Sri Mangaladevi Navarathri Festival 2022 – Day 5

Blissful Darshan

Mangaladevi Daily Darshan 30th September 2022

~^~

.«ଆ°`✼❀`ಪಂಚಮಿ °`ದಿನ ಅಂಬಿಕೆ`❀✼`°ଆ».

💚ଔ✼❀‸`Fifth day °`𝐀𝐌𝐁𝐈𝐊𝐄‸`❀✼ଔ💚

 
ಯಾ ಸಾ ಪದ್ಮಾಸನಸ್ಥಾ ವಿಪುಲಕಟತಟೀ ಪದ್ಮಪತ್ರಾಯತಾಕ್ಷೀ ಗಂಭೀರಾವರ್ತನಾಭಿಃ ಸ್ತನಭರನಮಿತಾ ಶುಭ್ರವಸ್ತ್ರೋತ್ತರೀಯಾ । ಲಕ್ಷ್ಮೀರ್ದಿವ್ಯೈರ್ಗಜೇಂದ್ರೈರ್ಮಣಿಗಣಖಚಿತೈಃ ಸ್ನಾಪಿತಾ ಹೇಮಕುಂಭೈಃ ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ ॥ 
ಓಂ ಹ್ರೀಂ ಶ್ರೀಂ ಅಂಬಿಕಾಯೈ ನಮಃ ಓಂ ॥🌺 
 
ಇಂದು ಆಶ್ವೀಜ ಮಾಸ ಶುಕ್ಲದ ಲಲಿತಾ ಪಂಚಮಿ.
ಅಖಿಲಾಂಡ ಕೋಟಿ ಬ್ರಹ್ಮಾಂಡಕ್ಕೆ ಮಾತೃ ಸ್ವರೂಪಿಣಿ ದೇವಲೋಕದ ಸಾಮ್ರಾಜ್ಞೆಯೂ ಆದ ಶ್ರೀ ಲಲಿತಾ ತ್ರಿಪುರ ಸುಂದರಿಯ ಆರಾಧನೆಯ ದಿನ. ಪ್ರಥಮವಾಗಿ ಶ್ರೀ ಕ್ಷೇತ್ರದ ವತಿಯಿಂದ ಆತ್ಮೀಯರೆಲ್ಲರಿಗೂ ಲಲಿತಾ ಪಂಚಮಿಯ ಹಾರ್ದಿಕ ಶುಭಾಶಯಗಳು👏🌹
 
_ಶರತ್ಋತು ಆಶ್ವಯುಜ ಶುಕ್ಲ ಪಕ್ಷದ ಶರನ್ನವರಾತ್ರಿಯ ಇಂದಿನ ಐದನೇಯ ದಿನವಾದ ಶುಕ್ರವಾರದ *ಲಲಿತಾ ಪಂಚಮಿಯ* ಪುಣ್ಯ ದಿನದಂದು ಸೃಷ್ಠಿಗೆ ಮಾತೃ ಸ್ವರೂಪಳಾದ ಅರಣ್ಯವಾಸಿನಿ ಅಂಬಿಕೆ ದೇವಿಯ ಅಲಂಕಾರದಲ್ಲಿ ಧನುರ್ಬಾಣ ಪಾಣಿಯಾಗಿ ಸಿಂಹಾರೂಢಳಾಗಿರುವ ಶ್ರೀ ಮಂಗಳಾದೇವಿ ಅಮ್ಮನವರು._
 
_ಅರಣ್ಯವಾಸಿನಿಯಾದ ವಿಷ್ಣು ಪತ್ನಿ ಅಂಬಿಕೆ ದೇವಿಯ ಅಲಂಕಾರದಲ್ಲಿ ಕಡು ಹಸಿರು ವರ್ಣದ ಸೀರೆಯನ್ನು ತೊಟ್ಟು ಸರ್ವಾಭರಣ ಭೂಷಿತೆಯಾಗಿ ಚತುರ್ಭುಜೆಯಾದ ದೇವಿಯು ಅಭಯ-ವರದ ಹಸ್ತಳಾಗಿ ವೀರೋತ್ಸಾಹದಿಂದ ತನ್ನ ಪಾರ್ಶ್ವ ಹಸ್ತದಲ್ಲಿ ಚಕ್ರವನ್ನು, ವಾಮ ಹಸ್ತದಲ್ಲಿ ಗದೆಯನ್ನು ಹಿಡಿದು ಧನಸ್ಸು ಬಾಣವನ್ನು ಧಾರಣೆ ಮಾಡಿಕೊಂಡ ವನದುರ್ಗೆ ಅಂಬಿಕೆ ಸಿಂಹ ವಾಹಿನಿಯಾಗಿ ರಜೋಸ್ವರೂಪಳಾಗಿ ಎಡ ಕಾಲಂದುಗೆಯ ಮೇಲೆ ತನ್ನ ಬಲ ಕಾಲ ಪಾದವನ್ನು ಚಾಚಿ ರಾಜ ಗಾಂಭೀರ್ಯದಿಂದ ಪಂಚಮ ನವರಾತ್ರಿಯಂದು ವಿಜೃಂಭಿಸುತ್ತಿರುವಳು._
 
_ಅಂಬಿಕೆ ಅಲಂಕಾರದ ವಿಶೇಷತೆಯೇ ಆಕೆಯ ವಿಶೇಷ ಕೇಶ ಕಿರೀಟಾಲಂಕಾರ. ಧೀಮಂತಿಕೆ, ಸಾಹಸ, ಕರ್ತೃತ್ವ, ನೇತೃತ್ವ ಶೌರ್ಯ ಪರಾಕ್ರಮಾದಿಗಳ ಸಂಕೇತದಂತೆ ರಾಜಸ ಕಲೆಯಿಂದ ಜಟಾಜೂಟಳಾಗಿ ಇಳಿಬಿಟ್ಟ ಕಲಾತ್ಮಕ ಪುಷ್ಪ ಕಿರೀಟದ ಕೇಶಾಲಂಕಾರದಲ್ಲಿ ಕೆಂಪು ಗುಲಾಬಿ ಬಣ್ಣದ ಶಲ್ಯವಸ್ತ್ರದಿಂದ ಕಂಗೊಳಿಸುತ್ತಿರುವ ನೀಲ ಕೇಶರಾಶಿಯಿಂದ ಸ್ವಲ್ಪ ಬಲಕ್ಕೆ ಬಾಗಿದಂತೆ ಅರ್ಧ ಚಂದ್ರಾಕೃತಿಯಲ್ಲಿ ಹೆಣೆದು ಕಟ್ಟಿರುವ ಶಿಖೆ. ಅದಕ್ಕೆ ಪೋಣಿಸಿರುವ ಸ್ವರ್ಣಹಾರ. ಶಿಖೆಯಲ್ಲಿ ಪ್ರಕಾಶಿಸುತ್ತಿರುವ ಪಿಂಛ. ಕಲಾತ್ಮಕ ಆಭರಣಗಳು._
 
_ಕಂಠ – ವಕ್ಷಸ್ಥಳಗಳಲ್ಲಿ ಸರ್ವಾಭರಣ ಪುಷ್ಪಮಾಲೆಗಳು, ತುಳಸಿ ಕುಸುಮ ಹಾರವು ರಾರಾಜಿಸುತ್ತಿವೆ. ಸದಾ ಮಂದಸ್ಮಿತಾಳಗಿ ನಗು ಮೊಗದೊಂದಿಗೆ ಕುಂಕುಮ ಕೆಂಪು ವರ್ಣದ ಪೀತಾಂಬರವನ್ನು ಉತ್ತರೀಯವನ್ನಾಗಿ ವ್ಯಾಪಿಸಿಕೊಂಡಿರುವಳು._
 
_ಚತುರ್ಭಾಹುಗಳಿಂದ ಸುಶೋಭಿತಳಾಗಿ ಸಕಲ ವಸ್ತ್ರಾಭರಣ ಭೂಷಿತೆಯಾಗಿ ಮೈದೋರಿದ ಮಹಾಮಾತೆ ರಜೋಸ್ವರೂಪದಲ್ಲಿ ವ್ಯಕ್ತಳಾಗಿರುವಳು. ‘ವನದುರ್ಗೆ’ ಎಂದೇ ಕರೆಯಲ್ಪಡುವ ಅಂಬಿಕೆಯು ವನದಲ್ಲಿ ನೆಲೆಸಿರುವ ಕಾರಣ, ವನದ ಸಂಕೇತವಾಗಿ ಅರಣ್ಯವನ್ನೇ ವ್ಯಾಪಿಸಿರುವಂತೆ, ಮಾವಿನೆಲೆಯ ತೋರಣದ ತಳಿರೆಲೆಗಳಿಂದ ಶೃಂಗಾರಾಲಂಕೃತ ಗರ್ಭಗೃಹದಲ್ಲಿ ಧೀಮಂತಿಕೆಯಿಂದ ಮೆರೆಯಲ್ಪಡುವ ಸಾಕ್ಷಾತ್ ಅಂಬಿಕೆಯಾಗಿ ಶೋಭಿಸಲ್ಪಡುತ್ತಿರುವಳು. _
 
_ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರದ ೨೩’ನೇ ಶ್ಲೋಕದಲ್ಲಿ ‘ಮಹಾಪದ್ಮಾಟವೀ ಸಂಸ್ಥಾ ಕದಂಬವನವಾಸಿನಿ’ಎಂದು ಉಲ್ಲೇಖಿತವಾಗಿದ್ದು ಶ್ಲೋಕದ ಪ್ರಕಾರ ‘ಕದಂಬ’ ಎನ್ನುವ ವನವು ದೇವಿಗೆ ಬಹು ಪ್ರಿಯವಾದ್ದರಿಂದ ಆಕೆಗೆ ‘ಕದಂಬ ವನವಾಸಿನಿ’_ _’ಕದಂಬ ವನಚಾರಿಣಿ’ಎಂಬ ನಾಮವೂ ಇದೆ. ‘ಅಮ್ಮ’ಎಂಬ ಪದಕ್ಕೆ ಸಂವಾದಿ ಯಾಗಿರುವ ಸಂಸ್ಕೃತದ ಶಬ್ದ ‘ಅಂಬೆ’ ಯಿಂದ ‘ಅಂಬಿಕೆ’ ಪದವು ವ್ಯುತ್ಪತ್ತಿ ಹೊಂದಿದ್ದುಅರ್ಥಾತ್ ಆಶ್ರಯಣೀಯಳಾದ ವರಣೀಯಳಾದ ಸರ್ವಸ್ವವನ್ನೂ ಕರುಣಿಸಿ ಸಲಹುವ ತಾಯಿ ಎಂದರ್ಥ. ಭಕ್ತ ಪರಾಧೀನಳಾದ ಅಂಬಿಕೆಯು ಭಕ್ತರ ಅನಂತ ದೋಷಗಳನ್ನು ಸಹಿಸಿ ತಿದ್ದಿ ಕೈ ಬಿಡದೆ ಜೀವನದಲ್ಲಿ ಮುನ್ನಡೆಸುತ್ತಾಳೆ.👏_
 
_‘ಲೋಕಾನತೀತ್ಯ ಲಂತೆ ಲಲಿತಾತೇನ ಕಥ್ಯತೆ’ ಎಂದರೆ ಸಕಲ ಲೋಕಗಳನ್ನು ಮೀರಿ ಉಲ್ಲಾಸಿತ ಲೀಲಾ ವಿನೋದದಿಂದ ಇರುವವಳು ಶ್ರೀ ಲಲಿತಾ ತ್ರಿಪುರ ಸುಂದರಿ._
 
_’ಅಮ್ಮಾ’ಎಂದು ನೊಂದು ಬರುವ ಭಕ್ತರಿಗೆ ತಾಯಿಯ ರೂಪದಲ್ಲಿ ಸಲಹಿ ಅಭಯವನ್ನು ನೀಡಿ ಸಂಕಷ್ಟವನ್ನೆಲ್ಲಾ ನಿವೃತ್ತಿಗೊಳಿಸಿ ಪೂರ್ಣಾನುಗ್ರಹವನ್ನು ಕರುಣಿಸುತ್ತಾಳೆ. ರಕ್ಷಿಸು ಎಂಬ ಪ್ರಾರ್ಥನೆಯ ಉದ್ಗಾರ ಮಾತ್ರದಿಂದಲೇ ಪ್ರಸನ್ನಳಾಗಿ ಅನುಗ್ರಹಿಪ ಮಾತೃ ಹೃದಯಿ ಮಂಗಳಾಂಬಿಕೆಯ ಕೃಪಾವಲೋಕನದಿಂದ ಅದೆಷ್ಟೋ ಭಕ್ತಾದಿಗಳು ದೇವಿಯನ್ನು ನಂಬಿ ತಮ್ಮ ಅಭೀಷ್ಟೆ ನೆರವೇರಿಸಿಕೊಳ್ಳುತ್ತಿದ್ದಾರೆ. ಅಪ್ಯಾಯತೆ ಅಂತಃಕರಣದ ವಾತ್ಸಲ್ಯದಿಂದ ಲೋಕವನ್ನೇ ಪೊರೆಯುವ ಜಗದಂಬಿಕೆ ದುರ್ಗೆಯ ಕಲ್ಪೋಕ್ತದ ಪಂಚಮ ಸ್ವರೂವೇ ‘ಅಂಬಿಕೆ’ಯಾಗಿದ್ದು ನವರಾತ್ರಿಯ ಪಂಚಮ ದಿನದಂದು ಮಾತೆ ಪೂಜಾರ್ಹಳಾಗುವಳು._
 
_ಶುಭಪ್ರದಾಯಿನಿ ಅಂಬಿಕೆಯು *ಕಲ್ಪೋಕ್ತದಲ್ಲಿ ಬರುವ ವಾಂಛೆ ಅಪೇಕ್ಷೆ, ಅಭಿಲಾಶೆ, ಅಭೀಪ್ಸೆ, ಆಮಿಷ, ಆಶಯ, ಆಕಾಂಕ್ಷೆ ಇಚ್ಛೆ, ಈಪ್ಸೆ, ಕಾಮನೆ, ಮನೋರಥ, ಲಾಲಸೆ, ಲಿಪ, ಇಂಗಿತ’ಗಳೆಂಬ ಹದಿಮೂರು ಬಗೆಯ ಇಚ್ಛೆಗಳನ್ನು* ಅನುಗ್ರಹಿಸುವ ಮಾತೃ ಸ್ವರೂಪವಾಗಿದೆ._
 
                               ⊹❊ ❊ ⊹

~^~

💚ଔ✼❀‸`Fifth day °`𝐀𝐌𝐁𝐈𝐊𝐄‸`❀✼ଔ💚

.«ଆ°`✼❀`ಪಂಚಮಿ °`ದಿನ ಅಂಬಿಕೆ`❀✼`°ଆ».

 
𝙾𝚗 𝚝𝚑𝚎 𝚘𝚌𝚌𝚊𝚜𝚒𝚘𝚗 𝚘𝚏 𝚝𝚑𝚎 𝙵𝚒𝚏𝚝𝚑 𝚍𝚊𝚢 𝚘𝚏 𝚂𝚑𝚊𝚛𝚊𝚗 𝙽𝚊𝚟𝚊𝚛𝚊𝚝𝚛𝚒 𝚌𝚎𝚕𝚎𝚋𝚛𝚊𝚝𝚒𝚘𝚗𝚜, 𝚘𝚞𝚛 𝙼𝚘𝚝𝚑𝚎𝚛 𝙶𝚘𝚍𝚍𝚎𝚜𝚜 𝚑𝚊𝚜 𝚊𝚍𝚘𝚛𝚗𝚎𝚍 𝚝𝚑𝚎 𝚊𝚕𝚝𝚊𝚛 𝚘𝚏 𝐆𝐨𝐝𝐝𝐞𝐬𝐬 𝐀𝐦𝐛𝐢𝐤𝐚. 𝙶𝚘𝚍𝚍𝚎𝚜𝚜 𝙼𝚊𝚗𝚐𝚊𝚕𝚊𝚍𝚎𝚟𝚒 𝚑𝚊𝚜 𝚝𝚊𝚔𝚎𝚗 𝚝𝚑𝚎 𝚊𝚕𝚝𝚊𝚛 𝚘𝚏 𝙰𝚖𝚋𝚒𝚔𝚊 𝙳𝚎𝚟𝚒, 𝚠𝚑𝚘 𝚍𝚠𝚎𝚕𝚕𝚜 𝚒𝚗 𝚝𝚑𝚎 𝙵𝚘𝚛𝚎𝚜𝚝 𝚊𝚛𝚎𝚊 𝚊𝚗𝚍 𝚒𝚜 𝚝𝚑𝚎 𝚠𝚒𝚏𝚎 𝚘𝚏 𝙻𝚘𝚛𝚍 𝚅𝚒𝚜𝚑𝚗𝚞.
 
Today, Friday 𝐃𝐞𝐝𝐢𝐜𝐚𝐭𝐞𝐝 𝐭𝐨 𝐆𝐨𝐝𝐝𝐞𝐬𝐬 𝐋𝐚𝐥𝐢𝐭𝐚 𝐃𝐞𝐯𝐢, 𝐋𝐚𝐥𝐢𝐭𝐚 𝐏𝐚𝐧𝐜𝐡𝐚𝐦𝐢 𝐟𝐚𝐥𝐥𝐬 𝐨𝐧 𝐭𝐡𝐞 𝐟𝐢𝐟𝐭𝐡 𝐝𝐚𝐲 𝐨𝐟 𝐭𝐡𝐞 ‘𝐒𝐡𝐮𝐤𝐥𝐚 𝐏𝐚𝐤𝐬𝐡𝐚’ 𝐝𝐮𝐫𝐢𝐧𝐠 𝐭𝐡𝐞 𝐦𝐨𝐧𝐭𝐡 𝐨𝐟 ‘𝐀𝐬𝐡𝐰𝐢𝐣𝐚.’ 
𝐆𝐨𝐝𝐝𝐞𝐬𝐬 𝐋𝐚𝐥𝐢𝐭𝐚 𝐓𝐫𝐢𝐩𝐮𝐫𝐚 𝐒𝐮𝐧𝐝𝐚𝐫𝐢 𝐢𝐬 𝐚𝐧 𝐢𝐧𝐜𝐚𝐫𝐧𝐚𝐭𝐢𝐨𝐧 𝐨𝐟 𝐆𝐨𝐝𝐝𝐞𝐬𝐬 𝐃𝐮𝐫𝐠𝐚. 𝐋𝐚𝐥𝐢𝐭𝐚 𝐏𝐚𝐧𝐜𝐡𝐚𝐦𝐢 𝐢𝐬 𝐜𝐞𝐥𝐞𝐛𝐫𝐚𝐭𝐞𝐝 𝐨𝐧 𝐭𝐡𝐞 𝐟𝐢𝐟𝐭𝐡 𝐝𝐚𝐲 𝐨𝐟 𝐭𝐡𝐞 𝐍𝐚𝐯𝐫𝐚𝐭𝐫𝐢 𝐟𝐞𝐬𝐭𝐢𝐯𝐚𝐥. 𝐖𝐨𝐫𝐬𝐡𝐢𝐩𝐢𝐧𝐠 𝐭𝐡𝐞 𝐆𝐨𝐝𝐝𝐞𝐬𝐬 𝐨𝐧 𝐋𝐚𝐥𝐢𝐭𝐚 𝐏𝐚𝐧𝐜𝐡𝐚𝐦𝐢 𝐛𝐫𝐢𝐧𝐠𝐬 𝐡𝐚𝐩𝐩𝐢𝐧𝐞𝐬𝐬, 𝐰𝐢𝐬𝐝𝐨𝐦, 𝐚𝐧𝐝 𝐰𝐞𝐚𝐥𝐭𝐡. 
 
𝘚𝘩𝘦 𝘩𝘢𝘴 𝘣𝘦𝘦𝘯 𝘰𝘧𝘧𝘦𝘳𝘦𝘥 𝘢 𝘥𝘢𝘳𝘬 𝘎𝘳𝘦𝘦𝘯 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘢𝘯𝘥 𝘪𝘴 𝘸𝘦𝘢𝘳𝘪𝘯𝘨 𝘷𝘢𝘳𝘪𝘰𝘶𝘴 𝘬𝘪𝘯𝘥𝘴 𝘰𝘧 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘴𝘵𝘶𝘥𝘥𝘦𝘥 𝘸𝘪𝘵𝘩 𝘱𝘳𝘦𝘤𝘪𝘰𝘶𝘴 𝘴𝘵𝘰𝘯𝘦𝘴, 𝘮𝘢𝘵𝘤𝘩𝘪𝘯𝘨 𝘵𝘰 𝘵𝘩𝘦 𝘤𝘰𝘭𝘰𝘶𝘳 𝘰𝘧 𝘩𝘦𝘳 𝘴𝘢𝘳𝘦𝘦. 𝘐𝘯 𝘩𝘦𝘳 𝘧𝘰𝘶𝘳 𝘢𝘳𝘮𝘴, 𝘎𝘰𝘥𝘥𝘦𝘴𝘴 𝘤𝘢𝘯 𝘣𝘦 𝘴𝘦𝘦𝘯 𝘤𝘢𝘳𝘳𝘺𝘪𝘯𝘨 𝘢 𝘮𝘢𝘤𝘦 𝘪𝘯 𝘩𝘦𝘳 𝘳𝘪𝘨𝘩𝘵 𝘢𝘳𝘮𝘴 𝘸𝘩𝘪𝘭𝘦 𝘤𝘢𝘳𝘳𝘺𝘪𝘯𝘨 𝘢 𝘣𝘰𝘸 𝘢𝘯𝘥 𝘢𝘳𝘳𝘰𝘸 𝘪𝘯 𝘩𝘦𝘳 𝘭𝘦𝘧𝘵 𝘢𝘳𝘮. 𝘊𝘢𝘳𝘳𝘺𝘪𝘯𝘨 𝘢 𝘵𝘳𝘪𝘥𝘦𝘯𝘵 𝘢𝘯𝘥 𝘬𝘦𝘦𝘱𝘪𝘯𝘨 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢, 𝘴𝘩𝘦 𝘤𝘢𝘯 𝘣𝘦 𝘴𝘦𝘦𝘯 𝘩𝘰𝘭𝘥𝘪𝘯𝘨 𝘢 𝘴𝘸𝘰𝘳𝘥 𝘪𝘯 𝘩𝘦𝘳 𝘩𝘪𝘱 𝘢𝘯𝘥 𝘪𝘴 𝘳𝘪𝘥𝘪𝘯𝘨 𝘰𝘯 𝘢 𝘓𝘪𝘰𝘯.
 
𝚂𝚑𝚎 𝚌𝚊𝚗 𝚋𝚎 𝚜𝚎𝚎𝚗 𝚒𝚗 𝚊 𝙼𝚊𝚝𝚝𝚎𝚍 𝙷𝚊𝚒𝚛 ( 𝙹𝚊𝚝𝚊 𝙹𝚑𝚘𝚘𝚝) 𝚠𝚑𝚒𝚌𝚑 𝚒𝚜 𝚜𝚕𝚒𝚐𝚑𝚝𝚕𝚢 𝚝𝚒𝚝𝚕𝚎𝚍 𝚝𝚘𝚠𝚊𝚛𝚍𝚜 𝚝𝚑𝚎 𝚕𝚎𝚏𝚝 𝚊𝚗𝚍 𝚑𝚎𝚛 𝚜𝚑𝚒𝚔𝚑𝚊 (𝚝𝚞𝚏𝚝) 𝚜𝚎𝚎𝚖𝚜 𝚕𝚒𝚔𝚎 𝚝𝚑𝚊𝚝 𝚘𝚏 𝚊 𝚑𝚊𝚕𝚏 𝚖𝚘𝚘𝚗 𝚋𝚎𝚊𝚞𝚝𝚒𝚏𝚞𝚕 𝚝𝚒𝚎𝚍 𝚞𝚜𝚒𝚗𝚐 𝚊 𝚜𝚊𝚜𝚑 𝚌𝚕𝚘𝚝𝚑 (𝚂𝚑𝚊𝚕𝚢𝚊 𝚟𝚊𝚜𝚝𝚛𝚊). 
 
𝚂𝚑𝚎 𝚑𝚊𝚜 𝚋𝚎𝚎𝚗 𝚘𝚏𝚏𝚎𝚛𝚎𝚍 𝚊 𝚌𝚛𝚘𝚠𝚗 𝚖𝚊𝚍𝚎 𝚘𝚏 𝚟𝚊𝚛𝚒𝚘𝚞𝚜 𝚍𝚒𝚏𝚏𝚎𝚛𝚎𝚗𝚝 𝚏𝚛𝚊𝚐𝚛𝚊𝚗𝚝 𝚏𝚕𝚘𝚠𝚎𝚛𝚜 𝚊𝚗𝚍 𝚝𝚑𝚎 𝚐𝚊𝚛𝚕𝚊𝚗𝚍𝚜 𝚊𝚕𝚘𝚗𝚐 𝚠𝚒𝚝𝚑 𝚝𝚑𝚎 𝚐𝚘𝚕𝚍𝚎𝚗 𝚘𝚛𝚗𝚊𝚖𝚎𝚗𝚝𝚜 𝚠𝚘𝚛𝚗 𝚋𝚢 𝚑𝚎𝚛 𝚊𝚛𝚎 𝚐𝚕𝚒𝚝𝚝𝚎𝚛𝚒𝚗𝚐 𝚋𝚎𝚊𝚞𝚝𝚒𝚏𝚞𝚕𝚕𝚢 𝚒𝚗 𝚑𝚎𝚛 𝚌𝚑𝚎𝚜𝚝. 𝚃𝚑𝚒𝚜 𝚋𝚎𝚊𝚞𝚝𝚒𝚏𝚞𝚕 𝚏𝚘𝚛𝚖 𝚘𝚏 𝙶𝚘𝚍𝚍𝚎𝚜𝚜 𝙰𝚖𝚋𝚒𝚔𝚊 𝚋𝚛𝚒𝚗𝚐𝚜 𝚘𝚞𝚝 𝚝𝚑𝚎 𝚗𝚊𝚝𝚞𝚛𝚎 𝚘𝚏 𝙸𝚗𝚗𝚘𝚟𝚊𝚝𝚒𝚟𝚎𝚗𝚎𝚜𝚜, 𝙻𝚎𝚊𝚍𝚎𝚛𝚜𝚑𝚒𝚙, 𝙱𝚛𝚊𝚟𝚎 𝚊𝚗𝚍 𝙲𝚘𝚞𝚛𝚊𝚐𝚎𝚘𝚞𝚜 𝚀𝚞𝚊𝚕𝚒𝚝𝚒𝚎𝚜 𝚙𝚛𝚎𝚜𝚎𝚗𝚝 𝚒𝚗 𝚑𝚎𝚛.👏
 
𝘚𝘩𝘦 𝘪𝘴 𝘢𝘭𝘴𝘰 𝘤𝘢𝘭𝘭𝘦𝘥 𝘢𝘴 ‘𝐕𝐚𝐧𝐚 𝐃𝐮𝐫𝐠𝐚’ 𝘢𝘯𝘥 𝘩𝘢𝘱𝘱𝘪𝘭𝘺 𝘥𝘸𝘦𝘭𝘭𝘴 𝘪𝘯 𝘵𝘩𝘦 𝘧𝘰𝘳𝘦𝘴𝘵 𝘢𝘳𝘦𝘢𝘴. 𝘛𝘰 𝘳𝘦𝘤𝘳𝘦𝘢𝘵𝘦 𝘵𝘩𝘪𝘴 𝘢𝘵𝘮𝘰𝘴𝘱𝘩𝘦𝘳𝘦 𝘰𝘧 𝘧𝘰𝘳𝘦𝘴𝘵 𝘵𝘰 𝘵𝘩𝘦 𝘨𝘰𝘥𝘥𝘦𝘴𝘴, 𝘵𝘩𝘦 𝘸𝘩𝘰𝘭𝘦 𝘪𝘯𝘯𝘦𝘳 𝘴𝘢𝘯𝘤𝘵𝘶𝘮 𝘴𝘢𝘯𝘵𝘰𝘳𝘶𝘮 𝘰𝘧 𝘵𝘩𝘦 𝘵𝘦𝘮𝘱𝘭𝘦 𝘪𝘴 𝘣𝘦𝘢𝘶𝘵𝘪𝘧𝘶𝘭 𝘥𝘦𝘤𝘰𝘳𝘢𝘵𝘦𝘥 𝘸𝘪𝘵𝘩 𝘵𝘩𝘦 𝘓𝘶𝘴𝘩 𝘨𝘳𝘦𝘦𝘯 𝘭𝘦𝘢𝘷𝘦𝘴 𝘰𝘧 𝘵𝘩𝘦 𝘔𝘢𝘯𝘨𝘰 𝘛𝘳𝘦𝘦 𝘵𝘪𝘦𝘥 𝘪𝘯 𝘢 𝘧𝘦𝘴𝘵𝘰𝘰𝘯 𝘧𝘢𝘴𝘩𝘪𝘰𝘯, 𝘵𝘩𝘪𝘴 𝘪𝘴 𝘢𝘭𝘴𝘰 𝘤𝘢𝘭𝘭𝘦𝘥 𝘢𝘴 ‘𝘛𝘰𝘳𝘢𝘯𝘢’ 𝘪𝘯 𝘵𝘩𝘦 𝘭𝘰𝘤𝘢𝘭 𝘭𝘢𝘯𝘨𝘶𝘢𝘨𝘦.
 
𝖳𝗁𝖾 𝖾𝗇𝗍𝗂𝗋𝖾 𝗎𝗇𝗂𝗏𝖾𝗋𝗌𝖾 𝗂𝗌 𝗉𝗋𝖾𝗌𝖾𝗇𝗍 𝗂𝗇 𝗁𝖾𝗋 𝗐𝗈𝗆𝖻 𝖺𝗇𝖽 𝗌𝗁𝖾 𝗇𝗎𝗍𝗎𝗋𝖾𝗌 𝖺𝗅𝗅 𝗈𝖿 𝗎𝗌 𝗐𝗂𝗍𝗁 𝗁𝖾𝗋 𝗆𝗈𝗍𝗁𝖾𝗋𝗅𝗒 𝗅𝗈𝗏𝖾. We 𝗌𝖺𝗅𝗎𝗍𝖺𝗍𝗂𝗈𝗇𝗌 𝗍𝗈 𝗍𝗁𝖾 𝖽𝗂𝗏𝗂𝗇𝖾 𝗆𝗈𝗍𝗁𝖾𝗋 𝗐𝗁𝗈 𝗂𝗌 𝗈𝖿 𝗍𝗁𝖾 𝖿𝗈𝗋𝗆 𝖲𝗋𝗂-𝗌𝗍𝗋𝖾𝖾-𝗉𝗋𝖺𝗄𝗋𝗂𝗍𝗂. 𝘚𝘳𝘪 𝘔𝘢𝘩𝘢𝘳𝘢𝘫𝘯𝘢𝘪 𝘖𝘯𝘦 𝘸𝘩𝘰 𝘪𝘴 𝘵𝘩𝘦 𝘤𝘰𝘯𝘴𝘰𝘳𝘵 𝘢𝘯𝘥 𝘵𝘩𝘦 𝘤𝘳𝘰𝘸𝘯𝘦𝘥 𝘲𝘶𝘦𝘦𝘯 𝘰𝘧 𝘓𝘰𝘳𝘥 𝘚𝘩𝘪𝘷𝘢. 𝘛𝘩𝘦 𝘰𝘯𝘦 𝘸𝘩𝘰 𝘢𝘥𝘮𝘪𝘯𝘪𝘴𝘵𝘦𝘳𝘴 𝘢𝘯𝘥 𝘱𝘳𝘰𝘵𝘦𝘤𝘵𝘴 𝘵𝘩𝘦 𝘸𝘩𝘰 𝘶𝘯𝘪𝘷𝘦𝘳𝘴𝘦 𝘮𝘺 𝘴𝘢𝘭𝘶𝘵𝘢𝘵𝘪𝘰𝘯𝘴 𝘵𝘰 𝖽𝗂𝗏𝗂𝗇𝖾 𝗆𝗈𝗍𝗁𝖾𝗋.
 
𝖮𝗎𝗍 𝗈𝖿 𝗍𝗁𝖾 1000 𝖽𝗂𝖿𝖿𝖾𝗋𝖾𝗇𝗍 𝗇𝖺𝗆𝖾𝗌 𝗉𝗋𝖺𝗂𝗌𝖾𝖽 𝗂𝗇 𝗍𝗁𝖾 𝖫𝖺𝗅𝗂𝗍𝗁𝖺 𝖲𝖺𝗁𝖺𝗌𝗋𝖺𝗇𝖺𝗆𝖺𝗆, 𝗍𝗁𝖾 23𝗋𝖽 𝖲𝗁𝗅𝗈𝗄𝖺 𝖽𝖾𝗌𝖼𝗋𝗂𝖻𝖾𝗌 𝗁𝖾𝗋 𝖺𝗌 ‘𝐌𝐚𝐡𝐚 𝐏𝐚𝐝𝐦𝐚𝐭𝐚𝐯𝐢 𝐬𝐚𝐦𝐬𝐭𝐡𝐚 𝐊𝐚𝐝𝐚𝐦𝐛𝐚 𝐕𝐚𝐧𝐚𝐯𝐚𝐬𝐢𝐧𝐢’. 𝖳𝗁𝖾 𝖿𝗈𝗋𝖾𝗌𝗍 𝗇𝖺𝗆𝖾𝖽 𝖪𝖺𝖽𝖺𝗆𝖻𝖺 𝗂𝗌 𝗏𝖾𝗋𝗒 𝖽𝖾𝖺𝗋 𝗍𝗈 𝗁𝖾𝗋 𝗍𝗁𝗂𝗌 𝗀𝗂𝗏𝗂𝗇𝗀 𝗁𝖾𝗋 𝗇𝖺𝗆𝖾𝗌 𝗅𝗂𝗄𝖾 ‘𝖪𝖺𝖽𝖺𝗆𝖻𝖺 𝖵𝖺𝗇𝖺 𝖵𝖺𝗌𝗂𝗇𝗂’, ‘ 𝖪𝖺𝖽𝖺𝗆𝖻𝖺 𝖵𝖺𝗇𝖺 𝖠𝖼𝗁𝖺𝗋𝗂𝗇𝗂’ 𝖾𝗍𝖼.
 
𝖳𝗁𝖾 𝗐𝗈𝗋𝖽 ‘𝖠𝗆𝖻𝗂𝗄𝖾’ 𝗈𝗋 ‘𝖠𝗆𝖻𝗂𝗄𝖺’ 𝗈𝗋𝗂𝗀𝗂𝗇𝖺𝗍𝖾𝖽 𝖿𝗋𝗈𝗆 𝗍𝗁𝖾 𝖲𝖺𝗇𝗌𝗄𝗋𝗂𝗍 𝗐𝗈𝗋𝖽 ‘𝑨𝒎𝒃𝒂 𝒐𝒓 𝑨𝒎𝒃𝒆’ 𝗐𝗁𝗂𝖼𝗁 𝗆𝖾𝖺𝗇𝗌 ‘𝖠𝗆𝗆𝖺’ 𝗂𝗇 𝗄𝖺𝗇𝗇𝖺𝖽𝖺. 𝖳𝗁𝗎𝗌 𝗍𝗁𝖾 𝗀𝗈𝖽𝖽𝖾𝗌𝗌, 𝗐𝗁𝗈 𝖽𝗐𝖾𝗅𝗅𝗌 𝗁𝖺𝗉𝗉𝗂𝗅𝗒 𝗂𝗇 𝗍𝗁𝖾 𝗍𝗁𝗂𝖼𝗄 𝖺𝗇𝖽 𝗅𝗎𝗌𝗁 𝗀𝗋𝖾𝖾𝗇 𝖿𝗈𝗋𝖾𝗌𝗍 𝖺𝗋𝖾𝖺𝗌 𝗂𝗌 𝖺𝗅𝗌𝗈 𝗈𝖿 𝖬𝗈𝗍𝗁𝖾𝗋𝗅𝗒 𝗇𝖺𝗍𝗎𝗋𝖾 𝖺𝗇𝖽 𝖿𝗈𝗋𝗀𝗈𝖾𝗌 𝖺𝗅𝗅 𝗍𝗁𝖾 𝗌𝗂𝗇𝗌 𝖼𝗈𝗆𝗆𝗂𝗍𝗍𝖾𝖽 𝖻𝗒 𝗎𝗌 𝗐𝗁𝗂𝗅𝖾 𝗍𝗋𝗒𝗂𝗇𝗀 𝗍𝗈 𝗋𝖾𝖼𝗍𝗂𝖿𝗒 𝗂𝗍 𝖺𝗇𝖽 𝖼𝖺𝗋𝗋𝗂𝖾𝗌 𝗎𝗌 𝖿𝗈𝗋𝗐𝖺𝗋𝖽 𝖻𝗒 𝗁𝗈𝗅𝖽𝗂𝗇𝗀 𝗈𝗎𝗋 𝗁𝖺𝗇𝖽𝗌 𝗂𝗇 𝗍𝗁𝖾 𝗋𝗂𝗀𝗁𝗍 𝖽𝗂𝗋𝖾𝖼𝗍𝗂𝗈𝗇.
 
𝑻𝒉𝒆 𝑮𝒐𝒅𝒅𝒆𝒔𝒔 𝒈𝒆𝒕𝒔 𝒄𝒉𝒆𝒆𝒓𝒇𝒖𝒍 𝒂𝒏𝒅 𝒑𝒍𝒆𝒂𝒔𝒆𝒅 𝒘𝒉𝒆𝒏 𝒉𝒆𝒓 𝒅𝒆𝒗𝒐𝒕𝒆𝒆𝒔 𝒑𝒓𝒂𝒚 𝒕𝒐 𝒉𝒆𝒓 𝒘𝒊𝒕𝒉 𝒍𝒐𝒗𝒆 𝒂𝒏𝒅 𝒅𝒆𝒗𝒐𝒕𝒊𝒐𝒏 𝒂𝒏𝒅 𝑬𝒙𝒄𝒍𝒂𝒊𝒎 𝒕𝒐 𝒔𝒂𝒗𝒆 𝒂𝒏𝒅 𝒔𝒂𝒇𝒆𝒈𝒖𝒂𝒓𝒅 𝒕𝒉𝒆𝒎 𝒇𝒓𝒐𝒎 𝒕𝒉𝒊𝒔 𝒐𝒄𝒆𝒂𝒏 𝒐𝒇 𝒎𝒂𝒕𝒆𝒓𝒊𝒂𝒍 𝒆𝒙𝒊𝒔𝒕𝒆𝒏𝒄𝒆. 𝑫𝒆𝒗𝒐𝒕𝒆𝒆𝒔 𝒐𝒇 𝒈𝒐𝒅𝒅𝒆𝒔𝒔 𝑴𝒂𝒏𝒈𝒂𝒍𝒂𝒅𝒆𝒗𝒊, 𝒉𝒂𝒗𝒊𝒏𝒈 𝒄𝒐𝒎𝒑𝒍𝒆𝒕𝒆 𝒇𝒂𝒊𝒕𝒉 𝒂𝒏𝒅 𝒆𝒏𝒕𝒓𝒖𝒔𝒕 𝒊𝒏 𝒉𝒆𝒓 𝒇𝒖𝒍𝒍𝒚, 𝒄𝒐𝒎𝒆 𝒕𝒐 𝒉𝒆𝒓 𝒂𝒃𝒐𝒅𝒆 𝒕𝒐 𝒔𝒆𝒆𝒌 𝒉𝒆𝒓 𝒃𝒍𝒆𝒔𝒔𝒊𝒏𝒈𝒔 𝒕𝒐 𝒇𝒖𝒍𝒇𝒊𝒍𝒍 𝒂𝒍𝒍 𝒕𝒉𝒆𝒊𝒓 𝒘𝒊𝒔𝒉 𝒂𝒏𝒅 𝒅𝒆𝒔𝒊𝒓𝒆𝒔.
 
 𝑲𝒏𝒐𝒘𝒊𝒏𝒈 𝒘𝒉𝒂𝒕 𝒊𝒔 𝒓𝒊𝒈𝒉𝒕 𝒂𝒏𝒅 𝒈𝒐𝒐𝒅 𝒕𝒐 𝒉𝒆𝒓 𝒅𝒆𝒗𝒐𝒕𝒆𝒆𝒔 𝒂𝒏𝒅 𝒘𝒊𝒕𝒉 𝒂𝒇𝒇𝒆𝒄𝒕𝒊𝒐𝒏 𝒐𝒇 𝒂 𝒎𝒐𝒕𝒉𝒆𝒓, 𝒈𝒐𝒅𝒅𝒆𝒔𝒔 𝑴𝒂𝒏𝒈𝒂𝒍𝒂𝒅𝒆𝒗𝒊 𝒇𝒖𝒍𝒇𝒊𝒍𝒍𝒔 𝒂𝒍𝒍 𝒕𝒉𝒆 𝒅𝒆𝒔𝒊𝒓𝒆𝒔 𝒐𝒇 𝒉𝒆𝒓 𝑫𝒆𝒗𝒐𝒕𝒆𝒆𝒔. 𝑺𝒉𝒆 𝒊𝒔 𝒘𝒐𝒓𝒔𝒉𝒊𝒑𝒑𝒆𝒅 𝒐𝒏 𝒕𝒉𝒊𝒔 𝑭𝒊𝒇𝒕𝒉 𝒅𝒂𝒚 𝒐𝒇 𝑵𝒂𝒗𝒓𝒂𝒕𝒓𝒊 𝒂𝒔 ‘𝑨𝒎𝒃𝒊𝒌𝒂’ 𝒘𝒉𝒐 𝒑𝒐𝒔𝒔𝒆𝒔𝒔 𝒕𝒉𝒆 13 𝑸𝒖𝒂𝒍𝒊𝒕𝒊𝒆𝒔 𝒐𝒇 𝒇𝒖𝒍𝒇𝒊𝒍𝒍𝒊𝒏𝒈 𝒐𝒏𝒆𝒔 𝒅𝒆𝒔𝒊𝒓𝒆𝒔 𝒂𝒔 𝒑𝒓𝒆𝒔𝒄𝒓𝒊𝒃𝒆𝒅 𝒃𝒚 𝒕𝒉𝒆 𝒌𝒂𝒍𝒑𝒐𝒌𝒕𝒉𝒂 𝒕𝒆𝒙𝒕 𝒍𝒊𝒌𝒆 ”𝑨𝒃𝒉𝒊𝒍𝒂𝒔𝒉𝒂 (𝒅𝒆𝒔𝒊𝒓𝒆), 𝑨𝒌𝒂𝒏𝒌𝒔𝒉𝒂 (𝒂𝒔𝒑𝒊𝒓𝒂𝒕𝒐𝒓𝒚), 𝒌𝒂𝒎𝒂𝒏𝒂(𝒉𝒐𝒑𝒆/𝒘𝒊𝒔𝒉), 𝒊𝒏𝒈𝒊𝒕𝒉𝒂 ( 𝒊𝒏𝒕𝒆𝒏𝒕𝒊𝒐𝒏/𝒑𝒖𝒓𝒑𝒐𝒓𝒕) 𝒆𝒕𝒄.