Sri Mangaladevi Annual Jathra Festival 2023 Day 5

Blissful Darshan

ૐ҉  ಶ್ರೀ ಮಂಗಳಾದೇವಿ ಅಮ್ಮನಿಗೆ ಮಹಾ ರಥೋತ್ಸವ ૐ҉ 
✨ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ ।
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ✨

ವರ್ಷಾವಧಿ ಜಾತ್ರ ಮಹೋತ್ಸವದ ಫಾಲ್ಗುಣಮಾಸ ಕೃಷ್ಣ ಪಕ್ಷದ ಇಂದಿನ ಮೂಲಾ ನಕ್ಷತ್ರದ ಸಪ್ತಮಿಯ ಗುರುವಾರದಂದು ನಮ್ಮ ಮಂಗಳಮ್ಮನಿಗೆ ಮಹಾ ರಥೋತ್ಸವದ ಸಂಭ್ರಮ.👏
ಜಾತ್ರೆಯ ಉತ್ಸವ ಪರ್ವಕಾಲದಲ್ಲಿ ನಡೆದ ನಾಲ್ಕೂ ದಿನಗಳ ಉತ್ಸವಾದಿ ಮಹೋತ್ಸವಗಳನ್ನು, ಪೂಜಾ ಕೈಂಕರ್ಯವನ್ನು, ಭಕ್ತರ ಸೇವಾದಿ ಪುನಸ್ಕಾರಗಳನ್ನು ಸಂತೋಷದಿಂದ ಸ್ವೀಕಾರ ಮಾಡಿಕೊಂಡು ಪ್ರೀತ್ಯರ್ಥಳಾಗಿ ನಾವು ಪ್ರಾರ್ಥಿಸಿ ಕೋರಿದ ಕಾಮಿತಾರ್ಥವನ್ನೆಲ್ಲ ಅನುಗ್ರಹಿಸಿ ಇಂದಿನ ರಥೋತ್ಸವದ ಪುಣ್ಯ ದಿನದಂದು ಮನೋಜ್ಞಯುತ ಭವ್ಯ ಅಲಂಕಾರದಲ್ಲಿ ಶ್ರೀ ಮಂಗಳಾದೇವಿಯು ವೈಭವದಿಂದ ತನ್ನ ದರ್ಶನ ಭಾಗ್ಯವನ್ನು ಇದೀಗ ನಮ್ಮೆಲ್ಲರಿಗೆ ಅನುಗ್ರಹಿಸಿದ್ದಾಳೆ. 👏

ಮೂಲಾ ನಕ್ಷತ್ರದ ಸಪ್ತಮಿಯ ರಥ ಸವಾರಿಯ ಪುಣ್ಯ ದಿನದಂದು ‘ಅರಳಿದ ಕೆಂದಾವರೆಯಂತೆ’ ಗುಲಾಬಿ ಮಿಶ್ರಿತ ಹಸಿರು ಚೌಕುಳಿ ವರ್ಣವುಳ್ಳ ಸೀರೆಯನ್ನುತೊಟ್ಟು ರಾಜ ಕಳೆಯಿಂದ ತೇಜೋಮಯಳಾಗಿ ಪ್ರಕಾಶಿಸುತ್ತಾ ಆಭರಣಯುಕ್ತ ಕಿರೀಟದ ಕೇಶಾಲಂಕಾರದಿಂದ ರತ್ನ ಖಚಿತ ಕಿರೀಟಾದಿ ಸ್ವರ್ಣಾಭರಣ ಭೂಷಣ ಪೀತಾಂಬರಗಳಿಂದ ಅಲಂಕೃತಳಾದ ಜಗನ್ಮಾತೆಯು ಚತುರ್ಭುಜದಿಂದ ಸುಶೋಭಿಸುತ್ತಾ ಕಮಲ ಪುಷ್ಪಹಾರ ದೊಡನೆ ಸರ್ವಾಭರಣಯುಕ್ತಳಾಗಿ ಅಭಯ-ವರದ ಹಸ್ತಳಾದ ದೇವಿಯು ತನ್ನ ದ್ವಿಬಾಹುಗಳಲ್ಲಿ ಗದೆ ಪರಶುವನ್ನು ಧಾರಣೆ ಮಾಡಿಕೊಂಡು ತ್ರಿಶೂಲ ಧಾರಿಣಿಯಾಗಿ ಸರ್ವಾಲಂಕೃತ ಮಂಗಳೆ ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು.

ಇಂದು ಶ್ರೀ ದೇವಿಯ ಕಾಲಾವಧಿ ಉತ್ಸವಾರ್ಥ ಐದನೇಯ ದಿನ ರಥಾರೋಹಣ, ರಾತ್ರಿ ರಥ ಸವಾರಿ, ಶಯನೋತ್ಸವ. ಶ್ರೀ ದೇವಿಯು ಅತೀ ಸಂತುಷ್ಟಳಾಗಿರುವ ಈ ಸಂದರ್ಭದಲ್ಲಿ ಬೇಡಿದ್ದನ್ನು ಕರುಣಿಸುವ ಕರುಣಾಮಯಿ. ಬಯನ ಬಲಿ ಸಹಿತ ಸರ್ವ ಉತ್ಸವ ಸುತ್ತುಗಳ ಲೀಲಾ ವಿನೋದವನ್ನು ನೋಡದ ಭಕ್ತರಿಲ್ಲ. ಕೈ ಮುಗಿಯದವರಿಲ್ಲ. ಧನ್ಯತಾ ಭಾವ ಕಾಣದವರಿಲ್ಲ. ಭಾವ ಪರವಶರಾಗಿ ಕಂಬನಿ ಮಿಡಿಯದವರಿಲ್ಲ. ಪ್ರತಿ ಕ್ಷಣವೂ ಇಲ್ಲಿ ಪವಿತ್ರವಾದುದು. ಭಾವನಾತ್ಮಕವಾಗಿ ನೋಡುವ ಭಕ್ತರನ್ನು ಭಾವ ಪರವಶರನ್ನಾಗಿ ಮಾಡಿ ಬಿಡುವುದು ಖಚಿತ. ಸ್ವರ್ಗವೆಂದರೆ ಇದೇ ಕ್ಷಣವೆಂದು ಮನಸ್ಸು ಪದೇ ಪದೇ ಸಾರಿ ಹೇಳುತ್ತದೆ.

ಇಂದು ಮಂಗಳೆ ಸಂತೋಷದಿಂದ ದೇವಳದಿಂದ ಹೊರಬಂದು, ತನ್ನ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳಾಪುರದ ಅಂತಃಪುರದಲ್ಲಿ ರಥವನೇರಿ ಮೆರೆದು ಬರುವ ಸುವರ್ಣ ಘಳಿಗೆ. ನಮ್ಮ ಪ್ರಾರ್ಥನೆ ಮನದಿಂಗಿತವನ್ನು ಆಸೆ ಆಕಾಂಕ್ಷೆ ಅಭೀಪ್ಸೆಗಳನ್ನು ಮನಸಾರೆ ಅವಳಲ್ಲಿ ಭಿನ್ನವಿಸಿ ಕೃತಾರ್ಥರಾಗೋಣ.

ಇಂದು ರಾತ್ರಿ ತಾಯಿಯ ರಥೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾಗೋಣ. ಇನ್ನೇನು ಅಪರಾಹ್ನ ೧೨’ಕ್ಕೆ ಮಹಾಪೂಜೆ, ರಥಾರೋಹಣವಾಗಿ ರಾತ್ರಿಯ ರಥ ಸವಾರಿಯ ಉತ್ಸವದಲ್ಲಿ ರಥಾರೂಢಳಾಗಿ ಬಹು ವಿಜೃಂಭಣೆಯಿಂದ ರಾಜ ರಥ ಬೀದಿಯಲ್ಲಿ ಮಹಾರಾಣಿಯಂತೆ ಮೆರೆದು ಬರುವ ಸರ್ವ ಮಂಗಳೆಯು ಇಂದಿನ ತೇರಿನ ದಿನದಂದು ಪ್ರಸನ್ನಳಾಗಿ ಸರ್ವರಿಗೂ ಸುಖ ಸೌಖ್ಯ ಶಾಂತಿ ಆಯಸ್ಸು ಆರೋಗ್ಯವನ್ನು ಕಲ್ಪಿಸಿಕೊಟ್ಟು ಜೀವನ ಪರ್ಯಂತ ಆನಂದವನ್ನು ಕರುಣಿಸಲಿ.

ತನ್ನೆಲ್ಲಾ ಉತ್ಸವಾದಿಗಳನ್ನು ನಿರ್ವಿಘ್ನವಾಗಿ ನಡೆಸಿಕೊಟ್ಟು ಇಂದಿನ ಅವಳ ರಥ ಸವಾರಿಯ ಸಕಲ ದೇವತಾಕಾರ್ಯಗಳಲ್ಲಿ ಪಾಲ್ಗೊಂಡು ಧನ್ಯರಾಗುವ ಸುಯೋಗವನ್ನು ದೇವಿಯು ನಮ್ಮೆಲ್ಲರಿಗೂ ಕರುಣಿಸಿ ಅವಳ ಕೃಪೆಯಿಂದ ದಾರಿದ್ರ್ಯ ದೂರಾಗಿ, ರೋಗ ಕ್ಷಾಮ ಡಾಮರಗಳು ವಿಕೋಪಾದಿಗಳು ಕ್ಷಯವಾಗಿ, ಧನ ಧಾನ್ಯ ಸನಿಹವಾಗಿ, ಧೀರ್ಘಾಯಸ್ಸು ಆರೋಗ್ಯವೂ, ಸುಖ ಶಾಂತಿ ನೆಮ್ಮದಿಯು ಪ್ರಾಪ್ತವಾಗಿ ಸರ್ವಮಂಗಳೆಯು ಅನವರತ ನಮ್ಮ ಬೆಂಗಾವಲಿಗಿದ್ದು ರಕ್ಷಿಸಲಿ.

🍂🍂🍂🍂🍂🍂🍂🍂🍂🍂🍂🍂🍂🍂🍂

𝘈𝘴 𝘢 𝘱𝘢𝘳𝘵 𝘰𝘧 𝘵𝘩𝘦 𝘈𝘯𝘯𝘶𝘢𝘭 𝘊𝘢𝘳 𝘍𝘦𝘴𝘵𝘪𝘷𝘢𝘭, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪, 𝘸𝘢𝘴 𝘱𝘭𝘦𝘢𝘴𝘦𝘥 𝘸𝘪𝘵𝘩 𝘢𝘭𝘭 𝘵𝘩𝘦 𝘳𝘪𝘵𝘶𝘢𝘭𝘴 𝘢𝘴 𝘱𝘳𝘦𝘴𝘤𝘳𝘪𝘣𝘦𝘥 𝘪𝘯 𝘵𝘩𝘦 𝘝𝘦𝘥𝘢𝘴, 𝘣𝘺 𝘵𝘢𝘯𝘵𝘳𝘪𝘤 𝘳𝘪𝘵𝘶𝘢𝘭𝘴, 𝘚𝘦𝘷𝘢’𝘴 𝘨𝘪𝘷𝘦𝘯 𝘣𝘺 𝘩𝘦𝘳 𝘥𝘦𝘷𝘰𝘵𝘦𝘦𝘴 𝘧𝘰𝘳 𝘵𝘩𝘦 𝘱𝘢𝘴𝘵 𝘧𝘰𝘶𝘳 𝘥𝘢𝘺𝘴 𝘢𝘯𝘥 𝘴𝘩𝘦 𝘪𝘴 𝘢𝘭𝘭 𝘴𝘦𝘵 𝘵𝘰 𝘣𝘦 𝘵𝘢𝘬𝘦𝘯 𝘰𝘶𝘵 𝘪𝘯 𝘢 𝘨𝘪𝘢𝘯𝘵 𝘸𝘰𝘰𝘥𝘦𝘯 𝘤𝘩𝘢𝘳𝘪𝘰𝘵 𝘵𝘰𝘥𝘢𝘺. 𝘛𝘩𝘪𝘴 𝘔𝘢𝘩𝘢 𝘶𝘵𝘴𝘢𝘷 𝘧𝘢𝘭𝘭𝘴 𝘰𝘯 𝘵𝘩𝘦 𝘚𝘢𝘱𝘵𝘩𝘢𝘮𝘪 𝘛𝘩𝘪𝘵𝘩𝘪 (𝘴𝘦𝘷𝘦𝘯𝘵𝘩 𝘥𝘢𝘺) 𝘰𝘧 𝘗𝘩𝘢𝘭𝘨𝘶𝘯𝘢 𝘮𝘰𝘯𝘵𝘩 𝘥𝘶𝘳𝘪𝘯𝘨 𝘵𝘩𝘦 𝘧𝘢𝘥𝘪𝘯𝘨 𝘱𝘦𝘳𝘪𝘰𝘥 𝘰𝘧 𝘵𝘩𝘦 𝘮𝘰𝘰𝘯 𝘤𝘢𝘭𝘭𝘦𝘥 𝘵𝘩𝘦 𝘒𝘳𝘪𝘴𝘩𝘯𝘢 𝘱𝘢𝘬𝘴𝘩𝘢.

𝘔𝘢𝘯𝘨𝘢𝘭𝘢𝘥𝘦𝘷𝘪 𝘭𝘰𝘷𝘦𝘴 𝘵𝘰 𝘥𝘦𝘤𝘰𝘳𝘢𝘵𝘦 𝘩𝘦𝘳𝘴𝘦𝘭𝘧. 𝘐𝘯 𝘢𝘭𝘭 𝘵𝘩𝘦 𝘍𝘰𝘶𝘳 𝘥𝘢𝘺𝘴 𝘰𝘧 𝘊𝘢𝘳 𝘍𝘦𝘴𝘵𝘪𝘷𝘢𝘭, 𝘪𝘵 𝘸𝘢𝘴 𝘮𝘦𝘴𝘮𝘦𝘳𝘪𝘻𝘪𝘯𝘨 𝘵𝘰 𝘴𝘦𝘦 𝘵𝘩𝘦 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘧𝘰𝘳𝘮𝘴 𝘢𝘥𝘰𝘳𝘯𝘦𝘥 𝘣𝘺 𝘵𝘩𝘦 𝘨𝘰𝘥𝘥𝘦𝘴𝘴. 𝘛𝘰𝘥𝘢𝘺’𝘴 𝘧𝘰𝘳𝘮 𝘰𝘧 𝘔𝘢𝘯𝘨𝘢𝘭𝘢𝘥𝘦𝘷𝘪 𝘴𝘦𝘦𝘮𝘴 𝘵𝘰 𝘣𝘦 𝘷𝘦𝘳𝘺 𝘣𝘦𝘢𝘶𝘵𝘪𝘧𝘶𝘭 𝘵𝘩𝘦𝘯 𝘢𝘭𝘭 𝘩𝘦𝘳 𝘰𝘵𝘩𝘦𝘳 𝘧𝘰𝘳𝘮𝘴. 𝘞𝘦𝘢𝘳𝘪𝘯𝘨 𝘢 𝘤𝘳𝘰𝘸𝘯 𝘩𝘢𝘷𝘪𝘯𝘨 𝘵𝘩𝘦 𝘴𝘩𝘢𝘱𝘦 𝘰𝘧 𝘢 𝘴𝘯𝘢𝘬𝘦, 𝘰𝘯 𝘵𝘩𝘪𝘴 𝘉𝘦𝘢𝘶𝘵𝘪𝘧𝘶𝘭 𝘖𝘤𝘤𝘢𝘴𝘪𝘰𝘯 𝘰𝘧 𝘵𝘩𝘦 𝘔𝘢𝘩𝘢 𝘙𝘢𝘵𝘩𝘰𝘵𝘴𝘢𝘷𝘢, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘢 𝘱𝘦𝘳𝘱𝘢𝘭 𝘣𝘭𝘶𝘦 𝘤𝘰𝘭𝘰𝘶𝘳 𝘴𝘢𝘳𝘦𝘦 𝘢𝘯𝘥 𝘪𝘴 𝘢𝘭𝘴𝘰 𝘥𝘦𝘤𝘰𝘳𝘢𝘵𝘦𝘥 𝘸𝘪𝘵𝘩 𝘴𝘰𝘮𝘦 𝘣𝘦𝘢𝘶𝘵𝘪𝘧𝘶𝘭 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴. 𝘚𝘩𝘦 𝘪𝘴 𝘳𝘪𝘥𝘪𝘯𝘨 𝘰𝘯 𝘢 𝘭𝘪𝘰𝘯 𝘩𝘰𝘭𝘥𝘪𝘯𝘨 𝘢 𝘤𝘩𝘢𝘬𝘳𝘢 𝘢𝘯𝘥 𝘴𝘸𝘰𝘳𝘥 𝘢𝘭𝘰𝘯𝘨 𝘸𝘪𝘵𝘩 𝘵𝘩𝘦 𝘙𝘰𝘴𝘦 𝘢𝘯𝘥 𝘢 𝘵𝘳𝘪𝘥𝘦𝘯𝘵. 𝘚𝘩𝘦 𝘪𝘴 𝘩𝘰𝘭𝘥𝘪𝘯𝘨 𝘵𝘩𝘦 𝘈𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢 𝘪𝘯 𝘩𝘦𝘳 𝘧𝘰𝘳𝘦 𝘩𝘢𝘯𝘥𝘴, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴 𝘯𝘰𝘵 𝘵𝘰 𝘧𝘦𝘢𝘳 𝘰𝘧 𝘢𝘯𝘺𝘵𝘩𝘪𝘯𝘨 𝘸𝘩𝘦𝘯 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘱𝘳𝘰𝘵𝘦𝘤𝘵 𝘵𝘩𝘦𝘮 𝘸𝘪𝘵𝘩 𝘵𝘩𝘦 𝘈𝘣𝘩𝘢𝘺𝘢 𝘮𝘶𝘥𝘳𝘢 𝘢𝘯𝘥 𝘢𝘭𝘴𝘰 𝘴𝘩𝘦 𝘪𝘴 𝘳𝘦𝘢𝘥𝘺 𝘵𝘰 𝘧𝘶𝘭𝘧𝘪𝘭𝘭 𝘢𝘭𝘭 𝘵𝘩𝘦 𝘸𝘪𝘴𝘩𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴 𝘸𝘪𝘵𝘩 𝘵𝘩𝘦 𝘷𝘢𝘳𝘢𝘥𝘢 𝘮𝘶𝘥𝘳𝘢.

𝘖𝘯 𝘵𝘩𝘦 𝘰𝘤𝘤𝘢𝘴𝘪𝘰𝘯 𝘰𝘧 𝘵𝘩𝘦 𝘔𝘢𝘩𝘢 𝘙𝘢𝘵𝘩𝘰𝘵𝘴𝘢𝘷𝘢 𝘰𝘧 𝘵𝘩𝘦 𝘣𝘦𝘢𝘶𝘵𝘪𝘧𝘶𝘭 𝘲𝘶𝘦𝘦𝘯 𝘰𝘧 𝘵𝘩𝘪𝘴 𝘸𝘰𝘳𝘭𝘥, 𝘭𝘦𝘵’𝘴 𝘵𝘢𝘬𝘦 𝘱𝘢𝘳𝘵 𝘪𝘯 𝘵𝘩𝘪𝘴 𝘨𝘳𝘢𝘯𝘥 𝘰𝘤𝘤𝘢𝘴𝘪𝘰𝘯 𝘢𝘯𝘥 𝘴𝘩𝘰𝘸 𝘰𝘶𝘳 𝘨𝘳𝘢𝘵𝘪𝘵𝘶𝘥𝘦 𝘢𝘯𝘥 𝘭𝘰𝘷𝘦 𝘵𝘰𝘸𝘢𝘳𝘥𝘴 𝘩𝘦𝘳, 𝘸𝘩𝘰 𝘩𝘢𝘴 𝘢𝘭𝘸𝘢𝘺𝘴 𝘣𝘦𝘦𝘯 𝘵𝘩𝘦𝘳𝘦 𝘧𝘰𝘳 𝘩𝘦𝘳 𝘥𝘦𝘷𝘰𝘵𝘦𝘦𝘴 𝘵𝘰 𝘧𝘶𝘭𝘧𝘪𝘭𝘭 𝘢𝘭𝘭 𝘵𝘩𝘦𝘪𝘳 𝘸𝘪𝘴𝘩𝘦𝘴 𝘢𝘯𝘥 𝘢𝘭𝘴𝘰 𝘵𝘰 𝘱𝘳𝘰𝘵𝘦𝘤𝘵 𝘢𝘯𝘥 𝘨𝘶𝘪𝘥𝘦 𝘩𝘦𝘳 𝘥𝘦𝘷𝘰𝘵𝘦𝘦𝘴 𝘸𝘩𝘰 𝘩𝘢𝘷𝘦 𝘴𝘶𝘳𝘳𝘦𝘯𝘥𝘦𝘳𝘦𝘥 𝘵𝘩𝘦𝘮𝘴𝘦𝘭𝘷𝘦𝘴 𝘵𝘰 𝘩𝘦𝘳 𝘧𝘶𝘭𝘭𝘺. 𝘔𝘢𝘺 𝘵𝘩𝘦 𝘨𝘰𝘥𝘥𝘦𝘴𝘴 𝘨𝘪𝘷𝘦 𝘶𝘴 𝘵𝘩𝘪𝘴 𝘣𝘦𝘢𝘶𝘵𝘪𝘧𝘶𝘭 𝘰𝘱𝘱𝘰𝘳𝘵𝘶𝘯𝘪𝘵𝘺 𝘵𝘰 𝘣𝘦 𝘢 𝘱𝘢𝘳𝘵 𝘰𝘧 𝘢𝘭𝘭 𝘵𝘩𝘦 𝘳𝘪𝘵𝘶𝘢𝘭𝘴 𝘵𝘩𝘢𝘵 𝘪𝘴 𝘵𝘰 𝘣𝘦 𝘤𝘰𝘯𝘥𝘶𝘤𝘵𝘦𝘥 𝘣𝘦𝘧𝘰𝘳𝘦 𝘴𝘩𝘦 𝘪𝘴 𝘢𝘭𝘭 𝘴𝘦𝘵 𝘵𝘰 𝘤𝘭𝘪𝘮𝘣 𝘵𝘩𝘦 𝘨𝘪𝘢𝘯𝘵 𝘸𝘰𝘰𝘥𝘦𝘯 𝘤𝘩𝘢𝘳𝘪𝘰𝘵 𝘢𝘯𝘥 𝘬𝘦𝘦𝘱 𝘴𝘩𝘰𝘸𝘦𝘳𝘪𝘯𝘨 𝘩𝘦𝘳 𝘣𝘭𝘦𝘴𝘴𝘪𝘯𝘨𝘴 𝘰𝘯 𝘶𝘴 𝘣𝘺 𝘸𝘩𝘪𝘤𝘩 𝘰𝘶𝘳 𝘭𝘪𝘷𝘦𝘴 𝘤𝘢𝘯 𝘣𝘦 𝘩𝘦𝘢𝘭𝘵𝘩𝘺, 𝘸𝘦𝘢𝘭𝘵𝘩𝘺 𝘢𝘯𝘥 𝘱𝘳𝘰𝘴𝘱𝘦𝘳𝘰𝘶𝘴.🙏

𝘐𝘵 𝘪𝘴 𝘢 𝘨𝘳𝘦𝘢𝘵 𝘩𝘰𝘯𝘰𝘶𝘳 𝘢𝘯𝘥 𝘣𝘭𝘦𝘴𝘴𝘪𝘯𝘨𝘴 𝘰𝘧 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘵𝘰 𝘵𝘢𝘬𝘦 𝘱𝘢𝘳𝘵 𝘪𝘯 𝘩𝘦𝘳 𝘙𝘢𝘵𝘩𝘰𝘵𝘴𝘢𝘷. 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘴𝘩𝘢𝘭𝘭 𝘱𝘭𝘢𝘤𝘦𝘥 𝘪𝘯𝘴𝘪𝘥𝘦 𝘵𝘩𝘦 𝘤𝘩𝘢𝘳𝘪𝘰𝘵 𝘪𝘯 𝘴𝘰𝘮𝘦𝘵𝘪𝘮𝘦 𝘢𝘯𝘥 𝘭𝘢𝘵𝘦𝘳 𝘪𝘯 𝘵𝘩𝘦 𝘦𝘷𝘦𝘯𝘪𝘯𝘨, 𝘴𝘩𝘦 𝘴𝘩𝘢𝘭𝘭 𝘵𝘢𝘬𝘦𝘯 𝘧𝘰𝘳 𝘢 𝘳𝘪𝘥𝘦 𝘪𝘯 𝘵𝘩𝘦 𝘴𝘵𝘳𝘦𝘦𝘵𝘴 𝘰𝘧 𝘵𝘩𝘦 𝘵𝘦𝘮𝘱𝘭𝘦 𝘴𝘶𝘳𝘳𝘰𝘶𝘯𝘥𝘪𝘯𝘨 𝘪𝘯 𝘢 𝘨𝘳𝘢𝘯𝘥 𝘮𝘢𝘯𝘯𝘦𝘳. 𝘛𝘩𝘦 𝘩𝘶𝘨𝘦, 𝘤𝘰𝘭𝘰𝘶𝘳𝘧𝘶𝘭𝘭𝘺 𝘥𝘦𝘤𝘰𝘳𝘢𝘵𝘦𝘥 𝘤𝘩𝘢𝘳𝘪𝘰𝘵𝘴 𝘢𝘳𝘦 𝘥𝘳𝘢𝘸𝘯 𝘣𝘺 𝘮𝘶𝘭𝘵𝘪𝘵𝘶𝘥𝘦 𝘰𝘧 𝘥𝘦𝘷𝘰𝘵𝘦𝘦𝘴 𝘢𝘤𝘳𝘰𝘴𝘴 𝘵𝘩𝘦 𝘴𝘵𝘳𝘦𝘦𝘵𝘴 𝘸𝘪𝘵𝘩 𝘭𝘰𝘷𝘦 𝘢𝘯𝘥 𝘥𝘦𝘷𝘰𝘵𝘪𝘰𝘯. 𝘔𝘢𝘺 𝘵𝘩𝘦 𝘲𝘶𝘦𝘦𝘯 𝘰𝘧 𝘵𝘩𝘦 𝘔𝘢𝘯𝘨𝘢𝘭𝘶𝘳𝘶 𝘤𝘪𝘵𝘺 𝘣𝘦 𝘱𝘭𝘦𝘢𝘴𝘦𝘥 𝘸𝘪𝘵𝘩 𝘵𝘩𝘪𝘴 𝘤𝘩𝘢𝘳𝘪𝘰𝘵 𝘳𝘪𝘥𝘦 𝘢𝘯𝘥 𝘣𝘭𝘦𝘴𝘴 𝘶𝘴 𝘢𝘭𝘭 𝘸𝘪𝘵𝘩 𝘢𝘯 𝘢𝘣𝘶𝘯𝘥𝘢𝘯𝘤𝘦 𝘰𝘧 𝘩𝘦𝘢𝘭𝘵𝘩, 𝘸𝘦𝘢𝘭𝘵𝘩, 𝘩𝘢𝘱𝘱𝘪𝘯𝘦𝘴𝘴, 𝘱𝘦𝘢𝘤𝘦 𝘢𝘯𝘥 𝘱𝘳𝘰𝘴𝘱𝘦𝘳𝘪𝘵𝘺. 𝘎𝘰𝘥𝘥𝘦𝘴𝘴 𝘸𝘩𝘰 𝘪𝘴 𝘣𝘦𝘪𝘯𝘨 𝘱𝘳𝘢𝘪𝘴𝘦𝘥 𝘦𝘷𝘦𝘯 𝘣𝘺 𝘵𝘩𝘦 𝘨𝘰𝘥𝘴 𝘭𝘪𝘬𝘦 𝘪𝘯𝘥𝘳𝘢, 𝘚𝘶𝘳𝘺𝘢, 𝘤𝘩𝘢𝘯𝘥𝘳𝘢 𝘦𝘵𝘤 𝘱𝘢𝘺 𝘩𝘦𝘦𝘥 𝘵𝘰 𝘢𝘭𝘭 𝘰𝘶𝘳 𝘸𝘪𝘭𝘭 𝘢𝘯𝘥 𝘸𝘪𝘴𝘩𝘦𝘴 𝘢𝘯𝘥 𝘨𝘶𝘪𝘥𝘦 𝘶𝘴 𝘵𝘩𝘳𝘰𝘶𝘨𝘩 𝘵𝘩𝘦 𝘱𝘢𝘵𝘩𝘴 𝘰𝘧 𝘰𝘶𝘳 𝘭𝘪𝘷𝘦𝘴 𝘪𝘯 𝘢 𝘱𝘳𝘰𝘱𝘦𝘳 𝘸𝘢𝘺, 𝘴𝘰 𝘵𝘩𝘢𝘵 𝘸𝘦 𝘳𝘦𝘢𝘤𝘩 𝘰𝘶𝘳 𝘥𝘦𝘴𝘪𝘳𝘦𝘥 𝘥𝘦𝘴𝘵𝘪𝘯𝘢𝘵𝘪𝘰𝘯 𝘴𝘢𝘧𝘦𝘭𝘺 𝘢𝘯𝘥 𝘴𝘦𝘵𝘵𝘭𝘦 𝘥𝘰𝘸𝘯 𝘢𝘴 𝘢 𝘥𝘶𝘴𝘵 𝘪𝘯 𝘵𝘩𝘦 𝘩𝘰𝘭𝘺 𝘧𝘦𝘦𝘵 𝘰𝘧 𝘰𝘶𝘳 𝘣𝘦𝘭𝘰𝘷𝘦𝘥 𝘔𝘢𝘯𝘨𝘢𝘭𝘢𝘮𝘮𝘢.

𝘔𝘢𝘺 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪, 𝘸𝘩𝘰 𝘳𝘦𝘴𝘪𝘥𝘦𝘴 𝘪𝘯 𝘵𝘩𝘦 𝘩𝘦𝘢𝘳𝘵𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴, 𝘢𝘭𝘸𝘢𝘺𝘴 𝘣𝘭𝘦𝘴𝘴 𝘵𝘩𝘦𝘮 𝘸𝘪𝘵𝘩 𝘨𝘰𝘰𝘥 𝘩𝘦𝘢𝘭𝘵𝘩, 𝘭𝘰𝘯𝘨𝘦𝘵𝘪𝘷𝘪𝘵𝘺, 𝘳𝘦𝘮𝘰𝘷𝘦 𝘢𝘭𝘭 𝘵𝘩𝘦 𝘴𝘪𝘯𝘴 𝘵𝘩𝘢𝘵 𝘩𝘢𝘷𝘦 𝘣𝘦𝘦𝘯 𝘤𝘰𝘮𝘮𝘪𝘵𝘵𝘦𝘥 𝘣𝘺 𝘶𝘴, 𝘤𝘶𝘳𝘦 𝘶𝘴 𝘧𝘳𝘰𝘮 𝘢𝘭𝘭 𝘰𝘶𝘳 𝘱𝘩𝘺𝘴𝘪𝘤𝘢𝘭 𝘢𝘯𝘥 𝘮𝘦𝘯𝘵𝘢𝘭 𝘵𝘳𝘢𝘶𝘮𝘢 𝘢𝘯𝘥 𝘥𝘪𝘴𝘦𝘢𝘴𝘦𝘴, 𝘣𝘦 𝘢 𝘨𝘶𝘪𝘥𝘦 𝘵𝘩𝘳𝘰𝘶𝘨𝘩 𝘵𝘩𝘦 𝘱𝘢𝘵𝘩𝘴 𝘰𝘧 𝘰𝘶𝘳 𝘭𝘪𝘧𝘦 𝘢𝘯𝘥 𝘢𝘤𝘵 𝘢𝘴 𝘰𝘶𝘳 𝘶𝘭𝘵𝘪𝘮𝘢𝘵𝘦 𝘴𝘵𝘳𝘦𝘯𝘨𝘵𝘩, 𝘸𝘩𝘰 𝘴𝘩𝘢𝘭𝘭 𝘴𝘢𝘧𝘦𝘨𝘶𝘢𝘳𝘥 𝘶𝘴 𝘢𝘭𝘸𝘢𝘺𝘴 𝘧𝘳𝘰𝘮 𝘢𝘭𝘭 𝘵𝘩𝘦 𝘵𝘳𝘰𝘶𝘣𝘭𝘦𝘴 𝘢𝘯𝘥 𝘥𝘪𝘧𝘧𝘪𝘤𝘶𝘭𝘵 𝘱𝘦𝘳𝘪𝘰𝘥𝘴 𝘪𝘯 𝘰𝘶𝘳 𝘭𝘪𝘧𝘦. 𝘔𝘢𝘺 𝘩𝘦𝘳 𝘭𝘰𝘷𝘦, 𝘤𝘢𝘳𝘦, 𝘢𝘧𝘧𝘦𝘤𝘵𝘪𝘰𝘯 𝘢𝘯𝘥 𝘣𝘭𝘦𝘴𝘴𝘪𝘯𝘨𝘴 𝘣𝘦 𝘵𝘩𝘦𝘳𝘦 𝘶𝘱𝘰𝘯 𝘵𝘩𝘪𝘴 𝘤𝘪𝘵𝘺 𝘢𝘯𝘥 𝘢𝘭𝘭 𝘩𝘦𝘳 𝘥𝘦𝘷𝘰𝘵𝘦𝘦𝘴 𝘢𝘭𝘸𝘢𝘺𝘴.👏

🪷🌹✨ಜಾತ್ರಾ ಮಹೋತ್ಸವದ ಪರ್ವಕಾಲದಲ್ಲಿ ಚಕ್ರ ತೋಮರವನ್ನು ಹಿಡಿದು ತ್ರಿಶೂಲ ಧಾರಿಣಿಯಾಗಿ ಸಿಂಹಾಸನಸ್ಥಿತಳಾದ ಜಗನ್ಮಾತೆ ಶ್ರೀ ಮಂಗಳಾದೇವಿ ಅಮ್ಮನಿಗೆ ಮೂಲಾ ನಕ್ಷತ್ರದ ಸಪ್ತಮಿಯಂದು ರಥೋತ್ಸವದ ಮಹಾಪೂಜೆ✨🌹🪷

✨🌸ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ ।
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ॥🌸✨