘮 𝘧𝘳𝘰𝘮 𝘢𝘭𝘭 𝘬𝘪𝘯𝘥𝘴 𝘰𝘧 𝘥𝘪𝘧𝘧𝘪𝘤𝘶𝘭𝘵𝘪𝘦𝘴 𝘢𝘯𝘥 𝘢𝘭𝘴𝘰 𝘣𝘭𝘦𝘴𝘴 𝘵𝘩𝘦𝘮 𝘸𝘪𝘵𝘩 𝘢𝘭𝘭 𝘵𝘩𝘦𝘪𝘳 𝘳𝘪𝘨𝘩𝘵𝘧𝘶𝘭 𝘥𝘦𝘴𝘪𝘳𝘦𝘴 𝘢𝘯𝘥 𝘸𝘪𝘴𝘩𝘦𝘴. 𝘙𝘪𝘥𝘪𝘯𝘨 𝘰𝘯 𝘢 𝘭𝘪𝘰𝘯 𝘢𝘯𝘥 𝘤𝘢𝘳𝘳𝘺𝘪𝘯𝘨 𝘢 𝘤𝘩𝘢𝘬𝘳𝘢 𝘪𝘯 𝘩𝘦𝘳 𝘶𝘱𝘱𝘦𝘳 𝘳𝘪𝘨𝘩𝘵 𝘩𝘢𝘯𝘥, 𝘢𝘯𝘥 𝘢𝘯 𝘢𝘹𝘦 𝘰𝘯 𝘵𝘩𝘦 𝘰𝘵𝘩𝘦𝘳, 𝘩𝘦𝘳 𝘳𝘰𝘺𝘢𝘭 𝘦𝘯𝘰𝘳𝘮𝘰𝘶𝘴 𝘣𝘦𝘢𝘶𝘵𝘺 𝘤𝘢𝘯𝘯𝘰𝘵 𝘣𝘦 𝘱𝘦𝘯𝘯𝘦𝘥 𝘥𝘰𝘸𝘯 𝘪𝘯 𝘸𝘰𝘳𝘥𝘴.💯

𝑻𝒐𝒅𝒂𝒚 𝒃𝒆𝒊𝒏𝒈 𝒕𝒉𝒆 𝒍𝒂𝒔𝒕 𝒅𝒂𝒚 𝒐𝒇 𝒕𝒉𝒆 𝑩𝒂𝒚𝒂𝒏𝒂 𝑩𝒂𝒍𝒊, 𝑮𝒐𝒅𝒅𝒆𝒔𝒔 𝒘𝒊𝒍𝒍 𝒃𝒆 𝒕𝒂𝒌𝒆𝒏 𝒂𝒓𝒐𝒖𝒏𝒅 𝒕𝒉𝒆 𝒐𝒖𝒕𝒆𝒓 𝒑𝒂𝒓𝒕 𝒐𝒇 𝒕𝒉𝒆 𝒕𝒆𝒎𝒑𝒍𝒆 𝒃𝒚 𝒑𝒍𝒂𝒚𝒊𝒏𝒈 𝒊𝒏𝒔𝒕𝒓𝒖𝒎𝒆𝒏𝒕𝒔 𝒍𝒊𝒌𝒆 𝑼𝒅𝒖𝒌𝒆 (𝑨 𝑴𝒆𝒎𝒃𝒓𝒂𝒏𝒐𝒑𝒉𝒐𝒏𝒆 𝑰𝒏𝒔𝒕𝒓𝒖𝒎𝒆𝒏𝒕 𝒖𝒔𝒆𝒅 𝒊𝒏 𝒇𝒐𝒍𝒌 𝒎𝒖𝒔𝒊𝒄 𝒂𝒏𝒅 𝒑𝒓𝒂𝒚𝒆𝒓𝒔), 𝑪𝒉𝒂𝒏𝒅𝒆, 𝑺𝒂𝒙𝒐𝒑𝒉𝒐𝒏𝒆 𝒂𝒏𝒅 𝒂𝒍𝒔𝒐 𝒘𝒊𝒕𝒉 𝒅𝒊𝒇𝒇𝒆𝒓𝒆𝒏𝒕 𝒎𝒖𝒔𝒊𝒄𝒂𝒍 𝒊𝒏𝒔𝒕𝒓𝒖𝒎𝒆𝒏𝒕𝒔. 𝑻𝒉𝒆 𝒃𝒆𝒂𝒖𝒕𝒚 𝒐𝒇 𝒕𝒉𝒊𝒔 𝑩𝒂𝒚𝒂𝒏𝒂 𝑩𝒂𝒍𝒊 𝒔𝒉𝒂𝒍𝒍 𝒄𝒂𝒑𝒕𝒖𝒓𝒆 𝒂𝒍𝒍 𝒕𝒉𝒆 𝒉𝒆𝒂𝒓𝒕𝒔 𝒐𝒇 𝒕𝒉𝒆 𝒅𝒆𝒗𝒐𝒕𝒆𝒆𝒔 𝒘𝒉𝒐 𝒔𝒉𝒂𝒍𝒍 𝒇𝒆𝒆𝒍 𝒕𝒉𝒂𝒕 𝒕𝒉𝒆 𝑯𝒆𝒂𝒗𝒆𝒏 𝒊𝒔 𝒏𝒐𝒕𝒉𝒊𝒏𝒈 𝒃𝒖𝒕 𝒉𝒆𝒓𝒆 𝒂𝒏𝒅 𝒔𝒉𝒂𝒍𝒍 𝒓𝒂𝒊𝒔𝒆 𝒕𝒉𝒆𝒊𝒓 𝒉𝒂𝒏𝒅𝒔 𝒊𝒏 𝒂 𝒑𝒓𝒂𝒚𝒆𝒓 𝒑𝒐𝒔𝒕𝒖𝒓𝒆 𝒕𝒐 𝒕𝒉𝒂𝒏𝒌 𝒕𝒉𝒆 𝒈𝒐𝒅𝒅𝒆𝒔𝒔 𝒘𝒊𝒕𝒉 𝒈𝒓𝒂𝒕𝒊𝒕𝒖𝒅𝒆 𝒇𝒐𝒓 𝒈𝒊𝒗𝒊𝒏𝒈 𝒕𝒉𝒆𝒎 𝒂 𝒐𝒑𝒑𝒐𝒓𝒕𝒖𝒏𝒊𝒕𝒚 𝒕𝒐 𝒔𝒆𝒆 𝒕𝒉𝒊𝒔 𝒃𝒆𝒂𝒖𝒕𝒊𝒇𝒖𝒍 𝒆𝒗𝒆𝒏𝒕.

𝘓𝘦𝘵 𝘶𝘴 𝘴𝘶𝘳𝘳𝘦𝘯𝘥𝘦𝘳 𝘰𝘶𝘳𝘴𝘦𝘭𝘷𝘦𝘴 𝘵𝘰 𝘩𝘦𝘳 𝘣𝘦𝘤𝘢𝘶𝘴𝘦 𝘐𝘵 𝘪𝘴 𝘸𝘪𝘵𝘩 𝘩𝘦𝘳 𝘣𝘭𝘦𝘴𝘴𝘪𝘯𝘨𝘴 𝘵𝘩𝘢𝘵 𝘸𝘦 𝘴𝘵𝘢𝘺 𝘪𝘯 𝘨𝘰𝘰𝘥 𝘩𝘦𝘢𝘭𝘵𝘩, 𝘸𝘦𝘢𝘭𝘵𝘩 𝘢𝘯𝘥 𝘱𝘳𝘰𝘴𝘱𝘦𝘳𝘪𝘵𝘺. 𝘐𝘵 𝘪𝘴 𝘴𝘩𝘦 𝘸𝘩𝘰 𝘱𝘳𝘰𝘵𝘦𝘤𝘵𝘴 𝘢𝘯𝘥 𝘨𝘶𝘪𝘥𝘦𝘴 𝘶𝘴 𝘥𝘶𝘳𝘪𝘯𝘨 𝘵𝘩𝘦 𝘱𝘳𝘦𝘴𝘦𝘯𝘵 𝘥𝘪𝘧𝘧𝘪𝘤𝘶𝘭𝘵 𝘵𝘪𝘮𝘦𝘴 𝘰𝘧 𝘰𝘶𝘳 𝘭𝘪𝘧𝘦.

Chandika Homa

ಮಂಗಳಾದೇವಿ ವರ್ಷಾವಧಿ ಜಾತ್ರ ಮಹೋತ್ಸವದ ಪರ್ವಕಾಲದಲ್ಲಿ ಶ್ರೀ ಮಂಗಳಾದೇವಿ ಅಮ್ಮನವರ ಸನ್ನಿಧಾನದಲ್ಲಿ ನಾಲ್ಕನೇಯ ದಿನದ ಉತ್ಸವದ ಪ್ರಯುಕ್ತ ಇಂದು ನೆರವೇರುತ್ತಿರುವ ಚಂಡಿಕಾ ಹೋಮ🔥
✨🌸𝘾𝙝𝙖𝙣𝙙𝙞𝙠𝙖 𝙝𝙤𝙢𝙖 𝙞𝙨 𝙗𝙚𝙞𝙣𝙜 𝙥𝙚𝙧𝙛𝙤𝙧𝙢𝙚𝙙 𝙩𝙤 𝑮𝙤𝙤𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞 𝙙𝙪𝙧𝙞𝙣𝙜 𝙩𝙝𝙚 𝙛𝙤𝙪𝙧𝙩𝙝 𝙙𝙖𝙮 𝙤𝙛 𝙝𝙚𝙧 𝑨𝙣𝙣𝙪𝙖𝙡 𝐉𝙖𝙩𝙝𝙧𝙖 𝙈𝙖𝙝𝙤𝙩𝙨𝙖𝙫, 𝙩𝙤𝙙𝙖𝙮.🌸✨

Bali

Playlist

2 Videos

🇮🇳👏✨ವಂದೇ ಮಾತರಂ ನಾಗ ಸ್ವರದ ರಾಗದಲ್ಲಿ ಶ್ರೀ ಮಂಗಳಾದೇವಿ ಅಮ್ಮನ ವೈಭವದ ಚೆಂಡೆ ಸುತ್ತಿನ ವಾದನ.✨👏🇮🇳

Mangalarathi