Sri Mangaladevi Navarathri Festival 2022 – Day 8

Blissful Darshan

Mangaladevi Daily Darshan 03rd October 2022

~^~

🤍🔹.‹∾«ଅ ಅಷ್ಟಮಿ ದಿನ ✨ ಸರಸ್ವತಿ°∾›.🔹🤍

🤍♦️‹∾«ଅEighth day ✨ 𝙎𝙖𝙧𝙖𝙨𝙬𝙖𝙩𝙝î°∾›♦️🤍

 
ಪಂಚಾಷದ್ವರ್ಣಭೇದೈರ್ವಿಹಿತವದನದೋಷ್ಪಾದಹೃತ್ಕುಕ್ಷಿವಕ್ಷೋದೇಶಾಂಭಾಸ್ವತ್ಕಪರ್ದಾಕಲಿತಶಶಿಕಲಾಮಿಂದುಕುಂದಾವದಾತಾಮ್ । ಅಕ್ಷಸ್ರಕ್ಕುಂಭಚಿಂತಾಲಿಖಿತವರಕರಾಂ ತ್ರೀಕ್ಷಣಾಂ ಪದ್ಮಸಂಸ್ಥಾಂ ಅಚ್ಛಾಕಲ್ಪಾಮತುಚ್ಛಸ್ತನಜಘನಭರಾಂ ಭಾರತೀಂ ತಾಂ ನಮಾಮಿ ॥ ಓಂ ಸರಸ್ವತ್ಯೈ ನಮಃ ๛:๛:
 
🌹✨ಯಾ ಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾ ವರದಂಡ ಮಂಡಿತಕರಾ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಸ್ಸದಾ ಪೂಜಿತಾ ಸಾಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಃ✨🌹
 
_ವಿದ್ಯಾಧಿ ದೇವತೆಯಾದ ಸರಸ್ವತಿಯ ಆರಾಧನೆ ನವರಾತ್ರಿಯ ಪರ್ವಕಾಲದ ಎಂಟನೇಯ ದಿವಸದಂದು ನಡೆಯುವುದು. ಶರನ್ನವರಾತ್ರಿಯ ಕಳೆದ ಸಪ್ತಮಿಯಂದು ತಾಮಸ ಚಂಡಿಕೆ ಸ್ವರೂಪಿಣೆಯಾಗಿದ್ದ ದೇವಿಯು ಇಂದಿನ ದುರ್ಗಾಷ್ಟಮಿಯಂದು ವಿಣಾ ಪಾಣಿಯಾದ ಸಾತ್ವಿಕ ಸರಸ್ವತೀ ಸ್ವರೂಪಳಾಗಿ ಪರಿಶೋಭಿಸುತ್ತಿರುವಳು._
 
_ಪರಬ್ರಹ್ಮನ ಸುಗುಣ ರೂಪಳಾದ ವಿದ್ಯೆ-ಸದ್ಭುದ್ಧಿ ಯಶಸ್ಸನ್ನು ನೀಡುವ ಜ್ಞಾನ ದಾಯಿಕೆಯಾಗಿ ಶುಭ್ರವಾದ ಉತ್ತರ್ಯದಿಂದ ಶ್ವೇತ ವರ್ಣದ ಸೀರೆಯನ್ನು ಧರಿಸಿ, ಪದ್ಮಾಸನಸ್ಥಿತಳಾಗಿರುವ ಸರ್ವಮಂಗಳೆಯು ತನ್ನ ಕಾಲಂದುಗೆಯಲ್ಲಿ ಹೊಳೆಯುವ ರಜತ ವೀಣೆಯನ್ನು ಮೀಟುವ ಭಂಗಿಯಲ್ಲಿ ವಿರಾಜಮಾನಳಾಗಿ ಅಭಯ ವರದ ಹಸ್ತಳಾಗಿ, ವರದ ಹಸ್ತದಲ್ಲಿ ಪುಸ್ತಕವನ್ನು ಪಿಡಿದು ರುದ್ರಾಕ್ಷಿಯ ಜಪಮಣೆಯನ್ನು ಹಾಗೂ ರಜತ ಪುಷ್ಪ ಕಮಲವನ್ನು ಧರಿಸಿ, ವೀಣಾಹಸ್ತೆ ಮಂದಸ್ಮಿತಳಾಗಿ ಶರನ್ನವರಾತ್ರಿಯ ಇಂದಿನ ದುರ್ಗಾಷ್ಟಮಿಯ ಪುಣ್ಯ ಕಾಲದಲ್ಲಿ ಸಾಕ್ಷಾತ್ ಜ್ಞಾನ ದಾಯಿಕೆ ಶಾರದೆಯಾಗಿ ಆರಾಧಿಸಲ್ಪಡುತ್ತಾಳೆ.❤️_
 
_ದೇವಳವನ್ನು ಪ್ರವೇಶಿಸಿ ಗರ್ಭಗೃಹದಲ್ಲಿ ವಿಣಾ ಪಾಣಿಯಾಗಿ ಸುಖಾಸೀನಳಾದ ಮಂಗಳಾದೇವಿಯ ದರ್ಶನ ಭಾಗ್ಯದಿಂದ ಕೃತಾರ್ಥರಾಗಿ ಆಕೆಯ ಪರಿಪೂರ್ಣ ದೈವಿಕ ಕಲೆಗಳಿಂದ ರಂಜಿಸುವ ಶ್ವೇತವರ್ಣೆ ಸಾತ್ವಿಕ ಸರಸ್ವತೀ ಅಲಂಕಾರಯುಕ್ತಳಾದ ಮಹಾತಾಯಿಯ ದರ್ಶನ ಮಾತ್ರದಿಂದ ಸರ್ವಜ್ಞಾನವು ಲಭಿಸಿ ಅಪೂರ್ವ ಸೌಂದರ್ಯದಿಂದ ಮೈ ಮರೆಯುವಷ್ಟು ಸಂತೋಷ ಅವಳ ಇಂದಿನ ಸರಸ್ವತಿ ಅಲಂಕಾರದ್ದು._
 
_ಸಕಲ ಬುದ್ಧಿ ಭಾವ ರಸಗಳ ವಿಶುದ್ಧ ವಿವಿಧ ರೂಪಗಳಲ್ಲಿ ಪ್ರಕಟಳಾಗುವ ಮಹಾಶಕ್ತಿಯ ಸಾತ್ವಿಕ ಶಾಂತ ಸ್ವರೂಪವೇ ವಿದ್ಯಾಧಿ ದೇವತೆ ಸರಸ್ವತಿ. ಸರ್ವಶುಕ್ಲೆಯಾದ ಆಕೆಯ ವಸ್ತ್ರಾಭರಣಗಳು ಶ್ವೇತವರ್ಣದವುಗಳು. ಋಗ್ವೇದಾದಿ ಉಪನಿಷತ್ತುಗಳಲ್ಲಿ ದೇವಿಯನ್ನು ‘ವಾಕ್’ಎಂದು ಸ್ತುತಿಸಲ್ಪಟ್ಟಿದೆ. ಚತುರ್ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ. ಕ್ರಿ.ಪೂ. ಸುಮಾರು ೩೫೦೦’ ವರ್ಷಗಳಷ್ಟು ಸುದೀರ್ಘ ಪ್ರಾಚೀನತೆ ಋಗ್ವೇದಕ್ಕಿದೆ. ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇರುವ ಅತ್ಯಂತ ಪ್ರಾಚೀನವಾದುದೂ, ಅಧಿಕೃತವೂ ಆದ ಆಕರವು ಋಗ್ವೇದವೇ ಆಗಿದೆ._
 
_ತಾಯಿ ಸರಸ್ವತಿ ವೀಣಾ ವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಈಕೆ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಅನುಪಮ ಸೌಂದರ್ಯವತಿ ಜೀವ ಬ್ರಹ್ಮೈಕತ್ವದ ಪ್ರತಿ ರೂಪಳಾಗಿರುವ ವಿದ್ಯಾವಾಚ್ಛಸ್ಪತಿ ಯಾದ ಈಕೆಯ ಅನುಗ್ರಹದಿಂದ ಬ್ರಹ್ಮ ಜ್ಞಾನವು ‘ಧೀ’ಶಕ್ತಿಯು ಲಭಿಸುವುದು. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆದ ಸರಸ್ವತಿ ಕಲೆ ಸಾಹಿತ್ಯ ಜ್ಞಾನ ವಿದ್ಯೆಯ ಪ್ರತಿರೂಪ. ಆಕೆಯ ಆರಾಧಿನೆಯಿಂದ ಜ್ಞಾನವು ಪುಸ್ತಕದಲ್ಲಷ್ಟೇ ಅಲ್ಲದೆ ಮಸ್ತಕದಲ್ಲೂ ಸದಾ ಉಳಿಯುವಂತಾಗಲೆಂದು ಪ್ರಾರ್ಥಿಸೋಣ._
 
🌹✨⛯ಪ್ರಣೋ ದೇವೀ ಸರಸ್ವತೀ, ವಾಜೇಭಿರ್ವಾಜಿನೀವತೀ ।ಧೀನಾಮವಿತ್ರ್ಯವತು ।ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್ ।
ವಾಗ್ದೇವ್ಯೈ ನಮಃ ।।⛯✨🌹
 
🌹✨ನಮಸ್ತೇ ಶಾರದ ದೇವಿ ಕಾಶ್ಮೀರಪುರವಾಸಿನಿ 
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಬುದ್ಧಿಂ ಚ ದೇಹಿ ಮೇ ॥ 
ಯಾ ಶ್ರದ್ಧಾ ಧಾರಣಾ ಮೇಧಾವಾಗ್ದೇವೀ ವಿಧಿವಲ್ಲಭಾ।ಭಕ್ತಜಿಹ್ವಾಗ್ರಸದನಾ ಶಮಾದಿಗುಣದಾಯಿನೀ ॥ 
ನಮಾಮಿ ಯಾಮಿನೀಂ ನಾಥ ಲೇಖಾಲಂಕೃತಕುನ್ತಲಾಮ್ ।
ಭವಾನೀಂ ಭವಸನ್ತಾಪನಿರ್ವಾಪಣಸುಧಾ ದೀಮ್ ॥✨🌹
 
🌹✨ಶುಕ್ಲಾಂ ಬ್ರಹ್ಮವಿಚಾರಸಾರಪರಮಾಮಾದ್ಯಾಂ ಜಗದ್ವ್ಯಾಪಿನೀಂ ।
ವೀಣಾಪುಸ್ತಕಧಾರಿಣೀಮಭಯದಾಂ ಜಾಡ್ಯಾಂಧಕಾರಾಪಹಾಮ್ ॥
ಹಸ್ತೇ ಸ್ಫಾಟಿಕಮಾಲಿಕಾಂ ವಿದಧತೀಂ ಪದ್ಮಾಸನೇ ಸಂಸ್ಥಿತಾಂ ।
ವಂದೇ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿಪ್ರದಾಂl ಶಾರದಾಂ ॥✨🌹
𝐒𝐡𝐚𝐫𝐚𝐝 𝐏𝐨𝐨𝐣𝐚 𝐛𝐞𝐢𝐧𝐠 𝐩𝐞𝐫𝐟𝐨𝐫𝐦𝐞𝐝 𝐛𝐲 𝐰𝐨𝐫𝐬𝐡𝐢𝐩𝐩𝐢𝐧𝐠 𝐭𝐡𝐞 𝐀𝐧𝐜𝐢𝐞𝐧𝐭 𝐒𝐚𝐫𝐚𝐬𝐰𝐚𝐭𝐢 𝐆𝐫𝐚𝐧𝐭𝐡 𝐢𝐧 𝐭𝐡𝐞 𝐂𝐡𝐚𝐧𝐝𝐫𝐚𝐬𝐡𝐚𝐥𝐚 𝐨𝐧 𝐭𝐡𝐞 𝐩𝐚𝐯𝐢𝐥𝐥𝐢𝐨𝐧 𝐨𝐟 𝐭𝐡𝐞 𝐭𝐞𝐦𝐩𝐥𝐞 (𝐌𝐮𝐤𝐡 𝐦𝐚𝐧𝐭𝐚𝐩) 𝐨𝐧 𝐭𝐡𝐞 𝐨𝐜𝐜𝐚𝐬𝐬𝐢𝐨𝐧 𝐨𝐟 𝐌𝐮𝐥𝐚 𝐍𝐚𝐤𝐬𝐡𝐚𝐭𝐫𝐚👏
 
𝙏𝙤𝙙𝙖𝙮 𝙞𝙨 𝙩𝙝𝙚 8𝙩𝙝 𝙙𝙖𝙮 𝙤𝙛 𝙉𝙖𝙫𝙖𝙧𝙖𝙩𝙧𝙞, 𝘵𝘩𝘦 𝘎𝘰𝘥𝘥𝘦𝘴𝘴 𝘰𝘧 𝘬𝘯𝘰𝘸𝘭𝘦𝘥𝘨𝘦, 𝘚𝘢𝘳𝘢𝘴𝘸𝘢𝘵𝘪 𝘋𝘦𝘷𝘪 𝘪𝘴 𝘴𝘱𝘦𝘤𝘪𝘢𝘭𝘭𝘺 𝘸𝘰𝘳𝘴𝘩𝘪𝘱𝘱𝘦𝘥 𝘥𝘶𝘳𝘪𝘯𝘨 𝘵𝘩𝘪𝘴 𝘥𝘢𝘺.
 
With the installation of Saraswati on this same Mula Nakshatra, _*Sharada Puja*’_ is performed in the Chandrashale (outer sanctum) of the temple. 𝐒𝐩𝐞𝐜𝐢𝐚𝐥 𝐰𝐨𝐫𝐬𝐡𝐢𝐩 𝐢𝐬 𝐝𝐨𝐧𝐞 𝐭𝐨 𝐭𝐡𝐞 𝐒𝐚𝐫𝐚𝐬𝐰𝐚𝐭𝐢 𝐆𝐫𝐚𝐧𝐭𝐡, 𝐚𝐧 𝐚𝐧𝐜𝐢𝐞𝐧𝐭 𝐛𝐨𝐨𝐤 𝐰𝐫𝐢𝐭𝐭𝐞𝐧 𝐢𝐧 𝐒𝐚𝐧𝐬𝐤𝐫𝐢𝐭 𝐥𝐚𝐧𝐠𝐮𝐚𝐠𝐞.
 
𝖨𝗍 𝗂𝗌 𝖺𝗇 𝖺𝗀𝖾 𝗈𝗅𝖽 𝗍𝗋𝖺𝖽𝗂𝗍𝗂𝗈𝗇 𝗈𝖿 𝗍𝗁𝖾 𝗍𝖾𝗆𝗉𝗅𝖾 𝗍𝗈 𝗐𝗈𝗋𝗌𝗁𝗂𝗉 𝗍𝗁𝗂𝗌 𝗁𝗈𝗅𝗒 𝖻𝗈𝗈𝗄 𝗈𝗇 𝗍𝗁𝗂𝗌 𝗈𝖼𝖼𝖺𝗌𝗂𝗈𝗇. 𝖨𝗍 𝗂𝗌 𝖻𝖾𝗅𝗂𝖾𝗏𝖾𝖽 𝗍𝗁𝖺𝗍 𝖺𝗅𝗅 𝗍𝗁𝖾 𝖾𝗌𝗌𝖾𝗇𝖼𝖾 𝗈𝖿 𝗄𝗇𝗈𝗐𝗅𝖾𝖽𝗀𝖾 𝗈𝖿 𝖡𝗋𝖺𝗁𝗆𝖺 𝗂𝗌 𝗁𝗂𝖽𝖽𝖾𝗇 𝗂𝗇 𝗂𝗍. 𝖳𝗁𝖾𝗋𝖾𝖿𝗈𝗋𝖾 𝖦𝗈𝖽𝖽𝖾𝗌𝗌 𝖲𝖺𝗋𝖺𝗌𝗐𝖺𝗍𝗂 𝗁𝖾𝗋𝗌𝖾𝗅𝖿 𝗂𝗌 𝗐𝗈𝗋𝗌𝗁𝗂𝗉𝖾𝖽 𝗂𝗇 𝗍𝗁𝖾 𝖿𝗈𝗋𝗆 𝗈𝖿 𝗍𝗁𝗂𝗌 𝖻𝗈𝗈𝗄 𝗈𝗇 𝗍𝗁𝗂𝗌 𝖽𝖺𝗒.❤️
 
ಸರಸ್ವತೀ ತ್ವಯಂ ದೃಷ್ಟ್ವಾ ವೀಣಾಪುಸ್ತಕಧಾರಿಣೀ | ಹಂಸವಾಹ ಸಮಾಯುಕ್ತಾ ವಿದ್ಯಾದಾನಕರೀ ಮಮ ॥ ೧॥  
 
ಪ್ರಥಮಂ ಭಾರತೀ ನಾಮಾ ದ್ವಿತೀಯಂ ಚ ಸರಸ್ವತೀ | ತೃತೀಯಂ ಶಾರದಾದೇವೀ ಚತುರ್ಥಂ ಹಂಸವಾಹನಾ ॥ ೨॥
 
  ಪಂಚಮಂ ಜಗತೀಖ್ಯಾತಂ ಷಷ್ಠಂ ವಾಗೀಶ್ವರೀ ತಥಾ | ಕೌಮಾರೀ ಸಪ್ತಮಂ ಪ್ರೋಕ್ತಮ್ ಅಷ್ಟಮಂ ಬ್ರಹ್ಮಚಾರಿಣೀ | ೩||
 
 ನವಮಂ ಬುದ್ದಿಧಾತ್ರೀ ಚ ದಶಮಂ ವರದಾಯಿನೀ | ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀ | ೪॥  
 
ಬ್ರಾಹ್ಮೀ ದ್ವಾದಶ ನಾಮಾನಿ ತ್ರಿಸಂಧ್ಯಂ ಯಃ ಪಶೇನ್ನರಃ | ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀ | ಸಾ ಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪಾ ಸರಸ್ವತೀ ॥ ೫ ॥