Sri Mangaladevi Annual Jathra Festival 2023 Day 2

Blissful Darshan

ಮಂಗಳಾದೇವಿ ವರ್ಷಾವಧಿ ಜಾತ್ರ ಮಹೋತ್ಸವದ ಫಾಲ್ಗುಣ ಕೃಷ್ಣ ಚತುರ್ಥಿಯ ಇಂದಿನ ದ್ವಿತೀಯ ದಿನದ ಸೋಮವಾರದ ಪುಣ್ಯೋತ್ಸವದ ಸುಸಂದರ್ಭದಂದು ಮೇರು ವೈಭವದ ಅಲಂಕಾರದಲ್ಲಿ ಸಂಭ್ರಮಿತಳಾಗಿರುವ ಶ್ರೀ ಮಂಗಳಾದೇವಿ ಅಮ್ಮನವರು. 🌷

ದಿವ್ಯ ಮಂಗಳ ಸ್ವರೂಪಳಾಗಿ ಸಕಲ ಸ್ವರ್ಣ ವಸ್ತ್ರಾಭರಣ ಭೂಷಿತೆಯಾಗಿ ಮೈದೋರಿದ ವೈಭವೋಪೇತ ಅಲಂಕಾರದಲ್ಲಿ ಭಕ್ತ ಸಂರಕ್ಷಣಾರ್ಥ ಸರ್ವ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ಸಿಂಹಾಸನಸ್ಥಿತಳಾಗಿ ದರ್ಶನವನ್ನಿತ ಮಹಾದೇವಿ ಮಹಾದಿವ್ಯ ಶೋಭೆಯಿಂದ ತೇಜೋಮಯಳಾಗಿ ಬೆಳಗುತ್ತಾ ಕುಂಕುಮ-ಕೇಸರಿ ಮಿಶ್ರಿತ ವರ್ಣವುಳ್ಳ ಸೀರೆಯನ್ನು ತೊಟ್ಟು ಚತುರ್ಭಾಹುಗಳಿಂದ ಸುಶೋಭಿತಳಾದ ಪರಮೇಶ್ವರಿಯು ಅಭಯ-ವರದ ಹಸ್ತಳಾಗಿ ಸುಮ-ಪುಷ್ಪ ಹಾರಾದಿಗಳಿಂದ ಶೋಭಿಸುತ್ತಾ ತನ್ನ ದ್ವಿಬಾಹು’ಗಳಲ್ಲಿ ಚಕ್ರ ಪರಶುವನ್ನು ಧರಿಸಿ, ತ್ರಿಶೂಲವನ್ನು ಧಾರಣೆಮಾಡಿಕೊಂಡು ಸಿಂಹಾರೂಢಳಾಗಿ ಸಂಪೂರ್ಣ ಗರ್ಭಗೃಹವನ್ನ ವ್ಯಾಪಿಸಿಕೊಂಡು ರಾಜ ಗಾಂಭೀರ್ಯದಿಂದ ಅಲಂಕೃತಳಾಗಿದ್ದಾಳೆ 👏

𝘖𝘯 𝘵𝘩𝘦 𝘚𝘦𝘤𝘰𝘯𝘥 𝘥𝘢𝘺 𝘰𝘧 𝘵𝘩𝘦 𝘑𝘢𝘵𝘩𝘳𝘢 𝘔𝘢𝘩𝘰𝘵𝘴𝘢𝘷 𝘥𝘶𝘳𝘪𝘯𝘨 𝘵𝘩𝘦 𝘱𝘩𝘢𝘭𝘨𝘶𝘯𝘢 𝘮𝘰𝘯𝘵𝘩 𝘤𝘩𝘢𝘵𝘶𝘳𝘵𝘩𝘪 𝘰𝘯 𝘵𝘩𝘦 𝘧𝘢𝘥𝘪𝘯𝘨 𝘱𝘩𝘢𝘴𝘦 𝘰𝘧 𝘵𝘩𝘦 𝘮𝘰𝘰𝘯, 𝘎𝘰𝘥𝘥𝘦𝘴𝘴 𝘚𝘳𝘪 𝘔𝘢𝘯𝘨𝘢𝘭𝘢𝘥𝘦𝘷𝘪 𝘈𝘮𝘮𝘢 𝘰𝘯 𝘵𝘩𝘪𝘴 𝘰𝘤𝘤𝘢𝘴𝘴𝘪𝘰𝘯, 𝘴𝘩𝘦 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘴𝘢𝘧𝘧𝘳𝘰𝘯 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘵𝘰𝘥𝘢𝘺 𝘢𝘯𝘥 𝘤𝘢𝘯 𝘣𝘦𝘦𝘯 𝘴𝘦𝘦𝘯 𝘩𝘰𝘭𝘥𝘪𝘯𝘨 𝘩𝘦𝘳 𝘩𝘢𝘯𝘥𝘴 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢. 𝘞𝘦𝘢𝘳𝘪𝘯𝘨 𝘫𝘦𝘸𝘦𝘭𝘳𝘺 𝘢𝘱𝘵 𝘵𝘰 𝘩𝘦𝘳 𝘴𝘢𝘳𝘦𝘦 𝘤𝘰𝘭𝘰𝘶𝘳, 𝘴𝘩𝘦 𝘤𝘢𝘯 𝘣𝘦 𝘴𝘦𝘦𝘯 𝘩𝘰𝘭𝘥𝘪𝘯𝘨 𝘥𝘪𝘴𝘤 𝘢𝘯𝘥 𝘢 𝘢𝘤𝘦 𝘪𝘯 𝘩𝘦𝘳 𝘣𝘢𝘤𝘬 𝘢𝘳𝘮𝘴.🌙

𝘚𝘩𝘦 𝘤𝘢𝘯 𝘢𝘭𝘴𝘰 𝘣𝘦 𝘴𝘦𝘦𝘯 𝘸𝘦𝘢𝘳𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘬𝘪𝘯𝘥𝘴 𝘰𝘧 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘴𝘵𝘶𝘥𝘥𝘦𝘥 𝘸𝘪𝘵𝘩 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴 𝘪𝘯 𝘪𝘵 𝘢𝘯𝘥 𝘩𝘰𝘭𝘥𝘪𝘯𝘨 𝘩𝘦𝘳 𝘧𝘰𝘳𝘦 𝘢𝘳𝘮𝘴 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴 𝘵𝘩𝘢𝘵 𝘵𝘩𝘦𝘺 𝘯𝘦𝘦𝘥 𝘯𝘰𝘵 𝘣𝘦 𝘸𝘰𝘳𝘳𝘪𝘦𝘥 𝘢𝘣𝘰𝘶𝘵 𝘢𝘯𝘺𝘵𝘩𝘪𝘯𝘨 𝘸𝘩𝘪𝘭𝘦 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘱𝘳𝘰𝘵𝘦𝘤𝘵 𝘢𝘯𝘥 𝘧𝘶𝘭𝘭𝘧𝘪𝘭𝘭 𝘢𝘭𝘭 𝘵𝘩𝘦𝘪𝘳 𝘸𝘪𝘴𝘩𝘦𝘴 𝘢𝘯𝘥 𝘥𝘦𝘴𝘪𝘳𝘦𝘴. 𝘚𝘩𝘦 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘢 𝘧𝘭𝘰𝘸𝘦𝘳 𝘮𝘢𝘥𝘦 𝘰𝘧 𝘭𝘰𝘵𝘶𝘴 𝘢𝘯𝘥 𝘤𝘢𝘯 𝘣𝘦 𝘴𝘦𝘦𝘯 𝘳𝘪𝘥𝘪𝘯𝘨 𝘰𝘯 𝘭𝘪𝘰𝘯 𝘢𝘯𝘥 𝘩𝘰𝘭𝘥𝘪𝘯𝘨 𝘢 𝘵𝘳𝘪𝘥𝘦𝘯𝘵 𝘪𝘯 𝘩𝘦𝘳 𝘩𝘢𝘯𝘥. 𝘚𝘱𝘢𝘯𝘯𝘪𝘯𝘨 𝘵𝘩𝘦 𝘸𝘩𝘰𝘭𝘦 𝘴𝘢𝘯𝘤𝘵𝘶𝘮 𝘴𝘢𝘯𝘤𝘵𝘰𝘳𝘶𝘮, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘤𝘢𝘯 𝘣𝘦 𝘴𝘦𝘦𝘯 𝘩𝘦𝘳 𝘪𝘯 𝘣𝘦𝘢𝘶𝘵𝘪𝘧𝘶𝘭 𝘢𝘵𝘵𝘪𝘳𝘦 𝘭𝘪𝘬𝘦 𝘵𝘩𝘢𝘵 𝘰𝘧 𝘢 𝘳𝘰𝘺𝘢𝘭 𝘲𝘶𝘦𝘦𝘯.

Ashtotra Shatha Narikela Ganayaga

🌰✨ಅಷ್ಟೋತ್ತರ ಶತ ನಾರಿಕೇಳ ಗಣಯಾಗ✨🌰

🌸✨ _ಶ್ರೀ ಮಂಗಳಾದೇವಿ ದೇವಳದಲ್ಲಿ ಜಾತ್ರಾ ಪರ್ವಕಾಲದ ಇಂದಿನ ಭಾನುವಾರದ ಚತುರ್ಥಿಯಂದು ೧೦೮’ಕಾಯಿ ನಾರಿಕೇಳ ಗಣಯಾಗವು ಶ್ರೀ ಮಹಾಗಣಪತಿ ದೇವರ ಪ್ರೀತ್ಯರ್ಥವಾಗಿ ನೆರವೇರಿತು._✨🌸

ಹೋಮದಲ್ಲಿ ೧೦೮ ತೆಂಗಿನಕಾಯಿಗಳ ಸಹಿತ ಅಷ್ಟ ದ್ರವ್ಯಗಳ ಆಜ್ಯ ಆಹುತಿಯಿಂದ ಶ್ರೀದೇವರನ್ನು ಸಂತೃಪ್ತಿಪಡಿಸಲು ಸಕಲ ಇಷ್ಟಾರ್ಥ ಸಿದ್ಧಿಗಾಗಿ ದೇವಾನು ದೇವತೆಗಳೇ ಶ್ರೀ ಮಹಾಗಣಪತಿಯನ್ನು ಆರಾಧಿಸಿದ್ದಾರೆ. ನಮ್ಮ ಇಷ್ಟಾರ್ಥ ಸಿದ್ಧಿ, ಮನೋಸಂಕಲ್ಪ ಪ್ರಾಪ್ತಿಗಾಗಿ ಗಣಹೋಮದ ಮೂಲಕ ವಿಘ್ನ ನಿವಾರಕನ ಗಣಪತಿ ಹವನವನ್ನು ನಡೆಸಿದ್ದಲ್ಲಿ ಆಪತ್ತು ನಾಶ, ಅಷ್ಟೈಶ್ವರ್ಯ ಸಿದ್ಧಿ, ವಿದ್ಯಾಬುದ್ಧಿ ಜ್ಞಾನ ಸಿದ್ಧಿ, ವಿವಾಹ ಮಂಗಲ ಕಾರ್ಯಗಳು ಗೃಹ ಲಾಭ, ನ್ಯಾಯ ಪ್ರಾಪ್ತಿ, ಹೀಗೆ ಮನೋ ಇಷ್ಟಾರ್ಥ ಪ್ರಾಪ್ತಿ ಪೂರಕವಾಗಿ ಸಂಕಷ್ಟ ನಾಶಕ್ಕೆ ಸಮಗ್ರ ಅಭಿವೃದ್ಧಿಗಾಗಿ ಗಣಯಾಗವು ಸರ್ವ ಸಾಧಕ.👏

ಇಂದು ಶ್ರೀದೇವಿಯ ಜಾತ್ರಾ ಮಹೋತ್ಸವದ ದ್ವಿತೀಯ ದಿನದ ವಿನಾಯಕ ಚತುರ್ಥಿ. ಸಾಕ್ಷಾತ್ ಮಹಾಗಣಪತಿ ದೇವರು ಪ್ರಸನ್ನನಾಗಿರುವ ಪರ್ವಕಾಲ. ಸಂಕಷ್ಟ ನಿವಾರಕ ಅಭಿಷ್ಟಗಳನ್ನು ಪೂರೈಸುವ ಮಂಗಳಾದೇವಿ ಶ್ರೀ ಮಹಾಗಣಪತಿ ದೇವರಿಗೆ ಇಂದು ತಾಯಿಯ ಜಾತ್ರಾ ಮಹೋತ್ಸವದ ಅಮೃತ ಕಲ್ಪದಲ್ಲಿ ಶ್ರೀ ದೇವರಲ್ಲಿ ಮನದ ಇಷ್ಟಾರ್ಥ ಪ್ರಾರ್ಥನೆಗಳನ್ನು ಸಲ್ಲಿಸಿ ಮಂಗಳಾದೇವಿ ಕ್ಷೇತ್ರದ ಶ್ರೀ ಮಹಾಗಣಪತಿ ದೇವರು ಸರ್ವರಿಗೂ ಮಂಗಲ ಸತ್ಫಲವನ್ನು ಅನುಗ್ರಹಿಸಿ ಶ್ರೇಯೋಭಿವೃದ್ಧಿಯನ್ನುಂಟು ಮಾಡಲಿ

🥥108 𝘾𝙤𝙘𝙤𝙣𝙪𝙩 𝙂𝙖𝙣𝙖𝙮𝙖𝙜𝙖🥥
🌰✨𝐀𝐬𝐭𝐨𝐭𝐚𝐫𝐚 𝐒𝐡𝐚𝐭𝐚 𝐍𝐚𝐫𝐢𝐤𝐞𝐥𝐚 𝐆𝐚𝐧𝐚𝐲𝐚𝐠✨🌰

🌸✨ 108 ‘ 𝖭𝖺𝗋𝗂𝗄𝖾𝗅𝖺 𝖦𝖺𝗇𝖺𝗒𝖺𝗀’ 𝗐𝖺𝗌 𝗉𝖾𝗋𝖿𝗈𝗋𝗆𝖾𝖽 𝗂𝗇 𝖲𝗋𝗂 𝖬𝖺𝗇𝗀𝖺𝗅𝖺𝖽𝖾𝗏𝗂 𝖳𝖾𝗆𝗉𝗅𝖾, 𝗍𝗈𝖽𝖺𝗒, 𝖲𝗎𝗇𝖽𝖺𝗒 𝗈𝗇 𝗍𝗁𝖾 𝗈𝖼𝖼𝖺𝗌𝗂𝗈𝗇 𝗈𝖿 𝖢𝗁𝖺𝗍𝗎𝗋𝗍𝗁𝗂 𝖽𝗎𝗋𝗂𝗇𝗀 𝖩𝖺𝗍𝗋𝖺 𝖯𝖺𝗋𝗏𝖺𝗄𝖺𝗅𝖺
𝖮𝗇 𝗍𝗁𝖾 𝗌𝖾𝖼𝗈𝗇𝖽 𝖽𝖺𝗒 𝗈𝖿 𝗍𝗁𝖾 𝖠𝗇𝗇𝗎𝗅 𝖼𝖺𝗋 𝖿𝖾𝗌𝗍𝗂𝗏𝖺𝗅 𝗈𝖿 𝖲𝗋𝗂 𝖬𝖺𝗇𝗀𝖺𝗅𝖺𝖽𝖾𝗏𝗂 𝗍𝖾𝗆𝗉𝗅𝖾, 𝗍𝗈 𝗉𝗅𝖾𝖺𝗌𝖾 𝖫𝗈𝗋𝖽 𝖲𝗋𝗂 𝖬𝖺𝗁𝖺𝗀𝖺𝗇𝖺𝗉𝖺𝗍𝗁𝗂, 𝗀𝖺𝗇𝖺 𝗒𝖺𝗀𝖺 𝗐𝖺𝗌 𝗉𝖾𝗋𝖿𝗈𝗋𝗆𝖾𝖽 𝗐𝗂𝗍𝗁 108 𝖼𝗈𝖼𝗈𝗇𝗎𝗍𝗌.🌸✨

𝖳𝗈 𝗉𝗅𝖾𝖺𝗌𝖾 𝖫𝗈𝗋𝖽 𝖬𝖺𝗁𝖺𝗀𝖺𝗇𝖺𝗉𝖺𝗍𝗁𝗂 𝖺𝗇𝖽 𝗀𝖾𝗍 𝖽𝖾𝗌𝗂𝗋𝖾𝖽 𝖿𝗋𝗎𝗂𝗍𝗌, 𝗍𝗁𝖾 𝖽𝖾𝗏𝖺𝗍𝗁𝖺𝗌 𝗍𝗁𝖾𝗆𝗌𝖾𝗅𝗏𝖾𝗌 𝗁𝖺𝗏𝖾 𝖽𝗈𝗇𝖾 𝖺 𝖦𝖺𝗇𝖺 𝗁𝗈𝗆𝖺 𝗐𝗂𝗍𝗁 108 𝖼𝗈𝖼𝗈𝗇𝗎𝗍𝗌 𝖺𝗅𝗈𝗇𝗀 𝗐𝗂𝗍𝗁 𝖺𝗌𝗍𝖺 𝖽𝗋𝖺𝗏𝗒𝖺. 𝖳𝗈 𝗀𝖾𝗍 𝗈𝗎𝗋 𝖽𝖾𝗌𝗂𝗋𝖾𝖽 𝗋𝖾𝗌𝗎𝗅𝗍𝗌 𝖺𝗇𝖽 𝖿𝗎𝗅𝖿𝗂𝗅𝗅 𝖺𝗅𝗅 𝗈𝗎𝗋 𝗐𝗂𝗌𝗁𝖾𝗌, 𝗐𝖾 𝗇𝖾𝖾𝖽 𝗍𝗈 𝗉𝖾𝗋𝖿𝗈𝗋𝗆 𝗀𝖺𝗇𝖺 𝗒𝖺𝗀𝖺 𝗍𝗈 𝗅𝗈𝗋𝖽 𝖬𝖺𝗁𝖺𝗀𝖺𝗇𝖺𝗉𝖺𝗍𝗁𝗂, 𝗈𝗇𝖾 𝗐𝗁𝗈 𝗋𝖾𝗆𝗈𝗏𝖾𝗌 𝖺𝗅𝗅 𝗈𝗎𝗋 𝗈𝖻𝗌𝗍𝖺𝖼𝗅𝖾𝗌. 𝖡𝗒 𝗉𝖾𝗋𝖿𝗈𝗋𝗆𝗂𝗇𝗀 𝗍𝗁𝖾 𝗀𝖺𝗇𝖺 𝗒𝖺𝗀𝖺, 𝗇𝗈𝗍 𝗃𝗎𝗌𝗍 𝗈𝗎𝗋 𝖽𝖾𝗌𝗂𝗋𝖾𝗌 𝗐𝗂𝗅𝗅 𝖻𝖾 𝖿𝗎𝗅𝖿𝗂𝗅𝗅𝖾𝖽 𝖻𝗎𝗍 𝖺𝗅𝗌𝗈 𝗐𝖾 𝗐𝗂𝗅𝗅 𝖻𝖾 𝖻𝗅𝖾𝗌𝗌𝖾𝖽 𝗐𝗂𝗍𝗁 𝗀𝗈𝗈𝖽 𝗁𝖾𝖺𝗅𝗍𝗁, 𝖽𝖾𝗌𝗍𝗋𝗎𝖼𝗍𝗂𝗈𝗇 𝗈𝖿 𝗍𝗋𝗈𝗎𝖻𝗅𝖾𝗌, 𝗀𝖺𝗂𝗇 𝗀𝗈𝗈𝖽 𝗄𝗇𝗈𝗐𝗅𝖾𝖽𝗀𝖾, 𝖠𝗌𝗁𝗍𝖺𝗂𝗌𝗁𝗐𝖺𝗋𝗒𝖺 , 𝖩𝗇𝖺𝗇𝖺 𝖲𝗂𝖽𝖽𝗁𝗂, 𝗆𝖺𝗋𝗋𝗂𝖺𝗀𝖾 𝖺𝗇𝖽 𝗈𝗍𝗁𝖾𝗋 𝖺𝗎𝗌𝗉𝗂𝖼𝗂𝗈𝗎𝗌 𝖾𝗏𝖾𝗇𝗍𝗌 𝗅𝗂𝗄𝖾 𝖺𝗍𝗍𝖺𝗂𝗇𝗆𝖾𝗇𝗍 𝗈𝖿 𝗇𝖾𝗐 𝗁𝗈𝗎𝗌𝖾, 𝗀𝖾𝗍 𝗃𝗎𝗌𝗍𝗂𝖼𝖾 𝖿𝗈𝗋 𝖺𝗇𝗒 𝗂𝗇𝗃𝗎𝗌𝗍𝗂𝖼𝖾 𝖽𝗈𝗇𝖾 𝗍𝗈 𝗒𝗈𝗎 𝖾𝗍𝖼.

𝘔𝘢𝘺 𝘵𝘩𝘦 𝘨𝘳𝘢𝘤𝘦 𝘰𝘧 𝘓𝘰𝘳𝘥 𝘚𝘳𝘪 𝘔𝘢𝘩𝘢 𝘎𝘢𝘯𝘢𝘱𝘢𝘵𝘩𝘪 𝘬𝘦𝘦𝘱 𝘦𝘯𝘭𝘪𝘨𝘩𝘵𝘦𝘯𝘪𝘯𝘨 𝘺𝘰𝘶𝘳 𝘭𝘪𝘷𝘦𝘴 𝘢𝘯𝘥 𝘣𝘭𝘦𝘴𝘴 𝘺𝘰𝘶 𝘢𝘭𝘸𝘢𝘺𝘴. 𝘛𝘩𝘦 𝘓𝘰𝘳𝘥 𝘎𝘢𝘯𝘦𝘴𝘩 𝘣𝘳𝘪𝘯𝘨𝘴 𝘱𝘦𝘢𝘤𝘦, 𝘩𝘢𝘱𝘱𝘪𝘯𝘦𝘴𝘴 𝘢𝘯𝘥 𝘱𝘳𝘰𝘴𝘱𝘦𝘳𝘪𝘵𝘺 𝘵𝘰 𝘺𝘰𝘶 𝘢𝘯𝘥 𝘺𝘰𝘶𝘳 𝘧𝘢𝘮𝘪𝘭𝘺. 𝘏𝘦𝘳𝘦’𝘴 𝘸𝘪𝘴𝘩𝘪𝘯𝘨 𝘺𝘰𝘶 𝘢 𝘷𝘦𝘳𝘺 𝘩𝘢𝘱𝘱𝘺, 𝘱𝘳𝘰𝘴𝘱𝘦𝘳𝘰𝘶𝘴 𝘢𝘯𝘥 𝘩𝘦𝘢𝘭𝘵𝘩𝘺 𝘭𝘪𝘧𝘦 𝘰𝘯 𝘵𝘩𝘦 𝘢𝘶𝘴𝘱𝘪𝘤𝘪𝘰𝘶𝘴 𝘰𝘤𝘤𝘢𝘴𝘪𝘰𝘯 𝘰𝘧 𝐴𝑛𝑛𝑢𝑙 𝑐𝑎𝑟 𝑓𝑒𝑠𝑡𝑖𝑣𝑎

Bali

Mangalarathi