Sri Mangaladevi Navarathri Festival 2022 – Day 11

Blissful Darshan

Mangaladevi Daily Darshan 6th October 2022

~^~

✨ૐ҉  ಏಕಾದಶಿ ದಿನ🌼

🪷ಮಂಗಳಮ್ಮನಿಗೆ ಅವಭೃತ ಮಂಗಳಸ್ನಾನ* ૐ҉ ✨

_ಆಶ್ವಯುಜ ಶುಕ್ಲ ಏಕಾದಶಿಯ ಇಂದಿನ ಶ್ರವಣ ನಕ್ಷತ್ರದ ಗುರುವಾರದಂದು ಶ್ರೀ ಮಂಗಳಾದೇವಿಗೆ ಅವಭೃತೋತ್ಸವದ ಸಂಭ್ರಮ. ಶರನ್ನವರಾತ್ರಿಯ ಅವಿಸ್ಮರಣೀಯ ದಿನಗಳು ಕಳೆದು ಸದಾಸ್ಮೃತಿಯಲ್ಲಿ ತಾಯಿಯ ಉತ್ಸವಾದಿಗಳನ್ನು ನೆನೆನೆದು ಮಂತ್ರ ಮುಗ್ಧರನ್ನಾಗಿಸುವ ದೇವಿಯ ವೈವಿಧ್ಯ ಆಕರ್ಷಣೀಯ ಉತ್ಸವಾದಿಗಳಲ್ಲಿ ಅಂತಿಮವಾಗಿ ಮಹಾತಾಯಿಗೆ ಇಂದಿನ ಜಳಕ ಅರ್ಥಾತ್ ಅವಭೃತ ಮಂಗಳ ಸ್ನಾನ❊_ 
 
_ಇಂದು ಲೋಕಪಾವನೆಗೆ ೧೧’ನೇ ದಿನ ಏಕಾದಶಿಯ ದಿವಸದಂದು ಜಳಕ. ಅರ್ಥಾತ್ ಅವಭೃತ ಮಂಗಳಸ್ನಾನ. ಸಿಂಹಾರೂಢಳಾಗಿ ಗುಲಾಬಿ ವರ್ಣದ ಸೀರೆಯನ್ನು ಧರಿಸಿ, ಸರ್ವಾಭರಣಯುಕ್ತಳಾದ ಮಂಗಳಾಂಬಿಕೆಯು ಅಭಯ ವರದ ಹಸ್ತಳಾಗಿ ಚಕ್ರ- ಗದೆಯನ್ನು ಪಿಡಿದು ತ್ರಿಶೂಲ ಧಾರಿಣಿಯಾದ ಮಹಾರಾಣಿ ರಾಜ ವೈಭವದಿಂದ ಸರ್ವಾಲಂಕೃತಳಾಗಿರುವಳು. 👏_
 
_ಇಂದು ಆಕೆಗೆ ಏಕಾದಶಿಯಂದು ಅಷ್ಟಾವಧಾನ ಸೇವೆ ಹಾಗೂ ಅವಭೃತ ಮಂಗಳ ಸ್ನಾನ. ಅವಳಂಥ ಕೋಮಲ ದಯಾರ್ದ್ರ ಅಂತಃಕರಣಿಗಳು ಅನ್ಯರಿಲ್ಲ. ಭಕ್ತಿ ಪ್ರೀತಿಯಿಂದ ಸಮರ್ಪಣಾ ಭಾವದಲ್ಲಿ ಮಂಗಳಮ್ಮಾ ಎಂದು ಯಾರು ಆಕೆಯನ್ನು ಸ್ಮರಿಸುತ್ತಾರೋ ಅವರ ಬಳಿ ಕರುವಿನ ಕೂಗನ್ನು ಕೇಳಿದಾಕ್ಷಣ ಅದರೆಡೆಗೆ ಧಾವಿಸುವ ಹಸುವಿನಂತೆ ಸಂಕಷ್ಟದ ಸಮಯದಲ್ಲಿ ತಾಯಿ ನಮ್ಮೆಲ್ಲರನ್ನು ಸಂಕಷ್ಟಗಳಿಂದ ಪಾರುಗೊಳಿಸಿ ರಕ್ಷಿಸಿ ಆಶೀರ್ವದಿಸಲು ಬರುತ್ತಾಳೆ. ಜೀವನದ ಬೆಟ್ಟದಂತಹ ಭಾರವಾದ ಸಂಕಷ್ಟಗಳನ್ನು ಹೂವಿನಂತೆ ಹಗುರಗೈದಿದ್ದಾಳೆ.😊💯_
 
_ಪ್ರತಿ ವರ್ಷದಂತೆ ಈ ಬಾರಿಯೂ ಮಗದಷ್ಟು ವೈಭವೋಪೇತವಾಗಿ ಮಹಾತಾಯಿಯಿಂದ ನಿರೀಕ್ಷೆ ಮೀರಿ ನವರಾತ್ರಿಯ ಸಕಲ ಉತ್ಸವಾದಿಗಳು ಯಶಸ್ವಿಗೊಂಡಿದ್ದು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಸ್ವಯೀಚ್ಛೆಯಂತೆ ತನ್ನೆಲ್ಲಾ ಉತ್ಸವಾದಿಗಳನ್ನು, ಕ್ಷೇತ್ರಾಭಿವೃದ್ಧಿಯನ್ನು ಆ ಮಹಾತಾಯಿ ಅನೂಹ್ಯ ನಡೆಸಿಕೊಟ್ಟಿದ್ದಾಳೆ. ಯಾವುದಕ್ಕೂ ಕುಂದು ಕೊರತೆ ಲೋಪಗಳಿಲ್ಲದೆ ಅಲ್ಪವಿಕಲ್ಪಗಳು ಬಾರದೆ ಸಾಂಗವಾಗಿ ಶರನ್ನವರಾತ್ರಿಯ ಹತ್ತೂ ದಿನಗಳು ವೈಭವೋಪೇತವಾಗಿ ಸಮಾಪ್ತಿಗೊಂಡಿದೆ. ಇವೆಲ್ಲಕ್ಕೂ ಪ್ರತ್ಯಕ್ಷ ಪರೋಕ್ಷ ಕಾರಣೀಭೂತಳೂ ಕಾರಣೀಕರ್ತೃಳೂ ಆ ನಮ್ಮ ಒಡತಿ ಶ್ರೀ ಮಂಗಳಾದೇವಿಯೇ 💯🙏_
 
_ಮಹಾ ಮಹಿಮಾನ್ವಿತಳಾದ ಮಂಗಳಾದೇವಿಯ ಮಹಿಮೆ ಕಾರಣೀಕಕ್ಕೆ ಉತ್ತಮ ಜ್ವಲಂತ ನಿದರ್ಶನ ಕಳೆದ ನಿನ್ನೆಯ ವಿಜಯದಶಮಿಯಂದು ನೆರವೇರಿದ ರಥ ಸವಾರಿ ಉತ್ಸವ. ತನ್ನ ಮೇಲೆ ನಂಬಿಕೆ ವಿಶ್ವಾಸವನ್ನಿಟ್ಟು ಪೊಡಮಟ್ಟು ಬಂದು ಸಾಗರೋಪಾದಿಯಲ್ಲಿ ನಡುರಾತ್ರಿ ೨ರ ವರೆಗೂ ಅಸಂಖ್ಯಾತ ಭಕ್ತಾದಿ ಆಸ್ತಿಕರು ಮಂಗಳಾದೇವಿ ದೇವಳದಿಂದ ಮಹಾ ನವಮಿಕಟ್ಟೆಯ ವರೆಗೆ ಕಿಕ್ಕಿರಿದು ಸೇರಿ ರಾಜಗಾಂಭೀರ್ಯದಿಂದ ಮೆರೆದು ಬರುತ್ತಿರುವ ಮಂಗಳಾಂಬಿಕೆಯ ತೇರನ್ನು _ಶ್ರೀ ಮಂಗಳಾದೇವಿ ಅಮ್ಮನವರ ಪಾದಾರವಿಂದಕ್ಕೆ ಗೋವಿಂದಾನಿ ಗೋವಿಂದ_ ಎಂದು ಅವಳ ನಾಮದ ಜಯಘೋಷ ಮಾಡುತ್ತಾ ಎಳೆದು ಹರ್ಷೋದ್ಗಾರಗೈದು ವರುಣನಾಗಮನದ ಹರ್ಷೋಲ್ಲಾಸದ ಸಂಭ್ರಮಾಚರಣೆಯಲ್ಲಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದೇವೆ.
 
_ಇಂದು ಸಾಯಂಕಾಲ ೭.೩೦’ಕ್ಕೆಬಲಿ ಹೊರಟು ಚೆಂಡೆ ಸುತ್ತು, ಓಡಬಲಿ, ಪಾಲಕಿ ಬಲಿ, ಸ್ಯಾಕ್ಸೋಫೋನ್ ಸುತ್ತು, ಉತ್ಸವಾದಿಗಳು ನಡೆದು ಶ್ರೀ ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಅವಭೃತದ ಪೂರ್ವ ಭಾವಿಯಾಗಿ ಓಕುಳಿಯಂತೆ ಕುಂಕುಮದ ನೀರಿನ ಹನಿಗಳ ಸಂಪ್ರೋಕ್ಷಣೆಯಾಗಲಿದೆ_
 
_*ದೇವ ದೇವೋತ್ತಮೆ ದೇವತಾ ಸಾರ್ವಭೌಮೆ ಅಖಿಲಾಂಡ ಕೋಟಿ ಬೃಹ್ಮಾಂಡ ನಾಯಕೆ ಜಯ ಮಂಗಳೇ*_
_ಎಂದು ಶ್ರೀ ದೇವಿಗೆ “ಋಗ್ವೇದಾದಿ ಚತುರ್ವೇದಗಳು, ವೇದಸೂಕ್ತ ಶಾಂತಿಮಂತ್ರಗಳು, ಪುರಾಣಾದಿಗಳು, ಅಷ್ಟಕಗಳು, ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯದ ವರ್ಣಮಾಲೆಗಳು, ಪಾಂಚಜನ್ಯ(ಶಂಕಾನಾದ), ಸಂಗೀತ, ಸರ್ವ ವಾದ್ಯಗಳ ಮಂಗಳ ವಾದನಾ”ದಿ ಗಳೆಂಬ ‘ *ಅಷ್ಟಾವಧಾನ*’ ಸೇವೆಯನ್ನು ದೇವಿಗೆ ಸಮರ್ಪಿಸಿ ಉತ್ಸವ ಮೂರ್ತಿಯನ್ನು ಸಣ್ಣ ಭಂಡಿಯಲ್ಲಿರಿಸಿ ನೇತ್ರಾವತಿ-ಫಲ್ಗುಣೀ ನದಿಗಳ ಸಂಗಮತೀರದಲ್ಲಿ ವೈಭವೋಪೇತವಾಗಿ ಎಳೆದೊಯ್ದು ಅವಭೃತ ಮಂಗಳಸ್ನಾನವು ನಡೆಯುತ್ತದೆ._
 
_ತೆಂಕಣ ದಿಕ್ಕಿನಿಂದ ನೇತ್ರಾವತಿಯೂ ಬಡಗಣ ಬಲಗಡೆಯಿಂದ ಫಲ್ಗುಣೀ ನದಿಯು ಸಂಗಮಿಸಿ ಪವಿತ್ರತಮೆಯಾಗಿ ಹರಿಯುತ್ತಾ ಪಶ್ಚಿಮ ಸಾಗರವನ್ನು ಸಂಗತಳಾಗುವ ನೇತ್ರಾವತಿ- ಫಲ್ಗುಣಿಯ ಪವಿತ್ರ ಜಲಸೇಚನದಲ್ಲಿ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಾ ದೇವಿಯು ಅವಭೃತ ಮಂಗಳ ಸ್ನಾನದಿಂದ ಸಂತುಷ್ಟಳಾಗಿ ಮೆರುದು ಬರುವ ವಿಹಂಗಮ ನೋಟ ಅನರ್ಘ್ಯವೆನಿಸಿದೆ. ಮುಂದೆ ದೇವಳದ ರಾಜಾಂಗಣಗಲ್ಲಿ ದರ್ಶನ ಬಲಿಯೊಂದಿಗೆ, ಶ್ರೀ ದೇವಿಯು ಗರ್ಭಗೃಹವನ್ನು ಸೇರುವಲ್ಲಿ ನಾಳಿನ ಶುಕ್ರವಾರದ ಮುಂಜಾನೆ ಮಹಾಪೂಜೆ’ಯೊಂದಿಗೆ ಅವೃಭತದ ಉತ್ಸವವು ಮಂಗಳವಾಗಲಿದೆ._ 
 
_ಇದರೊಂದಿಗೆ ನಾಳಿನ ದ್ವಾದಶಿಯ ಶುಕ್ರವಾರದಂದು ಶುದ್ಧೀಕಲಶ’ವಾಗಿ ವಿಪ್ರೋತ್ತಮರಿಂದ, ಬ್ರಾಹ್ಮಣ ಶ್ರೇಷ್ಟರಿಂದ ಗಂಧಾಕ್ಷತೆಯ ಅಕ್ಷತೆಯ ಪ್ರಸಾದವನ್ನು ಸ್ವೀಕರಿಸಿ ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವ ೨೦೨೨ಸಂಪನ್ನವಾಗಲಿದೆ._
 
_*ಸಂಪ್ರೋಕ್ಷಣೆ ಎಂದರೆ ಉತ್ಸವಾದಿಗಳಿಂದ ನಡೆದ ಮಲಿನವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ.*_
_ಉತ್ಸವಗಳು ಸಾಂಗವಾಗಿ ನಡೆದ ನಂತರ ತೀರ್ಥ ಪ್ರಾಶಾನ ಹಾಗೂ ಮಂತ್ರಾಕ್ಷತೆಯ ಪ್ರಸಾದವನ್ನು ಪಡೆಯುವಿಕೆ ಅಗತ್ಯ. ಮಂತ್ರಾಕ್ಷತೆ ಎಂದರೆ ಅದು ದೇವಿಯ ಪೂರ್ಣೋಚ್ಛ ಅಂತರ್ಭಾಹ್ಯಗಳನ್ನು ನಿರ್ಮಲಗೊಳಿಸುವ ಪವಿತ್ರ ಅಕ್ಷತೆ ಪ್ರಸಾದ. ಉತ್ಸವಾದಿಗಳಿಂದ ದೇವಿಯು ಅನುಗ್ರಹಿತಳಾದಳೆಂದು ಬಗೆದು ಅರ್ಚಕರಿಂದ ಅದನ್ನು ಸ್ವೀಕರಿಸಿದಲ್ಲಿ ಅದು ಗಂಧಾಕ್ಷತೆ ಅಥವ ಸಂಪ್ರೋಕ್ಷಣೆ ಎಂದು ಕರೆಯಲ್ಪಡುತ್ತದೆ._ 
 
_ಈ ರೀತಿಯಾಗಿ ನವಕಲಶಾಭಿಷೇಕ ನಡೆದು ಮಂತ್ರಾಕ್ಷತೆಯ ಪ್ರಸಾದವನ್ನು ಸ್ವೀಕರಿಸಿ ಕಲಶ ಶುದ್ಧಿ ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿಯ ಶರನ್ನವರಾತ್ರಿ ಮಹೋತ್ಸವವು ಮಂಗಳವಾಗಲಿದೆ._
 
_ತನ್ನ ಸ್ವಯೀಚ್ಛೆಯಿಂದ ತನಗೆ ಬೇಕು ಬೇಡಗಳನ್ನು ನಿರ್ಧರಿಸಿ ಸರ್ವಶಕ್ತಿ ಕೃಪೆತೋರಿದ್ದಾಳೆ.
 ಮಂಗಳೆಯ ಉತ್ಸವಾದಿಗಳು ಕೇವಲ ನವರಾತ್ರಿಗೆ ಮಾತ್ರ ಸೀಮಿತವಲ್ಲ. ಹೇಳಬೇಕೆಂದರೆ ವರುಷದ ೩೬೫ ದಿನಗಳು ಕೂಡ ಮಂಗಳಾಂಬಿಕೆಗೆ ಸುವರ್ಣ ದಿನಗಳು. ಪ್ರತಿ ದಿನವೂ ಅನುಕ್ಷಣವು ತಾಯಿ ರಾಜ ವೈಭವದಿಂದ ಮೆರೆಯತ್ಕಂತವಳು._  
 
_ದೇವಿಯ ಸಾಕ್ಷಾತ್ಕಾರಕ್ಕೆ ಸಾಧನೋಪಾಯವೆಂದರೆ ಅವಳಲ್ಲಿ ಭಕ್ತಿಯಿಂದ ಪ್ರೀತಿಯಿಂದ ಪ್ರಾರ್ಥಿಸುವುದು. ನಿಷ್ಕಲ್ಮಷ ಮನಸ್ಸಿನಿಂದ ಸ್ಮರಿಸಿ ಹೃದಯಾಂತರಾಳದಿಂದ ನಮಿಸುವುದು. ಜಗಜ್ಜನನಿ ನಮ್ಮೆಲ್ಲರನ್ನು ಉದ್ಧರಿಸಲಿ._ _ಜೀವನದ ಪ್ರತಿಯೊಂದು ದಿನವು ನವರಾತ್ರಿಯಾಗಲಿ. ಮುಂಬರುವ ನವರಾತ್ರಿ ಬಹುಬೇಗ ಬರಲಿ. ಸುಖ, ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಿ ಎಲ್ಲೆಡೆ ಸಮೃದ್ಧಿಯಾಗಲಿ._
 
_ದೇವಿಯ ಕೃಪೆಯಿಂದ ಸಂಕಷ್ಟ ದಾರಿದ್ರ್ಯ ದೂರಾಗಿ, ಧನ ಧಾನ್ಯ ಅಕ್ಷಯ ಸನಿಹವಾಗಿ, ಧೀರ್ಘಾಯಸ್ಸು ಆರೋಗ್ಯವೂ, ಪ್ರಾಪ್ತವಾಗಿ ವಿಜಯೀ ಸ್ವರೂಪಿಣಿಯಾದ ಸರ್ವ ಮಂಗಳೆಯು ಅನವರತ ನಮ್ಮ ಬೆಂಗಾವಲಿಗಿದ್ದು ಸಂರಕ್ಷಿಸಲಿ.👏_
 
🌸ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ । 
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ॥🌸
Ash𝗐𝗂𝗃𝖺 𝗆𝗈𝗇𝗍𝗁, 𝖲𝗁𝗎𝗄𝗅𝖺 𝗉𝖺𝗄𝗌𝗁𝖺 ( 𝖥𝗎𝗅𝗅 𝗆𝗈𝗈𝗇 𝗉𝗁𝖺𝗌𝖾 𝗈𝖿 𝗍𝗁𝖾 𝗆𝗈𝗈𝗇), 𝖤𝗄𝖺𝖽𝖺𝗌𝗁𝗂 ( 11𝗍𝗁 𝖽𝖺𝗒) 𝗈𝖿 𝗍𝗁𝖾 𝖧𝗂𝗇𝖽𝗎 𝖼𝖺𝗅𝖾𝗇𝖽𝖺𝗋, 𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝗌𝗁𝖺𝗅𝗅 𝗁𝖺𝗏𝖾 𝖺 𝗁𝗈𝗅𝗒 𝖻𝖺𝗍𝗁. 𝖳𝗁𝖾 𝖻𝖾𝖺𝗎𝗍𝗒 𝗈𝖿 𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝖺𝖽𝗈𝗋𝗇𝗂𝗇𝗀 𝖽𝗂𝖿𝖿𝖾𝗋𝖾𝗇𝗍 𝖺𝗅𝗍𝖺𝗋𝗌, 𝗍𝗁𝖾 𝗉𝖺𝗅𝖺𝗇𝗊𝗎𝗂𝗇 𝗌𝖾𝗋𝗏𝗂𝖼𝖾𝗌, 𝖱𝖺𝗍𝗁𝗈𝗍𝗌𝖺𝗏 𝖺𝗇𝖽 𝗈𝗍𝗁𝖾𝗋 𝗏𝖺𝗋𝗂𝗈𝗎𝗌 𝗄𝗂𝗇𝖽𝗌 𝗈𝖿 𝗋𝗂𝗍𝗎𝖺𝗅𝗂𝗌𝗍𝗂𝖼 𝖺𝗇𝖽 𝗍𝖺𝗇𝗍𝗋𝗂𝖼 𝗌𝖾𝗋𝗏𝗂𝖼𝖾𝗌 𝖽𝗈𝗇𝖾 𝗍𝗈 𝗀𝗈𝖽𝖽𝖾𝗌𝗌 𝗈𝗇 𝖽𝗎𝗋𝗂𝗇𝗀 𝗍𝗁𝖾 𝗈𝖼𝖼𝖺𝗌𝗂𝗈𝗇 𝗈𝖿 𝖭𝖺𝗏𝗋𝖺𝗍𝗋𝗂, 𝗌𝗁𝖺𝗅𝗅 𝗇𝖾𝗏𝖾𝗋 𝖻𝖾 𝖿𝗈𝗋𝗀𝗈𝗍𝗍𝖾𝗇 𝖻𝗒 𝗁𝖾𝗋 𝖽𝖾𝗏𝗈𝗍𝖾𝖾𝗌. 𝖳𝗁𝖾 Final 𝖾𝗇𝖽 𝗉𝗋𝗈𝖼𝖾𝗌𝗌 𝗈𝖿 𝗍𝗁𝖾 𝖣𝖺𝗌𝖺𝗋𝖺 𝖼𝖾𝗅𝖾𝖻𝗋𝖺𝗍𝗂𝗈𝗇𝗌 𝖺𝗍 𝖬𝖺𝗇𝗀𝖺𝗅𝖺𝖽𝖾𝗏𝗂 𝗍𝖾𝗆𝗉𝗅𝖾 𝗂𝗌 𝗍𝗁𝖾 𝗁𝗈𝗅𝗒 𝖻𝖺𝗍𝗁 𝖼𝖺𝗅𝗅𝖾𝖽 𝖠𝗏𝖺𝖻𝗋𝗎𝗍𝗁𝖺 𝗌𝗇𝖺𝗇𝖺.
 
 𝐴𝑠 𝑤𝑒 𝑒𝑛𝑗𝑜𝑦𝑒𝑑 𝑒𝑎𝑐𝒉 𝑎𝑛𝑑 𝑒𝑣𝑒𝑟𝑦 𝑓𝑒𝑠𝑡𝑖𝑣𝑖𝑡𝑖𝑒𝑠 𝑜𝑓 𝑡𝒉𝑒 𝑁𝑎𝑣𝑟𝑎𝑡𝑟𝑖, 𝑒𝑣𝑒𝑛 𝑡𝒉𝑖𝑠 𝑓𝑙𝑎𝑔 𝑒𝑛𝑑 𝑝𝑟𝑜𝑐𝑒𝑠𝑠 𝑡𝑜𝑜 𝑠𝒉𝑎𝑙𝑙 𝑏𝑟𝑖𝑛𝑔 𝑎𝑏𝑢𝑛𝑑𝑎𝑛𝑐𝑒 𝑗𝑜𝑦 𝑖𝑛 𝑡𝒉𝑒 𝒉𝑒𝑎𝑟𝑡𝑠 𝑜𝑓 𝒉𝑒𝑟 𝑑𝑒𝑣𝑜𝑡𝑒𝑒𝑠.
 
𝘞𝘦𝘢𝘳𝘪𝘯𝘨 𝘢 𝘨𝘰𝘭𝘥𝘦𝘯 𝒎𝒂𝒓𝒐𝒐𝒏 𝒄𝒐𝒍𝒐𝒖𝒓𝘦𝘥 𝘴𝘢𝘳𝘦𝘦 𝘢𝘯𝘥 𝘰𝘳𝘯𝘢𝘮𝘦𝘯𝘵𝘴 𝘮𝘢𝘥𝘦 𝘶𝘱 𝘰𝘧 𝘨𝘰𝘭𝘥 𝘢𝘯𝘥 𝘰𝘵𝘩𝘦𝘳 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴,  𝘵𝘩𝘦 𝘲𝘶𝘦𝘦𝘯 𝘰𝘧 𝘵𝘩𝘦 𝘤𝘪𝘵𝘺 𝘰𝘧 𝘔𝘢𝘯𝘨𝘢𝘭𝘶𝘳𝘶, 𝘤𝘢𝘯 𝘣𝘦 𝘴𝘦𝘦𝘯 𝘮𝘢𝘫𝘦𝘴𝘵𝘪𝘤𝘢𝘭𝘭𝘺 𝘳𝘪𝘥𝘪𝘯𝘨 𝘰𝘯 𝘢 𝘭𝘪𝘰𝘯 𝘢𝘯𝘥 𝘤𝘢𝘳𝘳𝘺𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘸𝘦𝘢𝘱𝘰𝘯𝘴 𝘭𝘪𝘬𝘦 𝘢𝘹𝘦, 𝘮𝘢𝘤𝘦, 𝘴𝘸𝘰𝘳𝘥, 𝘣𝘰𝘸 𝘢𝘯𝘥 𝘢𝘳𝘳𝘰𝘸 𝘪𝘯 𝘩𝘦𝘳 𝘶𝘱𝘱𝘦𝘳 𝘩𝘢𝘯𝘥𝘴, 𝘸𝘩𝘪𝘭𝘦 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘢𝘳𝘦 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢 𝘢𝘭𝘰𝘯𝘨 𝘸𝘪𝘵𝘩 𝘢 𝘵𝘳𝘪𝘥𝘦𝘯𝘵.
 
𝖠𝖿𝗍𝖾𝗋 𝗍𝗁𝖾 𝖻𝖺𝗅𝗂 𝗌𝖾𝗏𝖺, 𝖦𝗈𝖽𝖽𝖾𝗌𝗌 𝗐𝗂𝗅𝗅 𝖾𝗇𝗃𝗈𝗒 𝗍𝗁𝖾 𝖺𝗌𝗍𝖺𝗏𝖺𝖽𝖺𝗇𝖺 𝗌𝖾𝗏𝖺 𝗂𝗇 𝗍𝗁𝖾 𝖵𝖺𝗌𝖺𝗇𝗍𝗁𝖺 𝖬𝖺𝗇𝗍𝖺𝗉.
𝖳𝗁𝖾 𝖺𝗌𝗍𝖺𝗏𝖺𝖽𝖺𝗇𝖺 𝗌𝖾𝗏𝖺 𝖼𝗈𝗇𝗌𝗂𝗌𝗍𝗌 𝗈𝖿 𝖾𝗂𝗀𝗁𝗍 𝖽𝗂𝖿𝖿𝖾𝗋𝖾𝗇𝗍 𝗆𝗎𝗌𝗂𝖼𝖺𝗅 𝗂𝗇𝗌𝗍𝗋𝗎𝗆𝖾𝗇𝗍𝗌 𝖻𝖾𝗂𝗇𝗀 𝗉𝗅𝖺𝗒𝖾𝖽 𝗍𝗈 𝗍𝗁𝖾 𝗀𝗈𝖽𝖽𝖾𝗌𝗌. 𝖠𝗌 𝖺 𝖿𝗈𝗋𝖾𝗉𝖺𝗋𝗍 𝗍𝗈 𝗍𝗁𝖾 𝗁𝗈𝗅𝗒 𝖻𝖺𝗍𝗁 𝖼𝖺𝗅𝗅𝖾𝖽 𝖠𝗏𝖺𝖻𝗋𝗎𝗍𝗁𝖺 𝗌𝗇𝖺𝗇𝖺, 𝗏𝖾𝗋𝗆𝗂𝗅𝗂𝗈𝗇 𝗐𝖺𝗍𝖾𝗋 𝗌𝗁𝖺𝗅𝗅 𝖻𝖾 𝗌𝗉𝗋𝗂𝗇𝗄𝗅𝖾𝖽 𝖺𝗋𝗈𝗎𝗇𝖽 𝖺𝗌 𝖺 𝗉𝖺𝗋𝗍 𝗈𝖿 𝗍𝗁𝖾 𝗈𝗄𝗎𝗅𝗂 (𝖺 𝖼𝗋𝗂𝗆𝗌𝗈𝗇𝖾𝖽 𝗍𝗎𝗋𝗆𝖾𝗋𝗂𝖼 𝗐𝖺𝗍𝖾𝗋 𝗌𝗉𝗋𝗂𝗇𝗄𝗅𝖾𝖽 𝗈𝗇 𝗉𝖾𝗋𝗌𝗈𝗇𝗌 𝗈𝗇 𝖿𝖾𝗌𝗍𝗂𝗏𝖺𝗅 𝖽𝖺𝗒𝗌 𝖺𝗌 𝖺 𝗌𝗒𝗆𝖻𝗈𝗅 𝗈𝖿 𝖿𝗋𝗂𝖾𝗇𝖽𝗌𝗁𝗂𝗉 𝗈𝗋 𝗍𝗈 𝖻𝗋𝗂𝗇𝗀 𝖺𝗎𝗌𝗉𝗂𝖼𝗂𝗈𝗎𝗌𝗇𝖾𝗌𝗌)
 
Goddess shall be praised with the hymns of rig, yajur sama and atharvana Vedas like 𝘿𝙚𝙫𝙖 𝘿𝙚𝙫𝙤𝙩𝙩𝙖𝙢𝙖 𝘿𝙚𝙫𝙖𝙩𝙝𝙖 𝙎𝙖𝙧𝙫𝙖𝙗𝙝𝙤𝙪𝙢𝙖, 𝘼𝙠𝙝𝙞𝙡𝙖𝙣𝙙𝙖 𝙠𝙤𝙩𝙞 𝘽𝙧𝙖𝙝𝙢𝙖𝙣𝙙𝙖 𝙉𝙖𝙮𝙖𝙠𝙞𝙮𝙚 𝙅𝙖𝙮𝙖 𝙈𝙖𝙣𝙜𝙖𝙡𝙚. Various different kinds of suktha like Sri suktha, Devi suktha, Saraswati suktha etc , shanti Mantras, Astakas like Mahalakshmi ashtakam, Durga Astakam etc shall be chanted to the goddess, sanskrit and kannada literature alphabets like Maheshwara sutrani in sanskrit shall be recited to the goddess. 
 
Musical instruments 𝗅𝗈𝗇𝗀 𝗐𝗂𝗍𝗁 𝖾𝗂𝗀𝗁𝗍 𝖽𝗂𝖿𝖿𝖾𝗋𝖾𝗇𝗍 𝗆𝗎𝗌𝗂𝖼𝖺𝗅 𝗂𝗇𝗌𝗍𝗋𝗎𝗆𝖾𝗇𝗍𝗌 𝖺𝗇𝖽 𝗍𝗁𝖾 𝗌𝗈𝗎𝗇𝖽 𝖼𝗋𝖾𝖺𝗍𝖾𝖽 𝖻𝗒 𝗍𝗁𝖾 𝖼𝗈𝗇𝖼𝗁 𝖼𝖺𝗅𝗅𝖾𝖽 ‘𝖯𝖺𝗇𝖼𝗁𝖺 𝖩𝖺𝗇𝗒𝖺’ 𝗌𝗁𝖺𝗅𝗅 𝖻𝖾 𝗉𝗅𝖺𝗒𝖾𝖽 𝗂𝗇𝖿𝗋𝗈𝗇𝗍 𝗈𝖿 𝗍𝗁𝖾 𝗀𝗈𝖽𝖽𝖾𝗌𝗌 𝖺𝗌 𝖺𝗇 𝗈𝖿𝖿𝖾𝗋𝗂𝗇𝗀 𝗍𝗈 𝗁𝖾𝗋. 𝖬𝖺𝗇𝗀𝖺𝗅𝖺𝗆𝗆𝖺’𝗌 𝖿𝖾𝗌𝗍𝗂𝗏𝖾 𝖽𝖾𝗂𝗍𝗒 𝗌𝗁𝖺𝗅𝗅 𝗅𝖺𝗍𝖾𝗋 𝗉𝗋𝗈𝖼𝖾𝖾𝖽 𝗂𝗇 𝖺 𝗌𝗆𝖺𝗅𝗅 𝖼𝗁𝖺𝗋𝗂𝗈𝗍 𝗍𝗈𝗐𝖺𝗋𝖽𝗌 𝗍𝗁𝖾 𝖭𝖾𝗍𝗋𝖺𝗏𝖺𝗍𝗁𝗂 𝖺𝗇𝖽 𝗉𝗁𝖺𝗅𝗀𝗎𝗇𝗂 𝗋𝗂𝗏𝖾𝗋 𝗆𝖾𝗋𝗀𝗂𝗇𝗀 𝗉𝗈𝗂𝗇𝗍 𝖿𝗈𝗋 𝖺 𝗁𝗈𝗅𝗒 𝖻𝖺𝗍𝗁 𝗂𝗇 𝖺 𝗀𝗋𝖺𝗇𝖽 𝗐𝖺𝗒.
 
𝖶𝗁𝗂𝗅𝖾 𝖭𝖾𝗍𝗋𝖺𝗏𝖺𝗍𝗁𝗂 𝖿𝗅𝗈𝗐𝗌 𝖿𝗋𝗈𝗆 𝗍𝗁𝖾 𝗌𝗈𝗎𝗍𝗁 𝖺𝗇𝖽 𝗉𝗁𝖺𝗅𝗀𝗎𝗇𝗂 𝖿𝗋𝗈𝗆 𝗍𝗁𝖾 𝗇𝗈𝗋𝗍𝗁 𝗃𝗈𝗂𝗇 𝗍𝗈𝗀𝖾𝗍𝗁𝖾𝗋 𝖺𝗇𝖽 𝖿𝗅𝗈𝗐 𝖺𝗌 𝗈𝗇𝖾 𝗍𝗈𝗐𝖺𝗋𝖽𝗌 𝗍𝗁𝖾 𝗐𝖾𝗌𝗍 𝗍𝗈 𝗃𝗈𝗂𝗇 𝗍𝗁𝖾 𝖠𝗋𝖺𝖻𝗂𝖺𝗇 𝗌𝖾𝖺.𝖳𝗁𝖾 𝖿𝖾𝗌𝗍𝗂𝗏𝖾 𝖽𝖾𝗂𝗍𝗒 𝗈𝖿 𝖬𝖺𝗇𝗀𝖺𝗅𝖺𝖽𝖾𝗏𝗂 𝗂𝗌 𝗂𝗆𝗆𝖾𝗋𝗌𝖾𝖽 𝖺𝗌 𝖺 𝗉𝖺𝗋𝗍 𝗈𝖿 𝖠𝗏𝖺𝖻𝗋𝗎𝗍𝗁𝖺 𝗌𝗇𝖺𝗇𝖺, 𝗂𝗇 𝗍𝗁𝖾 𝗃𝗈𝗂𝗇𝗂𝗇𝗀 𝗉𝗈𝗂𝗇𝗍 𝗈𝖿 𝖭𝖾𝗍𝗋𝖺𝗏𝖺𝗍𝗁𝗂 𝖺𝗇𝖽 𝗉𝗁𝖺𝗅𝗀𝗎𝗇𝗂 𝗋𝗂𝗏𝖾𝗋. 
 
𝖳𝗈 𝗌𝖾𝖾 𝗍𝗁𝖾 𝖻𝖾𝖺𝗎𝗍𝗒 𝗈𝖿 𝖦𝗈𝖽𝖽𝖾𝗌𝗌 𝗐𝗂𝗍𝗁𝗈𝗎𝗍 𝖺𝗇𝗒 𝗃𝖾𝗐𝖾𝗅𝗌 𝖺𝗇𝖽 𝗍𝖺𝗄𝗂𝗇𝗀 𝖻𝖺𝗍𝗁 𝗂𝗇 𝗍𝗁𝖾 𝗃𝗈𝗂𝗇𝗂𝗇𝗀 𝗉𝗈𝗂𝗇𝗍 𝗈𝖿 𝖭𝖾𝗍𝗋𝖺𝗏𝖺𝗍𝗁𝗂 𝖺𝗇𝖽 𝗉𝗁𝖺𝗅𝗀𝗎𝗇𝗂 𝗋𝗂𝗏𝖾𝗋 𝗂𝗌 𝖺 𝗉𝗋𝗂𝖼𝖾𝗅𝖾𝗌𝗌 𝗈𝗇𝖾. 𝖠𝖿𝗍𝖾𝗋 𝗍𝖺𝗄𝗂𝗇𝗀 𝖻𝖺𝗍𝗁, 𝗀𝗈𝖽𝖽𝖾𝗌𝗌 𝗌𝗁𝖺𝗅𝗅 𝗁𝖺𝗏𝖾 𝖺 𝖽𝖺𝗋𝗌𝗁𝖺𝗇𝖺 𝖻𝖺𝗅𝗂 𝗂𝗇 𝗍𝗁𝖾 𝗈𝗎𝗍𝖾𝗋 𝗌𝗎𝗋𝗋𝗈𝗎𝗇𝖽𝗂𝗇𝗀𝗌 𝗈𝖿 𝗍𝗁𝖾 𝗍𝖾𝗆𝗉𝗅𝖾 𝖺𝗇𝖽 𝗅𝖺𝗍𝖾𝗋 𝗀𝖾𝗍 𝗂𝗇𝗍𝗈 𝗁𝖾𝗋 𝖺𝖻𝗈𝖽𝖾 𝗍𝗈 𝗍𝗁𝖾 𝗌𝖺𝗇𝖼𝗍𝗎𝗆 𝗌𝖺𝗇𝖼𝗍𝗈𝗋𝗎𝗆 𝗈𝖿 𝗍𝗁𝖾 𝗍𝖾𝗆𝗉𝗅𝖾. 𝖶𝗂𝗍𝗁 𝗍𝗁𝖾 𝖬𝖺𝗁𝖺 𝖯𝗈𝗈𝗃𝖺 𝗂𝗇 𝗍𝗁𝖾 𝗆𝗈𝗋𝗇𝗂𝗇𝗀, 𝗍𝗁𝖾 𝖿𝖾𝗌𝗍𝗂𝗏𝗂𝗍𝗂𝖾𝗌 𝗈𝖿 𝖠𝗏𝖺𝖻𝗋𝗎𝗍𝗁𝖺 𝗌𝗇𝖺𝗇𝖺 𝗌𝗁𝖺𝗅𝗅 𝖼𝗈𝗆𝖾 𝗍𝗈 𝖺𝗇 𝖾𝗇𝖽.
While Netravathi flows from the south and phalguni from the north join together and flow as one towards the west to join the Arabian sea.
 
𝘛𝘩𝘦 𝘧𝘦𝘴𝘵𝘪𝘷𝘦 𝘥𝘦𝘪𝘵𝘺 𝘰𝘧 𝘔𝘢𝘯𝘨𝘢𝘭𝘢𝘥𝘦𝘷𝘪 𝘪𝘴 𝘪𝘮𝘮𝘦𝘳𝘴𝘦𝘥 𝘢𝘴 𝘢 𝘱𝘢𝘳𝘵 𝘰𝘧 𝘈𝘷𝘢𝘣𝘳𝘶𝘵𝘩𝘢 𝘴𝘯𝘢𝘯𝘢, 𝘪𝘯 𝘵𝘩𝘦 𝘫𝘰𝘪𝘯𝘪𝘯𝘨 𝘱𝘰𝘪𝘯𝘵 𝘰𝘧 𝘕𝘦𝘵𝘳𝘢𝘷𝘢𝘵𝘩𝘪 𝘢𝘯𝘥 𝘱𝘩𝘢𝘭𝘨𝘶𝘯𝘪 𝘳𝘪𝘷𝘦𝘳. 𝘛𝘰 𝘴𝘦𝘦 𝘵𝘩𝘦 𝘣𝘦𝘢𝘶𝘵𝘺 𝘰𝘧 𝘎𝘰𝘥𝘥𝘦𝘴𝘴 𝘸𝘪𝘵𝘩𝘰𝘶𝘵 𝘢𝘯𝘺 𝘫𝘦𝘸𝘦𝘭𝘴 𝘢𝘯𝘥 𝘵𝘢𝘬𝘪𝘯𝘨 𝘣𝘢𝘵𝘩 𝘪𝘯 𝘵𝘩𝘦 𝘫𝘰𝘪𝘯𝘪𝘯𝘨 𝘱𝘰𝘪𝘯𝘵 𝘰𝘧 𝘕𝘦𝘵𝘳𝘢𝘷𝘢𝘵𝘩𝘪 𝘢𝘯𝘥 𝘱𝘩𝘢𝘭𝘨𝘶𝘯𝘪 𝘳𝘪𝘷𝘦𝘳 𝘪𝘴 𝘢 𝘱𝘳𝘪𝘤𝘦𝘭𝘦𝘴𝘴 𝘰𝘯𝘦. 𝘈𝘧𝘵𝘦𝘳 𝘵𝘢𝘬𝘪𝘯𝘨 𝘣𝘢𝘵𝘩, 𝘨𝘰𝘥𝘥𝘦𝘴𝘴 𝘴𝘩𝘢𝘭𝘭 𝘩𝘢𝘷𝘦 𝘢 𝘥𝘢𝘳𝘴𝘩𝘢𝘯𝘢 𝘣𝘢𝘭𝘪 𝘪𝘯 𝘵𝘩𝘦 𝘰𝘶𝘵𝘦𝘳 𝘴𝘶𝘳𝘳𝘰𝘶𝘯𝘥𝘪𝘯𝘨𝘴 𝘰𝘧 𝘵𝘩𝘦 𝘵𝘦𝘮𝘱𝘭𝘦 𝘢𝘯𝘥 𝘭𝘢𝘵𝘦𝘳 𝘨𝘦𝘵 𝘪𝘯𝘵𝘰 𝘩𝘦𝘳 𝘢𝘣𝘰𝘥𝘦 𝘵𝘰 𝘵𝘩𝘦 𝘴𝘢𝘯𝘤𝘵𝘶𝘮 𝘴𝘢𝘯𝘤𝘵𝘰𝘳𝘶𝘮 𝘰𝘧 𝘵𝘩𝘦 𝘵𝘦𝘮𝘱𝘭𝘦. 𝘞𝘪𝘵𝘩 𝘵𝘩𝘦 𝘔𝘢𝘩𝘢 𝘗𝘰𝘰𝘫𝘢 𝘪𝘯 𝘵𝘩𝘦 𝘮𝘰𝘳𝘯𝘪𝘯𝘨, 𝘵𝘩𝘦 𝘧𝘦𝘴𝘵𝘪𝘷𝘪𝘵𝘪𝘦𝘴 𝘰𝘧 𝘈𝘷𝘢𝘣𝘳𝘶𝘵𝘩𝘢 𝘴𝘯𝘢𝘯𝘢 𝘴𝘩𝘢𝘭𝘭 𝘤𝘰𝘮𝘦 𝘵𝘰 𝘢𝘯 𝘦𝘯𝘥.👏
 
𝘏𝘰𝘭𝘺 𝘸𝘢𝘵𝘦𝘳 𝘴𝘩𝘢𝘭𝘭 𝘣𝘦 𝘴𝘱𝘳𝘪𝘯𝘬𝘭𝘦𝘥 𝘢𝘯𝘥 𝘮𝘢𝘯𝘵𝘳𝘢 𝘢𝘬𝘴𝘩𝘢𝘵𝘩𝘦 𝘴𝘩𝘢𝘭𝘭 𝘣𝘦 𝘨𝘪𝘷𝘦𝘯 𝘣𝘺 𝘵𝘩𝘦 𝘦𝘭𝘥𝘦𝘳𝘭𝘺 𝘱𝘳𝘪𝘦𝘴𝘵 𝘢𝘯𝘥 𝘰𝘵𝘩𝘦𝘳𝘴 𝘢𝘧𝘵𝘦𝘳 𝘵𝘩𝘦 𝘤𝘰𝘮𝘱𝘭𝘦𝘵𝘪𝘰𝘯 𝘰𝘧 𝘵𝘩𝘦 𝘱𝘶𝘳𝘪𝘧𝘪𝘤𝘢𝘵𝘪𝘰𝘯 𝘱𝘳𝘰𝘤𝘦𝘴𝘴 𝘢𝘯𝘥 𝘵𝘩𝘦 𝘤𝘶𝘳𝘵𝘢𝘪𝘯𝘴 𝘴𝘩𝘢𝘭𝘭 𝘣𝘦 𝘣𝘳𝘰𝘶𝘨𝘩𝘵 𝘥𝘰𝘸𝘯 𝘵𝘰 𝘵𝘩𝘦 𝘋𝘢𝘴𝘢𝘳𝘢 𝘤𝘦𝘭𝘦𝘣𝘳𝘢𝘵𝘪𝘰𝘯𝘴 𝘪𝘯 𝘵𝘩𝘦 𝘔𝘢𝘯𝘨𝘢𝘭𝘢𝘥𝘦𝘷𝘪 𝘵𝘦𝘮𝘱𝘭𝘦 𝘧𝘰𝘳 𝘵𝘩𝘦 𝘺𝘦𝘢𝘳 2022
 
 
🌹✨ಶುಭ ಮಂಗಳಂ✨🌹
 
*ಇಂದು ಶುಕ್ರವಾರ ಸಂಪ್ರೋಕ್ಷಣೆಯೊಂದಿಗೆ ಶ್ರೀ ಮಂಗಳಾದೇವಿಯ ಮಂಗಳೂರು ದಸರಾ ಸುಸಂಪನ್ನ.* 🌹
ಅಮ್ಮಾ ಧನ್ಯೋಸ್ಮಿ 🙏
 
_ಪ್ರಥಮ ದಿನ ಪಾಡ್ಯದ ಪ್ರಾರ್ಥನೆಯಿಂದ ಮೊದಲ್ಗೊಂಡು ಶುಭಾರಂಭಗೊಂಡ ಮಂಗಳಾದೇವಿ ಶರನ್ನವರಾತ್ರಿಯು ಇಂದಿನ ದ್ವಾದಶಿಯ ಸಂಪ್ರೋಕ್ಷಣೆಯ ಶುಕ್ರವಾರದವರೆಗೆ ನಿರ್ವಿಘ್ನವಾಗಿ ನೆರವೇರಿ ಆ ಮಹಾತಾಯಿ ತನ್ನ ಶರನ್ನರಾತ್ರಿಯ ಸಕಲ ಉತ್ಸವಾದಿ ಮಹೋತ್ಸವಗಳನ್ನು ಬಹು ವಿಜೃಂಭಣೆಯಿಂದ ಚಂದಗಾಣಿಸಿಕೊಟ್ಟಿದ್ದಾಳೆ._
 
_ಮಂಗಳೆ ಅಲಂಕಾರ ಪ್ರಿಯೆ, ಉತ್ಸವ ಪ್ರಿಯೆ, ಅರ್ಚನಾ ಪ್ರಿಯೆ. ವಿನೋದ ಪ್ರಿಯೆ. ಇವೆಲ್ಲವುದರ ಸಮಗ್ರ ಮಾಯಾಜಾಲ ಮಹಾಮಾಯೆ ಸಂತೋಷದಿಂದ ರಂಜಿಸಲ್ಪಟ್ಟ ನವರಾತ್ರಿಯ ಸನ್ನಿವೇಶವಿದು. ಶರನ್ನವರಾತ್ರಿ ಪರ್ವಕಾಲದಲ್ಲಿ ನೆರವೇರಿದ ಸಕಲ ಪೂಜಾ ಕಾರ್ಯ ಕೈಂಕರ್ಯಗಳೂ ಉತ್ಸವಾದಿ ಮಹೋತ್ಸವಾದಿಗಳು ಆಕೆಗೆ ಸಮರ್ಪಿತ._ 
 
_ಹಗಲಿರುಳೆನ್ನದೆ ಶ್ರೀದೇವಿಯ ಸನ್ನಿಧಾನದಲ್ಲಿ ನವರಾತ್ರಿಯ ಪ್ರತಿಯೊಂದು ದಿನದ ಮನೋಜ್ಞ ಕ್ಷಣಗಳನ್ನು ಜನ್ಮಾಂತರದ ಪರಮಭಾಗ್ಯವೆಂಬ ನವೋತ್ಸಾಹದಿಂದ ಪ್ರತಿ ನಿಮಿಷ ನಿಮಿಷಗಳನ್ನೂ ಅಪ್ಯಾಯಮಾನ್ಯತೆಯಿಂದ ಭಕ್ತಿ ಪೂರ್ವಕವಾಗಿ ನಾವೆಲ್ಲರು ಕಳೆದಿದ್ದೇವೆ. ನವರಾತ್ರಿಯ ೧೧ ದಿನಗಳೂ ೧೧ ನಿಮಿಷಗಳಂತೆ ಕಳೆದು ಇಂದು ಮಂಗಳಕ್ಕೆ ಬಂದು ನಿಂತಿದೆ._
 
_ಅಮ್ಮನ ಶರನ್ನವರಾತ್ರಿಯು ದುರ್ಗ ಆರ್ಯಾದಿ ವೈಭವೋಪೂರ್ಣ ನವ ಅಲಂಕಾರಾದಿಗಳ ಉತ್ಸವಾದಿ ಮಹೋತ್ಸವಗಳಿಂದ ಬಹು ವಿಶೇಷತೆ ಹಾಗು ಜನಾಕರ್ಷಣೆಗೆ ಕಾರಣವಾಗಿರುವ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವವು ಯಶಸ್ವೀಯುತವಾಗಿ ಇಂದು ಸುಸಂಪನ್ನವಾಯಿತು._ 
 
_*ಶ್ರೀ ಮಂಗಳಾದೇವಿಯ ಮಂಗಳೂರು ದಸರಾ* ಎಂಬ ಪ್ರಖ್ಯಾತಿಯೊಂದಿಗೆ ಲೋಕವಿಖ್ಯಾತಿ ಪಡೆದಿರುವ ಶ್ರೀ ಮಂಗಳಾದೇವಿಯ ನವರಾತ್ರಿ ಮಹೋತ್ಸವವು ಇಂದಿನ ಆಶ್ವಯುಜ ಶುಕ್ಲ ದ್ವಾದಶಿಯ ಶುಕ್ರವಾರದಂದು ಶ್ರೀ ಕ್ಷೇತ್ರದಲ್ಲಿ ಸಂಪ್ರೋಕ್ಷಣೆಯೊಂದಿಗೆ ಮಂಗಳವಾಯಿತು._
 
_ಯಾವ ಜನ್ಮದ ಋಣವೋ, ಯಾವ ಪುಣ್ಯ ಕಾರ್ಯದ ಸುಕೃತ ಭಾಗ್ಯವೋ, ಮಂಗಳಾದೇವಿಯ ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡ ನಾವೇ ಪುಣ್ಯವಂತರು._
 
*_ಬೇಡಿದ್ದನ್ನು ನೀಡುವ ಕೇಳಿದನ್ನು ಕೊಡುವ ಸುರ ಕಾಮಧೇನು ಕಲ್ಪವೃಕ್ಷ ಸರ್ವಮಂಗಳೇ ಶ್ರೀ ಮಂಗಳಾದೇವಿ ಎಂದೇ ಪ್ರಸಿದ್ಧಳಾಗಿರುವ ವಿಂಧ್ಯಾಚಲ ವಾಸಿನಿ ಮಂಜುನಾಥನ ಪಟ್ಟದರಸಿ ಆ ಮಹಾತಾಯಿ ಸಿದ್ಧ ಸುರಮುನಿ ದೇವಾನು ದೇವತೆಗಳಿಂದ ಸಂಪೂಜಿಸಲ್ಪಟ್ಟು ರಾಜ ಮಹಾರಾಜರ ಕಾಲದಿಂದಲೂ ಮಂಗಳಾಪುರದ ಕ್ಷೇತ್ರಾಧಿಪತಿಯಾಗಿ ಮೆರೆದು ಸಮಸ್ತ ಭಕ್ತಜನ ಪ್ರಜಾಪರಿಪಾಲಕಳಾಗಿ ನಮ್ಮ ಪರಿಪಾಲನೆಯ ಅನುಗ್ರಹದ ಭಾರವನ್ನು ಹೊತ್ತವಳು. ನಮ್ಮ ಜೀವಮಾನವಿಡೀ ಆಕೆಯ ಸೇವೆಗಾಗಿ, ಅವಳ ಆರಾಧನೆಗಾಗಿ ಅನುದಿನವೂ ಮಂಗಳಾದೇವಿ ಕ್ಷೇತ್ರಕ್ಕೆ ಬರುವಂತೆ ಮಾಡಿ ಇಹ ಪರದಲ್ಲಿ ಹರಸಿ ಆಶೀರ್ವದಿಸು ಅಮ್ಮಾ ಎಂದು ಪ್ರಾರ್ಥಿಸುತ್ತಾ ಶರನ್ನವರಾತ್ರಿಯ ಕೃತಜ್ಞತಾ ಪೂರ್ವಕ ಪ್ರಣಾಮಗಳನ್ನು ತಾಯಿಯ ಪಾದಕಮಲಗಳಲ್ಲಿ ಹೃದಯಾಂತರಾಳದಿಂದ ಸಮರ್ಪಿಸೋಣ._*
 
_ದೇವಿಯ ಅವಭೃತ ಸವಾರಿ ಸದಾಕಾಲ ಸ್ಮರಣೀಯನಿನ್ನೆಯ ದಿನ ಗುರುವಾರ ಶ್ರೀ ದೇವಿಗೆ ನವರಾತ್ರಿಯ ಪ್ರಯುಕ್ತ ಅಂತಿಮ ದಿನ ಏಕಾದಶಿಯ ಅವಭೃತ ಮಂಗಳಸ್ನಾನದ ಮಹೋತ್ಸವ. ಕಳೆದ ಏಕಾದಶಿಯ ಸಾಯಂಕಾಲ ೭.೩೦’ಕ್ಕೆ ಬಲಿ ಹೊರಟು ವೈಶಿಷ್ಠ್ಯಪೂರ್ಣ ಅಭೃತದ ಉಡುಕೆ ಸುತ್ತು, ಚೆಂಡೆ ಸುತ್ತು, ಓಡ ಬಲಿ, ಸ್ಯಾಕ್ಸೋಫೋನ್ ಸುತ್ತು… ವಾದ್ಯಾದಿ ಸುತ್ತುಗಳೊಂದಿಗೆ ಪಲ್ಲಕ್ಕಿ ಉತ್ಸವವು ನಡೆದು ನಾಗಸ್ವರದ ವಿಶೇಷ ಸ್ವರ ನಾದ ಆಲಾಪದಲ್ಲಿ, ಉಡುಕೆ, ಚೆಂಡೆ ತಾಳಗಳ ಹಿಮ್ಮೇಳದಲ್ಲಿ ಶ್ರೀ ಕ್ಷೇತ್ರವೆ ವರ್ಣರಂಜಿತವಾಗಿ ಝೇಂಕರಿಸುತ್ತಿತ್ತು. ಅದರಲ್ಲೂ ಪಾಲಕಿ ಬಲಿಯ ೨ ಸುತ್ತು ನಾಗಸ್ವರದ ವಿಶೇಷ ‘ಸರ್ಪ ಪುಂಗಿನಾದ’ ಉತ್ಸವದ ಪ್ರಧಾನ ಆಕರ್ಷಣೆಗೆ ಕಾರಣವಾಯಿತು._
 
_ಆ ಬಳಿಕ ೧೦.೩೦’ಕ್ಕೆ ಸರಿಯಾಗಿ ಶ್ರೀ ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಓಕುಳಿ ಪೂಜೆಯು ನೆರವೇರಿತು. ಬಳಿಕ ೧೧.೧೫’ಕ್ಕೆ ಸಣ್ಣಭಂಡಿಯಲ್ಲಿ ಶ್ರೀ ದೇವಿಯ ಅವಭೃತ ಸವಾರಿ ಹೊರಟು ನೇತ್ರಾವತಿ ಫಲ್ಗುಣಿ ಸಂಗಮ ತೀರದಲ್ಲಿ ದೇವಿಯ ಅವಭೃತ ಮಂಗಳ ಸ್ನಾನವನ್ನು ಕಂಡು ಭಾವುಕ ಭಕ್ತಾದಿಗಳು ತನ್ಮಯರಾದರು._ 
 
_ಬಳಿಕ ಮುಂಜಾನೆ ೪’ಕ್ಕೆ ಸ್ವಸ್ಥಾನ ಕ್ಷೇತ್ರಕ್ಕೆ ಭಂಡಿಯಲ್ಲಿ ದೇವಿಯ ಆಗಮನವಾಗಿ ನವರಾತ್ರಿಯ ಅಂತಿಮ ಉತ್ಸವವಾಗಿ ನಡೆದ ದರ್ಶನಬಲಿಯ ದೃಶ್ಯವು ಕಣ್ತುಂಬಿಕೊಂಡು ನೆರೆದವರ ಪುಳಕಿತಗೊಳಿಸಿತು._ 
 
_ಇದರೊಂದಿಗೆ ಇಂದು ಪ್ರಾತಃಕಾಲ ನವಾಕ – ಶುದ್ಧೀಕಲಶ’ವಾಗಿ ಮಧ್ಯಾಹ್ನದ ಮಹಾಪೂಜೆಯು ನಡೆದು ಬ್ರಾಹ್ಮಣೋತ್ತಮರಿಂದ ಗಂಧಾಕ್ಷತೆಯ ಅಕ್ಷತೆಯ ಪ್ರಸಾದವನ್ನು ಸ್ವೀಕರಿಸಿ ಸಂಪ್ರೋಕ್ಷಣೆಯೊಂದಿಗೆ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವ ೨೦೨೨’ಶುಭ ಮಂಗಳವಾಯಿತು._
 
_ತನ್ನೆಲ್ಲಾ ಉತ್ಸವಾದಿಗಳನ್ನು ನಿರ್ವಿಘ್ನವಾಗಿ ನಡೆಸಿಕೊಟ್ಟು ಇಂದಿನ ಅಲಂಕಾರದಲ್ಲಿ ಕಿತ್ತಳೆ ಕೇಸರಿ ವರ್ಣದ ಸೀರೆಯನ್ನು ತೊಟ್ಟು ಶ್ರೀ ದೇವಿಯು ಅಭಯ ವರದ ಹಸ್ತಳಾಗಿ ಚಕ್ರ -ತೋಮರವನ್ನು ಧರಿಸಿ ಸಿಂಹಾಸನಸ್ಥಿತಳಾದ ಮಹಾರಾಣಿಯು ಅನವರತ ಆಕೆಯ ಸನ್ನಿಧಾನದಲ್ಲಿ ಪೊಡಮಟ್ಟು ಧನ್ಯರಾಗುವ ಸುಯೋಗವನ್ನು ನಮ್ಮೆಲ್ಲರಿಗೂ ಸದಾ ಕರುಣಿಸಿ ಕರುಣಾ ಕಟಾಕ್ಷ ಸ್ಥಿರವಾಗಿರಲಿ._
 
ಇಂತೆ ಈ ಬಾರಿಯ ನವರಾತ್ರಿಯ ಅಪೂರ್ವ ಕ್ಷಣಕ್ಕೆ ಶಿರಸ್ಸಾ ಮನಸ್ಸಾ ನಮಿಸಿ ಬರುವ *ಮುಂದಿನ ವರುಷ ಅಕ್ಟೋಬರ ೧೫’ ಭಾನುವಾರದಿಂದ ಆರಂಭವಾಗಿ ಅಕ್ಟೋಬರ ೨೪’ರ ಮಂಗಳವಾರದ ವರೆಗೆ ನಡೆಯಲಿರುವ ೨೦೨೩’ರ ನವರಾತ್ರಿಗೆ* ಸಿಹಿಗನಸುಗಾಣುತ್ತಾ ಸಂಭ್ರಮಿಸೋಣ😜😆👏
 
_*ಧರ್ಮೋ ರಕ್ಷತಿ ರಕ್ಷಿತಃ* ಎಂಬ ಸನಾತನ ವಾಕ್ಯದಂತೆ ಸತ್ಯ ನ್ಯಾಯ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಕಾಯ ವಾಚ ಮನಸಾ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಧರ್ಮದ ಅನುಷ್ಠಾನ ಮಾಡೋಣ. ‘ಧರ್ಮ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ’ ಎಂಬಂತೆ ಅನವರತ ಮಂಗಳಾದೇವಿಯ ಸ್ಮರಣೆಯಿಂದ ಆಕೆಯ ಕ್ಷೇತ್ರದ ಸೇವೆಗೈಯುತ್ತಾ ಬದುಕನ್ನು ಮುನ್ನಡೆಸೋಣ._
 
_ದೇವಿ ಸಾಮಾನ್ಯವಾಗಿ *ತನ್ನ ನಿತ್ಯಾಲಂಕಾರದಲ್ಲಿ ಅಭಯ ವರದ ಹಸ್ತಳಾಗಿ ಇರುವುದು ರೂಢಿ. ಅರ್ಥಾತ್ ನಮ್ಮ ಪ್ರಾರ್ಥನೆ ಸಂಕಲ್ಪಗಳೆಲ್ಲದಕ್ಕೂ ತಥಾಸ್ತು ಎಂದು ಅಭಯಹಸ್ತದಿಂದಲೇ ಅನುಗ್ರಹಿಸುತ್ತಾಳೆ. ವರದ ಹಸ್ತದಿಂದ ಬೇಕು ಬೇಕಾದನ್ನು ಕೇಳಿ ಕೇಳಿದನ್ನು ಯಥೇಚ್ಛವಾಗಿ ಕರುಣಿಸುತ್ತಾಳೆ.*_
 
_ನಮ್ಮ ಭವಿಷ್ಯದ ದಾರಿ ದೀಪವಾಗಿ ಕಲ್ಪವೃಕ್ಷದಂತೆ ಭಕ್ತಾಭೀಷ್ಟಪ್ರದಳಾಗಿ ಶ್ರೀ ದೇವಿಯು ಅನುಗ್ರಹಿಸುತ್ತಿರಲು ಅವಳ ಕರುಣಾ ಕಟಾಕ್ಷ ಮಾತ್ರದಿಂದಲೇ ಆಯು೯ರಾರೋಗ್ಯ ಸರ್ವ ಸಂಪತ್ತುಗಳು ಲಭಿಸಿ ಸನ್ಮಂಗಳವು ಸಂಪ್ರಾಪ್ತವಾಗಲಿ._
 
_ಕೃಪೆತೋರಿ ಅನುಗ್ರಹಿಸಿ ಸರ್ವರನ್ನೂ ಉದ್ಧರಿಸಿ ಆಶಿರ್ವದಿಸಬೇಕೆಂಂದು ಭಕ್ತಿಯಿಂದ ಪ್ರಾರ್ಥನೆ’ ಯೊಂದಿಗೆ ನವರಾತ್ರಿ೨೦೨೨’ಕ್ಕೆ ಮಂಗಳ ಹಾಡೋಣ._🌸
 
 
     🌼ಶುಭಂ🌼
 
 
Sri Mangaladevi’s 𝙈𝙖𝙣𝙜𝙖𝙡𝙤𝙧𝙚 𝘿𝙖𝙨𝙖𝙧𝙖 came to a closure with  𝐒𝐚𝐦𝐩𝐫𝐨𝐤𝐬𝐡𝐚𝐧𝐚 today.
 
𝐓𝐡𝐞 𝐍𝐚𝐯𝐚𝐫𝐚𝐭𝐫𝐢 𝐚𝐧𝐝 𝐃𝐚𝐬𝐚𝐫𝐚 𝐜𝐞𝐥𝐞𝐛𝐫𝐚𝐭𝐢𝐨𝐧𝐬 𝐡𝐚𝐬 𝐜𝐨𝐧𝐜𝐥𝐮𝐝𝐞𝐝 𝐢𝐧 𝐭𝐡𝐞 𝐌𝐚𝐧𝐠𝐚𝐥𝐚𝐝𝐞𝐯𝐢 𝐭𝐞𝐦𝐩𝐥𝐞.
The Majestic adornment of different altars of Goddess Sri Mangaladevi during Navratri celebrations not only became very famous but it had also attracted a lot of attention.
 
𝑇𝒉𝑒 𝑟𝑒𝑛𝑜𝑤𝑛𝑒𝑑 𝑎𝑛𝑑 𝑤𝑒𝑙𝑙 𝑘𝑛𝑜𝑤𝑛 𝑀𝑎𝑛𝑔𝑎𝑙𝑎𝑑𝑒𝑣𝑖 𝑀𝑎𝑛𝑔𝑎𝑙𝑢𝑟𝑢 𝐷𝑎𝑠𝑎𝑟𝑎  𝑎𝑛𝑑 𝑡𝒉𝑒 𝑓𝑒𝑠𝑡𝑖𝑣𝑒 𝑐𝑒𝑙𝑒𝑏𝑟𝑎𝑡𝑖𝑜𝑛𝑠 𝑜𝑓 𝑆𝑟𝑖 𝑀𝑎𝑛𝑔𝑎𝑙𝑎𝑑𝑒𝑣𝑖 𝑡𝑒𝑚𝑝𝑙𝑒 𝑐𝑎𝑚𝑒 𝑡𝑜 𝑎 𝑐𝑜𝑛𝑐𝑙𝑢𝑠𝑖𝑜𝑛 𝑤𝑖𝑡𝒉 𝑡𝒉𝑒 𝑐𝑜𝑚𝑝𝑙𝑒𝑡𝑖𝑜𝑛 𝑜𝑓 𝑡𝒉𝑒 𝑝𝑢𝑟𝑖𝑓𝑖𝑐𝑎𝑡𝑖𝑜𝑛 𝑝𝑟𝑜𝑐𝑒𝑠𝑠. 
 
𝑌𝑒𝑠𝑡𝑒𝑟𝑑𝑎𝑦 𝑜𝑛 𝑡𝒉𝑒 𝑜𝑐𝑐𝑎𝑠𝑖𝑜𝑛 𝑜𝑓 𝑒𝑘𝑎𝑑𝑎𝑠𝒉𝑖, (11𝑡𝒉 𝑑𝑎𝑦 𝑜𝑓 𝒉𝑖𝑛𝑑𝑢 𝑐𝑎𝑙𝑒𝑛𝑑𝑎𝑟) 𝑎𝑓𝑡𝑒𝑟 𝑡𝒉𝑒 𝐵𝑎𝑙𝑖 𝑠𝑒𝑣𝑎, 𝐺𝑜𝑑𝑑𝑒𝑠𝑠 𝑒𝑛𝑗𝑜𝑦𝑒𝑑 𝑡𝒉𝑒 𝑢𝑑𝑢𝑘𝑘𝑒 ( 𝑎𝑛 𝑖𝑛𝑠𝑡𝑟𝑢𝑚𝑒𝑛𝑡 𝑠𝑖𝑚𝑖𝑙𝑎𝑟 𝑡𝑜 𝐷𝑎𝑚𝑎𝑟𝑢 𝑎𝑛𝑑 𝐸𝑑𝑎𝑘𝑘𝑎, 𝑙𝑎𝑟𝑔𝑒𝑟 𝑡𝒉𝑎𝑛 𝑡𝒉𝑒 𝑓𝑜𝑟𝑚𝑒𝑟 𝑏𝑢𝑡 𝑠𝑚𝑎𝑙𝑙𝑒𝑟 𝑡𝒉𝑎𝑛 𝑡𝒉𝑒 𝑙𝑎𝑡𝑡𝑒𝑟), 𝐶𝒉𝑎𝑛𝑑𝑒 ( 𝑖𝑛𝑠𝑡𝑟𝑢𝑚𝑒𝑛𝑡 𝑝𝑎𝑟𝑡𝑖𝑐𝑢𝑙𝑎𝑟𝑙𝑦 𝑖𝑛 𝑌𝑎𝑘𝑠𝒉𝑎𝑔𝑎𝑛𝑎) 𝑎𝑛𝑑 𝑡𝒉𝑒 𝑝𝑎𝑙𝑎𝑛𝑞𝑢𝑖𝑛 𝑠𝑒𝑟𝑣𝑖𝑐𝑒𝑠 𝑎𝑙𝑜𝑛𝑔 𝑤𝑖𝑡𝒉 𝑡𝒉𝑒 𝑎𝑠𝑡𝑎 𝑣𝑎𝑑𝑦𝑎 𝑠𝑒𝑣𝑎 ( 𝑝𝑙𝑎𝑦𝑖𝑛𝑔 𝑜𝑓 𝑒𝑖𝑔𝒉𝑡 𝑚𝑢𝑠𝑖𝑐𝑎𝑙 𝑖𝑛𝑠𝑡𝑟𝑢𝑚𝑒𝑛𝑡𝑠) 𝑝𝑒𝑟𝑓𝑜𝑚𝑒𝑑 𝑖𝑛 𝑡𝒉𝑒 𝑉𝑎𝑠𝑎𝑛𝑡𝒉𝑎 𝑀𝑎𝑛𝑡𝑎𝑝. 𝑇𝒉𝑒 𝑠𝑒𝑟𝑣𝑖𝑐𝑒𝑠 𝑡𝑜 𝑡𝒉𝑒 𝐺𝑜𝑑𝑑𝑒𝑠𝑠 𝑐𝑜𝑛𝑐𝑙𝑢𝑑𝑒𝑑 𝑤𝑖𝑡𝒉 𝑡𝒉𝑒 𝑂𝑘𝑢𝑙𝑖 (𝑠𝑝𝑟𝑖𝑛𝑘𝑙𝑖𝑛𝑔 𝑜𝑓 𝑣𝑒𝑟𝑚𝑖𝑙𝑙𝑖𝑜𝑛 𝑤𝑎𝑡𝑒𝑟 𝑜𝑛 𝑜𝑡𝒉𝑒𝑟𝑠 𝑎𝑠 𝑎 𝑚𝑎𝑟𝑘 𝑜𝑓 𝑎𝑢𝑠𝑝𝑖𝑐𝑖𝑜𝑢𝑠𝑛𝑒𝑠𝑠).
 
𝐓𝐡𝐞 𝐠𝐨𝐝𝐝𝐞𝐬𝐬 𝐥𝐚𝐭𝐞𝐫 𝐩𝐫𝐨𝐜𝐞𝐞𝐝𝐞𝐝 𝐢𝐧 𝐡𝐞𝐫 𝐬𝐦𝐚𝐥𝐥 𝐜𝐡𝐚𝐫𝐢𝐨𝐭 𝐭𝐨𝐰𝐚𝐫𝐝𝐬 𝐭𝐡𝐞 𝐦𝐞𝐞𝐭𝐢𝐧𝐠 𝐩𝐨𝐢𝐧𝐭 𝐨𝐟 𝐍𝐞𝐭𝐫𝐚𝐯𝐚𝐭𝐡𝐢 𝐚𝐧𝐝 𝐏𝐡𝐚𝐥𝐠𝐮𝐧𝐢 𝐫𝐢𝐯𝐞𝐫 𝐭𝐨 𝐡𝐚𝐯𝐞 𝐚 𝐡𝐨𝐥𝐲 𝐛𝐚𝐭𝐡 𝐜𝐚𝐥𝐥𝐞𝐝 𝐀𝐯𝐚𝐛𝐫𝐮𝐭𝐡𝐚 𝐬𝐧𝐚𝐧𝐚. 𝐖𝐢𝐭𝐡 𝐭𝐡𝐞 𝐩𝐞𝐫𝐟𝐨𝐫𝐦𝐚𝐧𝐜𝐞 𝐨𝐟 𝐭𝐡𝐞 𝐝𝐚𝐫𝐬𝐡𝐚𝐧𝐚 𝐛𝐚𝐥𝐢, 𝐚𝐟𝐭𝐞𝐫 𝐫𝐞𝐭𝐮𝐫𝐧𝐢𝐧𝐠 𝐛𝐚𝐜𝐤 𝐭𝐨 𝐭𝐡𝐞 𝐭𝐞𝐦𝐩𝐥𝐞 𝐢𝐧 𝐡𝐞𝐫 𝐬𝐦𝐚𝐥𝐥 𝐜𝐡𝐚𝐫𝐢𝐨𝐭, 𝐆𝐨𝐝𝐝𝐞𝐬𝐬 𝐰𝐞𝐧𝐭 𝐢𝐧𝐬𝐢𝐝𝐞 𝐭𝐡𝐞 𝐬𝐚𝐧𝐜𝐭𝐮𝐦 𝐬𝐚𝐧𝐜𝐭𝐨𝐫𝐮𝐦 𝐨𝐟 𝐭𝐡𝐞 𝐭𝐞𝐦𝐩𝐥𝐞. 𝐓𝐡𝐞𝐬𝐞 𝐟𝐞𝐬𝐭𝐢𝐯𝐞 𝐜𝐞𝐥𝐞𝐛𝐫𝐚𝐭𝐢𝐨𝐧𝐬 𝐛𝐫𝐨𝐮𝐠𝐡𝐭 𝐣𝐨𝐲 𝐚𝐧𝐝 𝐡𝐚𝐩𝐩𝐢𝐧𝐞𝐬𝐬 𝐢𝐧 𝐭𝐡𝐞 𝐡𝐞𝐚𝐫𝐭𝐬 𝐨𝐟 𝐡𝐞𝐫 𝐝𝐞𝐯𝐨𝐭𝐞𝐞𝐬. 𝐓𝐡𝐞 𝐠𝐨𝐝𝐝𝐞𝐬𝐬 𝐥𝐚𝐭𝐞𝐫 𝐩𝐫𝐨𝐜𝐞𝐞𝐝𝐞𝐝 𝐢𝐧 𝐡𝐞𝐫 𝐬𝐦𝐚𝐥𝐥 𝐜𝐡𝐚𝐫𝐢𝐨𝐭 𝐭𝐨𝐰𝐚𝐫𝐝𝐬 𝐭𝐡𝐞 𝐦𝐞𝐞𝐭𝐢𝐧𝐠 𝐩𝐨𝐢𝐧𝐭 𝐨𝐟 𝐍𝐞𝐭𝐫𝐚𝐯𝐚𝐭𝐡𝐢 𝐚𝐧𝐝 𝐏𝐡𝐚𝐥𝐠𝐮𝐧𝐢 𝐫𝐢𝐯𝐞𝐫 𝐭𝐨 𝐡𝐚𝐯𝐞 𝐚 𝐡𝐨𝐥𝐲 𝐛𝐚𝐭𝐡 𝐜𝐚𝐥𝐥𝐞𝐝 𝐀𝐯𝐚𝐛𝐫𝐮𝐭𝐡𝐚 𝐬𝐧𝐚𝐧𝐚. 𝐖𝐢𝐭𝐡 𝐭𝐡𝐞 𝐩𝐞𝐫𝐟𝐨𝐫𝐦𝐚𝐧𝐜𝐞 𝐨𝐟 𝐭𝐡𝐞 𝐝𝐚𝐫𝐬𝐡𝐚𝐧𝐚 𝐛𝐚𝐥𝐢, 𝐚𝐟𝐭𝐞𝐫 𝐫𝐞𝐭𝐮𝐫𝐧𝐢𝐧𝐠 𝐛𝐚𝐜𝐤 𝐭𝐨 𝐭𝐡𝐞 𝐭𝐞𝐦𝐩𝐥𝐞 𝐢𝐧 𝐡𝐞𝐫 𝐬𝐦𝐚𝐥𝐥 𝐜𝐡𝐚𝐫𝐢𝐨𝐭, 𝐆𝐨𝐝𝐝𝐞𝐬𝐬 𝐰𝐞𝐧𝐭 𝐢𝐧𝐬𝐢𝐝𝐞 𝐭𝐡𝐞 𝐬𝐚𝐧𝐜𝐭𝐮𝐦 𝐬𝐚𝐧𝐜𝐭𝐨𝐫𝐮𝐦 𝐨𝐟 𝐭𝐡𝐞 𝐭𝐞𝐦𝐩𝐥𝐞. 𝐓𝐡𝐞𝐬𝐞 𝐟𝐞𝐬𝐭𝐢𝐯𝐞 𝐜𝐞𝐥𝐞𝐛𝐫𝐚𝐭𝐢𝐨𝐧𝐬 𝐛𝐫𝐨𝐮𝐠𝐡𝐭 𝐣𝐨𝐲 𝐚𝐧𝐝 𝐡𝐚𝐩𝐩𝐢𝐧𝐞𝐬𝐬 𝐢𝐧 𝐭𝐡𝐞 𝐡𝐞𝐚𝐫𝐭𝐬 𝐨𝐟 𝐡𝐞𝐫 𝐝𝐞𝐯𝐨𝐭𝐞𝐞𝐬.❤️ 
 
𝐈𝐧 𝐭𝐡𝐞 𝐞𝐚𝐫𝐥𝐲 𝐡𝐨𝐮𝐫𝐬 𝐨𝐟 𝐭𝐡𝐞 𝐦𝐨𝐫𝐧𝐢𝐧𝐠, 𝐩𝐮𝐫𝐢𝐟𝐢𝐜𝐚𝐭𝐢𝐨𝐧 𝐩𝐫𝐨𝐜𝐞𝐬𝐬 𝐰𝐚𝐬 𝐝𝐨𝐧𝐞 𝐢𝐧𝐬𝐢𝐝𝐞 𝐭𝐡𝐞 𝐭𝐞𝐦𝐩𝐥𝐞. 𝐀𝐟𝐭𝐞𝐫, 𝐭𝐡𝐞 𝐌𝐚𝐡𝐚 𝐏𝐨𝐨𝐣𝐚 𝐢𝐧 𝐭𝐡𝐞 𝐚𝐟𝐭𝐞𝐫𝐧𝐨𝐨𝐧, 𝐭𝐡𝐞 𝐞𝐥𝐝𝐞𝐫𝐥𝐲 𝐩𝐞𝐨𝐩𝐥𝐞 𝐚𝐧𝐝 𝐭𝐡𝐞 𝐩𝐫𝐢𝐞𝐬𝐭𝐬 𝐭𝐨𝐨𝐤 𝐭𝐡𝐞 𝐌𝐚𝐧𝐭𝐫𝐚 𝐚𝐤𝐬𝐡𝐚𝐭𝐡𝐞 𝐏𝐫𝐚𝐬𝐚𝐝 𝐚𝐧𝐝 𝐬𝐩𝐫𝐢𝐧𝐤𝐥𝐞𝐝 𝐭𝐡𝐞 𝐡𝐨𝐥𝐲 𝐰𝐚𝐭𝐞𝐫 𝐢𝐧 𝐚𝐧𝐝 𝐚𝐫𝐨𝐮𝐧𝐝 𝐭𝐡𝐞 𝐭𝐞𝐦𝐩𝐥𝐞. 𝐖𝐢𝐭𝐡 𝐭𝐡𝐢𝐬, 𝐭𝐡𝐞 𝐬𝐡𝐚𝐫𝐚𝐧 𝐍𝐚𝐯𝐚𝐫𝐚𝐭𝐫𝐢 𝐜𝐞𝐥𝐞𝐛𝐫𝐚𝐭𝐢𝐨𝐧𝐬 𝐨𝐟 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢 𝐜𝐨𝐦𝐩𝐥𝐞𝐭𝐞𝐝 𝐬𝐮𝐜𝐜𝐞𝐬𝐬𝐟𝐮𝐥𝐥𝐲 𝐟𝐨𝐫 𝐭𝐡𝐞 𝐲𝐞𝐚𝐫 2022 𝐰𝐢𝐭𝐡𝐨𝐮𝐭 𝐚𝐧𝐲 𝐡𝐢𝐝𝐫𝐚𝐧𝐜𝐞.
 
𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘸𝘩𝘰 𝘪𝘴 𝘢𝘭𝘴𝘰 𝘤𝘢𝘭𝘭𝘦𝘥 𝙎𝙖𝙧𝙫𝙖 𝙈𝙖𝙣𝙜𝙖𝙡𝙖, 𝙥𝙖𝙮𝙨 𝙝𝙚𝙚𝙙 𝙩𝙤 𝙖𝙡𝙡 𝙩𝙝𝙚 𝙬𝙞𝙨𝙝𝙚𝙨 𝙤𝙛 𝙝𝙚𝙧 𝙙𝙚𝙫𝙤𝙩𝙚𝙚𝙨. 𝘓𝘦𝘵’𝘴 𝘶𝘴 𝘢𝘭𝘭 𝘸𝘢𝘭𝘬 𝘵𝘰𝘸𝘢𝘳𝘥𝘴 𝘵𝘩𝘦 𝘶𝘭𝘵𝘪𝘮𝘢𝘵𝘦 𝘢𝘯𝘥 𝘵𝘩𝘦 𝘵𝘳𝘶𝘦 𝘬𝘯𝘰𝘸𝘭𝘦𝘥𝘨𝘦 𝘸𝘪𝘵𝘩 𝘵𝘩𝘦 𝘨𝘳𝘢𝘤𝘦 𝘢𝘯𝘥 𝘤𝘰𝘮𝘱𝘢𝘴𝘴𝘪𝘰𝘯 𝘰𝘧 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪. 𝘐𝘵 𝘪𝘴 𝘵𝘳𝘶𝘦 𝘵𝘩𝘢𝘵, 𝘸𝘪𝘵𝘩 𝘩𝘦𝘳 𝘤𝘰𝘮𝘱𝘭𝘦𝘵𝘦 𝘣𝘭𝘦𝘴𝘴𝘪𝘯𝘨𝘴 𝘰𝘯𝘭𝘺 𝘵𝘩𝘢𝘵 𝘸𝘦 𝘸𝘦𝘳𝘦 𝘢𝘣𝘭𝘦 𝘵𝘰 𝘩𝘢𝘱𝘱𝘪𝘭𝘺 𝘦𝘯𝘫𝘰𝘺 𝘢𝘯𝘥 𝘤𝘰𝘮𝘱𝘭𝘦𝘵𝘦 𝘢𝘭𝘭 𝘵𝘩𝘦 𝘱𝘰𝘰𝘫𝘢 𝘢𝘯𝘥 𝘰𝘵𝘩𝘦𝘳 𝘳𝘪𝘵𝘶𝘢𝘭𝘴 𝘸𝘪𝘵𝘩𝘰𝘶𝘵 𝘢𝘯𝘺 𝘩𝘪𝘥𝘳𝘢𝘯𝘤𝘦 𝘶𝘯𝘥𝘦𝘳 𝘵𝘩𝘪𝘴 𝘱𝘢𝘯𝘥𝘦𝘮𝘪𝘤 𝘢𝘯𝘥 𝘴𝘵𝘳𝘦𝘴𝘴𝘧𝘶𝘭 𝘴𝘪𝘵𝘶𝘢𝘵𝘪𝘰𝘯𝘴. 𝘚𝘩𝘦 𝘤𝘢𝘯 𝘣𝘦 𝘴𝘦𝘦𝘯 𝘴𝘦𝘢𝘵𝘦𝘥 𝘪𝘯 𝘱𝘢𝘥𝘮𝘢𝘴𝘢𝘯𝘢 𝘢𝘯𝘥 𝘴𝘮𝘪𝘭𝘪𝘯𝘨 𝘩𝘢𝘱𝘱𝘪𝘭𝘺 𝘢𝘧𝘵𝘦𝘳 𝘢𝘤𝘤𝘦𝘱𝘵𝘪𝘯𝘨 𝘢𝘭𝘭 𝘰𝘶𝘳 𝘴𝘦𝘳𝘷𝘪𝘤𝘦𝘴, 𝘴𝘦𝘷𝘢 𝘢𝘯𝘥 𝘥𝘦𝘷𝘰𝘵𝘪𝘰𝘯 𝘵𝘰 𝘩𝘦𝘳 𝘥𝘶𝘳𝘪𝘯𝘨 𝘵𝘩𝘪𝘴 𝘕𝘢𝘷𝘳𝘢𝘵𝘳𝘪 𝘤𝘦𝘭𝘦𝘣𝘳𝘢𝘵𝘪𝘰𝘯𝘴.
 
𝘚𝘩𝘦 𝘪𝘴 𝘢𝘭𝘴𝘰 𝘩𝘰𝘭𝘥𝘪𝘯𝘨 𝘢𝘯 𝘢𝘹𝘦, 𝘢𝘯𝘥 𝘨𝘰𝘭𝘥𝘦𝘯 𝘭𝘰𝘵𝘶𝘴 𝘪𝘯 𝘶𝘱𝘱𝘦𝘳 𝘩𝘢𝘯𝘥𝘴 𝘢𝘯𝘥 𝘩𝘰𝘭𝘥𝘪𝘯𝘨 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢, 𝘴𝘩𝘦 𝘪𝘴 𝘢𝘭𝘴𝘰 𝘸𝘦𝘢𝘳𝘪𝘯𝘨 𝘢 𝘴𝘪𝘭𝘷𝘦𝘳 𝘴𝘯𝘢𝘬𝘦 𝘤𝘳𝘰𝘸𝘯 𝘪𝘯 𝘩𝘦𝘳 𝘩𝘦𝘢𝘥. 𝘔𝘢𝘺 𝘵𝘩𝘦 𝘥𝘪𝘷𝘪𝘯𝘦 𝘨𝘰𝘥𝘥𝘦𝘴𝘴 𝘬𝘦𝘦𝘱 𝘩𝘦𝘳 𝘤𝘰𝘮𝘱𝘢𝘴𝘴𝘪𝘰𝘯, 𝘤𝘢𝘳𝘦 𝘢𝘯𝘥 𝘣𝘭𝘦𝘴𝘴𝘪𝘯𝘨𝘴 𝘣𝘦 𝘶𝘱𝘰𝘯 𝘶𝘴 𝘢𝘭𝘸𝘢𝘺𝘴 𝘢𝘯𝘥  𝘩𝘦𝘭𝘱 𝘶𝘴 𝘵𝘰 𝘥𝘰 𝘴𝘦𝘳𝘷𝘪𝘤𝘦 𝘪𝘯 𝘩𝘦𝘳 𝘥𝘪𝘷𝘪𝘯𝘦 𝘧𝘦𝘦𝘵 𝘢𝘴 𝘢𝘭𝘸𝘢𝘺𝘴 𝘪𝘯 𝘵𝘩𝘦 𝘥𝘢𝘺𝘴 𝘵𝘰 𝘤𝘰𝘮𝘦 𝘪𝘯 𝘵𝘩𝘦 𝘧𝘶𝘵𝘶𝘳𝘦. 𝘓𝘦𝘵 𝘶𝘴 𝘢𝘭𝘭 𝘣𝘦 𝘴𝘢𝘧𝘦, 𝘩𝘢𝘪𝘭 𝘢𝘯𝘥 𝘩𝘦𝘢𝘭𝘵𝘩𝘺 𝘢𝘯𝘥 𝘣𝘦 𝘢𝘣𝘭𝘦 𝘵𝘰 𝘢𝘵𝘵𝘦𝘯𝘥 𝘵𝘩𝘦 𝘕𝘢𝘷𝘳𝘢𝘵𝘳𝘪 𝘤𝘦𝘭𝘦𝘣𝘳𝘢𝘵𝘪𝘰𝘯𝘴 𝘰𝘧 𝘵𝘩𝘦 𝘯𝘦𝘹𝘵 𝘺𝘦𝘢𝘳, 𝘸𝘩𝘪𝘤𝘩 𝘴𝘩𝘢𝘭𝘭 𝘣𝘦𝘨𝘪𝘯 𝘧𝘳𝘰𝘮 15𝘵𝘩 𝘖𝘤𝘵𝘰𝘣𝘦𝘳 2023 𝘵𝘪𝘭𝘭 24𝘵𝘩  2023.
 
 
𝑩𝒆𝒊𝒏𝒈 𝒑𝒍𝒆𝒂𝒔𝒆𝒅 𝒘𝒊𝒕𝒉 𝒕𝒉𝒆 𝑵𝒂𝒗𝒓𝒂𝒕𝒓𝒊 𝒄𝒆𝒍𝒆𝒃𝒓𝒂𝒕𝒊𝒐𝒏𝒔, 𝒎𝒂𝒚 𝒕𝒉𝒆 𝒈𝒐𝒅𝒅𝒆𝒔𝒔 𝒘𝒉𝒐 𝒊𝒔 𝒂𝒍𝒔𝒐 𝒂 𝒔𝒂𝒓𝒗𝒂 𝑴𝒂𝒏𝒈𝒂𝒍𝒂 ( 𝒘𝒉𝒐 𝒄𝒓𝒆𝒂𝒕𝒆𝒔 𝒈𝒐𝒐𝒅 𝒗𝒊𝒃𝒆𝒔 𝒂𝒏𝒅 𝒂𝒖𝒔𝒑𝒊𝒄𝒊𝒐𝒖𝒔𝒏𝒆𝒔𝒔 𝒆𝒗𝒆𝒓𝒚𝒘𝒉𝒆𝒓𝒆) 𝒓𝒆𝒎𝒐𝒗𝒆 𝒂𝒍𝒍 𝒕𝒉𝒆 𝒇𝒆𝒂𝒓𝒔 𝒇𝒓𝒐𝒎 𝒐𝒖𝒓 𝒉𝒆𝒂𝒓𝒕𝒔 𝒂𝒏𝒅 𝒃𝒍𝒆𝒔𝒔 𝒕𝒉𝒊𝒔 𝒘𝒉𝒐𝒍𝒆 𝒘𝒐𝒓𝒍𝒅 𝒕𝒐 𝒍𝒊𝒗𝒆 𝒊𝒏 𝒉𝒂𝒓𝒎𝒐𝒏𝒚 𝒂𝒏𝒅 𝒑𝒆𝒂𝒄𝒆. 𝑩𝒚 𝒉𝒂𝒗𝒊𝒏𝒈 𝒂 𝒅𝒂𝒓𝒔𝒉𝒂𝒏 𝒐𝒇 𝑺𝒓𝒊 𝑴𝒂𝒏𝒈𝒂𝒍𝒂𝒅𝒆𝒗𝒊, 𝒎𝒂𝒚 𝒘𝒆 𝒂𝒍𝒍 𝒈𝒆𝒕 𝒓𝒊𝒅 𝒐𝒇 𝒐𝒖𝒓 𝒔𝒊𝒏𝒔 𝒄𝒐𝒎𝒎𝒊𝒕𝒕𝒆𝒅 𝒃𝒚 𝒖𝒔
 
𝑨𝒔 𝒑𝒆𝒓 𝒕𝒉𝒆 𝒔𝒂𝒚𝒊𝒏𝒈 𝑫𝒉𝒂𝒓𝒎𝒐 𝑹𝒂𝒌𝒔𝒉𝒂𝒕𝒊 𝒓𝒂𝒌𝒔𝒉𝒊𝒕𝒉𝒂𝒉𝒂 𝒎𝒆𝒂𝒏𝒊𝒏𝒈 𝒐𝒖𝒓 𝒗𝒊𝒓𝒕𝒖𝒆𝒔 𝒔𝒉𝒂𝒍𝒍 𝒂𝒍𝒘𝒂𝒚𝒔 𝒑𝒓𝒐𝒕𝒆𝒄𝒕 𝒖𝒔, 𝒍𝒆𝒕 𝒖𝒔 𝒂𝒍𝒍 𝒘𝒂𝒍𝒌 𝒊𝒏 𝒕𝒉𝒆 𝒑𝒂𝒕𝒉 𝒐𝒇 𝑫𝒉𝒂𝒓𝒎𝒂(𝒑𝒂𝒕𝒉 𝒐𝒇 𝒓𝒊𝒈𝒉𝒕𝒆𝒐𝒖𝒔𝒏𝒆𝒔𝒔) 𝒃𝒚 𝒅𝒐𝒊𝒏𝒈 𝒈𝒐𝒐𝒅 𝒕𝒐 𝒐𝒕𝒉𝒆𝒓𝒔 𝒂𝒏𝒅 𝒕𝒓𝒆𝒂𝒕𝒊𝒏𝒈 𝒆𝒗𝒆𝒓𝒚𝒐𝒏𝒆 𝒆𝒒𝒖𝒂𝒍𝒍𝒚. 𝑳𝒆𝒕 𝒖𝒔 𝒑𝒖𝒓𝒊𝒇𝒚 𝒐𝒖𝒓 𝒎𝒊𝒏𝒅𝒔 𝒘𝒊𝒕𝒉 𝒅𝒆𝒗𝒐𝒕𝒊𝒐𝒏 𝒂𝒏𝒅 𝒃𝒚 𝒇𝒐𝒍𝒍𝒐𝒘𝒊𝒏𝒈 𝒆𝒕𝒉𝒊𝒄𝒂𝒍 𝒑𝒓𝒂𝒄𝒕𝒊𝒄𝒆𝒔. 𝑳𝒆𝒕 𝒖𝒔 𝒘𝒂𝒍𝒌 𝒇𝒐𝒓𝒘𝒂𝒓𝒅 𝒂𝒏𝒅 𝒃𝒆 𝒊𝒏 𝒄𝒐𝒏𝒔𝒕𝒂𝒏𝒕 𝒔𝒆𝒓𝒗𝒊𝒄𝒆 𝒐𝒇 𝒎𝒐𝒕𝒉𝒆𝒓 𝑴𝒂𝒏𝒈𝒂𝒍𝒂𝒅𝒆𝒗𝒊 𝒂𝒏𝒅 𝒃𝒆 𝒕𝒉𝒂𝒏𝒌𝒇𝒖𝒍 𝒕𝒐 𝒕𝒉𝒆 𝒈𝒐𝒅𝒅𝒆𝒔𝒔 𝒇𝒐𝒓 𝒉𝒆𝒓 𝒎𝒆𝒓𝒄𝒚, 𝒍𝒐𝒗𝒆 𝒂𝒏𝒅 𝒄𝒂𝒓𝒆 𝒔𝒉𝒐𝒘𝒏 𝒕𝒐 𝒖𝒔.👏
 
𝙱𝚢 𝚜𝚞𝚛𝚛𝚎𝚗𝚍𝚎𝚛𝚒𝚗𝚐 𝚘𝚞𝚛𝚜𝚎𝚕𝚟𝚎𝚜 𝚌𝚘𝚖𝚙𝚕𝚎𝚝𝚎𝚕𝚢 𝚝𝚘 𝚑𝚎𝚛 𝚍𝚒𝚟𝚒𝚗𝚎 𝚏𝚎𝚎𝚝, 𝚠𝚎 𝚗𝚎𝚎𝚍 𝚗𝚘𝚝 𝚏𝚎𝚊𝚛 𝚊𝚋𝚘𝚞𝚝 𝚊𝚗𝚢𝚝𝚑𝚒𝚗𝚐. 𝚆𝚎 𝚌𝚊𝚗 𝚋𝚎 𝚜𝚞𝚛𝚎 𝚝𝚑𝚊𝚝 𝚜𝚑𝚎 𝚠𝚒𝚕𝚕 𝚝𝚊𝚔𝚎 𝚌𝚊𝚛𝚎 𝚘𝚏 𝚊𝚕𝚕 𝚘𝚞𝚛 𝚗𝚎𝚌𝚎𝚜𝚜𝚒𝚝𝚒𝚎𝚜 𝚊𝚗𝚍 𝚠𝚒𝚕𝚕 𝚠𝚊𝚕𝚔 𝚋𝚎𝚜𝚒𝚍𝚎𝚜 𝚞𝚜 𝚒𝚗 𝚊𝚕𝚕 𝚘𝚞𝚛 𝚙𝚊𝚝𝚑𝚜 𝚘𝚏 𝚕𝚒𝚏𝚎 𝚊𝚗𝚍 𝚐𝚞𝚒𝚍𝚎 𝚊𝚗𝚍 𝚙𝚛𝚘𝚝𝚎𝚌𝚝 𝚞𝚜 𝚏𝚛𝚘𝚖 𝚊𝚕𝚕 𝚘𝚞𝚛 𝚍𝚒𝚏𝚏𝚒𝚌𝚞𝚕𝚝𝚒𝚎𝚜. 💯
 
𝐈𝐭 𝐢𝐬 𝐛𝐲 𝐭𝐡𝐞 𝐠𝐫𝐚𝐜𝐞 𝐨𝐟 𝐠𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢, 𝐰𝐞 𝐰𝐞𝐫𝐞 𝐚𝐛𝐥𝐞 𝐭𝐨 𝐝𝐨 𝐬𝐨. 𝐒𝐮𝐜𝐡 𝐢𝐬 𝐭𝐡𝐞 𝐦𝐢𝐠𝐡𝐭𝐲 𝐩𝐨𝐰𝐞𝐫 𝐨𝐟 𝐭𝐡𝐞 𝐠𝐨𝐝𝐝𝐞𝐬𝐬. 𝐀𝐬 𝐩𝐫𝐞𝐬𝐜𝐫𝐢𝐛𝐞𝐝 𝐢𝐧 𝐭𝐡𝐞 𝐬𝐜𝐫𝐢𝐩𝐭𝐮𝐫𝐞𝐬, 𝐨𝐮𝐫 𝐛𝐞𝐥𝐢𝐞𝐟 𝐬𝐡𝐨𝐮𝐥𝐝 𝐛𝐞 𝐬𝐮𝐜𝐡 𝐭𝐡𝐚𝐭, 𝐧𝐨𝐧𝐞 𝐨𝐭𝐡𝐞𝐫 𝐭𝐡𝐚𝐧 𝐡𝐞𝐫 𝐚𝐥𝐨𝐧𝐞 𝐜𝐚𝐧 𝐡𝐞𝐥𝐩 𝐚𝐧𝐝 𝐩𝐫𝐨𝐭𝐞𝐜𝐭 𝐮𝐬 𝐟𝐫𝐨𝐦 𝐚𝐧𝐲𝐭𝐡𝐢𝐧𝐠 𝐚𝐧𝐝 𝐞𝐯𝐞𝐫𝐲𝐭𝐡𝐢𝐧𝐠 𝐢𝐧 𝐨𝐮𝐫 𝐥𝐢𝐯𝐞𝐬. 𝐁𝐲 𝐡𝐚𝐯𝐢𝐧𝐠 𝐜𝐨𝐦𝐩𝐥𝐞𝐭𝐞 𝐟𝐚𝐢𝐭𝐡 𝐢𝐧 𝐡𝐞𝐫, 𝐰𝐞 𝐜𝐚𝐧 𝐫𝐞𝐬𝐭 𝐛𝐞 𝐚𝐬𝐬𝐮𝐫𝐞𝐝 𝐨𝐟 𝐨𝐮𝐫 𝐰𝐞𝐥𝐥 𝐛𝐞𝐢𝐧𝐠. 𝐁𝐲 𝐬𝐮𝐫𝐫𝐞𝐧𝐝𝐞𝐫𝐢𝐧𝐠 𝐨𝐮𝐫𝐬𝐞𝐥𝐯𝐞𝐬 𝐜𝐨𝐦𝐩𝐥𝐞𝐭𝐞𝐥𝐲 𝐭𝐨 𝐡𝐞𝐫 𝐝𝐢𝐯𝐢𝐧𝐞 𝐟𝐞𝐞𝐭, 𝐰𝐞 𝐧𝐞𝐞𝐝 𝐧𝐨𝐭 𝐟𝐞𝐚𝐫 𝐚𝐛𝐨𝐮𝐭 𝐚𝐧𝐲𝐭𝐡𝐢𝐧𝐠. 𝐖𝐞 𝐜𝐚𝐧 𝐛𝐞 𝐬𝐮𝐫𝐞 𝐭𝐡𝐚𝐭 𝐬𝐡𝐞 𝐰𝐢𝐥𝐥 𝐭𝐚𝐤𝐞 𝐜𝐚𝐫𝐞 𝐨𝐟 𝐚𝐥𝐥 𝐨𝐮𝐫 𝐧𝐞𝐜𝐞𝐬𝐬𝐢𝐭𝐢𝐞𝐬 𝐚𝐧𝐝 𝐰𝐢𝐥𝐥 𝐰𝐚𝐥𝐤 𝐛𝐞𝐬𝐢𝐝𝐞𝐬 𝐮𝐬 𝐢𝐧 𝐚𝐥𝐥 𝐨𝐮𝐫 𝐩𝐚𝐭𝐡𝐬 𝐨𝐟 𝐥𝐢𝐟𝐞 𝐚𝐧𝐝 𝐠𝐮𝐢𝐝𝐞 𝐚𝐧𝐝 𝐩𝐫𝐨𝐭𝐞𝐜𝐭 𝐮𝐬 𝐟𝐫𝐨𝐦 𝐚𝐥𝐥 𝐨𝐮𝐫 𝐝𝐢𝐟𝐟𝐢𝐜𝐮𝐥𝐭𝐢𝐞𝐬.🙏
 
       🌹|| Shubham ||🌹