Sri Mangaladevi Navarathri Festival 2022 – Day 7

Blissful Darshan

Mangaladevi Daily Darshan 02nd October 2022

~^~

°༺◦◈⋄♢ಸಪ್ತಮಿ ದಿನ ⊹ ‹ಚಂಡಿಕೆ♢⋄◈◦༻°

°༺◦◈☠Seventh day ‹𝐂𝐡𝐚𝐧𝐝𝐢𝐤𝐞☠◈◦༻°

 
ಶಶಲಾಂಛನಸಮ್ಯುತಾಂ ತ್ರಿನೇತ್ರಾಂ
ವರಚಕ್ರಾಭಯಶಂಖಶೂಲಪಾಣಿಮ್ । ಅಸಿಖೇಟಕಧಾರಿಣೀಂ ಮಹೇಶೀಂ ತ್ರಿಪುರಾರಾತಿವಧೂಂ ಶಿವಾಂ ಸ್ಮರಾಮಿ॥ ⚔️🗡️
ಓಂ ಹ್ರೀಂ ಶ್ಚ್ಯೂಂ ಮಂ ದುಂ ದುರ್ಗಾಯೈ ನಮಃ ಓಂ 
ಚಂಡಿಕಾಯೈ ನಮಃ ๑🔥
 
ಸದ್ಭಕ್ತರಿಗೆ ಕಾಮಧೇನುವಿನಂತೆ ಸನ್ಮಂಗಳ ದಾಯಿನಿಯಾಗಿ ಪ್ರೀತಿ, ವಾತ್ಸಲ್ಯ, ಮಮತೆ, ಕರುಣಾ ಸಾಗರಿಯಂತೆ ಶಾಂತ ಸ್ವರೂಪಳಾಗಿ ಒಲಿಯುವ ತಾಯಿಯು, ಸಮಯ ಬಂದಾಗ ಅಸುರೀ ಶಕ್ತಿಗಳ ನಿಯಂತ್ರಣಕ್ಕೆ, ಪರ್ಯವಸನಕ್ಕೆ ರೌದ್ರ ತಾಮಸೀ ಸ್ವರೂಪಿಣಿಯಾಗಿಯೂ ಅವತಾರಗಾಣುವಳು. 
 
_ಅಂತೆಯೇ ಶರನ್ನವರಾತ್ರಿಯ ಏಳನೇಯ ದಿವಸದ ಇಂದಿನ ಸಪ್ತಮಿಯ ಭಾನುವಾರದಂದು ತ್ರಿಲೋಕ ಭಯಂಕಾರಿಯಾದ ಚಂಡಿಕೆ ದೇವಿಯ ಅಲಂಕಾರದಲ್ಲಿ, ಸರ್ವ ಶುಭಪ್ರದೆಯಾಗಿ ಮಂಗಳಾಂಭೆಯು ತಾಮಸ ಸ್ವರೂಪಳಾಗಿ ಅಲಂಕೃತಳಾಗಿರುವಳು._ 
 
_ಶ್ರೀ ಕ್ಷೇತ್ರದಲ್ಲಿ ಪೂರ್ವದಿಂದಲೂ *ಚಂಡಿಕಾ ದುರ್ಗಾ ಪರಮೇಶ್ವರಿ* ಎಂದೇ ಕರೆಯಲ್ಪಡುವ ಚಂಡಿಕೆಯ ಅಲಂಕಾರದಲ್ಲಿ ಕೆಂಪು ವರ್ಣದೊಡನೆ ಹಳದಿ, ಹಸಿರು, ನೀಲವರ್ಣೇತರ ಇತರ ಬಣ್ಣದ ಒಟ್ಟು ಐದು ಸೀರೆಗಳನ್ನು ಒಗ್ಗೂಡಿಸಿ ತೊಟ್ಟು, ಸೀರೆಯ ಅಂಚಿನ ಇಳಿಬಿಟ್ಟ ನೆರಿಗೆಗಳನ್ನು ‘ಅಣಿ’ಯೊಂದಿಗೆ ಹಾಸಿ ಸರ್ವ ದಿವ್ಯಾಭರಣ, ನಿಂಬೆಯ ಹಣ್ಣಿನ ಹಾರದಿಯಿಂದ ಅಲಂಕೃತಳಾಗಿ ಖಡ್ಗವನ್ನು ತನ್ನ ಪ್ರಧಾನ ಆಯುಧವನ್ನಾಗಿ ಧರಿಸಿದ ದೇವಿಯು ತನ್ನ ಚತುರ್ಭುಜಗಳಲ್ಲೂ ಚಕ್ರ, ಘಂಟೆ, ‘ಚಾಮರ’, ಹಿಂಗಾರದ ಕದಿರನ್ನು ಹಿಡಿದು ತ್ರಿಶೂಲ ಧಾರಿಣಿಯಾಗಿ ಮಂಗಳಾದೇವಿಯು ಅಲಂಕಾರದ ಮುಖೇನ ಚಂಡಿಕೆಯಾಗಿ ‘ಲೋಕದಲ್ಲಿ ಅಧರ್ಮ ತಾಂಡವವೆದ್ದಾಗ ವಿಶ್ವ ರಕ್ಷಣೆಗೆ, ದುಷ್ಟ ನಿಗ್ರಹಕ್ಕೆ ಶಿಷ್ಟ ರಕ್ಷಣೆಗೆ ಸದಾ ತಾನು ಸಿದ್ಧಳಾಗಿರುವುದಾಗಿ ಅಭಯಂಕರಿ ಖಡ್ಗ ಪಾಣಿ ಚಂಡಿಕೆಯಾಗಿ ದರ್ಶನವನ್ನೀಯುತ್ತಿರುವಳು. _
 
_ಶರನ್ನವರಾತ್ರಿಯ ಸಪ್ತಮಿಯ ದಿನ ದುಷ್ಟ ಜನ ಸಂಹಾರಿಣಿ ಶಿಷ್ಟ ಜನ ಪರಿಪಾಲಿನಿಯಾಗಿ ದುಃಖ ದಾರಿದ್ರ್ಯ ರೋಗ ರುಜಿನಾದಿ ಭವಭಯ ಪೀಡಾ ದುರಿತಗಳನ್ನು ಪರಿಹರಿಸುವ ಸೌಭಾಗ್ಯ ಸಂಪತ್ಕರಿಯಾದ ಮಂಗಳಾದೇವಿಯು ಚಂಡಿಕಾ ದೇವಿಯ ಅಲಂಕಾರದಿಂದ ವೈಭವಿತಳಾಗಿರುವ ಅಪೂರ್ವ ಸಂದರ್ಭ._
 
_’ಚಂಡಿಕೆ’ ಎಂದೊಡನೆ ದೇವಿಯ ಉಗ್ರರೂಪ ನಮ್ಮ ಕಣ್ಮುಂದೆ ಸುಳಿಯುವುದು. ಧರ್ಮವನ್ನು ಮೀರಿ ನಿಂತಾಗ ‘ಅನುಗ್ರಹ’ ಸ್ವರೂಪಿಣಿಯಾದ ದೇವಿಯು ‘ನಿಗ್ರಹ’ ಸ್ವರೂಪಳಾಗಿ ‘ಪಾಶವೀತನ’ದೊಂದಿಗೆ ಚಂಡಿಕೆಯಾಗಿ ಶಿಕ್ಷಿಸುತ್ತಾಳೆ.🗡ಚಂಡಿಕೆ -ಎಂದರೆ ಕ್ರೋಧ ವುಳ್ಳವಳು ಎಂದರ್ಥ. ದುಷ್ಟ ದೈತ್ಯಕುಲ ಸಂಹಾರಣಾರ್ಥ ‘ಕಾಲರಾತ್ರಿ’ ಸ್ವರೂಪಳಾಗಿ ಮಿತಿಗೆ ನಿಲುಕದ ದೇವಿಯ ವಿರಾಟ್ ಶಕ್ತಿ. ವಿಶ್ವ ನಿಯಂತ್ರಣಕ್ಕೆ ಸಂರಕ್ಷಣೆಗೆ ಬೇಕಾದ ಸಮಷ್ಟಿ ಶಕ್ತಿ ಚಂಡಿಕೆ. ಅಸುರೀ ದುಷ್ಟಶಕ್ತಿಗಳನ್ನು ನಿಗ್ರಹಿಸಲು ಈಕೆಯೊಬ್ಬಳೇ ಸಮರ್ಥಳು._
 
_ಸಜ್ಜನರಿಗೆ ಸನ್ಮಾರ್ಗ ದರ್ಶಕಳಾದರೆ ದುಷ್ಟರಿಗೆ ಮೋಹ ಸಂಜನನಿ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ._
 
_*ರಹಸ್ಯಾರ್ಥಗಳನ್ನೊಳಗೊಂಡ ಮಂತ್ರಗಳಲ್ಲಿ ವಿಶ್ವಶಕ್ತಿಯ ಸ್ತ್ರೀ ರೂಪವನ್ನೇ ಪ್ರಕಟಗೊಳಿಸಿ ಸ್ತುತಿಸುನ ಹಂತದಲ್ಲಿ ಮೊಟ್ಟ ಮೊದಲು ಸೃಷ್ಠಿಯಾದ ಪೂಜ್ಯ ಗ್ರಂಥವೇ ದುರ್ಗಾಸಪ್ತಶತಿ. ಇದು ೬೪೩’ ಪ್ರಭಾವಿ ಮಂತ್ರಗಳೊಂದಿಗೆ ೫೭’ವ್ಯಾಖ್ಯಾನಗಳು ಸೇರಿ ೭೦೦’ಮಂತ್ರಗಳ ಗುಚ್ಛವಾಗಿದೆ. ಅಷ್ಟಾದಶ ಪುರಾಣಗಳಲ್ಲೊಂದಾದ ಮಾರ್ಕಂಡೇಯ ಪುರಾಣದಲ್ಲಿ ಕಾಣಸಿಗುವ ೭೦೦ ಶ್ಲೋಕಗಳ ಮಂತ್ರ ಸಮೂಹವಾದ ದೇವಿ ಮಹಾತ್ಮ್ಯೆ-ದುರ್ಗಾಸಪ್ತಶತೀ ಪಾರಾಯಣಾದಲ್ಲಿ ಶೇ.೭೦’ರಷ್ಟು ಭಾಗ ಚಂಡಿಕೆಯ ಘೋರತ್ವ ಹಾಗು ಆಕೆಯ ಅನುಗ್ರಹ ಸಾಮರ್ಥ್ಯವನ್ನು ಸಾದೃಶ್ಯ ಪಡಿಸುತ್ತದೆ*._
 
_ಅರ್ಥಾತ್ ಉತ್ತಮ ಚರಿತೆಯ ಸಪ್ತಮೋಧ್ಯಾಯದಲ್ಲಿ ಚಂಡ ಮುಂಡ ವಧೆ, ಅಷ್ಟಮೋಧ್ಯಾಯ ರಕ್ತ ಬೀಜವಧೆ, ನವಮೋಧ್ಯಾಯದ ಶುಂಭ ನಿಶುಂಭ ವಧೆ ಇತ್ಯಾದಿ_
 
_ದೈತ್ಯ ದಾನವರ ಉಪಟಳದಿಂದ ತತ್ತರಿಸಿದ ದೇವಾನು ದೇವತೆಗಳು ದಿಕ್ಕೆಟ್ಟು ಮಹಾದೇವಿಯಲ್ಲಿ ಬಗೆಬಗೆಯಾಗಿ ಸ್ತುತಿಸಿ ರಕ್ಷಣೆಗಾಗಿ ಪ್ರಾರ್ಥಿಸಿದಾಗ ಶಾಂತ ರೂಪಿಣಿಯು ಘೋರ ಸ್ವರೂಪಿಣಿಯಾಗಿ ಉದ್ಭವಿಸಿ ಬಂದಳು._
 
_*’ಕಾಲರಾತ್ರಿ ಮಹಾರಾತ್ರಿ ಮೋಹರಾತ್ರಿಯೆಂಬ*’ ಕ್ರೂರ ತಾಮಸೀ ರೂಪವನ್ನು ತಾಳಿ ತ್ರಿಗುಣ ರೂಪಗಳನ್ನು ಪ್ರಕಟಿಸಿ ದುಷ್ಟ ನಿಗ್ರಹಕ್ಕಾಗಿ ಖಡ್ಗ, ಶೂಲ ಗದೆ ಶಂಖ ಚಕ್ರ ಧನಸ್ಸು ಬಾಣ, ಭುಶುಂಡಿ, ಪರಿಘ, ತೋಮರ, ಪರಶು ಆಯುಧಾದಿಗಳಿಂದ, ರುಧಿರ ಪಾನಪಾತ್ರೆಯ ಸಹಿತ ರುಂಡಮಾಲಿನಿ ಚಂಡಿಕೆಯಾಗಿ ಹೊರಹೊಮ್ಮಿದಳು._
 
_ತೀಕ್ಷಣ ಸ್ವರೂಪಳಾಗಿ ಧರ್ಮ ರಕ್ಷಣೆಯ ಅಗ್ನಿ ಕಂಕಣತೊಟ್ಟು ರೌದ್ರಾವೇಶದಿಂದ ಪೂರ್ಣ ಪ್ರಭಾಪುಂಜಳಾಗಿ ಕ್ರೌರ್ಯದಿಂದ ಆರ್ಭಟಿಸಿ ಖಡ್ಗ ಧಾರಿಣಿಯಾಗಿ ಘಂಟಾ’ನಾದಮಾಡುತ್ತಾ ರಣಾಂಗಣವನ್ನು ಪ್ರವೇಶಿಸಿ ಸಮಸ್ತ ದಾನವ ಸಮೂಹವನ್ನು ಧ್ವಂಸಗೊಳಿಸಿ ಅಧ್ಯಾಯದುದ್ದಕ್ಕೂ ತನ್ನ ಪರಾಕಾಷ್ಟೆ ಮೆರೆದಿದ್ದಾಳೆ._
 
_ವ್ಯಗ್ರಳಾಗಿ ರಣೋತ್ಸಾಹದಿಂದ ರಣ ಘರ್ಜನೆಮಾಡಿ ಆಕೆಯ ಖಡ್ಗ ಪ್ರಹಾರಕ್ಕೆ ಅಸಂಖ್ಯ ದೈತ್ಯದಾನವರು ಧೂಳಿಪಟಗೊಂಡರು. ಆಕೆಯ ಕರ್ಕಶ ಘಂಟಾನಾದಕ್ಕೆ ತತ್ತರಿಸಿದರು. ತ್ರಿಲೋಕ ಭಯಂಕರಿಯಾದ ಈಕೆಯ ಉಗ್ರ ಸ್ವರೂಪವನ್ನು ಕಂಡರೆ ದೇವತೆಗಳೇ ಬೆದರುತ್ತಾರೆ._
 
*ಸಹಸ್ರ ದಾನವರ ವಧೆಗೆ ದುರ್ಗೆಯು ತನ್ನ ಅಂತಃಸತ್ವದಿಂದ ಭೀಭತ್ಸ್ಯ ಸ್ವರೂಳಾದ ಚಂಡಿಕೆಯನ್ನು ಸೃಷ್ಟಿಸಿದಳು. ಸಪ್ತಶತಿ ಪುರಾಣದಲ್ಲಿ ಬರುವ ದೇವತೆಗಳ ಅಸ್ಥಿತ್ವವನ್ನೇ ನಲುಗಿಸಿದ ‘ಚಕ್ಷುರ, ವಿಡಾಲ, ರುದಗ್ರ, ರಸಿಲೋಮ, ಚಾಮರ, ಉದಗ್ರ, ಶುಂಭ-ನಿಶುಂಭ, ಮಧು-ಕೈಟಭ, ಕರಲಾ, ಉದ್ಧಿತ, ಭಾಷ್ಕಲ,ಕರಾಲ, ಉದ್ಧಾತ, ತಾಮ್ರಾಸುರ ಅಂಧಕಾಸುರ, ಉಗ್ರಸ್ಯ, ಉಗ್ರವೀರ್ಯ, ಮಹಾಹನು, ದುರ್ಧಾರ, ದೂರ್ಮುಖ, ರಕ್ತ ಬೀಜಾಸುರ, ಚಂಡ-ಮುಂಡಾದಿ ಅಸುರರನ್ನು ಸಂಹರಿಸಿ, ರಕ್ತದಿಂದ ಅಸಂಖ್ಯಾತ ದಾನವರು ಉದಿಸಿದಾಗ ಅವರೆಲ್ಲರ ರಕ್ತವನ್ನು ದೀರ್ಘವಾದ ಚಾಚಿದ ತನ್ನ ‘ಜಿಹ್ವೆ’ (ನಾಲಿಗೆ)ಯಿಂದ ರಕ್ತವನ್ನು ಆಪೋಶಣೆಗೈವ ಕಲ್ಪೋಕ್ತದ ದುರ್ಗೆಯು ತಾಳಿದ ಏಳನೇಯ ಅತ್ಯಂತ ಭೀಭತ್ಸ ಕ್ರೂರ ತಾಮಸ ಸ್ವರೂಪವೇ ಚಂಡಿಕೆ*.🔥_