11 July 2022 – Shatha Rudrabhishekam to Sri Mangaladevi

Shatha Rudrabhisheka 2022 July
🪷  ಶ್ರೀ ಮಂಗಳಾದೇವಿಗೆ ಶತ ರುದ್ರಾಭಿಷೇಕ🪷
🌀೧೧.೦೭.೨೦೨೨’ನೇ ಸೋಮವಾರ.༃࿐🌀
 
_*’ಅಲಂಕಾರ ಪ್ರಿಯೋ ವಿಷ್ಣುಃ  ಅಭಿಷೇಕ ಪ್ರಿಯ ಶಿವಃ’*_ ಎಂಬ ಉಕ್ತಿಯಂತೆ ಈಶ್ವರನು ಅಭಿಷೇಕ ಪ್ರಿಯನು.
ಲೋಕದ ಕ್ಷೇಮಾಭಿವೃದ್ಧಿಗಾಗಿ ಸಕಲ ಕಲ್ಯಾಣಗುಣ ಪರಿಪೂರ್ಣನಾದ ಮಂಜುನಾಥ ದೇವರಿಗೆ ರುದ್ರಾಭಿಷೇಕದ ಮೂಲಕ ಪೂಜಿಸಿದಲ್ಲಿ ಪರಮಾತ್ಮನು ಸಂತೃಪ್ತನಾಗುತ್ತಾನೆ.
 
ರುದ್ರಾಭಿಷೇಕವು ಹೆಸರೇ ಪ್ರತಿನಿಧಿಸಲ್ಪಡುವಂತೆ ಪ್ರಧಾನವಾಗಿ ರುದ್ರ (ಶಿವ) ದೇವರ ಆರಾಧನೆಯಲ್ಲಿ ಕಂಡುಬರುವ ವೈಶಿಷ್ಟಪೂರ್ಣವಾದ ಪೂಜಾ ವಿಧಾನವಾಗಿದೆ. *ರುದಂ ಸಂಸಾರ ದುಃಖಂ ದ್ರಾವಯತೀತಿ ರುದ್ರಃ* ಎನ್ನುವಂತೆ ಸರ್ವರ ಕಷ್ಟ ಕಾರ್ಪಣ್ಯವನ್ನು ಕಳೆದು ಕಾಯುವವನೇ ರುದ್ರ. ಭಕ್ತರ ಮನದ ಎಲ್ಲಾ ಅಭೀಷ್ಟಗಳನ್ನು ನೆರವೇರಿಸಿ ಕೊಡುವವನು.
 
ಲೋಕ ಕಲ್ಯಾಣಾರ್ಥವಾಗಿ ವರ್ಷಂಪ್ರತಿಯಂತೆ ಶ್ರೀ ಮಂಗಳಾದೇವಿ ಅಮ್ಮನವರ ಸನ್ನಿಧಾನದಲ್ಲಿ ಸ್ವಸ್ತಿ ಶ್ರೀ ಶುಭಕೃತ ನಾಮ ಸಂವತ್ಸರದ ಗ್ರೀಷ್ಮ ಋತು ಆಷಾಡ ಮಾಸ ಶುಕ್ಲಪಕ್ಷದ ದ್ವಾದಶಿಯ ದಿನಾಂಕ ನಾಳಿನ 11.07.2022’ನೇ ಸೋಮವಾರದಂದು ಶತ ರುದ್ರಾಭಿಷೇಕ ಸೇವೆಯು ಮಂಗಳಮ್ಮನ ಪ್ರೀತ್ಯರ್ಥವಾಗಿ  ವಿಜೃಂಭಣೆಯಿಂದ ನೆರವೇರಲಿದೆ.
 
*ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ನಾಲ್ಕನೆಯ ಕಾಂಡದಲ್ಲಿ ಬರುವ ‘ರುದ್ರಾಧ್ಯಾಯದ ರುದ್ರ ನಮಕ’ ಹಾಗೂ ‘ರುದ್ರ ಚಮಕ’ ಮಹಾ ಮಂತ್ರಗಳ ಪಠಣದೊಂದಿಗೆ ಮುಖ ಮಂಟಪದಿ ವಿಪ್ರೋತ್ತಮರಿಂದ ರುದ್ರ ಪಠಣದ ನೂರು ಆವರ್ತನ ಸಹಿತ ಶತ ರುದ್ರಾಭಿಷೇಕವು ಶ್ರೀ ದೇವಿಗೆ ಪ್ರಾತಃಕಾಲ 8.30’ರಿಂದ ಪ್ರಾರಂಭವಾಗಲಿದೆ.*
 
_ರುದ್ರಾಧ್ಯಾಯ ಯಜುರ್ವೇದ ಸಂಹಿತೆಯ ಒಂದು ಅಂಗ. ಪೂರ್ವಿಕ ಋಷಿವರೇಣ್ಯರು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥೈಸಲು ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಯಜುರ್ವೇದವನ್ನು ‘ಬ್ರಾಹ್ಮಣ, ಸಂಹಿತೆ, ಅರಣ್ಯಕ ಹಾಗೂ ಉಪನಿಷದ್ವಾಗ್ಮಯಗಳೆಂದು ವಿಭಜಿಸಿ ಯಜುರ್ವೇದ ಸಂಹಿತೆಯನ್ನುಪುನಃ  ‘ಕಾಠಕ, ಕಪಿಷ್ಠಲ, ಮೈತ್ರಾಯಣೀ ಹಾಗೂ ತೈತ್ತರೀಯವೆಂಬ ನಾಲ್ಕು ಉಪಶಾಖೆಗಳಾಗಿ ಪ್ರತ್ಯೇಕಿಸಿದರು._ 
 
ಹೀಗೆ ಬೇರ್ಪಟ್ಟ ಕೃಷ್ಣ ಯಜುರ್ವೇದ ತೈತ್ತರೀಯ ಸಂಹಿತೆಯ ಚತುರ್ಥ (ವೈಶ್ವ ದೇವಂ ಕಾಂಡಮ್‌) ಕಾಂಡದ ಪಂಚಮ ಪ್ರಪಾಠಕ (ಅಧ್ಯಾಯ)ವೇ ‘ರುದ್ರಾಧ್ಯಾಯ’ ಅಥವಾ ‘ರುದ್ರಪ್ರಶ್ನ’ವೆಂದು ಪ್ರಸಿದ್ಧಿಯಾಗಿ ಕೃಷ್ಣ ಯಜುರ್ವೇದ ತೈತ್ತರೀಯ ಸಂಹಿತೆಯ ಚತುರ್ಥ ( *ವೈಶ್ವ ದೇವಂ ಕಾಂಡಮ್*‌) ಕಾಂಡದ ಪಂಚಮ ಪ್ರಪಾಠಕ (ಅಧ್ಯಾಯ)ವೇ ‘ರುದ್ರಾಧ್ಯಾಯ’ ಅಥವಾ ‘ರುದ್ರಪ್ರಶ್ನ’ವೆಂದು ಪ್ರಸಿದ್ಧಿಯಾಗಿ ಶೈವ ಸಂಪ್ರದಾಯದ ನಿತ್ಯದೇವತಾರ್ಚನೆಯ ಒಂದು ಅವಿಭಾಜ್ಯ ಅಂಗವಾಗಿ ರೂಢಿಯಲ್ಲಿದೆ.
 
*ರುದ್ರಪ್ರಶ್ನ’ವು ‘ಓಂ ನಮೋ ಭಗವತೇ ರುದ್ರಾಯ,ಓಂ ನಮಸ್ತೇರುದ್ರಮನ್ಯವ ಉತೋತ ಇಷವೇನಮಃ* ಎಂಬಲ್ಲಿಂದ ಪ್ರಾರಂಭವಾಗಿ, *‘ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂವೋ ಜಂಭೇ ದಧಾಮಿ’* ಎಂಬ ಪ್ರಾರ್ಥನೆಯಲ್ಲಿ ಕೊನೆಗೊಳ್ಳುತ್ತದೆ. ಇದಿಷ್ಟು ‘ನಮಕ’ ಭಾಗವಾಗಿ, ‘ರುದ್ರ’ ರೂಪನಾದ ಪರಶಿವನನ್ನು ಹಾಡಿ, ಹೊಗಳಿದರೆ, ಇದೇ ವೈಶ್ವದೇವಂ ಕಾಂಡದ ಸಪ್ತಮ ಪ್ರಪಾಠಕವು ‘ಚಮಕ’ವೆಂದು ಕರೆಯಲ್ಪಟ್ಟು, ನಾನಾರೀತಿಯಲ್ಲಿ ನಮ್ಮ ಇಚ್ಛಾನಿಚ್ಛೆಗಳನ್ನು ಪರಮೇಶ್ವರನಲ್ಲಿ ಪ್ರಾರ್ಥಿಸಿಕೊಳ್ಳುವದಾಗಿದೆ.
 
ರುದ್ರ ನಮಕ ಚಮಕಗಳಲ್ಲಿ ಪರಮೇಶ್ವರನ ವಿರಾಟ ಸ್ವರೂಪ ತೆರೆದುಕೊಳ್ಳುತ್ತದೆ. ಈ ಮಂತ್ರಗಳು ಶಿವನನ್ನು ಶಾಂತಗೊಳಿಸುವುದರೊಂದಿಗೆ ಆತನನ್ನು ಮಂತ್ರಮುಖೇನ ಒಲಿಸಿಕೊಂಡು ಇಷ್ಟಾರ್ಥ ಸಿದ್ದಿಸುವ ದಾರಿಯನ್ನೂ ತೋರಿಸಿಕೊಡುತ್ತವೆ. ಯಜುರ್ವೇದದಲ್ಲಿ ರುದ್ರಭಾಗವು ವಿಶ್ವ ದೇವಕಾಂಡದಲ್ಲಿ ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಯ ೪ ನೇ ಕಾಂಡದ ೫ ನೇ ಪ್ರಪಾಠಕ / ಪ್ರಶ್ನವು “ನಮಸ್ತೇ ರುದ್ರ” ಎಂದಾರಂಭಿಸಿ, “ಜಂಭೇ ದಧಾಮಿ” ಎಂಬಲ್ಲಿವರೆಗಿನ ೧೧ ಅನುವಾಕಗಳಿಂದ ಕೂಡಿರುವುದು ರುದ್ರಾಧ್ಯಾಯವೆಂದು ಹೇಳಲ್ಪಡುತ್ತದೆ.
 
ಅಭಿಷೇಕದ ಮುಖೇನ *’ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆ’* ಯ  ನಾಲ್ಕನೆಯ ಕಾಂಡದಲ್ಲಿನ  ಪ್ರಕಾರವಾದ ‘ರುದ್ರ ನಮಕ’ ಹಾಗೂ ‘ ರುದ್ರ ಚಮಕ’ ಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾ ಬಿಲ್ವಪತ್ರೆಗಳ ಸಮರ್ಪಣೆಯೊಂದಿಗೆ ಅಭಿಷೇಕ ಪ್ರಿಯನೆಂದೇ ಖ್ಯಾತನಾದ ಶಿವ ದೇವರನ್ನು ಶೃದ್ಧಾ ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸಿದಲ್ಲಿ ನಮ್ಮೆಲ್ಲರನ್ನು ಸಕಲ ಸಂಕಷ್ಟದಿಂದ ಪಾರುಮಾಡಿ, ಸೌಭಾಗ್ಯ ಸಹಿತ ಮನೋಭೀಷ್ಟೆಯ ಕೊಟ್ಟು ಆಶೀರ್ವದಿಸುವನು ಎಂಬುವುದು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಸಾತ್ವಿಕ ವಿಮರ್ಶೆಯಲ್ಲಿ ಕಂಡು ಕೊಂಡಿರತಕ್ಕಂತಹ ಸತ್ಯ. 
 
ಲೇಖನದ ಪೀಠಿಕಾ ಭಾಗದಲ್ಲಿ ವ್ಯಕಪಡಿಸಿರುವಂತೆ ರುದ್ರಾಭಿಷೇಕವು ‘ಶಿವ’ ದೇವರಿಗೆ ಮಾತ್ರ ಪ್ರಾಧಾನ್ಯತೆ ಹೊಂದಿದ್ದರೂ, ಶ್ರೀ ಕ್ಷೇತ್ರ ಮಂಗಳಾದೇವಿಯಲ್ಲಿ ‘ಶ್ರೀದೇವಿ’ಯು ಲಿಂಗ ರೂಪದಲ್ಲಿರುವ  ಪ್ರಾಯಶಃ ಭಾರತದಲ್ಲೇ ಅತ್ಯಂತ ಅಪರೂಪವಾದ ದೇಗುಲವಿದಾಗಿದೆ. ಸಾನಿಧ್ಯ ವಿಶೇಷ’ವೆಂಬಂತೆ ಅರ್ಧನಾರೀಶ್ವರೀ ತತ್ವದಂತೆ ಒಂದೇ ಕ್ಷೇತ್ರದಲ್ಲಿ ಶಿವ-ಶಕ್ತಿಯರ ಸಾನಿಧ್ಯ. ತಾಯಿಯ ಬಿಂಬದಲ್ಲಿ ‘ಶಿವಶಕ್ತಿ’ಯು ಅಡಕವಾಗಿದ್ದು ‘ಪ್ರಕೃತಿ-ಪುರುಷ’ ಶಕ್ತಿಯೊಂದಿಗೆ ಶಿವಾತ್ಮಿಕೆಯಾಗಿ ಶಿವಶಕ್ತ್ಯಾತ್ಮಿಕಳಾಗಿ ಶಿವನ ಸಮೇತ ಅಧಿಷ್ಠಾನದೊಂದಿಗೆ ಬಿಂಬರೂಪದಲ್ಲಿ ನೆಲೆಸಿ ಪ್ರಸನ್ನಳಾಗಿರುವ ದೇವಿಯನ್ನು ಧಾರಾಪಾತ್ರೆಯನ್ನಿಟ್ಟು ಆರಾಧಿಸುವುದರಿಂದ ಇಲ್ಲಿ ಮಾತ್ರ ಶ್ರೀ ದೇವಿಗೆ ‘ರುದ್ರಾಭಿಷೇಕ’ದ ಸೇವೆಯೂ ನಡೆಯುತ್ತದೆ. 
 
ರುದ್ರ ನಮಕ-ಚಮಕಗಳು ಲೋಕಹಿತಂಕರನಾದ ಶ್ರೀ ಪರಶಿವನ ಪರಮ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ. ರುದ್ರಪಾರಾಯಣ ಮಾಡುವ ಸರ್ವರಿಗೂ ಶಿವಾನುಗ್ರಹವಾಗುವಂತೆ ಮಾಡಿ ಸಂಪೂರ್ಣ ಬದುಕನ್ನು ಶಿವ ಮಯಗೊಳಿಸುವ ಶಕ್ತಿ ಈ ಮಂತ್ರಗಳ ವೈಶಿಷ್ಟ್ಯವಾಗಿದೆ.
 
‘ರುದ್ರ’ ಎಂದರೆ ಭಯಂಕರ ವಿನಾಶಿ, ಅಳಿಸುವವನು, ಧ್ವಂಸಗೊಳಿಸುವ ಲಯಕರ್ತ ( *ರೋದಯತೀತಿ ರುದ್ರಃ*) ಎಂದರ್ಥ. ಅಥವಾ ರೋಗವನ್ನು, ಸಂಸಾರ ದುಃಖವನ್ನೂ ನಾಶ ಮಾಡುವವನು ರುದ್ರ ( *ರುಜಂ ಸಂಸಾರ ದುಃಖಂ ದ್ರಾವಯತೀತಿ ರುದ್ರಃ*)
 
‘ರುದ್ರನ ಶತ ಸ್ವರೂಪಗಳ -ಎಂದರೆ ಲೆಕ್ಕವಿಲ್ಲದಷ್ಟು ನಾನಾ ರೂಪಗಳ ಸ್ಮರಣೆ ಈ ಭಾಗದಲ್ಲಿರುವುದರಿಂದ ಇದಕ್ಕೆ *ಶತರುದ್ರೀಯ* ವೆಂಬ ಹೆಸರುಂಟು. ಅಧ್ಯಾಯದ ಮೊದಲ ಭಾಗದಲ್ಲಿ *ನಮಃ* ಶಬ್ದ ಪದೇಪದೇ ಬರುತ್ತದೆಂಬ ಕಾರಣದಿಂದ ಅದನ್ನು ನಮಕವೆಂದೂ, ಎರಡನೇ ಭಾಗದಲ್ಲಿ *ಚಮೇ* ಎಂದು ಪುನರುಕ್ತಿ ಇರುವುದರಿಂದ ಅದನ್ನು ಚಮಕವೆಂದು ಕರೆಯುವುದು ವಾಡಿಕೆ.
 
ರುದ್ರಾಧ್ಯಾಯದಲ್ಲಿ  ಒಟ್ಟು *ಹನ್ನೊಂದು* ‘ಅನುವಾಕ’ಗಳಿವೆ. ಇಲ್ಲಿ ಮೊದಲನೇಯ ಅನುವಾಕದಲ್ಲಿ ಶಿವನು ಪ್ರಸನ್ನನಾಗುವಂತೆ ಮಾಡಿ, ಎರಡರಿಂದ -ಒಂಭತ್ತರ ಅನುವಾಕಗಳಲ್ಲಿ ನಮಸ್ಕರಿಸಿ, ಹತ್ತನೇಯದರಲ್ಲಿ ಪ್ರಾರ್ಥಿಸಿ, ಹನ್ನೊಂದರನೇಯದಲ್ಲಿ ‘ರುದ್ರ ಸ್ತುತಿ’ಯನ್ನು ನಡೆಸಲಾಗುತ್ತದೆ. ಇವೇ *ಅನುವಾಕಗಳು*
 
ಏಕಾದಶ ರುದ್ರರಿಗೆ ಗಣಪ್ರಧಾನ ಈಶ್ವರ ದೇವರು.
ಈ ಹನ್ನೊಂದು ಅನುವಾಕಗಳು *ಏಕಾದಶ ರುದ್ರ* ರ ಸ್ವರೂಪ.
” *ಮೃಗವ್ಯಾಧ, ಶರ್ವ, ನಿಋತಿ, ಅಜೈಕಪಾತ್ ಪಿನಾಕಿ, ಅಹಿರ್ಬುದ್ನಿ, ಭವನಾಥ, ಮಹೇಶ್ವರ, ಭಾನು, ಭವ ಹಾಗು ಕಾಪಾಲಿ*” ಎಂಬುದಾಗಿ ಹನ್ನೊಂದು ಆವರ್ತನೇಯ ರೂಪಗಳಲ್ಲಿ ಅಭಿಷೇಕ ನಡೆಯುತ್ತದೆ.
 
ಶಿವಪುರಾಣದ ಪ್ರಕಾರ ‘ರುದ್ರ’  ಹಾಗೂ ‘ಚಮ’ಗಳ ಪಠಣ ಶಿವನಿಗೆ ಪ್ರಿಯಾತೀತವಾದುದು. ಹೀಗೆ ರುದ್ರಾಭಿಷೇಕವನ್ನು ಯಜುರ್ವೇದದ ಪ್ರಕಾರವಾದ *’ರುದ್ರನಮಕ’* ಹಾಗೂ *’ರುದ್ರಚಮಕ’* ಗಳ ರುದ್ರಪಠಣದ ಮೂಲಕ ಮೊದಲ್ಗೊಳ್ಳುತ್ತದೆ. 
 
ರುದ್ರದಲ್ಲಿ ಒಟ್ಟು  ಹನ್ನೊಂದು ಭಾಗಗಳಿವೆ ( *ಅನುವಾಕಗಳು* ).
ರುದ್ರದ ನಂತರ ಪಠಿಸುವ ಚಮಕದಲ್ಲೂ ಕೂಡ ಒಟ್ಟು *ಹನ್ನೊಂದು* ಭಾಗಗಳಿವೆ. ಒಂದು ಸರ್ತಿ ‘ರುದ್ರ ನಮಕ’ ಹಾಗೂ ‘ರುದ್ರ ಚಮಕ’ ಗಳನ್ನು ಪಠಿಸುವುದಕ್ಕೆ *’ದೈನಂದಿನ ನ್ಯಾಸ*’ ಎನ್ನುವರು. ಹೀಗೆ ‘ಹನ್ನೊಂದು’ಬಾರಿ ಪಠಿಸುವಾಗ ರುದ್ರದ ಒಂದು ಆವರ್ತನ ಮುಗಿಸಿದ ತರುವಾಯ ಅನುಕ್ರಮವಾಗಿ ಚಮಕದ ಇನ್ನೊಂದು ಭಾಗ. 
ಮೊದಲಿಗೆ ‘ಚಮಕ’ದ ಮೂರನೇಯ ಭಾಗವನ್ನು 
ಉಚ್ಛರಿಸಿ, ನಂತರ ಒಂದು ‘ನಮಕ’ದ ಭಾಗವನ್ನು 
ಮತ್ತು ಹನ್ನೊಂದು ‘ಚಮಕ’ ಭಾಗವನ್ನು ಪಠಿಸುವರು. ಇದನ್ನು *ಒಂದು ರುದ್ರ* ವೆನ್ನುವರು.
 
ಪ್ರತಿ ಅನುವಾಕ್ಕಿನಲ್ಲಿಯೂ, ಪಾದಗಳ ಸಂಖ್ಯೆ ಹಾಗೂ ಪ್ರತಿಪಾದದ ವರ್ಣಗಳ ಸಂಖ್ಯೆಯಲ್ಲೂ ವೈವಿಧ್ಯತೆ ತೋರುಬರುತ್ತದೆ. ಪ್ರತಿಪಾದವೂ ‘ನಮಃ’ ಎಂಬ ಶಬ್ದದಿಂದ ಪ್ರಾರಂಭವಾಗಿ ಇಲ್ಲವೇ ಮುಕ್ತಾಯಗೊಂಡು, ಉದ್ದಕ್ಕೂ ಈ ಶಬ್ಧ ಪುನಶ್ಚರಣೆಯಾಗುವುದರಿಂದ ಈ ಭಾಗವನ್ನು ‘ನಮಕ’ ವೆಂದು ಕರೆಯಲಾಗಿದೆ. ಸಪ್ತಮ ಅಧ್ಯಾಯವು *ಓಂ ಅಗ್ನಾವಿಷ್ಣೂಸಜೋಷಸೇಮಾವರ್ಧಂತುವಾಂಗಿರಃ* ’ ಎಂಬಲ್ಲಿಂದ ಪ್ರಾರಂಭಿಸಿ….. *ಓಂ ಇಡಾದೇವಹೂರ್ಮನುಯಗ್ನನೀ ಪಿತರೋನುಮದಂತು* ಎಂಬಲ್ಲಿಗೆ ಮುಕ್ತಾಯವಾಗುತ್ತದೆ. 
ಇಲ್ಲಿ ಪ್ರತಿಪದಕ್ಕೂ ‘ಚ’ ಕಾರವನ್ನು ಸೇರಿಸಿ ಪಠಿಸುವುದರಿಂದ ಈ ಭಾಗವು ‘ಚಮಕ’ ವೆಂದು ಕರೆಯಲ್ಪಟ್ಟಿದೆ. ಚಮಕವು ಹನ್ನೊಂದು ಮಂತ್ರಗಳ ಗುಚ್ಛವಾಗಿದೆ.
 
*ನೂರು ಬಾರಿಗೆ ಒಂದು ರುದ್ರದ ಆವರ್ತನೆಯಾಗಬೇಕು. ಶತ  ಎಂದರೆ ನೂರು. ‘ಒಂದು ರುದ್ರದ’ ಆವರ್ತನೆಯನ್ನು ಚಮಕ ಹಾಗೂ ನಮಕವನ್ನು ಪಠಿಸುವುದರ ಮೂಲಕ ಶ್ರೀ ದೇವಿಯ ಲಿಂಗದ ಮೇಲೆ ಮಾಡತಕ್ಕ ‘ರುದ್ರಾಭಿಷೇಕ’ವೆಂದೂ, ರುದ್ರ ಪಠಣದ ನೂರು ಆವರ್ತನ ಸಹಿತ ಅಭಿಷೇಕವನ್ನು ಶತ ರುದ್ರಾಭಿಷೇಕ*’ವೆಂದು ಹೇಳುವರು.👏
 
✨🔱 *ಓಂ ನಮೋ ಭಗವತೇ ರುದ್ರಾಯ* 🔱✨
 
🔹ನಮಕ :- 🪷
*ಓಂನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ|ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇನಮಃ| ಯಾ ತ ಇಷುಃ ಶಿವತಮಾ ಶಿವಂ ಬಭೂವ ತೇ ಧನುಃ| ಶಿವ ಶರವ್ಯಾ ಯಾ ತವ ತಯಾ ನೋ ರುದ್ರಮೃಡಯ|ಯಾ ತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ| ತಯಾನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ*||……..
 
(ಮುಂದುವರಿಯುತ್ತದೆ)
 
🔹ಚಮಕ :- 🪷
*ಓಂ ಅಗ್ನಾ’ವಿಷ್ಣೋ ಸಜೋಷ’ಸೇಮಾವ’ರ್ಧಂತು ವಾಂಗಿರಃ’ | ದ್ಯುಮ್ನೈರ್-ವಾಜೇ’ಭಿರಾಗ’ತಮ್ | ವಾಜ’ಶ್ಚ ಮೇ ಪ್ರಸವಶ್ಚ’ ಮೇ ಪ್ರಯ’ತಿಶ್ಚ ಮೇ ಪ್ರಸಿ’ತಿಶ್ಚ ಮೇಧೀತಿಶ್ಚ’ ಮೇ ಕ್ರತು’ಶ್ಚ ಮೇ ಸ್ವರ’ಶ್ಚ ಮೇ ಶ್ಲೋಕ’ಶ್ಚ ಮೇಶ್ರಾವಶ್ಚ’ ಮೇ ಶ್ರುತಿ’ಶ್ಚ ಮೇ ಜ್ಯೋತಿ’ಶ್ಚ ಮೇ ಸುವ’ಶ್ಚ ಮೇ ಪ್ರಾಣಶ್ಚ’ ಮೇ‌ ಪಾನಶ್ಚ’ ಮೇ ವ್ಯಾನಶ್ಚಮೇ‌உಸು’ಶ್ಚ ಮೇ ಚಿತ್ತಂ ಚ’ ಮ ಆಧೀ’ತಂ ಚ ಮೇವಾಕ್ಚ’ ಮೇ ಮನ’ಶ್ಚ ಮೇ ಚಕ್ಷು’ಶ್ಚ ಮೇ ಶ್ರೋತ್ರಂ’ ಚಮೇ ದಕ್ಷ’ಶ್ಚ ಮೇ ಬಲಂ’ ಚ ಮ ಓಜ’ಶ್ಚ ಮೇ ಸಹ’ಶ್ಚ ಮಆಯು’ಶ್ಚ ಮೇ ಜರಾ ಚ’ ಮ ಆತ್ಮಾ ಚ’ ಮೇ ತನೂಶ್ಚ’ಮೇ ಶರ್ಮ’ ಚ ಮೇ ವರ್ಮ’ ಚ ಮೇಂಗಾ’ನಿ ಚಮೇ‌ಸ್ಥಾನಿ’ ಚ ಮೇ ಪರೂಗ್‍ಮ್’ಷಿ ಚ ಮೇಶರೀ’ರಾಣಿ ಚ ಮೇ*||…..
 
(ಮುಂದುವರಿಯುತ್ತದೆ)
 
ಹೀಗೆ ‘ರುದ್ರಪ್ರಶ್ನ’ವು *‘ಓಂ ನಮೋ ಭಗವತೇ ರುದ್ರಾಯ, ಓಂ ನಮಸ್ತೇರುದ್ರಮನ್ಯವ ಉತೋತ ಇಷವೇ ನಮಃ* ಎಂಬಲ್ಲಿಂದ ಪ್ರಾರಂಭವಾಗಿ,…… *ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂವೋ ಜಂಭೇ ದಧಾಮಿ* ಎಂಬ ಪ್ರಾರ್ಥನೆಯಲ್ಲಿ ಕೊನೆಗೊಳ್ಳುತ್ತದೆ. ಇದಿಷ್ಟು ‘ನಮಕ’ ಭಾಗವಾಗಿ, ‘ರುದ್ರ’ ರೂಪನಾದ ಪರಶಿವನನ್ನು ಸ್ತುತಿಸಿದರೆ, ಇದೇ *ವೈಶ್ವದೇವಂ* ಕಾಂಡದ ಸಪ್ತಮ ಪ್ರಪಾಠಕವು ‘ಚಮಕ’ವೆಂದು ಕರೆಯಲ್ಪಟ್ಟು, ನಾನಾರೀತಿಯಲ್ಲಿ ನಮ್ಮ ಸಂಕಲ್ಪ ಇಚ್ಛೆಯನ್ನು ಶ್ರೀ ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದಾಗಿದೆ.
ನಮಕ ಪ್ರಶ್ನೆಯಲ್ಲಿ ‘ಸೃಷ್ಟಿ ಸ್ಥಿತಿ ಲಯ’ ಎಲ್ಲದರ ಕರ್ತೃ’ವೆಂದು ಸಕಲ ಕ್ರಿಯೆಗಳ ಕಾರಣ ಕಾರ್ಯ ರೂಪ ಅವನದ್ದೆಂದೂ ಸ್ತುತಿಸಿದೆ. 
 
ಹೀಗೆ ಮೇಲಿನ ನಾಲ್ಕು ಆಯಾಮಗಳ ಶಿವೋಪಾಸನೆಯ ‘ಚಮಕ’ ‘ನಮಕಾ’ದಿಗಳ ಅನುಷ್ಠಾನದ ರುದ್ರ ಪಠಣದ ಮಹಾಮಂತ್ರಗಳನ್ನು ಸ್ವರಸಮೇತ ಉಚ್ಛರಿಸುತ್ತಾ ಅಭಿಷೇಕವು ಪ್ರಾರಂಭವಾಗುತ್ತದೆ. ರುದ್ರಾಭಿಷೇಕಕ್ಕೂ ಮುನ್ನ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ.
_ತಾಯಿಯ ಲಿಂಗಕ್ಕೆ ಕ್ಷೀರ (ಹಾಲು), ದಧಿ (ಮೊಸರು), ಆಜ್ಯ (ತುಪ್ಪ) , ಮಧು (ಜೇನು), ಶಕ್ರ (ಸಕ್ಕರೆ), ಫಲೋದಕ, ಪಂಚಾಮೃತ…ನಂತರ ಶುದ್ಧೋದಕದಿಂದ ಅಭಿಷೇಕವನ್ನು ಮಾಡಿ *ಮಹಾನ್ಯಾಸ* ಪ್ರಕಾರದಲ್ಲಿ_ ಪ್ರಾರಂಭಗೊಂಡು ಮಂಗಳಾಂಬಿಕೆಗೆ  ನಡೆಯುತ್ತದೆ.
 
ಮುಖ್ಯವಾಗಿ *ಅನುಷ್ಟುಪ್‌, ತ್ರಿಸ್ಟುಪ್‌ ಹಾಗೂ ಜಗತಿ*’ ಎಂಬ ಮೂರು ಮುಖ್ಯ ರೂಪಾಂತರಗಳುಂಟು. ರುದ್ರಾಧ್ಯಾಯವು *ಅನುಷ್ಟುಪ್*‌ ಛಂದಸ್ಸಿನಲ್ಲಿ ರಚಿತವಾಗಿದ್ದು, ತುಂಬು ಧ್ವನಿಯಲ್ಲಿ ಘಂಟಾ ಘೋಷದಂತೆ  ಮಾರ್ದನಿಸುವ, ಈ ರುದ್ರ ಚಮಕ-ನಮಕಾದಿಗಳ ಪಠಣದ ಮಹಾ ಮಂತ್ರಗಳನ್ನು ಮುಖ ಮಂಟಪದಲ್ಲಿ ಋತ್ವಿಕರೆಲ್ಲರೂ ಸೇರಿ ಲಯಬದ್ಧವಾಗಿ ಉಚ್ಛರಿಸಿ ದೇವಳದ ಅರ್ಚಕರಿಂದ ಶ್ರೀ ದೇವಿಯ ಬಿಂಬವು ಅಭಿಷಿಕ್ತವಾದಲ್ಲಿ ಸಂಪೂರ್ಣ ಶಿವ ಸಾನಿಧ್ಯವು ತೇಜೋಸ್ವರೂಪವಾಗಿ ಮೂಡಿ ಶಿವಶಕ್ತಿಯು ಪ್ರಕಟವಾಗುವುದು. ಪರಶಿವನ ಆರಾಧನೆಗೆ ಪ್ರಮುಖವಾಗಿ ಬಳಸುವುದು ರುದ್ರ: ನಮಕ-ಚಮಕಗಳು. ಸುಶ್ರಾವ್ಯ ಸ್ವರಮೇಳದಲ್ಲಿ ರುದ್ರಾಭಿಷೇಕ ನಡೆಸಿದಾಗ, ಅದನ್ನು ಕೇಳುವ ಮನಸ್ಸಿಗೆ ಸಿಗುವ ಆನಂದ ಇನ್ನಾವ ಮಂತ್ರದಿಂದಲೂ ಸಿಗುವುದು ಅಸಾಧ್ಯ.
 
*ಮುಂದೆ ತೆಗೆದುಕೊಂಡ ಸಂಕಲ್ಪದ ಪ್ರಕಾರ, ನಾವು ನಿರಂತರ ಜಲಾಭಿಷೇಕದೊಂದಿಗೆ ಏಕ ವರ (ಒಮ್ಮೆ ರುದ್ರಮ್ ಪಠಣ), ಏಕಾದಶ ವರ (ರುದ್ರಮ್ ೧೧ ಬಾರಿ ಪಠಣ), ಮತ್ತು ಶತ ರುದ್ರ (ರುದ್ರಮ್ ೧೦೦ ಬಾರಿ ಪಠಣ) ಪಠಿಸಬಹುದು.*
 
ಶತ ರುದ್ರಾಭಿಷೇಕವು ಅಭಿಷೇಕವನ್ನು ನೀಡುವ ದೀರ್ಘ ವಿಧಾನವಾಗಿದೆ.
ಹೀಗೆ ಚಮಕನಮಕಾದಿ ಗಳ ಉದ್ಘೋಷ ದೊಂದಿಗೆ ಬಿಲ್ವಪತ್ರೆಯ ಸಮರ್ಪಣೆಯೊಂದಿಗೆ ಅಭಿಷೇಕದ ಮುಖೇನ ಮನಸ್ಪೂರ್ವಕವಾಗಿ ಭಕ್ತಿಯಿಂದ ಪ್ರಾರ್ಥಿಸಿಕೊಂಡಾಗ ಸಪತ್ನಿ ಸಮೇತ ನೆಲೆನಿಂತ ರುದ್ರ ಸ್ವರೂಪಿ ಮಂಜುನಾಥ ಸ್ವಾಮಿಯೂ ಜಯಪ್ರದಳಾದ ಮಂಗಳಾದೇವಿಯೂ ಸನ್ಮಂಗಳವನ್ನುಂಟುಮಾಡಿ ಆಶೀರ್ವದಿಸುವರು.👏 
 
ಭಗವಂತನ ಸಾಕ್ಷಾದವತಾರ ಭಾರ್ಗವ ರಾಮರಿಂದ ಪ್ರತಿಷ್ಟಾಪಿತಳಾದ ಮಂಗಳಾಂಭೆಗೆ ನಾಳಿನ ದಿನ ಶತ ರುದ್ರಾಭಿಷೇಕವು ನಡೆದು ತೌಳವ ದೇಶವೇ ಪರಮ ಪಾವನವಾಗಲಿ. ಸರ್ವರ ಆಸೆ ಆಕಾಂಕ್ಷೆ ಇಚ್ಛೆಗಳನ್ನು ಶ್ರೀ ದೇವಿಯು ಪೂರೖೆಸಲಿ. ಸಕಲಾನಿಷ್ಠ ನಿವರ್ತಕಳಾದ ಮಹಾತಾಯಿಯು ನಾಳಿನ ಶತ ರುದ್ರಾಭಿಷೇಕ ಸೇವೆಯಿಂದ ಸಂತುಷ್ಟಳಾಗಿ ಪರಮ ಮಂಗಳವನ್ನು ದಯ ಪಾಲಿಸಲಿ. ನಿರ್ವ್ಯಾಜ ಕರುಣೆಯಿಂದ ನಮ್ಮೆಲ್ಲರನ್ನು ಉದ್ಧಾರ ಮಾಡಲಿ.
 
ॐ 
🪷 *ಓಂ ಹರ ನಮಃ ಪಾರ್ವತೀ ಪತಯೇ ಹರ ಹರ ಮಹದೇವ್*🪷
❄️𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢 𝐒𝐡𝐚𝐭𝐡𝐚 𝐑𝐮𝐝𝐫𝐚𝐛𝐡𝐢𝐬𝐡𝐞𝐤𝐚𝐦❄️
 
📿🔱( 11.07.2022, 𝐌𝐨𝐧𝐝𝐚𝐲)🔱📿
 
ओं नमो भगवते॑ रुद्रा॒य ॥ नम॑स्ते रुद्रम॒न्यव॑ उ॒तोत॒ इष॑वे॒ नमः॑ ।
नम॑स्ते अस्तु॒ धन्व॑ने बा॒हुभ्या॑-मु॒त ते॒ नमः॑ the shloka says that the one who removes all the difficulties and protect us is called 𝙍𝙪𝙙𝙧𝙖. He is the one who fulfills all the rightful desires of his devotees. 𝐑𝐮𝐝𝐫𝐚𝐛𝐡𝐢𝐬𝐡𝐞𝐤𝐚𝐦, the name itself suggests that it is primarily done to pray and please the lord 𝐒𝐡𝐢𝐯𝐚 (𝐑𝐮𝐝𝐫𝐚). The 𝑵𝒂𝒎𝒂𝒌𝒂 𝒂𝒏𝒅 𝑪𝒉𝒂𝒎𝒂𝒌𝒂  in Rudra Hymns describe the various forms of lord Shiva. These mantras not only pleases lord Shiva but also shows us a path through which we can get all our wishes fulfilled by him.
 
By chanting the Rudra Namaka and Rudra Chamaka from the fourth khanda of the 𝐤𝐫𝐢𝐬𝐡𝐧𝐚 𝐘𝐚𝐣𝐮𝐫 𝐕𝐞𝐝𝐚 𝐓𝐚𝐢𝐭𝐚𝐫𝐞𝐞𝐲𝐚 𝐒𝐚𝐦𝐡𝐢𝐭𝐡𝐚, abhishekam is performed to lord Shiva. 𝐁𝐢𝐥𝐯𝐚 𝐥𝐞𝐚𝐯𝐞𝐬 are also offered to him during this occasion. Thus by doing this, lord Shiva gets pleased and shall remove all the obstacles from the path of our lives by showering his ßlessing upon us and grant all our desired boons✨
 
𝐑𝐮𝐝𝐫𝐚 𝐀𝐛𝐡𝐢𝐬𝐡𝐞𝐤𝐡𝐚𝐦’ 𝐢𝐬 𝐨𝐧𝐞 𝐨𝐟 𝐭𝐡𝐞 𝐟𝐚𝐯𝐨𝐮𝐫𝐢𝐭𝐞 𝐩𝐫𝐚𝐲𝐞𝐫𝐬 𝐭𝐨 𝐩𝐥𝐞𝐚𝐬𝐞 𝐥𝐨𝐫𝐝 𝐑𝐮𝐝𝐫𝐚 (𝐒𝐡𝐢𝐯𝐚). 𝐁𝐨𝐭𝐡 𝐥𝐨𝐫𝐝 𝐌𝐚𝐧𝐣𝐮𝐧𝐚𝐭𝐡𝐚 𝐚𝐧𝐝 𝐬𝐫𝐢 𝐃𝐞𝐯𝐢 𝐫𝐞𝐬𝐢𝐝𝐞 𝐢𝐧 𝐭𝐡𝐞 𝐥𝐢𝐠𝐚 𝐫𝐨𝐨𝐩𝐚 𝐨𝐟 𝐆𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢. 
 
Shatha Rudrabhishekam’ is performed by temple authorities to please Goddess sri Mangaladevi for the well being of each and every one living in this world and also to make it a beautiful place to live.👏
 
As per the panchanga, in the year named Shubhakrith, in the month called ashada, during the summer solstice called uttarayana, during the fading phase of the moon called shukla Paksha, Monday morning around 8.30 Am,  𝐒𝐡𝐚𝐭𝐡𝐚 𝐑𝐮𝐝𝐫𝐚𝐛𝐡𝐢𝐬𝐡𝐞𝐤𝐚𝐦 shall be performed to our beloved Goddess Sri Mangaladevi
 
𝙍𝙪𝙙𝙧𝙖 describes the countless forms of lord Shiva and hence it is generally termed as 𝗦𝗵𝗮𝘁𝗮 𝗿𝘂𝗱𝗿𝗶𝘆𝗮. In the first part of these mantras, repeatedly end with word 𝐍𝐚𝐦𝐚𝐡𝐚 and hence it is called as 𝙉𝙖𝙢𝙖𝙠𝙖 and the second part of these mantras end with ‘𝘾𝙝𝙖’𝙢𝙚’ repeatedly. Thus calling it as 𝐜𝐡𝐚𝐦𝐚𝐤𝐚.
 
𝐑𝐮𝐝𝐫𝐚𝐛𝐡𝐢𝐬𝐡𝐞𝐤𝐡𝐚𝐦 𝐢𝐬 𝐯𝐞𝐫𝐲 𝐝𝐞𝐚𝐫 𝐭𝐨 𝐭𝐡𝐞 𝐥𝐨𝐫𝐝 𝐑𝐮𝐝𝐫𝐚. 𝐓𝐡𝐞 𝐚𝐜𝐭𝐮𝐚𝐥 𝐟𝐨𝐫𝐦 𝐢𝐧 𝐭𝐡𝐞 𝐋𝐢𝐧𝐠𝐚 𝐢𝐧 𝐌𝐚𝐧𝐠𝐚𝐥𝐚𝐝𝐞𝐯𝐢 𝐭𝐞𝐦𝐩𝐥𝐞 𝐜𝐨𝐧𝐬𝐢𝐬𝐭𝐬 𝐨𝐟 𝐛𝐨𝐭𝐡 𝐒𝐡𝐢𝐯𝐚 𝐚𝐧𝐝 𝐒𝐡𝐚𝐤𝐭𝐡𝐢 𝐢𝐧 𝐢𝐭 𝐰𝐢𝐭𝐡 𝐭𝐡𝐞 𝐩𝐫𝐞𝐝𝐨𝐦𝐢𝐧𝐚𝐧𝐜𝐞 𝐨𝐟 𝐅𝐞𝐦𝐢𝐧𝐢𝐧𝐞 𝐩𝐨𝐰𝐞𝐫, 𝐑𝐮𝐝𝐫𝐚𝐛𝐡𝐢𝐬𝐡𝐞𝐤𝐡𝐚 𝐢𝐬 𝐯𝐞𝐫𝐲 𝐝𝐞𝐚𝐫 𝐭𝐨 𝐠𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢. 𝐀𝐥𝐨𝐧𝐠 𝐰𝐢𝐭𝐡 𝐭𝐡𝐞 𝐬𝐡𝐚𝐭𝐡𝐚 𝐑𝐮𝐝𝐫𝐚𝐛𝐡𝐢𝐬𝐡𝐞𝐤𝐡𝐚, 𝐆𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢 𝐰𝐚𝐬 𝐚𝐥𝐬𝐨 𝐠𝐢𝐯𝐞𝐧 𝐚 𝐩𝐫𝐚𝐲𝐞𝐫𝐬 𝐨𝐟𝐟𝐞𝐫𝐞𝐝 𝐭𝐨 𝐭𝐡𝐞𝐦  𝐛𝐲 𝐭𝐡𝐞 𝐩𝐫𝐢𝐞𝐬𝐭𝐬, 𝐭𝐡𝐢𝐬 𝐡𝐨𝐥𝐲 𝐰𝐚𝐭𝐞𝐫 𝐢𝐬 𝐭𝐡𝐞𝐧 𝐨𝐟𝐟𝐞𝐫𝐞𝐝 𝐭𝐨 𝐆𝐨𝐨𝐝𝐞𝐬𝐬 𝐚𝐬 𝐀𝐛𝐡𝐢𝐬𝐡𝐞𝐤𝐡𝐚𝐦.
 
‘Rudra Abhishekham is performed by chanting the Vedic hyms Rudra and Chamka as written in the fourth part of the taitriya Upanishad belonging to the krishna yajurveda sect. The Rudra Abhishekham is performed by chanting this Rudra and Chamka 100 times by 11 priests to Mangalamma.
 
In Rudra Namaka has eleven anuvakas (cantos), the first can to pleases lord Shiva, second to nine anuvakas is for doing our prostrations to him by chanting his various names, Tenth anuvaka consists of our prayers to him while the eleventh anuvakas consists of hymns praising him called 𝗥𝘂𝗱𝗿𝗮 𝘀𝘁𝗵𝘂𝘁𝗶.👏✨
 
There are eleven rudras and they are 𝐌𝐫𝐮𝐠𝐡𝐚𝐯𝐲𝐚𝐝𝐡𝐚, 𝐒𝐡𝐚𝐫𝐯𝐚, 𝐍𝐢𝐫𝐮𝐭𝐡𝐢, 𝐀𝐣𝐚𝐢𝐤𝐚𝐩𝐚𝐭𝐡, 𝐏𝐢𝐧𝐚𝐤𝐢, 𝐀𝐡𝐢𝐫𝐛𝐮𝐝𝐡𝐧𝐢, 𝐁𝐡𝐚𝐯𝐚𝐧𝐚𝐭𝐡𝐚, 𝐌𝐚𝐡𝐞𝐬𝐡𝐰𝐚𝐫𝐚, 𝐁𝐡𝐚𝐧𝐮, 𝐁𝐡𝐚𝐯𝐚 𝐚𝐧𝐝 𝐊𝐚𝐚𝐩𝐚𝐥𝐢.🔱📿
 
The head of these Rudras is the lord Shiva. These 11 Anuvakas in the Rudra Namaka and chamaka are the forms of these 11 rudras and Abhishekam is performed to these 11 forms of Rudras by chanting the mantras of 𝐑𝐮𝐝𝐫𝐚 𝐍𝐚𝐦𝐚𝐤𝐚 𝐚𝐧𝐝 𝐂𝐡𝐚𝐦𝐚𝐤𝐚.
 
As per Shiva Purana, chanting of rudra and chamaka are very dear to lord Shiva. Rudrabhishekham is performed by chanting these rudra namaka and chamaka from the yajurveda. Rudra has 11 anuvakas, similarly does the chamaka too contain 11 anuvakas. Chanting of these rudra and chamaka together fully, once is called 𝐃𝐚𝐢𝐧𝐚𝐧𝐝𝐢𝐧𝐚 𝐍𝐲𝐚𝐬𝐚. Chanting the 3rd canto of chamaka, then chanting one rudra and 11 chamaka in full is termed as 𝗥𝘂𝗱𝗿𝗮.
 
𝑺𝒉𝒂𝒕𝒂 𝒎𝒆𝒂𝒏𝒔 𝒉𝒖𝒏𝒅𝒓𝒆𝒅. 𝑺𝒉𝒂𝒕𝒂 𝒓𝒖𝒅𝒓𝒂𝒃𝒉𝒊𝒔𝒉𝒆𝒌𝒉𝒂 𝒎𝒆𝒂𝒏𝒔 𝒄𝒉𝒂𝒏𝒕𝒊𝒏𝒈 𝒄𝒉𝒂𝒏𝒕𝒊𝒏𝒈 𝒐𝒏𝒆 𝒓𝒖𝒅𝒓𝒂 𝒂𝒏𝒅 11 𝒄𝒉𝒂𝒎𝒂𝒌𝒂 𝒂𝒏𝒅 𝒑𝒆𝒓𝒇𝒐𝒓𝒎𝒊𝒏𝒈 𝒂𝒃𝒉𝒊𝒔𝒉𝒆𝒌𝒂𝒎 𝒕𝒐 𝒕𝒉𝒆 𝒍𝒊𝒏𝒈𝒂 𝒇𝒐𝒓𝒎 𝒐𝒇 𝒐𝒖𝒓 𝒃𝒆𝒍𝒐𝒗𝒆𝒅 𝒈𝒐𝒅𝒅𝒆𝒔𝒔, 𝒉𝒖𝒏𝒅𝒓𝒆𝒅 𝒕𝒊𝒎𝒆𝒔.
 
Rudra has been praised as the Mmightiest of the mighty”. Rudra is the personification of ‘Terror’, he is the remover of pain and the one who cures all diseases. Lord Shiva is the protector of his devotees and the one who can be easily pleased to fulfill all our wishes. Mangaladevi along with lord Shiva accepted the Rudra Abhishekham performed to them and are ready to fulfill our wishes and bless us with our desired boons. The temple authorities and priests also sought the blessings of Goddess Mangaladevi and also prayed to her to find all prosperities.✨

Photos