Sri Mangaladevi Navarathri Festival 2022 – Day 4

Blissful Darshan

Mangaladevi Daily Darshan 29th September 2022

~^~

🥀🌹⁘ಚತುರ್ಥಿ ದಿನ 🔸 ಕೌಮಾರಿ⁘🌹🥀

💖.⍤⁘°Fourth day 🔸 𝐊𝐀𝐔𝐌𝐀𝐑𝐈°⁘⍤.💖

 
ಗಿರಿರಾಜ ಕುಮಾರಿಕಾಂ ಭವಾನೀಂ ಶರಣಾಗತ ಪಾಲನೈಕದಕ್ಷಾಮ್ । ವರದಾಭಯಚಕ್ರಶಂಖಹಸ್ತಾಂ ವರದಾತ್ರೀಂ ಭಜತಾಂ ಕೌಮಾರ್ಯೈ ಸ್ಮರಾಮಿ ನಿತ್ಯಮ್ ॥ 
 
ಕೌಮಾರೀ ರೂಪ ಸಂಸ್ಥಾನೆ ನಾರಾಯಣೀ ನಮೋಸ್ತುತೆ.
ತನ್ನ ಕ್ಷೇತ್ರದ ಕಾರಣೀಕದಂತೆ _ಸ್ವಯಂವರ ಪಾರ್ವತೀ ವೃತದ_ ಪಾಲನೆಯ ಮೂಲಕ ವಿವಾಹ ಅಪೇಕ್ಷಿತ ಕನ್ಯೆಯರಿಗೆ ಶೀಘ್ರ ವಿವಾಹ ಸಂಸಿದ್ಧಿಯನ್ನು ಕುಲೀನನಾಗಿರತಕ್ಕಂತಹ ಯೋಗ್ಯ ವರನನ್ನು ಅನುಗ್ರಹಿಸಿ ನಿತ್ಯ ಕಲ್ಯಾಣವನ್ನು ನಿತ್ಯ ಮಂಗಳವನ್ನುಂಟು ಮಾಡುವ ಸರ್ವ ಮಂಗಳೆಯು ಶರನ್ನವರಾತ್ರಿಯ ಇವತ್ತಿನ ನಾಲ್ಕನೇಯ ದಿನದ ಚತುರ್ಥಿಯ ಗುರುವಾರದಂದು ತಾನೇ ಸ್ವತಃ ಸ್ವಯಂವರಕ್ಕೆ ಅಣಿಯಾಗಿರುವ *ಕೌಮಾರಿ* (✨ಕುಮಾರಿ, ಕೌಶಿಕೆ✨)ದೇವಿಯ ಅಲಂಕಾರದಲ್ಲಿ ಪ್ರಸನ್ನಳಾಗಿರುವಳು. ಇದೊಂದು ಶ್ರೀ ದೇವಿಯ ಸಾತ್ವಿಕ ಶಾಂತ ಸ್ವರೂಪ.
 
_ಮಂಗಳಮ್ಮನ ನವರಾತ್ರಿಯ ನವಾಲಂಕಾರಗಳಲ್ಲಿ ಅತ್ಯಂತ ಆಕರ್ಷಣೀಯ ಹಾಗೂ ಮನಃ ಸಂತೃಪ್ತಿಯನ್ನು ತಂದೊದಗಿಸುವ ಅಲಂಕಾರವೇ ‘ಕುಮಾರಿ’ ಅಲಂಕಾರ. ಸೂಜಿಗಲ್ಲಿನಂತೆ ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳಬಲ್ಲ ಸೌಂದರ್ಯದ ಕಲಾವಂತಿಕೆಯಿಂದ ಕೂಡಿದ ಅಲಂಕಾರದಲ್ಲಿ ‘ *ಸ್ವಯಂವರ ಪಾರ್ವತಿಯಾದ*’ ಮಹಾತಾಯಿಯು ಕಿತ್ತಳೆ ಕೇಸರಿ ವರ್ಣದ ಸೀರೆಯನ್ನು ‘ದಾವಣಿ’ಯನ್ನಾಗಿ ತೊಟ್ಟು ಕೆಂಪು ಗುಲಾಬಿ ವರ್ಣಯುತ ಕುಪ್ಪಸ, ಹಸಿರು ವರ್ಣದ ಶಲ್ಯ ಪೀತಾಂಬರವನುಟ್ಟು ಸೊಂಟಪಟ್ಟಿ, ವಜ್ರಕಂಠೀಹಾರ ‘ತೋಳಬಂಧಿಯ’ಸಹಿತ ಸರ್ವಾಭರಣ ಭೂಷಿತಳಾಗಿರುವಳು._
 
_ವಿಶೇಷವಾಗಿ ಸ್ವರ್ಣಹಾರಗಳ ಪೋಣಿಸಿರುವ ಘಮಘಮಿಸುವ ಮಲ್ಲಿಕಾ ಪುಷ್ಪ ಅರ್ಥಾತ್ ‘ಊರಿನ ಮಲ್ಲಿಗೆ ಚೆಂಡಿನ’ ಕೇಶರಾಶಿಗೆ ಅರಳು ಮೊಲ್ಲೆ ಮಲ್ಲಿಗೆ ಹೂವುಗಳ ಸೇರಿಸಿ ನೈದು, ಮಲ್ಲಿಗೆ ಜಲ್ಲಿಯ ಮನೋಜ್ಞ ಕೇಶಾಲಂಕಾರದೊಂದಿಗೆ ಕಾಮಿತಾರ್ಥ ಪ್ರದಾಯಕಳಾದ ಮುದ್ದಾದ ‘ಶೋಡಷಿ’ಯಾಗಿ ಕಮಲ ಪುಷ್ಪದ ಕುಸುಮ ಮಾಲೆಯನ್ನು ಅಭಯ ಹಸ್ತದಲ್ಲಿ ಪಿಡಿದು, ವರದ ಹಸ್ತಳಾಗಿ ತನ್ನ ಯೋಗ್ಯತೆಗೆ ತಕ್ಕ ವರನ ವರಾನ್ವೇಶಣೆಯ ಸ್ವಯಂವರಕ್ಕೆ ಸಜ್ಜಾದ ಲೋಕೋತ್ತರ ಸುಂದರಿ ಕೌಮಾರಿಯಾಗಿ ಶ್ರೀ ದೇವಿಯು ಸಂಭ್ರಮಿತಳಾಗಿರುವಳು_
 
_ಲೋಕಕ್ಕೆ ಮಂಗಳವನ್ನುಂಟು ಮಾಡುವ ಲೋಕ ಮಾತೆ ಶ್ರೀ ಮಂಗಳಾದೇವಿ ಮಲ್ಲಿಗೆ ಜಲ್ಲಿಯ ಮನೋಜ್ಞ ಕೇಶಾಲಂಕಾರದೊಂದಿಗೆ ಕೌಮಾರಿ ಅಲಂಕಾರದ ಮುಖೇನ ಸ್ವತಃ ತನ್ನ ಸ್ವಯಂವರ ಕಲ್ಯಾಣಕ್ಕಾಗಿ ಪುಷ್ಪ ಹಾರವನ್ನು ಪಿಡಿದು ಸಂಪೂರ್ಣ ಗರ್ಭಗೃಹವನ್ನು ವ್ಯಾಪಿಸಿಕೊಂಡು ಮುದ್ದಾದ ಹದಿನಾರರ ಶೋಡಷಿಯಾಗಿ ಅಲಂಕೃತಳಾಗಿದ್ದಾಳೆ 👏_
 
_ಶರನ್ನವರಾತ್ರಿಯಲ್ಲಿ ಶ್ರೀ ದೇವಿಯ ಅನುದಿನದ ತೇಜೋಮಯ ಅಲಂಕಾರವನ್ನು ಕಾಣಲು ಹಾತೊರೆದು ಬರುವ ಭಕ್ತಾದಿಗಳು ಮಂಗಳಮ್ಮನ ಮುಂಭಾಗ ನಿಂತರಂತೂ ಕದಲುವುದೇ ಇಲ್ಲ. ತದೇಕ ಚಿತ್ತದಿಂದ ಅವಳ ಸೌಂದರ್ಯದಲ್ಲಿ ಮಂತ್ರಮುಗ್ಧರಾಗಿ ಭಾವುಕರಾಗಿ ನೋಡುತ್ತಲೇ ತಲ್ಲೀನರಾಗುತ್ತಾರೆ. ಇಂದಂತೂ ಎಂತಹ ಲೀಲಾ ವಿನೋದ !! *ಜಗತ್ತಿಗೇ ತಾಯಿಯಾದ ಮಾಹಾತಾಯಿ ಇಂದು ಮುದ್ದಾದ ಹದಿನಾರರ ಶೋಡಷಿಯಾಗಿ ದರ್ಶನವಿತ್ತಿದ್ದಾಳೆ*._
 
_ಆ ರೂಪವತಿಯ ಸೌಂದರ್ಯದ ಘನಿಗೆ ಎಣೆಯುಂಟೆ. ಪೂರ್ಣ ಚಂದ್ರನಂತೆ ಬೆಳಗುತ್ತಾ ಮನೋಹ್ಲದ ಅತ್ಯಪೂರ್ವ ಸೌಂದರ್ಯದ ಕುಮಾರಿ ಅಲಂಕಾರ ವರ್ಣನೆಗೆ ಮೀರಿದ್ದು. ವರ್ಣಾತಿಶಯ._
 
_ಇಂದು ತಾಯಿಯ ಈ ಸ್ಪುರಃದ್ರೂಪಿ ಮಂಗಳ ರೂಪವನ್ನು ಕಂಡು ಪ್ರಾರ್ಥಿಸಿದಲ್ಲಿ ವಿವಾಹ ವಿಘ್ನಗಳು, ಪ್ರತಿಬಂಧಕ ಅಡಚನೆಗಳು ನಿವಾರಣೆಯಾಗಿ ಶೀಘ್ರವಾಗಿ ವಿವಾಹ ಯೋಗ್ಯತೆಯು ಒದಗಿ ಬರುವುದು ನೂರಕ್ಕೆ ನೂರು ಅನುಭವ ಸಿದ್ಧ. ಶರಣಾಗತರನ್ನು ಸಲಹುವುದರಲ್ಲಿ ಸದಾ ತತ್ಪರಳಾಗಿರುವ ವರಧಾತ್ರಿಯಾದ ಮಂಗಳೆಯು ಕಂಕಣ ಭಾಗ್ಯ, ವಿವಾಹ ಸಂಸಿದ್ಧಿಗೂ ಸದಾ ಸ್ಮರಣೀಯಳು. 👏_
 
ಸಾಹಿತ್ಯದ ಪ್ರಕಾರ ಸಂಸ್ಕೃತದ ತತ್ಸಮ ಪದ _*ಕೌಮಾರಿ ಕನ್ನಡಕ್ಕೆ ತದ್ಭವವಾಗಿ ಕುಮಾರಿ*_ ಎಂದಾಗುತ್ತದೆ. ಕೌಮಾರಿ ಎಂದರೆ ಮೈನೆರೆದು ವಯಸ್ಸಿಗೆ ಬಂದ ತರುಣಿ ಅಥವ ಕನ್ಯೆ ಎಂದರ್ಥ.
 
_ದಾಕ್ಷಾಯಿಣಿಯೇ ಪಾರ್ವತಿಯಾಗಿ ಜನ್ಮವನ್ನು ತಳೆದು ಪರ್ವತರಾಜ ಹಿಮವಂತನ ಮಗಳಾಗಿ ಜನಿಸಿ ಈಶ್ವರ ದೇವರನ್ನೇ ತನ್ನ ಪತಿಯನ್ನಾಗಿ ಪಡೆಯ ಬೇಕೆಂಬ ಅಚಲ ನಿರ್ಧಾರದಿಂದ ಅಂತರ್ಮುಖಿಯಾದ ಶಿವನನ್ನೇ ವರಿಸ ಬೇಕೆಂಬ ದೃಢ ಸಂಕಲ್ಪದಿಂದ ಶಿವನಲ್ಲಿ ತೆರಳಿ ಸೇವಾನಿರತಳಾದ ಪರ್ವತ ರಾಜನ ಮಗಳು._ 
 
_ಪಾರ್ವತಿ ಪರಮೇಶ್ವರರ ವಿವಾಹ ಸಂದರ್ಭದಲ್ಲಿ ಮನೋಹರವಾದ ತನ್ನ ಸ್ಪುರಃದ್ರೂಪಿ ಸೌಂದರ್ಯದಿಂದ ಎಳೆಯ ಸೂರ್ಯನಂತೆ ಬಂಗಾರದ ಕಾಂತಿಯುಳ್ಳ ಕುಮಾರಿಯು ಮಂದಸ್ಮಿತಳಾಗಿ ಕೈಗಳಲ್ಲಿ ಕುಸುಮ ಮಾಲೆಯನ್ನು ಹಿಡಿದು ಶಿವನೆಡೆಗೆ ನಡೆದು ಬರುತ್ತಿರಲು ಸಂತಸಗೊಂಡ ದೇವಾನು ದೇವತೆಗಳು ‘ಸ್ವಯಂವರ ಪಾರ್ವತಿ’ ಎಂದು ದೇವಿಯನ್ನು ಸ್ತುತಿಸಿ ಶಿರಬಾಗಿ ಕರ ಜೋಡಿಸಿ ಆಕೆಗೆ ನಮಿಸಿದರಂತೆ. ತ್ರಿಲೋಕ ಸುಂದರಿಯ ನಡಿಗೆಗೆ ದೇವತಾ ಗಂಧರ್ವ ಕಿನ್ನರ ಕಿಂಪುರುಷರೇ ಮನಸೋತರಂತೆ._
 
ಕೌಮಾರಿ ಸಪ್ತಮಾತೃಕೆಯರಲ್ಲಿ ಒಬ್ಬಳು.
ಮಾರ್ಕಾಂಡೇಯ ಪುರಾಣದ ದುರ್ಗಾ ಸಪ್ತಶತಿಯಲ್ಲಿ ದುರ್ಗೆಯು ಅಸುರರ ವಧೆಗಾಗಿ ಹಿಮಾಚಲ ತಪ್ಪಲಿನಲ್ಲಿ ಹಂಸತೂಲಿಕ ತಲ್ಪದಮೇಲೆ ಸುಂದರ ಸ್ತ್ರೀಯಾಗಿ ಕಾಣಿಸಿಕೊಂಡು ಅವರನ್ನು ಮೋಹಗೊಳಿಸಿದ ವರ್ಣನೆಯಿದೆ. _ಕಲ್ಪೋಕ್ತದ ಪ್ರಕಾರ ತನ್ನ ಅಪೂರ್ವ ಸೌಂದರ್ಯದ ರೂಪಲಾವಣ್ಯತೆ, ಮೈ ಮಾಟ ಚಿರ ಯೌವನದಿಂದ ಅಸುರರನ್ನು ಮೋಹಿಸಿ ತನ್ನೆಡೆ ಆಕರ್ಷಿಸಿ ಸೆಳೆದು, ಅವರ ಸಂಹಾರಕ್ಕೆ ದುರ್ಗೆಯು ತಾಳುವ ನಾಲ್ಕನೇಯ ಸಾತ್ವಿಕ ಮನೋಹರ ಸ್ವರೂಪವೇ ಕೌಮಾರಿ._🥀

~^~

💖.⍤⁘°Fourth day 🔸 𝐊𝐀𝐔𝐌𝐀𝐑𝐈°⁘⍤.💖

🥀🌹⁘ಚತುರ್ಥಿ ದಿನ 🔸 ಕೌಮಾರಿ⁘🌹🥀

 
𝐴𝑠 𝑝𝑒𝑟 𝑡𝒉𝑒 𝑡𝑟𝑎𝑑𝑖𝑡𝑖𝑜𝑛 𝑜𝑓 𝑡𝒉𝑒 𝑡𝑒𝑚𝑝𝑙𝑒, 𝑡𝒉𝑒 𝐺𝑖𝑟𝑙 𝑤𝒉𝑜 𝑖𝑠 𝑎𝑡𝑡𝑎𝑖𝑛𝑒𝑑 𝑡𝒉𝑒 𝑎𝑔𝑒 𝑓𝑜𝑟 𝑚𝑎𝑟𝑟𝑖𝑎𝑔𝑒, 𝑠𝒉𝑎𝑙𝑙 𝑓𝑖𝑛𝑑 𝑎 𝑠𝑢𝑖𝑡𝑎𝑏𝑙𝑒 𝐺𝑟𝑜𝑜𝑚 𝑓𝑜𝑟 𝒉𝑒𝑟𝑠𝑒𝑙𝑓 𝑏𝑦 𝑢𝑛𝑑𝑒𝑟𝑔𝑜𝑖𝑛𝑔 𝑎 𝑝𝑒𝑛𝑎𝑛𝑐𝑒 𝑐𝑎𝑙𝑙𝑒𝑑 𝙎𝙬𝙖𝙮𝙖𝙢𝙫𝙖𝙧𝙖 𝙋𝙖𝙧𝙫𝙖𝙩𝙞 𝙫𝙧𝙪𝙩𝙝𝙖. 𝑇𝒉𝑒 𝑔𝑜𝑑𝑑𝑒𝑠𝑠 𝑀𝑎𝑛𝑔𝑎𝑙𝑎𝑑𝑒𝑣𝑖 𝑠𝒉𝑎𝑙𝑙 𝑠𝑒𝑒 𝑡𝑜 𝑖𝑡 𝑡𝒉𝑎𝑡, 𝑜𝑛𝑒 𝑤𝒉𝑜 𝑢𝑛𝑑𝑒𝑟𝑔𝑜𝑒𝑠 𝑡𝒉𝑖𝑠 𝑝𝑒𝑛𝑎𝑛𝑐𝑒 𝑠𝒉𝑎𝑙𝑙 𝑏𝑒 𝑏𝑙𝑒𝑠𝑠𝑒𝑑 𝑤𝑖𝑡𝒉 𝑎 𝑠𝑢𝑖𝑡𝑎𝑏𝑙𝑒 𝑔𝑟𝑜𝑜𝑚, 𝑤𝒉𝑜 𝑤𝑖𝑙𝑙 𝑙𝑜𝑜𝑘 𝑎𝑓𝑡𝑒𝑟 𝒉𝑒𝑟 𝒉𝑎𝑝𝑝𝑖𝑙𝑦 𝑎𝑛𝑑 𝑏𝑙𝑒𝑠𝑠 𝑡𝒉𝑒 𝑐𝑜𝑢𝑝𝑙𝑒 𝑤𝑖𝑡𝒉 𝑙𝑜𝑛𝑔 𝑎𝑛𝑑 𝒉𝑎𝑝𝑝𝑦 𝑙𝑖𝑓𝑒 𝑎𝒉𝑒𝑎𝑑. 𝑂𝑛 𝑡𝒉𝑒 𝑜𝑐𝑐𝑎𝑠𝑖𝑜𝑛 𝑜𝑓 𝑡𝒉𝑒 𝑓𝑜𝑢𝑟𝑡𝒉 𝑑𝑎𝑦 𝑜𝑓 𝑁𝑎𝑣𝑟𝑎𝑡𝑟𝑖, 𝐺𝑜𝑑𝑑𝑒𝑠𝑠 𝑀𝑎𝑛𝑔𝑎𝑙𝑎𝑑𝑒𝑣𝑖 𝒉𝑒𝑟𝑠𝑒𝑙𝑓 𝒉𝑎𝑠 𝑎𝑑𝑜𝑟𝑛𝑒𝑑 𝑡𝒉𝑒 𝑓𝑜𝑟𝑚 𝑜𝑓 𝑎 𝑏𝑒𝑎𝑢𝑡𝑖𝑓𝑢𝑙 𝐾𝑢𝑚𝑎𝑟𝑖 𝑤𝒉𝑜 𝑖𝑠 𝑟𝑒𝑎𝑑𝑦 𝑡𝑜 𝑠𝑒𝑒𝑘 𝑎𝑛 𝑎𝑙𝑙𝑖𝑎𝑛𝑐𝑒 𝑓𝑜𝑟 𝒉𝑒𝑟𝑠𝑒𝑙𝑓.
 
𝖮𝗎𝗍 𝗈𝖿 𝖺𝗅𝗅 𝗍𝗁𝖾 𝗇𝗂𝗇𝖾 𝖽𝗂𝖿𝖿𝖾𝗋𝖾𝗇𝗍 𝖿𝗈𝗋𝗆𝗌 𝖺𝖽𝗈𝗋𝗇𝖾𝖽 𝖻𝗒 𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂, 𝗍𝗁𝗂𝗌 𝖿𝗈𝗋𝗆 𝗈𝖿 𝗁𝖾𝗋 𝗂𝗌 𝗍𝗁𝖾 𝗆𝗈𝗌𝗍 𝖻𝖾𝖺𝗎𝗍𝗂𝖿𝗎𝗅 𝖺𝗇𝖽 𝖺𝗍𝗍𝗋𝖺𝖼𝗍𝗂𝗏𝖾 𝗈𝗇𝖾𝗌 𝗂𝗇 𝗇𝖺𝗍𝗎𝗋𝖾. 𝖲𝗁𝖾 𝖺𝗍𝗍𝗋𝖺𝖼𝗍𝗌 𝗍𝗁𝖾 𝗆𝗂𝗇𝖽𝗌 𝗈𝖿 𝗁𝖾𝗋 𝖽𝖾𝗏𝗈𝗍𝖾𝖾𝗌 𝗅𝗂𝗄𝖾 𝖺 𝗆𝖺𝗀𝗇𝖾𝗍, 𝖻𝗒 𝖺𝖽𝗈𝗋𝗇𝗂𝗇𝗀 𝗏𝖺𝗋𝗂𝗈𝗎𝗌 𝖽𝗂𝖿𝖿𝖾𝗋𝖾𝗇𝗍 𝗆𝖺𝗇𝗂𝖿𝖾𝗌𝗍𝖺𝗍𝗂𝗈𝗇𝗌, 𝗐𝗁𝗂𝖼𝗁 𝖺𝗋𝖾 𝗏𝖾𝗋𝗒 𝖻𝖾𝖺𝗎𝗍𝗂𝖿𝗎𝗅 𝗂𝗇 𝗇𝖺𝗍𝗎𝗋𝖾. 𝖦𝗈𝖽𝖽𝖾𝗌𝗌 𝗁𝖺𝗌 𝗐𝗈𝗋𝗇 𝖺 𝗍𝗋𝖺𝖽𝗂𝗍𝗂𝗈𝗇𝖺𝗅 𝖺𝗍𝗍𝗂𝗋𝖾 𝖼𝖺𝗅𝗅𝖾𝖽 ‘𝖣𝗁𝖺𝗏𝖺𝗇𝗂’ 𝗈𝗋 𝖺 𝗁𝖺𝗅𝖿 𝗌𝖺𝗋𝖾𝖾. 𝖲𝗁𝖾 𝖼𝖺𝗇 𝖻𝖾 𝗌𝖾𝖾𝗇 𝗐𝖾𝖺𝗋𝗂𝗇𝗀 𝗒𝖾𝗅𝗅𝗈𝗐𝗂𝗌𝗁 𝗀𝗈𝗅𝖽𝖾𝗇 𝖼𝗈𝗅𝗈𝗎𝗋𝖾𝖽 𝗌𝖺𝗋𝖾𝖾 𝗂𝗇 𝗍𝗁𝖾 𝖿𝗈𝗋𝗆 𝗈𝖿 𝖺 ‘𝖣𝗁𝖺𝗏𝖺𝗇𝗂’ 𝗐𝗂𝗍𝗁 𝖺 𝗋𝗈𝗌𝖾 𝖼𝗈𝗅𝗈𝗎𝗋𝖾𝖽 𝖻𝗅𝗈𝗎𝗌𝖾 𝖺𝗇𝖽 𝖺 𝗒𝖾𝗅𝗅𝗈𝗐 𝗀𝖺𝗋𝗆𝖾𝗇𝗍 𝖼𝖺𝗅𝗅𝖾𝖽 𝗉𝗂𝗍𝖺𝗆𝖻𝗁𝖺𝗋𝖺. 𝖲𝗁𝖾 𝗂𝗌 𝗐𝖾𝖺𝗋𝗂𝗇𝗀 𝖺𝗇 𝖺𝗋𝗆𝗅𝖾𝗍 𝖺𝗋𝗈𝗎𝗇𝖽 𝗁𝖾𝗋 𝖺𝗋𝗆𝗌 𝖺𝗇𝖽 𝗂𝗍 𝗂𝗌 𝗅𝗈𝖼𝖺𝗅𝗅𝗒 𝖼𝖺𝗅𝗅𝖾𝖽 𝗍𝗁𝗈𝗅𝗎 𝖻𝗁𝖺𝗇𝖽𝗁𝗂. 𝖲𝗁𝖾 𝖼𝖺𝗇 𝖻𝖾 𝗌𝖾𝖾𝗇 𝗐𝖾𝖺𝗋𝗂𝗇𝗀 𝖽𝗂𝖿𝖿𝖾𝗋𝖾𝗇𝗍 𝗄𝗂𝗇𝖽𝗌 𝗈𝖿 𝗉𝗋𝖾𝖼𝗂𝗈𝗎𝗌 𝗈𝗋𝗇𝖺𝗆𝖾𝗇𝗍𝗌 𝗂𝗇 𝗁𝖾𝗋 𝗇𝖾𝖼𝗄 𝗌𝗎𝗂𝗍𝖺𝖻𝗅𝖾 𝗍𝗈 𝗍𝗁𝖾 𝖺𝗍𝗍𝗂𝗋𝖾 𝗐𝗈𝗋𝗇 𝖻𝗒 𝗁𝖾𝗋. 𝖲𝗁𝖾 𝖼𝖺𝗇 𝖻𝖾 𝗌𝖾𝖾𝗇 𝖽𝖾𝖼𝗈𝗋𝖺𝗍𝖾𝖽 𝗁𝖾𝗋𝗌𝖾𝗅𝖿 𝗅𝗂𝗄𝖾 𝖺 𝖻𝗋𝗂𝖽𝖾, 𝖻𝗒 𝗐𝖾𝖺𝗋𝗂𝗇𝗀 𝗂𝗇𝖼𝗋𝖾𝖽𝗂𝖻𝗅𝗒 𝗌𝖾𝗇𝗌𝗎𝖺𝗅, 𝗋𝗂𝖼𝗁 𝖺𝗇𝖽 𝗌𝗐𝖾𝖾𝗍𝗅𝗒 𝗌𝗆𝖾𝗅𝗅𝗂𝗇𝗀 𝗃𝖺𝗌𝗆𝗂𝗇𝖾 𝖿𝗅𝗈𝗐𝖾𝗋𝗌 𝗂𝗇 𝗁𝖾𝗋 𝗁𝖾𝖺𝖽 𝖺𝗇𝖽 𝗍𝗁𝖾𝗌𝖾 𝗃𝖺𝗌𝗆𝗂𝗇𝖾 𝖿𝗅𝗈𝗐𝖾𝗋𝗌 𝖺𝗋𝖾 𝗀𝗋𝗈𝗐𝗇 𝗅𝗈𝖼𝖺𝗅𝗅𝗒, 𝗂𝗇 𝖺𝗇𝖽 𝖺𝗋𝗈𝗎𝗇𝖽 𝗍𝗁𝖾 𝖼𝗂𝗍𝗒 𝗈𝖿 𝖬𝖺𝗇𝗀𝖺𝗅𝗎𝗋𝗎. 𝖧𝗈𝗅𝖽𝗂𝗇𝗀 𝖺 𝖦𝖺𝗋𝗅𝖺𝗇𝖽 𝗂𝗇 𝗁𝖾𝗋 𝗋𝗂𝗀𝗁𝗍 𝗁𝖺𝗇𝖽, 𝗌𝗁𝖾 𝗂𝗌 𝖺𝗅𝗅 𝗌𝖾𝗍 𝗍𝗈 𝖿𝗂𝗇𝖽 𝖺 𝗌𝗎𝗂𝗍𝖺𝖻𝗅𝖾 𝗀𝗋𝗈𝗈𝗆 𝖿𝗈𝗋 𝗁𝖾𝗋𝗌𝖾𝗅𝖿.❤️
 
𝚃𝚑𝚎 𝚠𝚘𝚛𝚍 ‘𝙎𝙝𝙤𝙙𝙖𝙨𝙝𝙞’ (𝚜𝚒𝚡𝚝𝚎𝚎𝚗 𝚢𝚎𝚊𝚛𝚜 𝚘𝚏 𝚊𝚐𝚎) 𝚒𝚗 𝚜𝚊𝚗𝚜𝚔𝚛𝚒𝚝 𝚘𝚛 ‘𝚂𝚠𝚎𝚎𝚝 𝚂𝚒𝚡𝚝𝚎𝚎𝚗’ 𝚒𝚗 𝙴𝚗𝚐𝚕𝚒𝚜𝚑 𝚊𝚙𝚝𝚕𝚢 𝚜𝚞𝚒𝚝𝚜 𝚑𝚎𝚛. 𝙸𝚝 𝚒𝚜 𝚊 𝚏𝚎𝚊𝚜𝚝 𝚝𝚘 𝚝𝚑𝚎 𝚎𝚢𝚎𝚜 𝚘𝚏 𝚑𝚎𝚛 𝚍𝚎𝚟𝚘𝚝𝚎𝚎𝚜 𝚝𝚘 𝚜𝚎𝚎 𝚜𝚞𝚌𝚑 𝚊 𝚋𝚕𝚒𝚜𝚜𝚏𝚞𝚕 𝚖𝚊𝚗𝚒𝚏𝚎𝚜𝚝𝚊𝚝𝚒𝚘𝚗 𝚘𝚏 𝙶𝚘𝚍𝚍𝚎𝚜𝚜 𝙼𝚊𝚗𝚐𝚊𝚕𝚊𝚍𝚎𝚟𝚒. 𝙷𝚘𝚕𝚍𝚒𝚗𝚐 𝚑𝚎𝚛 𝚑𝚊𝚗𝚍𝚜 𝚊𝚋𝚑𝚊𝚢𝚊 𝚊𝚗𝚍 𝚟𝚊𝚛𝚊𝚍𝚊 𝚖𝚞𝚍𝚛𝚊, 𝚜𝚑𝚎 𝚛𝚎𝚊𝚜𝚜𝚞𝚛𝚎𝚜 𝚑𝚎𝚛 𝚍𝚎𝚟𝚘𝚝𝚎𝚎𝚜, 𝚝𝚒𝚖𝚎 𝚊𝚗𝚍 𝚊𝚐𝚊𝚒𝚗 𝚝𝚑𝚊𝚝 𝚝𝚑𝚎𝚢 𝚗𝚎𝚎𝚍 𝚗𝚘𝚝 𝚋𝚎 𝚊𝚏𝚛𝚊𝚒𝚍 𝚘𝚏 𝚊𝚗𝚢𝚝𝚑𝚒𝚗𝚐, 𝚠𝚑𝚒𝚕𝚎 𝚜𝚑𝚎 𝚒𝚜 𝚝𝚑𝚎𝚛𝚎 𝚝𝚘 𝚙𝚛𝚘𝚝𝚎𝚌𝚝 𝚝𝚑𝚎𝚖 𝚊𝚗𝚍 𝚜𝚑𝚎 𝚠𝚒𝚕𝚕 𝚊𝚕𝚜𝚘 𝚏𝚞𝚕𝚕𝚏𝚒𝚕𝚕 𝚊𝚕𝚕 𝚝𝚑𝚎 𝚛𝚒𝚐𝚑𝚝𝚏𝚞𝚕 𝚠𝚒𝚜𝚑𝚎𝚜 𝚊𝚗𝚍 𝚍𝚎𝚜𝚒𝚛𝚎𝚜 𝚘𝚏 𝚝𝚑𝚎𝚖.🙏
 
𝚄𝚙𝚘𝚗 𝚜𝚎𝚎𝚒𝚗𝚐 𝚝𝚑𝚒𝚜 𝚎𝚟𝚎𝚛 𝚋𝚎𝚊𝚞𝚝𝚒𝚏𝚞𝚕 𝚏𝚘𝚛𝚖 𝚘𝚏 𝙶𝚘𝚍𝚍𝚎𝚜𝚜 𝙼𝚊𝚗𝚐𝚊𝚕𝚊𝚍𝚎𝚟𝚒 𝚊𝚗𝚍 𝚙𝚛𝚊𝚢𝚒𝚗𝚐 𝚝𝚘 𝚑𝚎𝚛 𝚑𝚎𝚊𝚛𝚝𝚒𝚕𝚢, 𝚜𝚑𝚊𝚕𝚕 𝚑𝚎𝚕𝚙 𝚞𝚜 𝚌𝚛𝚘𝚜𝚜 𝚝𝚑𝚒𝚜 𝚍𝚒𝚏𝚏𝚒𝚌𝚞𝚕𝚝 𝚊𝚗𝚍 𝚊𝚗 𝚒𝚖𝚙𝚘𝚛𝚝𝚊𝚗𝚝 𝚊𝚜𝚙𝚎𝚌𝚝 𝚘𝚏 𝚜𝚎𝚊𝚛𝚌𝚑𝚒𝚗𝚐 𝚊 𝚜𝚞𝚒𝚝𝚊𝚋𝚕𝚎 𝚙𝚎𝚛𝚜𝚘𝚗 𝚝𝚘 𝚐𝚎𝚝 𝚖𝚊𝚛𝚛𝚒𝚎𝚍 𝚝𝚘 𝚑𝚒𝚖/𝚑𝚎𝚛. 𝙰𝚕𝚕 𝚝𝚑𝚎 𝚘𝚋𝚜𝚝𝚊𝚌𝚕𝚎𝚜 𝚊𝚗𝚍 𝚝𝚛𝚘𝚞𝚋𝚕𝚎𝚜 𝚒𝚗 𝚝𝚑𝚒𝚜 𝚛𝚎𝚐𝚊𝚛𝚍 𝚜𝚑𝚊𝚕𝚕 𝚋𝚎 𝚛𝚎𝚖𝚘𝚟𝚎𝚍 𝚏𝚛𝚘𝚖 𝚘𝚞𝚛 𝚕𝚒𝚟𝚎𝚜 𝚊𝚗𝚍 𝚠𝚎 𝚜𝚑𝚊𝚕𝚕 𝚋𝚎 𝚊𝚋𝚕𝚎 𝚝𝚘 𝚏𝚒𝚗𝚍 𝚊 𝚜𝚞𝚒𝚝𝚊𝚋𝚕𝚎 𝚐𝚛𝚘𝚘𝚖/𝚋𝚛𝚒𝚍𝚎 𝚊𝚗𝚍 𝚐𝚎𝚝 𝚖𝚊𝚛𝚛𝚒𝚎𝚍 𝚝𝚘 𝚑𝚒𝚖/𝚑𝚎𝚛 𝚒𝚗 𝚊 𝚚𝚞𝚒𝚌𝚔 𝚜𝚎𝚜𝚜𝚒𝚘𝚗. 𝙶𝚘𝚍𝚍𝚎𝚜𝚜 𝙼𝚊𝚗𝚐𝚊𝚕𝚊𝚍𝚎𝚟𝚒 𝚒𝚜 𝚠𝚎𝚕𝚕 𝚔𝚗𝚘𝚠𝚗 𝚏𝚘𝚛 𝚑𝚎𝚛 𝚌𝚊𝚛𝚎 𝚊𝚗𝚍 𝚙𝚛𝚘𝚝𝚎𝚌𝚝𝚒𝚘𝚗 𝚘𝚏 𝚑𝚎𝚛 𝚍𝚎𝚟𝚘𝚝𝚎𝚎𝚜, 𝚠𝚑𝚘 𝚑𝚊𝚟𝚎 𝚜𝚞𝚛𝚛𝚎𝚗𝚍𝚎𝚛𝚎𝚍 𝚝𝚑𝚎𝚖𝚜𝚎𝚕𝚟𝚎𝚜 𝚝𝚘 𝚑𝚎𝚛, 𝚜𝚒𝚖𝚒𝚕𝚊𝚛𝚕𝚢 𝚜𝚑𝚎 𝚒𝚜 𝚊𝚕𝚜𝚘 𝚔𝚗𝚘𝚠𝚗 𝚏𝚘𝚛 𝚑𝚎𝚛 𝚋𝚕𝚎𝚜𝚜𝚒𝚗𝚐𝚜 𝚏𝚘𝚛 𝚖𝚊𝚛𝚛𝚒𝚊𝚐𝚎 𝚊𝚌𝚌𝚘𝚖𝚙𝚕𝚒𝚜𝚑𝚖𝚎𝚗𝚝𝚜 𝚊𝚗𝚍 𝚝𝚘 𝚔𝚎𝚎𝚙 𝚘𝚞𝚛 𝚖𝚊𝚛𝚛𝚒𝚎𝚍 𝚕𝚒𝚏𝚎 𝚕𝚘𝚗𝚐 𝚊𝚗𝚍 𝚑𝚊𝚙𝚙𝚢.💐
 
𝑨𝒄𝒄𝒐𝒓𝒅𝒊𝒏𝒈 𝒕𝒐 𝒕𝒉𝒆 𝒔𝒄𝒓𝒊𝒑𝒕𝒖𝒓𝒆𝒔, 𝒕𝒉𝒆 𝒔𝒚𝒏𝒐𝒏𝒚𝒎 𝒇𝒐𝒓 𝒕𝒉𝒆 𝑺𝒂𝒏𝒔𝒌𝒓𝒊𝒕 𝒘𝒐𝒓𝒅 ✨ ‘𝒌𝒂𝒖𝒎𝒂𝒓𝒊✨ 𝒊𝒔 ‘𝑲𝒖𝒎𝒂𝒓𝒊’ 𝒊𝒏 𝒌𝒂𝒏𝒏𝒂𝒅𝒂.
 
𝑲𝒂𝒖𝒎𝒂𝒓𝒊 𝒎𝒆𝒂𝒏𝒔 𝒂 𝒈𝒊𝒓𝒍 𝒘𝒉𝒐 𝒉𝒂𝒔 𝒂𝒕𝒕𝒂𝒊𝒏𝒆𝒅 𝒕𝒉𝒆 𝒂𝒈𝒆 𝒐𝒇 𝒎𝒂𝒓𝒓𝒊𝒂𝒈𝒆. 𝑻𝒂𝒓𝒖𝒏𝒊, 𝒌𝒂𝒏𝒚𝒂, 𝒀𝒖𝒗𝒂𝒕𝒉𝒊 𝒂𝒓𝒆 𝒐𝒕𝒉𝒆𝒓 𝒔𝒚𝒏𝒐𝒏𝒚𝒎𝒔 𝒇𝒐𝒓 𝒕𝒉𝒆 𝒘𝒐𝒓𝒅 𝑲𝒂𝒖𝒎𝒂𝒂𝒓𝒊. 𝑰𝒏𝒕𝒓𝒐𝒗𝒆𝒓𝒕𝒆𝒅 𝒉𝒆𝒓𝒔𝒆𝒍𝒇 𝒂𝒏𝒅 𝒕𝒂𝒌𝒊𝒏𝒈 𝒂 𝒗𝒐𝒘 𝒕𝒐 𝒎𝒂𝒓𝒓𝒚 𝑳𝒐𝒓𝒅 𝑺𝒉𝒊𝒗𝒂, 𝒕𝒉𝒆 𝒅𝒂𝒖𝒈𝒉𝒕𝒆𝒓 𝒐𝒇 𝒉𝒊𝒎𝒂𝒍𝒂𝒚𝒂𝒏 𝒌𝒊𝒏𝒈, 𝒅𝒆𝒅𝒊𝒄𝒂𝒕𝒆𝒅 𝒉𝒆𝒓𝒔𝒆𝒍𝒇 𝒕𝒐 𝒉𝒊𝒔 𝒔𝒆𝒓𝒗𝒊𝒄𝒆. 𝑻𝒐 𝒔𝒆𝒆 𝒈𝒐𝒅𝒅𝒆𝒔𝒔 𝑷𝒂𝒓𝒗𝒂𝒕𝒊 𝒘𝒂𝒍𝒌 𝒕𝒐𝒘𝒂𝒓𝒅𝒔 𝑳𝒐𝒓𝒅 𝒔𝒉𝒊𝒗𝒂 𝒍𝒊𝒌𝒆 𝒂 𝒍𝒐𝒗𝒆𝒂𝒃𝒍𝒆 𝒂𝒏𝒅 𝒂 𝒄𝒉𝒂𝒓𝒎𝒊𝒏𝒈 𝒈𝒊𝒓𝒍 𝒉𝒂𝒗𝒊𝒏𝒈 𝒂 𝒃𝒆𝒂𝒖𝒕𝒊𝒇𝒖𝒍 𝒔𝒎𝒊𝒍𝒆 𝒊𝒏 𝒉𝒆𝒓 𝒇𝒂𝒄𝒆 𝒂𝒏𝒅 𝒉𝒐𝒍𝒅𝒊𝒏𝒈 𝒂 𝒈𝒂𝒓𝒍𝒂𝒏𝒅 𝒊𝒏 𝒉𝒆𝒓 𝒉𝒂𝒏𝒅 𝒘𝒂𝒔 𝒂 𝒅𝒊𝒗𝒊𝒏𝒆 𝒎𝒐𝒎𝒆𝒏𝒕 𝒇𝒐𝒓 𝒂𝒍𝒍 𝒕𝒉𝒆 𝒈𝒐𝒅𝒔 𝒊𝒏 𝒕𝒉𝒆 𝒘𝒐𝒓𝒍𝒅 𝒂𝒏𝒅 𝒕𝒉𝒆𝒚 𝒉𝒆𝒂𝒓𝒕𝒊𝒍𝒚 𝒑𝒓𝒂𝒊𝒔𝒆𝒅 𝒉𝒆𝒓 𝒉𝒂𝒔 ‘𝑺𝒗𝒂𝒚𝒂𝒎𝒗𝒂𝒓𝒂 𝑷𝒂𝒓𝒗𝒂𝒕𝒉𝒊 𝒂𝒏𝒅 𝒕𝒉𝒆𝒚 𝒃𝒐𝒘𝒆𝒅 𝒅𝒐𝒘𝒏 𝒕𝒐 𝒑𝒓𝒐𝒔𝒕𝒓𝒂𝒕𝒆 𝒕𝒐 𝒕𝒉𝒆 𝒅𝒊𝒗𝒊𝒏𝒆 𝒇𝒆𝒆𝒕 𝒐𝒇 𝒎𝒐𝒕𝒉𝒆𝒓 𝒈𝒐𝒅𝒅𝒆𝒔𝒔 𝑷𝒂𝒓𝒗𝒂𝒕𝒊.
 
𝘈𝘤𝘤𝘰𝘳𝘥𝘪𝘯𝘨 𝘵𝘰 𝘵𝘩𝘦 𝘔𝘢𝘳𝘬𝘢𝘯𝘥𝘦𝘺𝘢 𝘗𝘶𝘳𝘢𝘯𝘢, 𝘸𝘦 𝘤𝘢𝘯 𝘧𝘪𝘯𝘥 𝘵𝘩𝘦 𝘳𝘦𝘧𝘦𝘳𝘦𝘯𝘤𝘦 𝘵𝘰 𝘵𝘩𝘪𝘴 𝘧𝘰𝘳𝘮 𝘰𝘧 𝘎𝘰𝘥𝘥𝘦𝘴𝘴 𝘪𝘯 𝘋𝘶𝘳𝘨𝘢 𝘚𝘢𝘱𝘵𝘩𝘢𝘴𝘢𝘵𝘩𝘪. 𝘐𝘵 𝘪𝘴 𝘥𝘦𝘴𝘤𝘳𝘪𝘣𝘦𝘥 𝘵𝘩𝘢𝘵, 𝘎𝘰𝘥𝘥𝘦𝘴𝘴 𝘚𝘩𝘢𝘬𝘵𝘩𝘪 𝘵𝘢𝘬𝘦𝘴 𝘵𝘩𝘪𝘴 𝘢𝘵𝘵𝘳𝘢𝘤𝘵𝘪𝘷𝘦 𝘧𝘰𝘳𝘮 𝘵𝘰 𝘱𝘶𝘭𝘭 𝘵𝘩𝘦 𝘥𝘦𝘮𝘰𝘯𝘴 𝘵𝘰𝘸𝘢𝘳𝘥𝘴 𝘩𝘦𝘳 𝘣𝘦𝘢𝘶𝘵𝘪𝘧𝘶𝘭 𝘭𝘰𝘰𝘬𝘴 𝘢𝘯𝘥 𝘴𝘭𝘢𝘺 𝘵𝘩𝘦𝘮. 𝘚𝘪𝘮𝘪𝘭𝘢𝘳 𝘥𝘦𝘴𝘤𝘳𝘪𝘱𝘵𝘪𝘰𝘯 𝘰𝘧 𝘨𝘰𝘥𝘥𝘦𝘴𝘴 𝘵𝘢𝘬𝘪𝘯𝘨 𝘵𝘩𝘪𝘴 𝘢𝘵𝘵𝘳𝘢𝘤𝘵𝘪𝘷𝘦 𝘧𝘰𝘳𝘮 𝘰𝘧 𝘢 𝘣𝘦𝘢𝘶𝘵𝘪𝘧𝘶𝘭 𝘨𝘪𝘳𝘭 𝘵𝘰 𝘱𝘶𝘭𝘭 𝘵𝘩𝘦 𝘥𝘦𝘮𝘰𝘯𝘴, 𝘣𝘺 𝘮𝘢𝘬𝘪𝘯𝘨 𝘵𝘩𝘦𝘮 𝘧𝘢𝘭𝘭 𝘧𝘰𝘳 𝘩𝘦𝘳 𝘣𝘦𝘢𝘶𝘵𝘺 𝘢𝘯𝘥 𝘵𝘩𝘦𝘯 𝘬𝘪𝘭𝘭 𝘵𝘩𝘦𝘮 𝘪𝘴 𝘮𝘦𝘯𝘵𝘪𝘰𝘯𝘦𝘥 𝘪𝘯 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘴𝘤𝘳𝘪𝘱𝘵𝘶𝘳𝘦. 𝘚𝘩𝘦 𝘪𝘴 𝘰𝘯𝘦 𝘢𝘮𝘰𝘯𝘨 𝘵𝘩𝘦 𝘴𝘦𝘷𝘦𝘯 𝘮𝘰𝘵𝘩𝘦𝘳𝘴 𝘤𝘢𝘭𝘭𝘦𝘥 𝘢𝘴 𝘚𝘢𝘱𝘵𝘢 𝘔𝘢𝘵𝘳𝘪𝘬𝘢𝘴. 𝘈𝘴 𝘮𝘦𝘯𝘵𝘪𝘰𝘯𝘦𝘥 𝘪𝘯 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘵𝘦𝘹𝘵, 𝘒𝘢𝘶𝘮𝘢𝘳𝘪 𝘪𝘴 𝘰𝘯𝘦 𝘰𝘧 𝘵𝘩𝘦 𝘴𝘢𝘵𝘷𝘪𝘬 (𝘤𝘢𝘭𝘮) 𝘧𝘰𝘳𝘮𝘴 𝘰𝘧 𝘎𝘰𝘥𝘥𝘦𝘴𝘴 𝘋𝘶𝘳𝘨𝘢 𝘢𝘯𝘥 𝘪𝘴 𝘸𝘰𝘳𝘴𝘩𝘪𝘱𝘱𝘦𝘥 𝘰𝘯 𝘵𝘩𝘦 𝘧𝘰𝘶𝘳𝘵𝘩 𝘥𝘢𝘺 𝘰𝘧 𝘕𝘢𝘷𝘳𝘢𝘵𝘳𝘪.🌼
 

°°°°°°°°°°°°°°°°°°°°°°°°°°°°°°°°°°°°°°°°°°°°