Sri Mangaladevi Navarathri Festival 2022 – Day 3

Blissful Darshan

Mangaladevi Daily Darshan 28th September 2022

~^~

⚜ ଓ.🌸 ತೃತೀಯ ದಿನ °ಭಗವತಿ 🌸.ଓ⚜ 

🌼⊰ .«° Third day °𝘽𝙝𝙖𝙜𝙖𝙫𝙖𝙩𝙝𝙞°».⊱🌼

 
ಶೂಲಬಾಣಾಸ್ಯರಿಸುದರಗದಾಚಾಪಪಾಶಾನ್ ಕರಾಬ್ಜೈಃ ಮೇಘಶ್ಯಾಮಾ ಕಿರೀಟೋಲ್ಲಿಖಿತಜಲಧರಾ ಭೀಷಣಾ ಭೂಷಣಾಢ್ಯಾ। ಸಿಂಹಸ್ಕಂಧಾಧಿರೂಢಾ ಚತುಸೃಭಿರಸಿಖೇಟಾನ್ವಿತಾಭಿಃ ಪರೀತಾ ಕನ್ಯಾಭಿಃ ಭಿನ್ನದೈತ್ಯಾ ಭಗವತೀ ಭವತು ಭವಭಯದ್ವಮ್ಸಿನೀ ಶೂಲಿನೀ ನಃ ॥
 
ಶರನ್ನವರಾತ್ರಿಯ ಪರ್ವಕಾಲದಲ್ಲಿ ಅನರ್ಘ್ಯ ಅಲಂಕಾರಗಳಿಂದ ಒಂದೊಂದು ದಿನವು ತನ್ನ ವೈಶಿಷ್ಠ್ಯವನ್ನು ಮೆರೆಯುತ್ತಿರುವ ಮಹಾತಾಯಿಯು ಇಂದಿನ ತೃತೀಯ ದಿನ ಬುಧವಾರದಂದು ಭಗವತಿ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ༒
 
_ಅಮೋಘ ಅಲಂಕಾರದಲ್ಲಿ ಕಣ್ಣುಕೋರೈಸುವ ಕಾಂತಿಯಿಂದ ಸುಶೋಭಿತಳಾಗಿರುವ ಲೋಕಮಾತೆಯು ಲಾವಣ್ಯಸ್ನಿಗ್ಧ ಕೋಮಲವಾದ ಪುಷ್ಪ ಕನ್ನಡಿಯ ರೇಷ್ಮೆದಂಡಮಾಲೆಯ ವಿಶೇಷ ಕಿರೀಟಾಲಂಕಾರದಿಂದ ಚತುರ್ಬಾಹುಗಳನ್ನು ಚಾಚಿ ಸಿಂಹ ರಾಜನ ಮೇಲೆ ವಿರಾಜಮಾನಳಾದ ಕೋಟಿ ಸೂರ್ಯರ ಪ್ರಭೆಯಂತೆ ಮಹಾರಾಣಿಯ ಪ್ರಜ್ವಲಿಸ್ಪಡುತ್ತಿದ್ದಾಳೆ.💫_
 
_ನವರಾತ್ರಿಯ ಇಂದಿನ ಮೂರನೇಯ ದಿನದ ತದಿಗೆಯಂದು ಸೃಷ್ಟಿಗೆ ಆಶ್ರಯಣೀಯಳಾದ ‘ಭಗವತಿ’ ಅಲಂಕಾರ ಸ್ವರೂಪಳಾಗಿ ‘ಅರಶಿನ ಹಳದಿವರ್ಣದ’ ಸೀರೆಯನ್ನು ತೊಟ್ಟು ದಿವ್ಯ ಪುಷ್ಪ ಹಾರ ಸರ್ವಾಭರಣಗಳಿಂದ ಭೂಷಿತೆಯಾದ ದೇವಿಯು ಚತುರ್ಭುಜಳಾಗಿ ತನ್ನ ಪಾರ್ಶ್ವ ಹಸ್ತದಲ್ಲಿ ಚಕ್ರವನ್ನು ವಾಮಹಸ್ತದಲ್ಲಿ ಗದೆಯನ್ನು ಧಾರಣೆ ಮಾಡಿಕೊಂಡು ಬಲ ಕಾಲಂದುಗೆಯಲ್ಲಿ ಖಡ್ಗ ಪಾಣಿಯಾಗಿ ಅಭಯ ವರದ ಹಸ್ತಳಾದ ಮಂಗಳಾಂಬೆ ತ್ರಿಶೂಲ ಧಾರಿಣಿಯಾಗಿ ಸಡಗರದಿ ಭಗವತೀ ಸ್ವರೂಪದಲ್ಲಿ ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು. _
 
_ಭಗವತಿ ಅಲಂಕಾರದ ಪ್ರಧಾನ ಆಕರ್ಷಣೆಯಾಗಿ ತೇಜಃ ಸ್ವರೂಪಿಣಿಯಾದ ಈಕೆ *ತನ್ನ ಕಿರೀಟದಲ್ಲಿ ಪುಷ್ಪ ಕನ್ನಡಿಯ ರೇಷ್ಮೆದಂಡಮಾಲೆಯ ವಿಶೇಷ ಕಿರೀಟಾಲಂಕಾರದಿಂದ ಸ್ವರ್ಣ ತೇಜೋಮಯಳಾಗಿ ವ್ಯಕ್ತಳಾಗಿರುವಳು*_
 
*ಭಗಃ ‘ಎಂದರೆ ಸಿದ್ಧಿ ತೇಜಸ್ಸು. ‘ವತಿ’ಎಂದರೆ ಉಳ್ಳವಳು*.→ _ಕಲ್ಪೋಕ್ತದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರ ಕರಣ ಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ’ಗಳೆಂಬ ತೇಜಸ್ಸನ್ನು ಹೊಂದಿರುವಾಕೆ ಎಂದರ್ಥ._ ಆಕೆಯೇ *ಭಗತಿ ಅಥವ ಭಗವತಿ*
 
ಅರ್ಥಾತ್ ಭಗವತಿ ಎಂದರೆ *ಸಂಪೂರ್ಣ ಬ್ರಹ್ಮಾಂಡವನ್ನೇ ತನ್ನ ಗರ್ಭದಲ್ಲಿ ಧರಿಸಿ ಪೊರೆದು ಪರಿಪಾಲಿಸುವ ದುರ್ಗೆಯ ರಾಜಸ ಸ್ವರೂಪವಾಗಿದೆ.* 
 
_’ಕಟ್ಯಾಂ ಭಗವತೀಂ ತಥಾ’_ ಎಂಬ ಪುರಾಣ ಮಾಪನದಂತೆ ಸೃಷ್ಠಿಯ ಕಟಿ ಪ್ರದೇಶದಲ್ಲಿ ನಿಯಮ ರೂಪದಲ್ಲಿರುವಳು. _’ಈಶ್ವರೀಂ ಸರ್ವ ಭೂತಾನಾಂ’_ ಎನ್ನುವಂತೆ _ಸರ್ವೇಶ್ವರಿಯಾಗಿ ಸರ್ವವ್ಯಾಪಕಳಾದ ಭಗವತಿಯು ಬ್ರಹ್ಮಾಂಡಕ್ಕೆ ಮೂಲಾಧಾರ ಚೈತನ್ಯವನ್ನು ವರ್ಧಿಸುವ ಲೋಕ ಕಲ್ಯಾಣ ಕರ್ತೃಳಾಗಿ ಜಗನ್ಮಾನ್ಯಳಾಗಿ ಕಲ್ಪೋಕ್ತದ ತೃತೀಯ ದಿನದಂದು ಸಂಪೂಜಿಸಲ್ಪಡುತ್ತಾಳೆ._
 
_ಬ್ರಹ್ಮಾಂಡವನ್ನೇ ಗರ್ಭದಲ್ಲಿಟ್ಟು ಸಲಹಿ ನಂಬಿದ ಭಕ್ತರಿಗೆ ಸರ್ವಸ್ವವನ್ನೂ ಕರುಣಿಸಿ ತನ್ನ ಮಾತೃವಿನ ಆರೈಕೆಯೊಂದಿಗೆ ನಿರ್ಭೀತಿ ಭರವಸೆಯೊಂದಿಗೆ ವಾಂಛಿತ ಫಲಾನುಗ್ರಹಗಳನ್ನು ದಯ ಪಾಲಿಸುವವಳಾದ, ಮನಸ್ಸಿನಲ್ಲಿರುವ ಭವ ಭಯ ದುರಿತಗಳನ್ನು ದೂರಮಾಡಿ ಸೃಷ್ಟಿಗೆ ಆಶ್ರಯಣೀಯಳಾದ ಕಲ್ಪೋಕ್ತದ ದುರ್ಗೆಯ ಮೂರನೇಯ ರಾಜಸ ಸ್ವರೂಪವೇ ಭಗವತಿ.🌸

°°°°°°°°°°°°°°°°°°°°°°°°°°°°°°°°°°°°°°°°°°°°

~^~

🌼⊰ .«° 𝐓𝐡𝐢𝐫𝐝 𝐝𝐚𝐲 °𝘽𝙝𝙖𝙜𝙖𝙫𝙖𝙩𝙝𝙞°».⊱🌼

⚜ ଓ.🌸 ತೃತೀಯ ದಿನ °ಭಗವತಿ 🌸.ଓ⚜

 
𝘖𝘯 𝘦𝘢𝘤𝘩 𝘥𝘢𝘺 𝘰𝘧 𝘵𝘩𝘦 𝘕𝘢𝘷𝘳𝘢𝘵𝘳𝘪 𝘧𝘦𝘴𝘵𝘪𝘷𝘢𝘭, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘪𝘴 𝘥𝘦𝘤𝘰𝘳𝘢𝘵𝘦𝘥 𝘸𝘪𝘵𝘩 𝘰𝘯𝘦 𝘰𝘧 𝘵𝘩𝘦 𝘯𝘪𝘯𝘦 𝘧𝘰𝘳𝘮𝘴 𝘰𝘧 𝘨𝘰𝘥𝘥𝘦𝘴𝘴 𝘚𝘩𝘢𝘬𝘵𝘩𝘪 𝘢𝘴 𝘥𝘦𝘴𝘤𝘳𝘪𝘣𝘦𝘥 𝘪𝘯 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘵𝘦𝘹𝘵. 𝘐𝘵 𝘪𝘴 𝘢 𝘉𝘭𝘪𝘴𝘴 𝘵𝘰 𝘴𝘦𝘦 𝘵𝘩𝘦 𝘣𝘦𝘢𝘶𝘵𝘺 𝘰𝘧 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘨𝘳𝘰𝘸𝘪𝘯𝘨 𝘪𝘯 𝘵𝘩𝘦𝘴𝘦 𝘧𝘰𝘳𝘮𝘴 𝘰𝘧 𝘚𝘩𝘢𝘬𝘵𝘩𝘪, 𝘢𝘴 𝘦𝘢𝘤𝘩 𝘥𝘢𝘺 𝘰𝘧 𝘕𝘢𝘷𝘳𝘢𝘵𝘳𝘪 𝘱𝘢𝘴𝘴𝘦𝘴 𝘣𝘺.
 
𝘉𝘩𝘢𝘨𝘢𝘷𝘢𝘵𝘩𝘪 𝘩𝘢𝘴 𝘢𝘭𝘴𝘰 𝘣𝘦𝘦𝘯 𝘰𝘧𝘧𝘦𝘳𝘦𝘥 𝘸𝘪𝘵𝘩 𝘢 𝘴𝘱𝘦𝘤𝘪𝘢𝘭 𝘤𝘳𝘰𝘸𝘯 𝘣𝘦𝘥𝘦𝘤𝘬𝘦𝘥 𝘸𝘪𝘵𝘩 𝘷𝘢𝘳𝘪𝘰𝘶𝘴 𝘧𝘳𝘢𝘨𝘳𝘢𝘯𝘵 𝘧𝘭𝘰𝘸𝘦𝘳𝘴.
 
The word Bhagathi can be divided into two syllable in sanskrit. 𝘽𝙝𝙖𝙜𝙖𝙝𝙖 𝙢𝙚𝙖𝙣𝙨 𝙍𝙖𝙙𝙞𝙖𝙣𝙘𝙚 𝙤𝙧 𝙫𝙞𝙩𝙖𝙡 𝙠𝙣𝙤𝙬𝙡𝙚𝙙𝙜𝙚. 𝙑𝙖𝙩𝙞 𝙢𝙚𝙖𝙣𝙨 𝙩𝙝𝙚 𝙤𝙣𝙚 𝙬𝙝𝙤 𝙥𝙤𝙨𝙨𝙚𝙨𝙨𝙚𝙨 𝙞𝙩.✨
 
𝘈𝘴 𝘱𝘦𝘳 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘵𝘦𝘹𝘵 𝘵𝘩𝘦 18 𝘥𝘪𝘧𝘧𝘦𝘳𝘦𝘯𝘵 𝘷𝘪𝘵𝘢𝘭 𝘬𝘯𝘰𝘸𝘭𝘦𝘥𝘨𝘦 𝘭𝘪𝘬𝘦 _𝘤𝘳𝘦𝘢𝘵𝘪𝘰𝘯, 𝘮𝘢𝘪𝘯𝘵𝘦𝘯𝘢𝘯𝘤𝘦, 𝘥𝘦𝘴𝘵𝘳𝘶𝘤𝘵𝘪𝘰𝘯, 𝘵𝘩𝘦 𝘢𝘣𝘪𝘭𝘵𝘺 𝘵𝘰 𝘣𝘦𝘤𝘰𝘮𝘦 𝘴𝘮𝘢𝘭𝘭𝘦𝘳 𝘪𝘯 𝘴𝘪𝘻𝘦 𝘵𝘰 𝘵𝘩𝘢𝘵 𝘰𝘧 𝘢𝘯 𝘢𝘵𝘰𝘮 (𝘢𝘯𝘪𝘮𝘢), 𝘵𝘩𝘦 𝘢𝘣𝘪𝘭𝘵𝘺 𝘵𝘰 𝘨𝘳𝘰𝘸 𝘪𝘯𝘵𝘰 𝘪𝘯𝘧𝘪𝘯𝘪𝘵𝘦 𝘴𝘪𝘻𝘦 ( 𝘭𝘢𝘨𝘪𝘮𝘢) , 𝘢𝘣𝘪𝘭𝘪𝘵𝘺 𝘵𝘰 𝘤𝘰𝘯𝘴𝘵𝘳𝘶𝘤𝘵 𝘢𝘯𝘺𝘵𝘩𝘪𝘯𝘨 ( 𝘱𝘳𝘢𝘱𝘵𝘩𝘪), 𝘢𝘣𝘪𝘭𝘪𝘵𝘺 𝘵𝘰 𝘣𝘦𝘤𝘰𝘮𝘦 𝘸𝘩𝘢𝘵𝘦𝘷𝘦𝘳 𝘵𝘩𝘦 𝘱𝘳𝘢𝘤𝘵𝘪𝘵𝘪𝘰𝘯𝘦𝘳 𝘥𝘦𝘴𝘪𝘳𝘦𝘴 (𝘱𝘳𝘢𝘬𝘢𝘮𝘺𝘢), 𝘒𝘯𝘰𝘸𝘪𝘯𝘨 𝘢𝘭𝘭 𝘱𝘰𝘸𝘦𝘳𝘴 𝘢𝘯𝘥 𝘨𝘦𝘵𝘵𝘪𝘯𝘨 𝘢 𝘤𝘰𝘯𝘵𝘳𝘰𝘭 𝘰𝘷𝘦𝘳 𝘵𝘩𝘦𝘮 (𝘐𝘴𝘩𝘪𝘵𝘢), 𝘢𝘣𝘪𝘭𝘪𝘵𝘺 𝘰𝘧 𝘨𝘦𝘵𝘵𝘪𝘯𝘨 𝘢 𝘤𝘰𝘯𝘵𝘳𝘰𝘭 𝘰𝘯 𝘭𝘪𝘧𝘦 𝘢𝘯𝘥 𝘥𝘦𝘢𝘵𝘩(𝘷𝘢𝘴𝘩𝘪𝘵𝘩𝘢), 𝘭𝘦𝘢𝘷𝘪𝘯𝘨 𝘵𝘩𝘪𝘴 𝘣𝘰𝘥𝘺 𝘢𝘯𝘥 𝘦𝘯𝘵𝘦𝘳𝘪𝘯𝘨 𝘪𝘯𝘵𝘰 𝘴𝘰𝘮𝘦 𝘰𝘵𝘩𝘦𝘳’𝘴 𝘣𝘰𝘥𝘺 ( 𝘱𝘢𝘳𝘢𝘬𝘢𝘢𝘺𝘢 𝘱𝘳𝘢𝘷𝘦𝘴𝘩𝘢𝘯𝘢𝘮) , 𝘱𝘦𝘳𝘧𝘦𝘤𝘵𝘪𝘰𝘯 𝘰𝘧 𝘴𝘱𝘦𝘦𝘤𝘩 ( 𝘷𝘢𝘬) , 𝘪𝘮𝘮𝘰𝘳𝘵𝘢𝘭𝘪𝘵𝘺 ( 𝘢𝘮𝘢𝘳𝘢𝘵𝘩𝘷𝘢𝘮)_ 𝘦𝘵𝘤 𝘢𝘳𝘦 𝘱𝘰𝘴𝘴𝘦𝘴𝘴𝘦𝘥 𝘣𝘺 𝘵𝘩𝘦 𝘨𝘰𝘥𝘥𝘦𝘴𝘴.👏🌹
 
She is described by the puranas as 𝙠𝙖𝙩𝙮𝙖𝙖𝙢 𝘽𝙝𝙖𝙜𝙖𝙬𝙖𝙩𝙝𝙞𝙢 𝙩𝙝𝙖𝙩𝙝𝙖 (the one who resides in the hip of the universe and is responsible for the happenings in it in a periodic form).
 
She is also described as ‘𝙄𝙨𝙝𝙬𝙖𝙧𝙞𝙢 𝙨𝙖𝙧𝙫𝙖 𝘽𝙝𝙤𝙤𝙩𝙝𝙖𝙣𝙖𝙢’ the one who resides in each and every living entities in this world.
 
Thus, she is called as ‘𝙎𝙖𝙧𝙫𝙚𝙨𝙝𝙬𝙖𝙧𝙞 ( sovereign god of all) and ‘𝙎𝙖𝙧𝙫𝙖𝙫𝙮𝙖𝙥𝙖𝙠𝙞 ( all embracing) by our Vedic texts.
 
It is her intelligence ( Chaitanya) that is behind the root and the basis of this existence (mooladhara) of this universe.
She is the reason behind the well being of this world and is praised and worshipped on this third day of Navratri as Bhagawathy Devi as per the kalpoktha text.
 
Thus, we can say that 𝗕𝗵𝗮𝗴𝗮𝘃𝗮𝘁𝗵𝗶 𝗶𝘀 𝘁𝗵𝗲 𝗳𝗼𝗿𝗺 𝗼𝗳 𝗗𝘂𝗿𝗴𝗮 𝗗𝗲𝘃𝗶 𝘄𝗵𝗼 𝗶𝘀 𝗿𝗲𝘀𝗽𝗼𝗻𝘀𝗶𝗯𝗹𝗲 𝗳𝗼𝗿 𝗰𝗮𝗿𝗿𝘆𝗶𝗻𝗴 𝗮𝗻𝗱 𝗻𝘂𝗿𝘁𝘂𝗿𝗶𝗻𝗴 𝘁𝗵𝗲 𝗲𝗻𝘁𝗶𝗿𝗲 𝗯𝗿𝗮𝗵𝗺𝗮𝗻𝗱𝗮𝗺 ( 𝗯𝗿𝗮𝗵𝗺𝗮𝗻𝗱𝗮𝗺 – 𝗕𝗿𝗮𝗵𝗺𝗮 𝗺𝗲𝗮𝗻𝘀 𝘁𝗵𝗲 𝗰𝗿𝗲𝗮𝘁𝗼𝗿 𝗼𝗿 𝗯𝘆 𝗲𝘅𝘁𝗲𝗻𝘀𝗶𝗼𝗻. 𝗧𝗵𝗲 𝗿𝗼𝗼𝘁 𝘄𝗼𝗿𝗱 𝗳𝗼𝗿 𝗕𝗿𝗮𝗵𝗺𝗮 𝗶𝘀 𝗯𝗿𝗶𝗵 𝗺𝗲𝗮𝗻𝗶𝗻𝗴 𝗲𝘅𝗽𝗮𝗻𝘀𝗶𝗼𝗻, 𝗮𝗻𝗱𝗮𝗺 𝗺𝗲𝗮𝗻𝘀 𝗲𝗴𝗴, 𝘀𝗼 𝗯𝗿𝗮𝗺𝗵𝗮𝗻𝗱𝗮𝗺 𝗺𝗲𝗮𝗻𝘀 ‘𝘂𝗻𝗶𝘃𝗲𝗿𝘀𝗮𝗹 𝗲𝗴𝗴’ 𝗼𝗿 ‘𝗰𝗼𝘀𝗺𝗶𝗰 𝗴𝗲𝗿𝗺’, 𝗳𝗿𝗼𝗺 𝘄𝗵𝗶𝗰𝗵 𝘁𝗵𝗶𝘀 𝘂𝗻𝗶𝘃𝗲𝗿𝘀𝗲 𝗲𝘅𝗽𝗮𝗻𝗱𝘀 ) 𝗶𝗻 𝗵𝗲𝗿 𝘄𝗼𝗺𝗯.
 
𝘊𝘢𝘳𝘳𝘺𝘪𝘯𝘨 𝘵𝘩𝘦 𝘦𝘯𝘵𝘪𝘳𝘦 𝘣𝘳𝘢𝘩𝘮𝘢𝘯𝘥𝘢𝘮 ( 𝘊𝘰𝘴𝘮𝘪𝘤 𝘱𝘰𝘸𝘦𝘳) 𝘪𝘯 𝘩𝘦𝘳 𝘸𝘰𝘮𝘣 𝘢𝘯𝘥 𝘯𝘶𝘳𝘵𝘶𝘳𝘪𝘯𝘨 𝘪𝘵, 𝘎𝘰𝘥𝘥𝘦𝘴𝘴 𝘧𝘶𝘭𝘧𝘪𝘭𝘭𝘴 𝘢𝘭𝘭 𝘵𝘩𝘦 𝘥𝘦𝘴𝘪𝘳𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴 𝘢𝘯𝘥 𝘣𝘺 𝘭𝘰𝘰𝘬𝘪𝘯𝘨 𝘢𝘧𝘵𝘦𝘳 𝘩𝘦𝘳 𝘥𝘦𝘷𝘰𝘵𝘦𝘦𝘴 𝘸𝘪𝘵𝘩 𝘭𝘰𝘷𝘦 𝘢𝘯𝘥 𝘤𝘢𝘳𝘦 𝘰𝘧 𝘢 𝘔𝘰𝘵𝘩𝘦𝘳, 𝘴𝘩𝘦 𝘳𝘦𝘴𝘵𝘰𝘳𝘦𝘴 𝘵𝘩𝘦 𝘤𝘰𝘯𝘧𝘪𝘥𝘦𝘯𝘤𝘦 𝘪𝘯 𝘩𝘦𝘳 𝘥𝘦𝘷𝘰𝘵𝘦𝘦𝘴 𝘢𝘯𝘥 𝘵𝘩𝘦𝘺 𝘤𝘢𝘯 𝘭𝘪𝘷𝘦 𝘸𝘪𝘵𝘩𝘰𝘶𝘵 𝘢𝘯𝘺 𝘧𝘦𝘢𝘳, 𝘸𝘩𝘦𝘯 𝘵𝘩𝘦 𝘨𝘰𝘥𝘥𝘦𝘴𝘴 𝘪𝘴 𝘵𝘩𝘦𝘳𝘦 𝘸𝘪𝘵𝘩 𝘵𝘩𝘦𝘮 𝘵𝘰 𝘯𝘶𝘳𝘵𝘶𝘳𝘦 𝘢𝘯𝘥 𝘱𝘳𝘰𝘵𝘦𝘤𝘵 𝘵𝘩𝘦𝘮 𝘢𝘭𝘸𝘢𝘺𝘴. 𝖡𝖾𝗂𝗇𝗀 𝖼𝖺𝗎𝗀𝗁𝗍 𝗂𝗇 𝗍𝗁𝖾 𝗁𝖺𝗋𝖽𝗌𝗁𝗂𝗉 𝗈𝖿 𝗍𝗁𝖾 𝖲𝖺𝗆𝗌𝖺𝖺𝗋𝖺 (𝖿𝖺𝗆𝗂𝗅𝗒) , 𝗌𝗁𝖾 𝗂𝗌 𝗈𝗇𝗅𝗒 𝗈𝗇𝖾 𝗐𝗁𝗈 𝖼𝖺𝗇 𝗉𝗋𝗈𝗏𝗂𝖽𝖾 𝗉𝖾𝖺𝖼𝖾 𝖿𝗋𝗈𝗆 𝖺𝗅𝗅 𝗍𝗁𝖾 𝗁𝖺𝗋𝖽𝗌𝗁𝗂𝗉𝗌 𝖿𝖺𝖼𝖾𝖽.
 
𝘙𝘦𝘮𝘰𝘷𝘪𝘯𝘨 𝘢𝘭𝘭 𝘵𝘩𝘦 𝘣𝘰𝘯𝘥𝘢𝘨𝘦𝘴, 𝘧𝘦𝘢𝘳 𝘢𝘯𝘥 𝘵𝘳𝘰𝘶𝘣𝘭𝘦𝘴 𝘧𝘳𝘰𝘮 𝘵𝘩𝘦 𝘮𝘪𝘯𝘥𝘴 𝘰𝘧 𝘵𝘩𝘦 𝘱𝘦𝘰𝘱𝘭𝘦 𝘢𝘯𝘥 𝘯𝘶𝘳𝘵𝘶𝘳𝘪𝘯𝘨 𝘵𝘩𝘦 𝘤𝘰𝘴𝘮𝘪𝘤 𝘰𝘯 𝘪𝘵𝘴 𝘸𝘩𝘰𝘭𝘦 𝘪𝘴 𝘵𝘩𝘦 𝘵𝘩𝘪𝘳𝘥 𝘧𝘰𝘳𝘮 𝘰𝘧 𝘎𝘰𝘥𝘥𝘦𝘴𝘴 𝘋𝘶𝘳𝘨𝘢 𝘵𝘩𝘢𝘵 𝘪𝘴 𝘥𝘦𝘴𝘤𝘳𝘪𝘣𝘦𝘥 𝘢𝘴 𝘉𝘩𝘢𝘨𝘢𝘷𝘢𝘵𝘩𝘪 𝘪𝘯 𝘵𝘩𝘦 𝘴𝘤𝘳𝘪𝘱𝘵𝘶𝘳𝘦 𝘰𝘧 𝘒𝘢𝘭𝘱𝘰𝘬𝘵𝘩𝘢.