Sri Mangaladevi Navarathri Festival 2022 – Day 2

Blissful Darshan

Mangaladevi Daily Darshan 27th September 2022

~^~

💠:‹ ದ್ವಿತೀಯ ದಿನ °ಆರ್ಯಾ ದೇವಿ ›:💠
 ⋆☽:‹ധ° Second day °𝘼𝙧𝙮𝙖 𝘿𝙚𝙫𝙞 °ധ›:☾ ⋆
 
ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂಧಸ್ಥಿತಾಂ ಭೀಷಣಾಮ್ ಕನ್ಯಾಭಿಃ ಕರವಾಲಖೇಟವಿಲಸತ್ ಹಸ್ತಾಭಿರಾಸೇವಿತಾಮ್। ಹಸ್ತೈಶ್ಚಕ್ರಗದಾಸಿಶಂಖ ವಿಶಿಖಾಂಶ್ಚಾಪಂ ಗುಣಂ ತರ್ಜನೀಮ್ ಬಿಭ್ರಾಣಾಮನಲಾತ್ಮಿಕಾಂ ಶಶಿಧರಾಂ ಆರ್ಯಾಂ ತ್ರಿನೇತ್ರಾಂ ಭಜೇ ॥ ⌔⌔⌔🌸👏
 
ಮಂಗಳಾಂಭೆಯ ಸಂಭ್ರಮದ ಶರನ್ನವರಾತ್ರಿಯ ಇಂದಿನ ಎರಡನೇಯ ದಿನ ಆರ್ಯಾದೇವಿ ಅಲಂಕಾರದಲ್ಲಿ ವಿಜೃಂಭಿಸುತ್ತಿರುವ ಶ್ರೀ ಮಂಗಳಾದೇವಿ ಅಮ್ಮನವರು.
 
ನವರಾತ್ರಿಯ ಪರ್ವಕಾಲದ ಇಂದಿನ ದ್ವಿತೀಯ ದಿನವಾದ ಬಿದಿಗೆಯ ಮಂಗಳವಾರದಂದು ‘ಆರ್ಯಾ’ ಎಂಬ ಅಭಿದಾನದಿಂದ ದೇವಿಯು ಆರಾಧಿಸಲ್ಪಡುವಳು.🌹
ಭಕ್ತ ಪ್ರಜಾ ಪರಿಪಾಲಕಳಾಗಿ ಸಲಹುವ ಆರ್ಯಾ ದೇವಿಯ ಸ್ವರೂಪದಲ್ಲಿ ಸರ್ವಾಲಂಕೃತಳಾದ ಶ್ರೀ ದೇವಿ, ವಿಶ್ವವನ್ನೇ ಪರಿಪಾಲಿಸುವ ಮಹಿಮಾನ್ವಿತೆಯಾಗಿ _ಆರ್ಯಾ ಆತ್ಮಾಂ ಜಗತಃ ತುಸ್ಥುಷಶ್ವ_ ಎಂಬ ಉಕ್ತಿಯಂತೆ ಜಗಚ್ಚಕ್ಷುವಿನಂತೆ ಆತ್ಮ ಸ್ವರೂಪಳಾಗಿ ಜಗತ್ತಿಗೆ ಚೈತನ್ಯ ನೀಡುವವಳಾಗಿದ್ದಾಳೆ. 
 
_ದಿವ್ಯ ಮಂಗಳ ಸ್ವರೂಪಳಾಗಿ ಸಕಲ ವಸ್ತ್ರ ಸ್ವರ್ಣಾಭರಣ ಭೂಷಿತೆಯಾಗಿ *’ಆಕಾಶ ನೀಲಿ’ ವರ್ಣದ* ಸೀರೆಯನ್ನು ತೊಟ್ಟು ಮೈದೋರಿದ ವೈಭವೋಪೇತ ಅಲಂಕಾರದಲ್ಲಿ ಭಕ್ತ ಸಂರಕ್ಷಣಾರ್ಥ ಸರ್ವ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ಸಿಂಹಾಸನಸ್ಥಿತಳಾಗಿ ದರ್ಶನವನ್ನಿತ ಮಹಾದೇವಿಯು ಮಹಾದಿವ್ಯ ಶೋಭೆಯಿಂದ ತೇಜೋಮಯಳಾಗಿ ಬೆಳಗುತ್ತಾ ಚತುರ್ಭಾಹುಗಳಿಂದ ಸುಶೋಭಿತಳಾದ ಪರಮೇಶ್ವರಿಯು ಅಭಯ ವರದ ಹಸ್ತಳಾಗಿ ಸುಮ-ಪುಷ್ಪ ಹಾರಗಳಿಂದ ರಾರಾಜಿಸುತ್ತಾ ತನ್ನ ದ್ವಿಬಾಹುಗಳಲ್ಲಿ ಚಕ್ರ ಹಾಗೂ ಖಡ್ಗವನ್ನು ಧರಿಸಿ, ಬತ್ತಳಿಕೆಯಲ್ಲಿ ಬಾಣ ಧನಸ್ಸನ್ನು ಧಾರಣೆ ಮಾಡಿಕೊಂಡು ಸಂಪೂರ್ಣ ಗರ್ಭಗೃಹವನ್ನು ವ್ಯಾಪಿಸಿಕೊಂಡು ರಾಜ ಗಾಂಭೀರ್ಯದಿಂದ ಅಲಂಕೃತಳಾಗಿದ್ದಾಳೆ 👏_
 
ಪ್ರಾಯಶಃ ಆರ್ಯ ಎಂದರೆ ‘ಶ್ರೇಷ್ಠ’ ಎಂದರ್ಥ. ಇದೊಂದು ವಿಶಿಷ್ಟ ರೂಪ. ಕಲ್ಪೋಕ್ತದ ಪ್ರಕಾರ ಶಕ್ತಿಯ ಉಪಾಸನೆಯಲ್ಲಿ ‘ಸಾತ್ವಿಕ,ರಾಜಸ,ತಾಮಸ’ ಎಂಬ ಮೂರು ಸ್ವರೂಪಗಳಿದ್ದು ಇದರಲ್ಲಿ ‘ರಾಜಸ’ ಉಪಾಸನಾ ದೇವತೆಯೇ ‘ಆರ್ಯೆ’.❁
 
*ಸೃಷ್ಠಿಗೆ ಮಾತೃ ಸ್ವರೂಪಿಣಿಯಾಗಿ ಜೀವರಾಶಿಯ ಭೂಮಂಡಲವನ್ನೇ ತನ್ನ ಸಾಮ್ರಾಜ್ಯವನ್ನಾಗಿಸಿ ತನ್ನ ಅಧಿಪತ್ಯವನ್ನು ವಹಿಸಿ ಇಲ್ಲಿನ ಸರ್ವರನ್ನೂ ತನ್ನ ಪ್ರಜೆಗಳಂತೆ ಕಂಡು ಆಚಂದ್ರಾರ್ಕ ಪೊರೆದು ಸಲಹುವ ದುರ್ಗೆಯ ಅಂಶವೇ ಆರ್ಯಾದೇವಿ.*
ಆತ್ಮಬಲ ನೀಡುವವಳೆಂದು ಇಚ್ಛಾಶಕ್ತಿಯನ್ನುಂಟು ಮಾಡುವವಳೆಂದೂ ವಿಶ್ವವೇ ದೇವಿಯ ಅಧೀನದಲ್ಲಿದ್ದು ಸರ್ವತ್ರವೂ ಆಕೆಯಿಂದ ಅನುಗ್ರಹಿಸಲ್ಪಡುತ್ತದೆ.⌔⌔⌔_
 
 _ಯಾವರೀತಿಯಲ್ಲಿ ಸಂಕಷ್ಟದ ಸಂದರ್ಭವು ಎದುರಾದಾಗ ಅರಸನಾದವನು ತನ್ನ ಸಾಮ್ರಾಜ್ಯದ ಪ್ರಜಾ ಹಿತಾಸಕ್ತಿಗಾಗಿ ರಕ್ಷಣೆಗೆ ಒದಗಿಬರುವನೋ ಅದೇ ತೆರನಾಗಿ ಅಭಯ ವರದ ಹಸ್ತಳಾಗಿ ಚಕ್ರ ಖಡ್ಗಪಾಣಿಯಾಗಿ ಧನಸ್ಸು ಬಾಣವನ್ನು ಧರಿಸಿ ಭಕ್ತ ಸಂರಕ್ಷಣಾರ್ಥ ಸಂಕಷ್ಟ ನಿವಾರಕಳಾಗಿ ದುರಿತೋಪಶಮನಳಾಗಿ ಸದಾ ತಾನು ಸಂರಕ್ಷಣೆಗೆ ಕಂಕಣಬದ್ಧಳಾಗಿರುವಂತೆ ದರ್ಶನವನ್ನಿತ ತಾಯಿಯ ಅಪೂರ್ವ ಅಲಂಕಾರ ಇಂದಿನ ಮಂಗಳವಾರದ ಆರ್ಯಾದೇವಿಯದ್ದು._
 
ನಮ್ಮೆಲ್ಲ ಸಂಕಷ್ಟ ವೇದನೆಗಳನ್ನು ದುಃಖ ದಾರಿದ್ರ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಯಾವುದಕ್ಕೂ ಅಲ್ಪಬಾರದೆ ಸೌಭಾಗ್ಯವಂತರನ್ನಾಗಿ ಮಾಡುವಂತೆ ಆರ್ಯಾಲಂಕೃತಳಾದ ಸರ್ವಶಕ್ತಿಯಲ್ಲೇ ಮೊರೆ ಹೋಗಿ ದ್ವಿತೀಯ ನವರಾತ್ರಿಯಂದು ಸರ್ವಮಂಗಳೆಯ ಪಾದರಾವಿಂದಗಳಲ್ಲಿ ನಮಸ್ಕರಿಸುತ್ತಾ ದೈನ್ಯದಿಂದ ಪ್ರಾರ್ಥಿಸೋಣ.
 
                               ⊹❊ ❊ ⊹
 
🌹:‹ധ° Second day °𝘼𝙧𝙮𝙖 𝘿𝙚𝙫𝙞 °ധ›:🌹
💠:‹ ದ್ವಿತೀಯ ದಿನ °ಆರ್ಯಾ ದೇವಿ ›:💠
 
𝘖𝘯 𝘵𝘩𝘦 𝘴𝘦𝘤𝘰𝘯𝘥 𝘥𝘢𝘺 𝘰𝘧 𝘵𝘩𝘦 𝘕𝘢𝘷𝘢𝘳𝘢𝘵𝘳𝘪 𝘤𝘦𝘭𝘦𝘣𝘳𝘢𝘵𝘪𝘰𝘯𝘴, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘪𝘴 𝘸𝘰𝘳𝘴𝘩𝘪𝘱𝘱𝘦𝘥 𝘪𝘯 𝘵𝘩𝘦 𝘧𝘰𝘳𝘮 𝘰𝘧 𝘼𝙧𝙮𝙖 𝘿𝙚𝙫𝙞. 𝘛𝘩𝘦 𝘨𝘰𝘥𝘥𝘦𝘴𝘴 𝘈𝘳𝘺𝘢 𝘋𝘦𝘷𝘪 𝘪𝘴 𝘵𝘦𝘳𝘮𝘦𝘥 𝘢𝘴 𝘵𝘩𝘦 𝘰𝘯𝘦 𝘸𝘩𝘰 𝘱𝘳𝘰𝘵𝘦𝘤𝘵𝘴 𝘢𝘯𝘥 𝘭𝘰𝘷𝘪𝘯𝘨𝘭𝘺 𝘵𝘢𝘬𝘦𝘴 𝘤𝘢𝘳𝘦 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴. 𝘝𝘦𝘥𝘢𝘴 𝘥𝘦𝘴𝘤𝘳𝘪𝘣𝘦 𝘩𝘦𝘳 𝘢𝘴 𝘵𝘩𝘦 𝘰𝘯𝘦 𝘸𝘩𝘰 𝘪𝘴 𝘪𝘯 𝘵𝘩𝘦 𝘧𝘰𝘳𝘮 𝘰𝘧 𝘢𝘵𝘮𝘢 𝘢𝘯𝘥 𝘱𝘳𝘰𝘷𝘪𝘥𝘦𝘴 𝘥𝘪𝘷𝘪𝘯𝘦 𝘤𝘰𝘯𝘴𝘤𝘪𝘰𝘶𝘴𝘯𝘦𝘴𝘴 𝘵𝘰 𝘵𝘩𝘪𝘴 𝘸𝘰𝘳𝘭𝘥
 
𝘔𝘰𝘵𝘩𝘦𝘳 𝘩𝘢𝘴 𝘢𝘥𝘰𝘳𝘯𝘦𝘥 𝘵𝘩𝘪𝘴 𝘢𝘥𝘰𝘳𝘢𝘣𝘭𝘦 𝘧𝘰𝘳𝘮 𝘰𝘧 𝘈𝘳𝘺𝘢 𝘋𝘦𝘷𝘪 𝘢𝘯𝘥 𝘤𝘢𝘯 𝘣𝘦 𝘴𝘦𝘦𝘯 𝘸𝘦𝘢𝘳𝘪𝘯𝘨 𝘢 𝘴𝘬𝘺 𝘣𝘭𝘶𝘦 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘢𝘯𝘥 𝘤𝘢𝘯 𝘣𝘦 𝘴𝘦𝘦𝘯 𝘩𝘰𝘭𝘥𝘪𝘯𝘨 𝘤𝘩𝘢𝘬𝘳𝘢, 𝘴𝘸𝘰𝘳𝘥, 𝘣𝘰𝘸 𝘢𝘯𝘥 𝘢𝘳𝘳𝘰𝘸 𝘪𝘯 𝘩𝘦𝘳 𝘩𝘢𝘯𝘥𝘴, 𝘸𝘩𝘪𝘭𝘦 𝘳𝘪𝘥𝘪𝘯𝘨 𝘰𝘯 𝘢 𝘓𝘪𝘰𝘯. 𝘚𝘩𝘦 𝘤𝘢𝘯 𝘢𝘭𝘴𝘰 𝘣𝘦 𝘴𝘦𝘦𝘯 𝘸𝘦𝘢𝘳𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘬𝘪𝘯𝘥𝘴 𝘰𝘧 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘴𝘵𝘶𝘥𝘥𝘦𝘥 𝘸𝘪𝘵𝘩 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴 𝘪𝘯 𝘪𝘵 𝘢𝘯𝘥 𝘏𝘰𝘭𝘥𝘪𝘯𝘨 𝘩𝘦𝘳 𝘧𝘰𝘳𝘦 𝘢𝘳𝘮𝘴 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴 𝘵𝘩𝘢𝘵 𝘵𝘩𝘦𝘺 𝘯𝘦𝘦𝘥 𝘯𝘰𝘵 𝘣𝘦 𝘸𝘰𝘳𝘳𝘪𝘦𝘥 𝘢𝘣𝘰𝘶𝘵 𝘢𝘯𝘺𝘵𝘩𝘪𝘯𝘨 𝘸𝘩𝘪𝘭𝘦 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘱𝘳𝘰𝘵𝘦𝘤𝘵 𝘢𝘯𝘥 𝘧𝘶𝘭𝘭𝘧𝘪𝘭𝘭 𝘢𝘭𝘭 𝘵𝘩𝘦𝘪𝘳 𝘸𝘪𝘴𝘩𝘦𝘴 𝘢𝘯𝘥 𝘥𝘦𝘴𝘪𝘳𝘦𝘴.
 
𝖳𝗁𝖾 𝗈𝗋𝗂𝗀𝗂𝗇𝖺𝗅 𝗆𝖾𝖺𝗇𝗂𝗇𝗀 𝗈𝖿 𝑨𝑹𝒀𝑨 𝖺𝖼𝖼𝗈𝗋𝖽𝗂𝗇𝗀 𝗍𝗈 𝖲𝖺𝗇𝗌𝗄𝗋𝗂𝗍 𝗆𝖾𝖺𝗇𝗌 ‘𝙀𝙭𝙘𝙚𝙡𝙡𝙚𝙣𝙩 𝙤𝙧 𝘽𝙚𝙨𝙩.
𝖳𝗁𝗂𝗌 𝗂𝗌 𝗈𝗇𝖾 𝗈𝖿 𝗍𝗁𝖾 𝗀𝗋𝖾𝖺𝗍𝖾𝗌𝗍 𝖿𝗈𝗋𝗆𝗌 𝗈𝖿 𝗀𝗈𝖽𝖽𝖾𝗌𝗌 𝖲𝗁𝖺𝗄𝗍𝗁𝗂. 𝖠𝗌 𝗉𝖾𝗋 𝗍𝗁𝖾 𝗄𝖺𝗅𝗉𝗈𝗄𝗍𝗁𝖺 𝗍𝖾𝗑𝗍, 𝖠𝗋𝗒𝖺 𝖣𝖾𝗏𝗂 𝗂𝗌 𝗐𝗈𝗋𝗌𝗁𝗂𝗉𝗉𝖾𝖽 𝗂𝗇 𝗍𝗁𝖾 𝐑𝐚𝐣𝐚𝐬𝐢𝐜 𝐟𝐨𝐫𝐦. 𝖳𝗁𝗂𝗌 𝗐𝗁𝗈𝗅𝖾 𝗐𝗈𝗋𝗅𝖽 𝗂𝗌 𝗅𝗂𝗄𝖾 𝖺 𝗄𝗂𝗇𝗀𝖽𝗈𝗆 𝗈𝖿 𝗍𝗁𝖾 𝗆𝗈𝗍𝗁𝖾𝗋 𝗀𝗈𝖽𝖽𝖾𝗌𝗌 𝖺𝗇𝖽 𝗌𝗁𝖾 𝗅𝗈𝗈𝗄𝗌 𝖺𝖿𝗍𝖾𝗋 𝗁𝖾𝗋 𝗌𝗎𝖻𝗃𝖾𝖼𝗍𝗌 𝗅𝗂𝗏𝗂𝗇𝗀 𝗂𝗇 𝗁𝖾𝗋 𝗄𝗂𝗇𝗀𝖽𝗈𝗆 𝗅𝗂𝗄𝖾 𝗁𝖾𝗋 𝗈𝗐𝗇 𝖼𝗁𝗂𝗅𝖽𝗋𝖾𝗇 𝗐𝗂𝗍𝗁 𝗅𝗈𝗏𝖾 𝖺𝗇𝖽 𝖺𝖿𝖿𝖾𝖼𝗍𝗂𝗈𝗇. 𝖳𝗁𝗂𝗌 𝖿𝗈𝗋𝗆 𝗈𝖿 𝖣𝗎𝗋𝗀𝖺 𝖣𝖾𝗏𝗂 𝗐𝗁𝗈 𝗍𝖺𝗄𝖾𝗌 𝖼𝖺𝗋𝖾 𝗈𝖿 𝗁𝖾𝗋 𝖼𝗁𝗂𝗅𝖽𝗋𝖾𝗇 𝗅𝗈𝗏𝗂𝗇𝗀𝗅𝗒 𝗂𝗌 𝖠𝗋𝗒𝖺 𝖣𝖾𝗏𝗂. 𝖲𝗁𝖾 𝗂𝗌 𝗈𝗇𝖾 𝗐𝗁𝗈 𝗉𝗋𝗈𝗏𝗂𝖽𝖾𝗌 𝗐𝗂𝗅𝗅 𝗉𝗈𝗐𝖾𝗋 𝖺𝗇𝖽 𝖼𝗈𝗇𝖿𝗂𝖽𝖾𝗇𝖼𝖾. 
 
 𝘛𝘩𝘦 𝘸𝘩𝘰𝘭𝘦 𝘸𝘰𝘳𝘭𝘥 𝘪𝘴 𝘶𝘯𝘥𝘦𝘳 𝘩𝘦𝘳 𝘤𝘰𝘯𝘵𝘳𝘰𝘭 𝘢𝘯𝘥 𝘢𝘭𝘭 𝘵𝘩𝘢𝘵 𝘪𝘴 𝘩𝘢𝘱𝘱𝘦𝘯𝘪𝘯𝘨 𝘪𝘯 𝘵𝘩𝘪𝘴 𝘸𝘰𝘳𝘭𝘥 𝘪𝘴 𝘣𝘺 𝘩𝘦𝘳 𝘸𝘪𝘭𝘭, 𝘸𝘪𝘴𝘩 𝘢𝘯𝘥 𝘨𝘳𝘢𝘤𝘦. 𝘞𝘦 𝘸𝘪𝘭𝘭 𝘯𝘰𝘵 𝘣𝘦 𝘢𝘣𝘭𝘦 𝘵𝘰 𝘜𝘯𝘥𝘦𝘳𝘴𝘵𝘢𝘯𝘥 𝘩𝘦𝘳 𝘥𝘦𝘤𝘪𝘴𝘪𝘰𝘯𝘴 𝘢𝘯𝘥 𝘵𝘳𝘺𝘪𝘯𝘨 𝘵𝘰 𝘳𝘦𝘢𝘴𝘰𝘯 𝘪𝘵, 𝘸𝘪𝘭𝘭 𝘣𝘦 𝘢 𝘥𝘪𝘧𝘧𝘪𝘤𝘶𝘭𝘵 𝘵𝘢𝘴𝘬. 𝘏𝘦𝘯𝘤𝘦, 𝘪𝘵 𝘪𝘴 𝘢𝘭𝘸𝘢𝘺𝘴 𝘣𝘦𝘵𝘵𝘦𝘳 𝘵𝘰 𝘴𝘶𝘳𝘳𝘦𝘯𝘥𝘦𝘳 𝘰𝘶𝘳𝘴𝘦𝘭𝘷𝘦𝘴 𝘵𝘰 𝘩𝘦𝘳 𝘢𝘯𝘥 𝘢𝘣𝘪𝘥𝘦 𝘣𝘺 𝘩𝘦𝘳 𝘥𝘦𝘤𝘪𝘴𝘪𝘰𝘯 𝘸𝘪𝘵𝘩 𝘵𝘩𝘦 𝘵𝘳𝘶𝘴𝘵 𝘵𝘩𝘢𝘵 𝘸𝘩𝘢𝘵𝘦𝘷𝘦𝘳 𝘩𝘢𝘱𝘱𝘦𝘯𝘴 𝘪𝘯 𝘰𝘶𝘳 𝘭𝘪𝘷𝘦𝘴 𝘪𝘴 𝘧𝘰𝘳 𝘰𝘶𝘳 𝘣𝘦𝘵𝘵𝘦𝘳𝘮𝘦𝘯𝘵 𝘢𝘯𝘥 𝘪𝘴 𝘩𝘢𝘱𝘱𝘦𝘯𝘪𝘯𝘨 𝘣𝘺 𝘩𝘦𝘳 𝘸𝘪𝘭𝘭 𝘢𝘯𝘥 𝘸𝘪𝘴𝘩.👏
 
𝑳𝒊𝒌𝒆 𝒂 𝒌𝒊𝒏𝒈, 𝒘𝒉𝒐 𝒖𝒏𝒅𝒆𝒓𝒔𝒕𝒂𝒏𝒅𝒔 𝒕𝒉𝒆 𝒄𝒖𝒓𝒓𝒆𝒏𝒕 𝒑𝒓𝒆𝒗𝒂𝒊𝒍𝒊𝒏𝒈 𝒔𝒊𝒕𝒖𝒂𝒕𝒊𝒐𝒏 𝒊𝒏 𝒉𝒊𝒔 𝒌𝒊𝒏𝒈𝒅𝒐𝒎 𝒂𝒏𝒅 𝒔𝒉𝒂𝒍𝒍 𝒕𝒂𝒌𝒆 𝒖𝒕𝒎𝒐𝒔𝒕 𝒄𝒂𝒓𝒆 𝒕𝒐 𝒔𝒂𝒇𝒆𝒈𝒖𝒂𝒓𝒅 𝒂𝒏𝒅 𝒑𝒓𝒐𝒕𝒆𝒄𝒕 𝒉𝒊𝒔 𝒔𝒖𝒃𝒋𝒆𝒄𝒕𝒔, 𝒔𝒊𝒎𝒊𝒍𝒂𝒓𝒍𝒚, 𝒕𝒐 𝒔𝒂𝒇𝒆𝒈𝒖𝒂𝒓𝒅 𝒉𝒆𝒓 𝒅𝒆𝒗𝒐𝒕𝒆𝒆𝒔 𝒇𝒓𝒐𝒎 𝒂𝒍𝒍 𝒌𝒊𝒏𝒅𝒔 𝒐𝒇 𝒅𝒆𝒂𝒅𝒍𝒚 𝒅𝒊𝒔𝒆𝒂𝒔𝒆𝒔 𝒂𝒏𝒅 𝒖𝒏𝒌𝒏𝒐𝒘𝒏 𝒆𝒏𝒆𝒎𝒊𝒆𝒔,  𝑮𝒐𝒅𝒅𝒆𝒔𝒔 𝑴𝒂𝒏𝒈𝒂𝒍𝒂𝒅𝒆𝒗𝒊, 𝒉𝒐𝒍𝒅𝒊𝒏𝒈 𝒂 𝒕𝒓𝒊𝒅𝒆𝒏𝒕 𝒊𝒏 𝒉𝒆𝒓 𝒉𝒂𝒏𝒅𝒔, 𝒉𝒂𝒔 𝒕𝒂𝒌𝒆𝒏 𝒕𝒉𝒊𝒔 𝒆𝒙𝒕𝒓𝒂𝒐𝒓𝒅𝒊𝒏𝒂𝒓𝒚 𝒇𝒐𝒓𝒎 𝒐𝒇 𝑨𝒓𝒚𝒂 𝑫𝒆𝒗𝒊.
 
𝐿𝑒𝑡 𝑢𝑠 𝑎𝑙𝑙 𝒉𝑎𝑣𝑒 𝑎 𝑐𝑜𝑚𝑝𝑙𝑒𝑡𝑒 𝑡𝑟𝑢𝑠𝑡 𝑎𝑛𝑑 𝑓𝑎𝑖𝑡𝒉 𝑖𝑛 𝒉𝑒𝑟 𝑎𝑛𝑑 𝑝𝑢𝑡 𝑎𝑙𝑙 𝑜𝑢𝑟 𝑠𝑜𝑟𝑟𝑜𝑤𝑠 𝑖𝑛𝑡𝑜 𝒉𝑒𝑟 𝑠𝒉𝑜𝑢𝑙𝑑𝑒𝑟 𝑎𝑛𝑑 𝑠𝑒𝑒𝑘 𝒉𝑒𝑟 𝑏𝑙𝑒𝑠𝑠𝑖𝑛𝑔𝑠 𝑡𝑜 𝑟𝑒𝑚𝑜𝑣𝑒 
𝐴𝑙𝑙 𝑜𝑢𝑟 𝑝𝑟𝑜𝑏𝑙𝑒𝑚𝑠. 𝑀𝑎𝑦 𝑡𝒉𝑒 𝑛𝑎𝑚𝑒 𝑜𝑓 𝑜𝑢𝑟 𝑏𝑒𝑙𝑜𝑣𝑒𝑑 𝑔𝑜𝑑𝑑𝑒𝑠𝑠 𝑠𝑝𝑟𝑒𝑎𝑑 𝑒𝑣𝑒𝑟𝑦𝑤𝒉𝑒𝑟𝑒 𝑎𝑛𝑑 𝑏𝑒𝑐𝑜𝑚𝑒 𝑎 𝒉𝑜𝑢𝑠𝑒𝒉𝑜𝑙𝑑 𝑛𝑎𝑚𝑒 𝑖𝑛 𝑒𝑎𝑐𝒉 𝑎𝑛𝑑 𝑒𝑣𝑒𝑟𝑦 𝑝𝑎𝑟𝑡 𝑜𝑓 𝑡𝒉𝑖𝑠 𝑤𝑜𝑟𝑙𝑑. 𝖫𝖾𝗍 𝗎𝗌 𝖺𝗅𝗅 𝗉𝗋𝖺𝗒 𝗐𝗂𝗍𝗁 𝗁𝗎𝗆𝗂𝗅𝗂𝗍𝗒 𝗍𝗈𝗐𝖺𝗋𝖽𝗌 𝗍𝗁𝗂𝗌 𝖿𝗈𝗋𝗆 𝗈𝖿 G𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝗍𝗈 𝖺𝗅𝗐𝖺𝗒𝗌 𝗀𝗎𝗂𝖽𝖾 𝗎𝗌 𝗂𝗇 𝖺  𝗉𝗋𝗈𝗉𝖾𝗋 𝖽𝗂𝗋𝖾𝖼𝗍𝗂𝗈𝗇 𝖺𝗇𝖽 𝗍𝗈 𝗌𝖺𝖿𝖾𝗀𝗎𝖺𝗋𝖽 𝗎𝗌 𝖿𝗋𝗈𝗆 𝖺𝗅𝗅 𝗄𝗂𝗇𝖽𝗌 𝗈𝖿 𝖽𝗂𝖿𝖿𝗂𝖼𝗎𝗅𝗍𝗂𝖾𝗌 𝖺𝗇𝖽 𝖽𝖾𝖺𝖽𝗅𝗒 𝖽𝗂𝗌𝖾𝖺𝗌𝖾𝗌 𝖺𝗇𝖽 𝖻𝗅𝖾𝗌𝗌 𝗎𝗌 𝗐𝗂𝗍𝗁 𝖺𝖻𝗎𝗇𝖽𝖺𝗇𝖼𝖾 𝗈𝖿 𝗁𝖾𝖺𝗅𝗍𝗁, 𝗐𝖾𝖺𝗅𝗍𝗁 𝖺𝗇𝖽 𝗉𝗋𝗈𝗌𝗉𝖾𝗋𝗂𝗍𝗒✨🌹
 
 
_❁ *ಶರನ್ನವರಾತ್ರಿಯಲ್ಲಿ ಪೇಜಾವರ ಶ್ರೀಗಳ ಮಂಗಳಾದೇವಿ ದರ್ಶನ.*❁_
 
_ಇದೀಗ ಶರನ್ನವರಾತ್ರಿಯ ಸಂಭ್ರಮ. ಸಾಕ್ಷಾತ್ ಧರೆಗಿಳಿದ ಇಂದ್ರನ ಅಮರಾವತಿಯಂತೆ ರಾರಾಜಿಸಲ್ಪಡುತ್ತಿರುವ ಶ್ರೀ ಮಂಗಳಾದೇವಿ ದೇವಳದಲ್ಲಿ ಉಡುಪಿ ಶ್ರೀ ಕೃಷ್ಣಮಠದ, ಪೇಜಾವರ ಅಧ್ಯೋಕ್ಷ ಮಠದ ಪೀಠಾದಿಪತಿಗಳಾಗಿರುವ *ಶ್ರೀ ವಿಶ್ವ ಪ್ರಸನ್ನ ತೀರ್ಥ* ಪಾದಂಗಳವರು ಇಂದು ಸಾಯಂಕಾಲ 7:30ಕ್ಕೆ ಸರಿಯಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಗಳಾದೇವಿ ಅಮ್ಮನವರ ದರ್ಶನವನ್ನು ಪಡೆದು ಶ್ರೀದೇವಿಗೆ ಆರತಿಯನ್ನು ಬೆಳಗಿ ನೆರೆದ ಸದ್ಭಕ್ತರನ್ನು ಹರಸಿ ಆಶೀರ್ವದಿಸಿದರು._
 
_ಶರನ್ನವರಾತ್ರಿ ಪರ್ವಕಾಲದ ದ್ವಿತೀಯ ದಿನ ಇಂದಿನ ಮಂಗಳವಾರ ಶ್ರೀ ಕ್ಷೇತ್ರಕ್ಕೆ ಉಡುಪಿ ಪೇಜಾವರ ಮಠಾಧೀಶರಾದ ಪರಮ ಪೂಜ್ಯ *ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ* ಶ್ರೀ ಪಾದಂಗಳವರು ಭೇಟಿ ನೀಡಿ ಕ್ಷೇತ್ರದ ದರ್ಶನವನ್ನು ಪಡೆದು ಶ್ರೀ ಮಂಗಳಾದೇವಿ ಅಮ್ಮನವರಿಗೆ ಆರತಿಯನ್ನು ಬೆಳಗಿದ ಅತ್ಯಪೂರ್ವ ಸನ್ನಿವೇಶ.🙏_
 
_ಶ್ರೀ ಕ್ಷೇತ್ರದ ಅರ್ಚಕ ವರ್ಗ, ಧರ್ಮದರ್ಶಿ ಆಡಳಿತ ಮಂಡಳಿ ಪೇಜಾವರ ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವ ಪೂರ್ವಕವಾಗಿ ತುಳಸೀ ಪುಷ್ಪ ಮಾಲಾರ್ಪಣೆಗೈದು ಸ್ವಾಗತಿಸಿ ಯತಿವರೇಣ್ಯರನ್ನುಅಭಿನಂದಿಸಿದರು._