Sri Mangaladevi Navarathri Festival 2022 – Day 9

Blissful Darshan

Mangaladevi Daily Darshan 4th October 2022

~^~

✹✼۞🌼ನವಮಿ ದಿನ ઊ»ವಾಗೀಶ್ವರಿ۞✼✹

☫۞🌼Ninth day ઊ»𝙑𝙖𝙜𝙚𝙨𝙝𝙬𝙖𝙧𝙞۞☫

 
ಅಮಲಕಮಲಸಂಸ್ಥಾ ಲೇಖನೀಪುಸ್ತಕೋದ್ಯತ್ಕರಯುಗಲಸರೋಜ ಕುಂದಮಂದಾರಗೌರಾ |
ಧೃತಶಶಧರ ಖಂಡೋಲ್ಲಾಸಿಕೋಟೀರಚೂಡ ಭವತು ಭವಭಯಾನಾಂ ಭಂಜಿನೀ ಭಾರತೀ ನಃ ||
🌸ಓಂ ವದ ವದ ವಾಗ್ವಾದಿನಿ ವಾದಿನಿ ಸ್ವಾಹಾ ಓಂ ವಾಗೀಶ್ವರ್ಯೈ ನಮಃ🌸
 
ಶರನ್ನವರಾತ್ರಿಯಲ್ಲಿ ಅನಂತ ರೂಪಗಳಿಂದ ತನ್ನ ಮಹಿಮೆಯ ಸಂಪನ್ನತೆಯನ್ನು ತೋರ್ಪಡುತ್ತಿರುವ ಮಹಾದೇವಿಯು ಇಂದಿನ ಮಹಾನವಮಿಯ ಮಂಗಳವಾರದಂದು ವಾಗ್ದೇವಿಯಾದ ವಾಗೀಶ್ವರಿ ಅಲಂಕಾರದಲ್ಲಿ ಪೂಜಾರ್ಹಳಾಗುವಳು.🌹👏
 
ಇಂದು ಶುಭಕೃತ ನಾಮ ಸಂವತ್ಸರದ ಮಹಾನವಮಿ ಶುಭ ದಿನ. ಸಾಕ್ಷಾತ್ ದೇವಿಯೇ ನಮ್ಮನ್ನು ಕಾಪಾಡಿ, ಕೈ ಹಿಡಿದು ಮುನ್ನಡೆಸುವ ಅತ್ಯಂತ ಶುಭ ಸಮಯ. ಶರನ್ನವರಾತ್ರಿಯಂದು ಲೋಕದ ಸರ್ವ ಸಂಕಷ್ಟಗಳನ್ನು ಕಳೆದು, ನೆಮ್ಮದಿ ಕರುಣಿಸಿ ಅಭಿವೃದ್ಧಿಯಿಂದ ಸನ್ಮಾರ್ಗದೆಡೆಗೆ ಕರೆದೊಯ್ಯುವ  ಶುಭ ಕಾಲ. ಹೀಗೆ ಸರ್ವವೂ ಶುಭವಾಗಲೆಂದು ಹಾರೈಸುತ್ತಾ ಸಕಲ ಶುಭಂಕರಿ ಸನ್ಮಂಗಳೆಯಾದ ತಾಯಿಯನ್ನು ಅನವರತ ಆರಾಧಿಸಿದಲ್ಲಿ ಸಕಲ ಮನೋಭಿಷ್ಟವನ್ನು ಶೀಘ್ರ ಅನುಗ್ರಹಿಸುತ್ತಾ ಭಕ್ತ ವತ್ಸಲೆಯಾಗಿ ಮೆರೆದಿರುವ ನಮ್ಮ ಮಂಗಳಮ್ಮನಿಗೆ ಇಂದು ಶರನ್ನವರಾತ್ರಿಯ ನವಮಿ ಸಂಭ್ರಮ.
 
_ಶರನ್ನವರಾತ್ರಿಯಲ್ಲಿ ಮೊದಲ ಎಂಟೂ ದಿನಗಳಲ್ಲೂ ವಿವಿಧ ಅಲಂಕಾರದಲ್ಲಿ ವೈಭವಿತಳಾದ ಭಾರ್ಗವ ಸ್ಥಾಪಿತೆಗೆ, ಇಂದಿನ ಒಂಭತ್ತನ್ನೇಯ ದಿನವಾದ ಮಹಾನವಮಿಯ ಮಂಗಳವಾರದ ಪುಣ್ಯ ದಿನದಂದು ವಾಗ್ದೇವಿಯಾದ ‘ವಾಗೇಶ್ವರಿ’ಯ ಸ್ವರೂಪಳಾಗಿ ಆರಾಧನೆ._
 
_ಆಶ್ವಯುಜ ಶುಕ್ಲ ನವಮಿಯ ಇಂದಿನ ಅಲಂಕಾರದಲ್ಲಿ ಲೋಕಮಾತೆಯು ಕಣ್ಣುಕೋರೈಸುವ ಕಾಂತಿಯಿಂದ ಚತುರ್ಬಾಹುಗಳನ್ನು ಚಾಚಿನಿಂತು ಕೋಟಿ ಸೂರ್ಯರ ಪ್ರಭೆಯಂತೆ ಪ್ರಜ್ವಲಿಸಲ್ಪಡುತ್ತಿದ್ದಾಳೆ. ಗುಲಾಬಿ ಕೆಂಪು ವರ್ಣದ ಸೀರೆಯನ್ನು ತೊಟ್ಟು ಸರ್ವಾಭರಣ ಭೂಷಿತಳಾದ ಶ್ರೀ ದೇವಿಯು ಅಭಯ ವರದ ಹಸ್ತಗಳಾಗಿ, ತನ್ನ ಪಾರ್ಶ್ವ ಕರದಲ್ಲಿ ಚಕ್ರವನ್ನು, ವಾಮ ಹಸ್ತದಲ್ಲಿ ಶಂಖವನ್ನು ಧರಿಸಿ ಕಾಲಂದುಗೆಯಲ್ಲಿ ಖಡ್ಗವನ್ನಿರಿಸಿ, ಸಿಂಹ ರಾಜನ ಮೇಲೆ ಆಸೀನಳಾಗಿ ಪರಮೋತ್ಕೃಷ್ಟ ಮೇಧಾಸಂಪನ್ನೆ, ಅಪ್ರತಿಮ ಸೌಂದರ್ಯವತಿಯೂ ಜ್ಞಾನವತಿಯೂ ಆದ ಜ್ಞಾನ ದೇವತೆ ವಾಗ್ದೇವಿ ವಾಗೀಶ್ವರಿಯಾಗಿ ಮಂಗಳಾಂಭೆಯು ಇಂದಿನ ನವಮಿಯಂದು ಸರ್ವಾಲಂಕೃತಳಾಗಿರುವಳು. _
 
_ರಾಜಸ, ತಾಮಸ, ಸಾತ್ವಿಕ ಸೌಮ್ಯ, ಶಾಂತ ಸ್ವರೂಪಗಳಲ್ಲಿ ಅಲಂಕಾರದ ಮುಖೇನ ಕಂಡುಬಂದ ದೇವಿಯು ಇಂದಿನ ನವಮಿಯಂದು ರಜೋ ಸ್ವರೂಪಳಾದ ವಾಗೀಶ್ವರಿಯಾಗಿ ಮಹಾ ನವಮಿಯಂದು ಪೂಜಾರ್ಹಳಾಗುವಳು._
 
*ಸರಸ್ವತಿಯ ತದ್ರೂಪಳಾದ ವಾಗೀಶ್ವರಿಯು ವಾಗ್ಚಾತುರ್ಯತೆಯ ಜ್ಞಾನದ ಅಧಿ ದೇವತೆ. ಕಲೆ, ಸಾಹಿತ್ಯ , ಸಂಗೀತ, ವಿಜ್ಞಾನ ಪಾಂಡಿತ್ಯಳಾದ ವಾಗೇಶ್ವರಿಯ ಅನುಗ್ರಹದಿಂದ ವಾಗ್ವಿದ್ಯೆ, ಯಶಸ್ಸು, ತ್ರಿಕಾಲ ಜ್ಞಾನವು ಪ್ರಾಪ್ತಿಯಾಗುವುದು. ಸಮಸ್ತ ವಾಙ್ಮಯ ಜಗತ್ತು ಈಕೆಯ ಅಧೀನ. ಎಲ್ಲಾ ವರ್ಣಾಭಿಮಾನಿ ದೇವತೆಗಳು ಈಕೆಯ ಆಶ್ರಿತರು. ಈಕೆಯ ಅನುಗ್ರಹದಿಂದ ಜನ್ಮತಾ ಮೂಕನಾದರೂ ವಾಗ್ಮಿಯಾಗ ಬಲ್ಲನು. ಜಡಮತಿಯೂ ಪ್ರಾಜ್ಞ ನಾಗುವನು. ‘ವಾಗೀಶ್ವರಿ’ಎಂದರೆ ಸಾಕ್ಷಾತ್ ಸರಸ್ವತಿ. ಜ್ಞಾನ ದೇವತೆ. ವಾಗ್ವಿದ್ಯಾಧಿಪತಿ ವಾಗ್ದೇವಿ. ಇವಳನ್ನು ಭಕ್ತಿ ಪೂರ್ವಕ ಪೂಜಿಸಿದರೆ ಸರ್ವಜ್ಞತ್ವವನ್ನೇ ಅನುಗ್ರಹಿಸುತ್ತಾಳೆ. ವಾಗೀಶ್ವರಿಯ ಕೃಪಾಕಟಾಕ್ಷ ಒಂದಿದ್ದರೆ ಸಾಕು, ಬದುಕು ಸಾಂಗವಾಗುತ್ತದೆ. ವೇದಗಳು ಈಕೆಯನ್ನು ‘ಸುವಿದ್ಯಾದಾನಿ’ ಅರ್ಥಾತ್ ಭಗವತ್ಸಂಬಂಧವಾದ ಬ್ರಹ್ಮವಿದ್ಯೆಯನ್ನು ಕೊಡುವವಳು ಎಂದು ಕೊಂಡಾಡಿದೆ.*
 
_ಕಲ್ಪೋಕ್ತದಲ್ಲಿ ಬರುವ ದುರ್ಗೆಯ ಅನಂತ ಲೀಲೆಗಳನ್ನು ರಮಣೀಯವಾಗಿ ಲಾಲಿತ್ಯದಿಂದ ಪುಟಿದೇಳುವ ವರ್ಣನಾತ್ಮಕ ಶೈಲಿಯಲ್ಲಿ ಕಣ್ತುಂಬಿಕೊಂಡು ಸಂಭ್ರಮಿಸಿದ ನಾವೇ ಪರಮ ಭಾಗ್ಯಶಾಲಿಗಳು. ಗರ್ಭಗೃಹದಲ್ಲಿ ರಾಜಠೀವಿಯಿಂದ ಮೆರೆಯಲ್ಪಡುವ ನಮ್ಮ ಮಂಗಳಮ್ಮನ ಆ ನವದುರ್ಗಾ ಅಲಂಕಾರಗಳ ಅವತರಣಿಕೆಯ ಲೀಲಾ ವಿನೋದಕ್ಕೆ, ಆಕೆಯ ಅಲಂಕಾರದ ಸೊಬಗಿಗೆ ಮತ್ತಾವುದೂ ಎಣೆಯುಂಟೆ !..ಸರಿಸಾಠಿಯುಂಟೆ ?…😁_
 
_ಪ್ರತಿಯೊಂದು ಅಲಂಕಾರವೂ ದೇವಿಯ ಕಲ್ಪೋಕ್ತದ ಅಂತಃಸತ್ವದ ಮಹೋನ್ನತ ದರ್ಶನ ಮಾಡಿಸುತ್ತದೆ. ಮಂಗಳೆಯ ದಯಾರ್ದ್ರ ಅಂತಃಕರಣದ ಮಾತೃ ಹೃದಯದಲ್ಲಿರುವ ಅಗಾಧ ಪ್ರೀತಿಯನ್ನು, ಶಕ್ತಿಯನ್ನು ಬಿಂಬಿಸುತ್ತದೆ._ 
 
_ಏಕಂ ಸತ್ ವಿಪ್ರಾ ಬಹುಧಾ ವದಂತಿ_ ಎಂಬಂತೆ  _ಪರವಸ್ತು ಚಿನ್ಮಾತ್ರ ಸ್ವರೂಪಿ ಅದ್ವಿತೀಯ ಅಂಶರಹಿತ ಶರೀರ ರಹಿತವಾಗಿ ಒಂದೇ ಆಗಿದ್ದರೂ ಉಪಾಸನೆಗೆ ನಾನಾ ರೂಪಗಳನ್ನು ಕಲ್ಪಿಸಲಿರುವಂತೆ ದೇವಿಯ ಕಿರೀಟದಿಂದ ಆರಂಭವಾಗಿ ಪಾದಪರ್ಯಂತವಾದ ವರ್ಣನೆಯಿಂದ ಕೂಡಿದ ಆ ಮಹಾತಾಯಿಯ ಕಲ್ಪೋಕ್ತದ ವಿವಿಧ ಅಲಂಕಾರಗಳನ್ನು ನವರಾತ್ರಿಯಲ್ಲಿ ಕಣ್ತುಂಬಿಕೊಂಡ ನಾವೇ ಪುಣ್ಯವಂತರು. ತಾಯಿಯ ಅಡಿದಾವರೆಗಳಲ್ಲಿ ಒಂದಿನಿತು ಸೇವಾ ಭಾಗ್ಯದೊಂದಿಗೆ ನಮ್ಮ ಜನ್ಮ ಸಾರ್ಥಕವಾಯಿತು._
 
_ಇಂದು ನವರಾತ್ರಿಯ ಅಂತಿಮ ದಿನ ಮಹಾನವಮಿ. ಶ್ರೀ ದೇವಿಯು ಪ್ರಸನ್ನಳಾಗಿ ಏನನ್ನೇ ಪ್ರಾರ್ಥಿಸಿಕೊಂಡರೂ, ನಮ್ಮ ಇಚ್ಛೆ ಸಂಕಲ್ಪಗಳನ್ನು ಶತಸಿದ್ದವಾಗಿ ನೆರವೇರಿಸುತ್ತಾಳೆ. ಮನಸ್ಸಿನ ನಿರಂತರ ಪ್ರಾರ್ಥನೆಯು ನೆರವೇರಿ ವರದಾನ ಲಭಿಸಲಿ. ಮಂಗಳೆಯ ಪೂರ್ಣಾನುಗ್ರಹಕ್ಕೆ ನವರಾತ್ರಿಯು ಕಾರಣವಾಗಲಿ. ಇಂದಿನ ನವಮಿಯ ತನ್ನೆಲ್ಲಾ ಉತ್ಸವಾದಿಗಳನ್ನು ಚಂದದಿಂದ ನಿರ್ವಿಘ್ನವಾಗಿ ನಡೆಸಿಕೊಟ್ಟು ನಾಳಿನ ಅವಳ ವಿಜಯದಶಮಿಯ ದೇವತಾಕಾರ್ಯಗಳಲ್ಲಿ ಪಾಲ್ಗೊಂಡು ಧನ್ಯರಾಗುವ ಭಾಗ್ಯವನ್ನು ದೇವಿಯು ಕರುಣಿಸಲಿ._
 
*ಏಕೈಕ ವಾಹಂ ಜಗತ್ಯತ್ರ ದ್ವಿತೀಯಕ ಮಾಮಾ ಪರಾ* _ಈ ಶ್ಲೋಕವೇ ಹೇಳುವಂತೆ ಜಗತ್ತಿನಲ್ಲಿರುವ ಮಹಾಶಕ್ತಿ ದುರ್ಗೆಯೂಬ್ಬಳೇ. ಈಕೆಗೆ ಸರಿ ಸಮಾನರಾದ ಮಗದೊಂದು ಶಕ್ತಿ ಇಲ್ಲ. ದುರ್ಗೆ ಅನಂತಳು, ಸರ್ವವ್ಯಾಪಕಳು ಹಾಗೂ ಸರ್ವ ಶಕ್ತಿಯ ಪ್ರತೀಕ._ 
 
_’ದೇಹಿ’ ಎಂದು ಪ್ರಾರ್ಥಿಸಿದ ಸದಾ ಕಾಲದಲ್ಲಿ ಆಶ್ರಯಿಸಿ ಇಹ ಪರಗಳಲ್ಲಿ ನಮ್ಮೆಲ್ಲರನ್ನೂ ಸುಖಿಸುವಂತೆ ಮಹಾಮಾಯೆ ಶ್ರೀ ಮಂಗಳಾದೇವಿ ಮಂಗಳವನ್ನುಂಟು ಮಾಡಲಿ._
 
_ಈ ಪವಿತ್ರ ದಿನ ತಾಯಿ ಪೂರ್ಣ ಅನುಗ್ರಹ ಎಲ್ಲರ ಮೇಲಾಗಲಿ. ಸಕಲ ಸಂಕಷ್ಟಗಳು ದೂರವಾಗಲಿ. ಮಹಾನವಮಿಯ ವಾಗೀಶ್ವರಿ ಸ್ವರೂಪಳಾದ ಶ್ರೀ ಮಂಗಳಾದೇವಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ಮಹಾನವಮಿಯ ಹಾರ್ದಿಕ ಶುಭಾಶಯಗಳು._

☫۞🌼Ninth day ઊ»𝙑𝙖𝙜𝙚𝙨𝙝𝙬𝙖𝙧𝙞۞☫

✹✼۞🌼ನವಮಿ ದಿನ ઊ»ವಾಗೀಶ್ವರಿ۞✼✹

 
𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪, 𝘸𝘩𝘰 𝘧𝘶𝘭𝘧𝘪𝘭𝘭𝘦𝘥 𝘢𝘭𝘭 𝘵𝘩𝘦 𝘸𝘪𝘴𝘩𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴, 𝘴𝘩𝘦 𝘣𝘦𝘤𝘢𝘮𝘦 𝘢 𝘱𝘪𝘭𝘭𝘢𝘳 𝘰𝘧 𝘴𝘶𝘱𝘱𝘰𝘳𝘵 𝘧𝘰𝘳 𝘵𝘩𝘦 𝘯𝘦𝘦𝘥𝘺, 𝘵𝘩𝘦 𝘰𝘯𝘦 𝘸𝘩𝘰 𝘴𝘢𝘧𝘦𝘨𝘶𝘢𝘳𝘥𝘦𝘥 𝘵𝘩𝘦 𝘱𝘰𝘰𝘳 𝘢𝘯𝘥 𝘩𝘶𝘮𝘣𝘭𝘦 𝘰𝘯𝘦𝘴, 𝘴𝘩𝘰𝘸𝘦𝘥 𝘭𝘰𝘷𝘦 𝘢𝘯𝘥 𝘢𝘧𝘧𝘦𝘤𝘵𝘪𝘰𝘯 𝘧𝘰𝘳 𝘩𝘦𝘳 𝘣𝘦𝘭𝘰𝘷𝘦𝘥 𝘥𝘦𝘷𝘰𝘵𝘦𝘦𝘴 𝘪𝘴 𝘩𝘢𝘱𝘱𝘪𝘭𝘺 𝘤𝘩𝘦𝘳𝘪𝘴𝘩𝘪𝘯𝘨 𝘵𝘩𝘦 𝘨𝘳𝘢𝘯𝘥𝘦𝘶𝘳 𝘪𝘯 𝘸𝘩𝘪𝘤𝘩 𝘴𝘩𝘦 𝘪𝘴 𝘣𝘦𝘪𝘯𝘨 𝘱𝘳𝘢𝘪𝘴𝘦𝘥 𝘰𝘯 𝘵𝘩𝘦 𝘰𝘤𝘤𝘢𝘴𝘪𝘰𝘯 𝘰𝘧 𝘚𝘩𝘢𝘳𝘢𝘯 𝘕𝘢𝘷𝘢𝘳𝘢𝘵𝘳𝘪.
 
𝘈𝘴 𝘱𝘦𝘳 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘵𝘦𝘹𝘵, 𝘧𝘰𝘳 𝘵𝘩𝘦 𝘭𝘢𝘴𝘵 𝘦𝘪𝘨𝘩𝘵 𝘥𝘢𝘺𝘴, 𝘚𝘩𝘦 𝘩𝘢𝘥 𝘢𝘥𝘰𝘳𝘯𝘦𝘥 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘧𝘰𝘳𝘮𝘴 𝘰𝘧 𝘨𝘰𝘥𝘥𝘦𝘴𝘴 𝘋𝘶𝘳𝘨𝘢. 𝘛𝘰𝘥𝘢𝘺, 𝘰𝘯 𝘵𝘩𝘦 𝘰𝘤𝘤𝘢𝘴𝘪𝘰𝘯 𝘰𝘧 𝘔𝘢𝘩𝘢 𝘕𝘢𝘷𝘢𝘮𝘪, 𝘴𝘩𝘦 𝘩𝘢𝘴 𝘵𝘢𝘬𝘦𝘯 𝘵𝘩𝘦 𝘧𝘰𝘳𝘮 𝘰𝘧 𝘝𝘢𝘨𝘦𝘦𝘴𝘩𝘸𝘢𝘳𝘪, 𝘵𝘩𝘦 𝘰𝘯𝘦 𝘣𝘦𝘩𝘰𝘭𝘥𝘴 𝘵𝘩𝘦 𝘬𝘯𝘰𝘸𝘭𝘦𝘥𝘨𝘦 𝘰𝘧 𝘴𝘱𝘦𝘦𝘤𝘩.
 
𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪, 𝘵𝘢𝘬𝘪𝘯𝘨 𝘵𝘩𝘦 𝘧𝘰𝘳𝘮 𝘰𝘧 𝘝𝘢𝘨𝘦𝘦𝘴𝘩𝘸𝘢𝘳𝘪, 𝘤𝘢𝘯 𝘣𝘦 𝘴𝘦𝘦𝘯 𝘸𝘦𝘢𝘳𝘪𝘯𝘨 𝘢 𝘳𝘰𝘴𝘦 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘢𝘯𝘥 𝘸𝘦𝘢𝘳𝘪𝘯𝘨 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘬𝘪𝘯𝘥𝘴 𝘰𝘧 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘢𝘱𝘵 𝘵𝘰 𝘩𝘦𝘳 𝘴𝘢𝘳𝘦𝘦 𝘸𝘰𝘳𝘯 𝘣𝘺 𝘩𝘦𝘳. 𝘏𝘰𝘭𝘥𝘪𝘯𝘨 𝘩𝘦𝘳 𝘭𝘰𝘸𝘦𝘳 𝘩𝘢𝘯𝘥𝘴 𝘪𝘯 𝘢𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢, 𝘴𝘺𝘮𝘣𝘰𝘭𝘪𝘴𝘪𝘯𝘨 𝘩𝘦𝘳 𝘥𝘦𝘷𝘰𝘵𝘦𝘦𝘴, 𝘯𝘰𝘵 𝘵𝘰 𝘣𝘦 𝘴𝘤𝘢𝘳𝘦𝘥 𝘰𝘧 𝘢𝘯𝘺𝘵𝘩𝘪𝘯𝘨, 𝘸𝘩𝘪𝘭𝘦 𝘴𝘩𝘦 𝘪𝘴 𝘩𝘦𝘳𝘦 𝘵𝘰 𝘴𝘢𝘧𝘦𝘨𝘶𝘢𝘳𝘥 𝘵𝘩𝘦𝘮 𝘧𝘳𝘰𝘮 𝘢𝘭𝘭 𝘬𝘪𝘯𝘥𝘴 𝘰𝘧 𝘥𝘪𝘧𝘧𝘪𝘤𝘶𝘭𝘵𝘪𝘦𝘴 𝘢𝘯𝘥 𝘢𝘭𝘴𝘰 𝘣𝘭𝘦𝘴𝘴 𝘵𝘩𝘦𝘮 𝘸𝘪𝘵𝘩 𝘢𝘭𝘭 𝘵𝘩𝘦𝘪𝘳 𝘳𝘪𝘨𝘩𝘵𝘧𝘶𝘭 𝘥𝘦𝘴𝘪𝘳𝘦𝘴 𝘢𝘯𝘥 𝘸𝘪𝘴𝘩𝘦𝘴. 𝘙𝘪𝘥𝘪𝘯𝘨 𝘰𝘯 𝘢 𝘭𝘪𝘰𝘯 𝘢𝘯𝘥 𝘤𝘢𝘳𝘳𝘺𝘪𝘯𝘨 𝘢 𝘤𝘩𝘢𝘬𝘳𝘢 𝘪𝘯 𝘩𝘦𝘳 𝘶𝘱𝘱𝘦𝘳 𝘳𝘪𝘨𝘩𝘵 𝘩𝘢𝘯𝘥, 𝘢𝘯𝘥 𝘢𝘯 𝘢𝘹𝘦 𝘰𝘯 𝘵𝘩𝘦 𝘰𝘵𝘩𝘦𝘳, 𝘩𝘦𝘳 𝘳𝘰𝘺𝘢𝘭 𝘦𝘯𝘰𝘳𝘮𝘰𝘶𝘴 𝘣𝘦𝘢𝘶𝘵𝘺 𝘤𝘢𝘯𝘯𝘰𝘵 𝘣𝘦 𝘱𝘦𝘯𝘯𝘦𝘥 𝘥𝘰𝘸𝘯 𝘪𝘯 𝘸𝘰𝘳𝘥𝘴.💯
 
𝙂𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞, 𝙝𝙖𝙙 𝙩𝙖𝙠𝙚𝙣 𝙛𝙤𝙧𝙢𝙨 𝙧𝙚𝙥𝙧𝙚𝙨𝙚𝙣𝙩𝙞𝙣𝙜 𝙩𝙝𝙚 𝙩𝙝𝙧𝙚𝙚 𝙙𝙞𝙛𝙛𝙚𝙧𝙚𝙣𝙩 𝙢𝙤𝙙𝙚𝙨 𝙤𝙛 𝙚𝙭𝙞𝙨𝙩𝙚𝙣𝙘𝙚 𝙣𝙖𝙢𝙚𝙡𝙮, 𝙨𝙖𝙩𝙩𝙫𝙖, 𝙍𝙖𝙟𝙖𝙨 𝙖𝙣𝙙 𝙩𝙖𝙢𝙖𝙨. 𝙑𝙖𝙜𝙚𝙚𝙨𝙝𝙬𝙖𝙧𝙞 𝙙𝙚𝙫𝙞 𝙗𝙚𝙞𝙣𝙜 𝙧𝙖𝙟𝙖𝙨𝙞𝙘 𝙞𝙣 𝙣𝙖𝙩𝙪𝙧𝙚 𝙞𝙨 𝙗𝙚𝙞𝙣𝙜 𝙬𝙤𝙧𝙨𝙝𝙞𝙥𝙥𝙚𝙙 𝙩𝙤𝙙𝙖𝙮. 𝘼𝙣𝙤𝙩𝙝𝙚𝙧 𝙛𝙤𝙧𝙢 𝙤𝙛 𝙜𝙤𝙙𝙙𝙚𝙨𝙨 𝙎𝙖𝙧𝙖𝙨𝙬𝙖𝙩𝙞 𝙞𝙨 𝙑𝙖𝙜𝙚𝙚𝙨𝙝𝙬𝙖𝙧𝙞. 𝙎𝙝𝙚 𝙞𝙨 𝙩𝙝𝙚 𝙤𝙣𝙚 𝙬𝙝𝙤 𝙗𝙚𝙝𝙤𝙡𝙙𝙨 𝙩𝙝𝙚 𝙠𝙣𝙤𝙬𝙡𝙚𝙙𝙜𝙚 𝙤𝙛 𝙨𝙥𝙚𝙚𝙘𝙝 𝙖𝙣𝙙 𝙞𝙣𝙩𝙚𝙡𝙡𝙞𝙜𝙚𝙣𝙘𝙚. 𝙑𝙖𝙧𝙞𝙤𝙪𝙨 𝙙𝙞𝙛𝙛𝙚𝙧𝙚𝙣𝙩 𝙛𝙤𝙧𝙢𝙨 𝙤𝙛 𝙖𝙧𝙩 𝙡𝙞𝙠𝙚 𝙢𝙪𝙨𝙞𝙘, 𝙙𝙖𝙣𝙘𝙚, 𝙨𝙠𝙚𝙩𝙘𝙝𝙞𝙣𝙜, 𝙥𝙖𝙞𝙣𝙩𝙞𝙣𝙜, 𝙨𝙘𝙞𝙚𝙣𝙘𝙚 𝙚𝙩𝙘 𝙖𝙧𝙚 𝙚𝙫𝙤𝙡𝙫𝙚𝙙 𝙗𝙮 𝙩𝙝𝙚 𝙢𝙚𝙧𝙘𝙮 𝙤𝙛 𝙑𝙖𝙜𝙚𝙚𝙨𝙝𝙬𝙖𝙧𝙞 𝘿𝙚𝙫𝙞. 𝙒𝙞𝙩𝙝 𝙩𝙝𝙚 𝙗𝙡𝙚𝙨𝙨𝙞𝙣𝙜𝙨 𝙤𝙛 𝙝𝙚𝙧, 𝙬𝙚 𝙨𝙝𝙖𝙡𝙡 𝙚𝙭𝙘𝙚𝙡 𝙞𝙣 𝙖𝙣𝙮 𝙤𝙛 𝙩𝙝𝙚𝙨𝙚 𝙖𝙧𝙩 𝙛𝙤𝙧𝙢𝙨 𝙖𝙣𝙙 𝙖𝙡𝙨𝙤 𝙗𝙚 𝙖𝙣 𝙚𝙭𝙥𝙚𝙧𝙩 𝙞𝙣 𝙩𝙝𝙚 𝙨𝙠𝙞𝙡𝙡 𝙤𝙛 𝙘𝙤𝙢𝙢𝙪𝙣𝙞𝙘𝙖𝙩𝙞𝙤𝙣.
 
As told in the Vedas, ‘𝐄𝐤𝐚𝐦 𝐬𝐚𝐭 𝐯𝐢𝐩𝐫𝐚 𝐛𝐚𝐡𝐮𝐝𝐡𝐚𝐚 𝐯𝐚𝐝𝐚𝐧𝐭𝐡𝐢’ meaning the same object is being personified in various different forms by the learned people. People use different names and forms while explaining the form of the truth. As described in the Vedas, Mangaladevi was decorated in various different forms of the goddess Shakthi and it is a bliss  to be able to have a glimpse of our beloved Mangalamma in these different forms. We are all blessed to be able to do seva to the feet of goddess Mangaladevi on this auspicious occasion of Navratri.
 
𝙸𝚗 𝚘𝚞𝚛 𝚊𝚗𝚌𝚒𝚎𝚗𝚝 𝚝𝚒𝚖𝚎𝚜, 𝚜𝚙𝚎𝚎𝚌𝚑 𝚠𝚊𝚜 𝚐𝚒𝚟𝚎𝚗 𝚖𝚘𝚛𝚎 𝚒𝚖𝚙𝚘𝚛𝚝𝚊𝚗𝚌𝚎, 𝚒𝚝 𝚠𝚊𝚜 𝚌𝚘𝚗𝚜𝚒𝚍𝚎𝚛𝚎𝚍 𝚊𝚜 𝚊𝚗 𝚘𝚛𝚗𝚊𝚖𝚎𝚗𝚝 𝚘𝚏 𝚊 𝚙𝚎𝚛𝚜𝚘𝚗( 𝑽𝒂𝒌 𝑩𝒉𝒖𝒔𝒉𝒂𝒏𝒂𝒎).𝙸𝚗 𝚜𝚌𝚛𝚒𝚙𝚝𝚞𝚛𝚎𝚜 𝚕𝚒𝚔𝚎 𝚁𝚊𝚖𝚊𝚢𝚊𝚗𝚊, 𝚠𝚎 𝚌𝚊𝚗 𝚜𝚎𝚎 𝚒𝚖𝚙𝚘𝚛𝚝𝚊𝚗𝚌𝚎 𝚐𝚒𝚟𝚎𝚗 𝚝𝚘 𝚜𝚙𝚎𝚎𝚌𝚑, 𝙸𝚝 𝚠𝚊𝚜 𝚟𝚊𝚔 𝙳𝚎𝚟𝚒 𝚠𝚑𝚘 𝚠𝚊𝚜 𝚛𝚎𝚜𝚙𝚘𝚗𝚜𝚒𝚋𝚕𝚎 𝚏𝚘𝚛 𝚝𝚑𝚎 𝚋𝚘𝚘𝚗 𝚊𝚜𝚔𝚎𝚍 𝚋𝚢 𝚔𝚞𝚖𝚋𝚊𝚔𝚊𝚛𝚗𝚊. 𝙷𝚊𝚗𝚞𝚖𝚊𝚗, 𝚊𝚗 𝚊𝚛𝚍𝚎𝚗𝚝 𝚍𝚎𝚟𝚘𝚝𝚎𝚎 𝚘𝚏 𝚁𝚊𝚖𝚊 𝚠𝚊𝚜 𝚌𝚘𝚗𝚜𝚒𝚍𝚎𝚛𝚎𝚍 𝚑𝚒𝚐𝚑 𝚏𝚘𝚛 𝚑𝚒𝚜 𝚜𝚙𝚎𝚊𝚔𝚒𝚗𝚐 𝚜𝚔𝚒𝚕𝚕𝚜(𝑽𝒂𝒌 𝒄𝒉𝒂𝒕𝒉𝒖𝒓𝒕𝒉𝒚𝒂 ). 𝙾𝚗 𝚝𝚑𝚒𝚜 𝚘𝚌𝚌𝚊𝚜𝚒𝚘𝚗 𝚘𝚏 𝙼𝚊𝚑𝚊𝚗𝚊𝚟𝚊𝚖𝚒, 𝙶𝚘𝚍𝚍𝚎𝚜𝚜 𝙼𝚊𝚗𝚐𝚊𝚕𝚊𝚖𝚋𝚊 𝚒𝚜 𝚛𝚎𝚊𝚍𝚢 𝚝𝚘 𝚋𝚕𝚎𝚜𝚜 𝚑𝚎𝚛 𝚍𝚎𝚟𝚘𝚝𝚎𝚎𝚜 𝚠𝚒𝚝𝚑 𝚅𝚊𝚔 𝚌𝚑𝚊𝚝𝚑𝚞𝚛𝚝𝚑𝚢𝚊(𝑽𝒂𝒌 𝒄𝒉𝒂𝒕𝒉𝒖𝒓𝒕𝒉𝒚𝒂), 𝚠𝚒𝚝𝚑 𝚐𝚘𝚘𝚍 𝚔𝚗𝚘𝚠𝚕𝚎𝚍𝚐𝚎 𝚊𝚗𝚍 𝚗𝚎𝚎𝚍𝚎𝚍 𝚜𝚔𝚒𝚕𝚕𝚜 𝚒𝚗 𝚍𝚒𝚏𝚏𝚎𝚛𝚎𝚗𝚝 𝚊𝚛𝚝 𝚏𝚘𝚛𝚖𝚜, 𝚊𝚜 𝚜𝚑𝚎 𝚒𝚜 𝚝𝚑𝚎 𝚖𝚘𝚝𝚑𝚎𝚛 𝚘𝚏 𝚊𝚕𝚕 𝚝𝚑𝚎𝚜𝚎.
 
𝐑𝐞𝐦𝐞𝐦𝐛𝐞𝐫 𝐡𝐞𝐫 𝐢𝐧 𝐲𝐨𝐮𝐫 𝐦𝐨𝐦𝐞𝐧𝐭𝐬 𝐨𝐟 𝐬𝐭𝐫𝐮𝐠𝐠𝐥𝐞 𝐚𝐬 𝐰𝐞𝐥𝐥 𝐚𝐬 𝐢𝐧 𝐭𝐡𝐨𝐬𝐞 𝐨𝐟 𝐡𝐚𝐩𝐩𝐢𝐧𝐞𝐬𝐬. 𝐒𝐡𝐞 𝐰𝐢𝐥𝐥 𝐛𝐞 𝐲𝐨𝐮𝐫 𝐠𝐮𝐢𝐝𝐞. 𝑾𝒊𝒔𝒉𝒊𝒏𝒈 𝒆𝒗𝒆𝒓𝒚𝒐𝒏𝒆 𝒂 𝒑𝒊𝒐𝒖𝒔 𝒂𝒏𝒅 𝒔𝒑𝒊𝒓𝒊𝒕𝒖𝒂𝒍𝒍𝒚 𝒖𝒑𝒍𝒊𝒇𝒊𝒕𝒊𝒏𝒈 𝑵𝒂𝒗𝒂𝒓𝒂𝒕𝒓𝒊 𝒃𝒚 𝒕𝒉𝒆 𝒈𝒓𝒂𝒄𝒆 𝒐𝒇 𝑴𝒂𝒉𝒂 𝑫𝒆𝒗𝒊.
 
✨𝐎𝐧 𝐭𝐡𝐞 𝐚𝐮𝐬𝐩𝐢𝐜𝐢𝐨𝐮𝐬 𝐨𝐜𝐜𝐚𝐬𝐢𝐨𝐧 𝐨𝐟 𝐒𝐡𝐚𝐫𝐚𝐧𝐚𝐯𝐚𝐫𝐚𝐭𝐫𝐢 𝐨𝐧 𝐭𝐡𝐞 𝐝𝐚𝐲 𝐨𝐟 𝐌𝐚𝐡𝐚𝐧𝐚𝐯𝐚𝐦𝐢 𝐭𝐡𝐞 𝐓𝐞𝐦𝐩𝐥𝐞 𝐏𝐢𝐨𝐮𝐬 𝐁𝐫𝐚𝐡𝐦𝐢𝐧 𝐰𝐨𝐦𝐞𝐧 𝐨𝐫𝐠𝐚𝐧𝐢𝐬𝐞𝐝 𝐭𝐡𝐞 𝐍𝐚𝐯𝐚 𝐃𝐮𝐫𝐠𝐚 𝐀𝐫𝐚𝐝𝐡𝐚𝐧𝐚 𝐭𝐨𝐝𝐚𝐲.✨👏
 
✨ ಮಂಗಳಾದೇವಿ ಶರನ್ನವರಾತ್ರಿಯ ಪರ್ವಕಾಲದಲ್ಲಿ ವರ್ಷಕ್ಕೆ ಒಂದುಬಾರಿ ಮಹಾನವಮಿಯ ಇಂದಿನ ಪುಣ್ಯ ದಿನದಂದು ಶ್ರೀ ದೇವಿಯ ಸನ್ನಿಧಾನದಲ್ಲಿ ಬ್ರಾಹ್ಮಣ ಸುವಾಸಿನಿಯರ ನವದುರ್ಗಾ ಆರಾಧನೆ.🌹✨👏
 
𝘖𝘯 𝘵𝘩𝘦 𝘰𝘤𝘤𝘢𝘴𝘴𝘪𝘰𝘯 𝘰𝘧 𝘚𝘩𝘢𝘳𝘢𝘥 𝘕𝘢𝘷𝘳𝘢𝘵𝘳𝘪, 𝘰𝘯𝘭𝘺 𝘰𝘯𝘤𝘦 𝘪𝘯 𝘢 𝘺𝘦𝘢𝘳 𝘰𝘯 𝘵𝘩𝘦 𝘔𝘢𝘩𝘢𝘯𝘢𝘷𝘢𝘮𝘪 𝘥𝘢𝘺 (𝘕𝘪𝘯𝘦𝘵𝘩 𝘥𝘢𝘺 𝘰𝘧 𝘕𝘢𝘷𝘢𝘳𝘢𝘵𝘳𝘪) , 𝘪𝘯 𝘵𝘩𝘦 𝘱𝘳𝘦𝘴𝘦𝘯𝘤𝘦 𝘰𝘧 𝘰𝘶𝘳 𝘣𝘦𝘭𝘰𝘷𝘦𝘥 𝘎𝘰𝘥𝘥𝘦𝘴𝘴, 𝘕𝘢𝘷𝘢𝘥𝘶𝘳𝘨𝘢 𝘱𝘰𝘰𝘫𝘢 𝘣𝘦𝘪𝘯𝘨 𝘱𝘦𝘳𝘧𝘰𝘳𝘮𝘦𝘥 𝘣𝘺 𝘵𝘩𝘦 𝘓𝘢𝘥𝘪𝘦𝘴 𝘣𝘦𝘭𝘰𝘯𝘨𝘪𝘯𝘨 𝘵𝘰 𝘵𝘩𝘦 𝘱𝘳𝘪𝘦𝘴𝘵𝘴 𝘧𝘢𝘮𝘪𝘭𝘺.
𝐓𝐨𝐝𝐚𝐲 𝐨𝐧 𝐭𝐡𝐞 𝐨𝐜𝐜𝐚𝐬𝐢𝐨𝐧 𝐨𝐟 𝐌𝐚𝐡𝐚𝐍𝐚𝐯𝐚𝐦𝐢 𝐝𝐮𝐫𝐢𝐧𝐠 𝐭𝐡𝐞 𝐒𝐡𝐚𝐫𝐚𝐧 𝐍𝐚𝐯𝐚𝐫𝐚𝐭𝐫𝐢 𝐦𝐚𝐡𝐨𝐭𝐬𝐚𝐯, 𝐌𝐚𝐡𝐚 𝐑𝐚𝐧𝐠𝐚 𝐏𝐮𝐣𝐚 𝐚𝐥𝐨𝐧𝐠 𝐰𝐢𝐭𝐡 𝐃𝐞𝐞𝐩𝐚𝐫𝐚𝐧𝐝𝐚𝐧 𝐰𝐢𝐥𝐥 𝐛𝐞 𝐩𝐞𝐫𝐟𝐨𝐫𝐦𝐞𝐝 𝐚𝐭 𝐧𝐢𝐠𝐡𝐭 𝐚𝐬 𝐩𝐞𝐫 𝐞𝐯𝐞𝐫𝐲 𝐲𝐞𝐚𝐫 𝐢𝐧 𝐒𝐫𝐢 𝐊𝐬𝐡𝐞𝐭𝐫𝐚 𝐌𝐚𝐧𝐠𝐚𝐥𝐚𝐝𝐞𝐯𝐢.
 
𝖶𝗂𝗍𝗁 𝗍𝗁𝖾 𝖻𝗅𝖾𝗌𝗌𝗂𝗇𝗀𝗌 𝖺𝗇𝖽 𝗂𝗇 𝗍𝗁𝖾 𝗉𝗋𝖾𝗌𝖾𝗇𝖼𝖾 𝗈𝖿 𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂, 𝗈𝗇 𝗍𝗁𝖾 𝗈𝖼𝖼𝖺𝗌𝗌𝗂𝗈𝗇 𝗈𝖿 𝖲𝗁𝗋𝖺𝗇 𝗇𝖺𝗏𝖺𝗋𝖺𝗍𝗋𝗂 𝗂𝗇 𝗍𝗁𝖾 𝗆𝗈𝗇𝗍𝗁 𝗈𝖿 𝖺𝗌𝗁𝗐𝖺𝗒𝗎𝗃𝖺, 𝖽𝗎𝗋𝗂𝗇𝗀 𝗍𝗁𝖾 𝗐𝖺𝗑𝗂𝗇𝗀 𝗉𝗁𝖺𝗌𝖾 𝗈𝖿 𝗍𝗁𝖾 𝗆𝗈𝗈𝗇 𝖼𝖺𝗅𝗅𝖾𝖽 𝖲𝗁𝗎𝗄𝗅𝖺 𝗉𝖺𝗄𝗌𝗁𝖺 𝖺𝗇𝖽 𝗈𝗇 𝗍𝗁𝖾 𝖽𝖺𝗒 𝗈𝖿 𝖬𝖺𝗁𝖺𝗇𝖺𝗏𝖺𝗆𝗂 (𝗈𝗇 𝗍𝗁𝖾 9𝗍𝗁 𝖽𝖺𝗒 𝗈𝖿 𝖭𝖺𝗏𝖺𝗋𝖺𝗍𝗋𝗂), 𝗍𝗈𝖽𝖺𝗒, 𝖬𝖺𝗁𝖺𝗋𝖺𝗇𝗀𝖺 𝗉𝗈𝗈𝗃𝖺 𝗐𝖺𝗌 𝗉𝖾𝗋𝖿𝗈𝗋𝗆𝖾𝖽 𝗍𝗈 𝗀𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂.👏
 
𝘖𝘯 𝘵𝘩𝘪𝘴 𝘢𝘶𝘴𝘱𝘪𝘤𝘪𝘰𝘶𝘴 𝘥𝘢𝘺 𝘰𝘧 𝘔𝘢𝘩𝘢 𝘕𝘢𝘷𝘢𝘮𝘪, 𝘮𝘢𝘺 𝘵𝘩𝘦 𝘱𝘦𝘳𝘧𝘦𝘤𝘵 𝘨𝘳𝘢𝘤𝘦 𝘰𝘧 𝘔𝘢𝘩𝘢𝘥𝘦𝘷𝘪 𝘣𝘦 𝘶𝘱𝘰𝘯 𝘶𝘴,
𝘮𝘢𝘺 𝘢𝘭𝘭 𝘰𝘶𝘳 𝘵𝘳𝘰𝘶𝘣𝘭𝘦𝘴 𝘣𝘦 𝘳𝘦𝘮𝘰𝘷𝘦𝘥 𝘣𝘺 𝘩𝘦𝘳 𝘎𝘳𝘢𝘤𝘦. 𝘉𝘰𝘸𝘪𝘯𝘨 𝘰𝘶𝘳 𝘩𝘦𝘢𝘥𝘴 𝘢𝘯𝘥 𝘱𝘳𝘢𝘺𝘪𝘯𝘨 𝘵𝘰 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘵𝘰 𝘣𝘭𝘦𝘴𝘴 𝘢𝘯𝘥 𝘣𝘳𝘪𝘯𝘨 𝘢 𝘧𝘳𝘶𝘪𝘵𝘧𝘶𝘭 𝘺𝘦𝘢𝘳 𝘵𝘰 𝘢𝘭𝘭, 𝘸𝘪𝘴𝘩𝘪𝘯𝘨 𝘦𝘷𝘦𝘳𝘺𝘰𝘯𝘦 𝘢 𝘷𝘦𝘳𝘺 𝘩𝘢𝘱𝘱𝘺 𝘔𝘢𝘩𝘢𝘯𝘢𝘷𝘢𝘮𝘪.
 
𝘏𝘢𝘷𝘪𝘯𝘨 𝘤𝘰𝘮𝘱𝘭𝘦𝘵𝘦 𝘧𝘢𝘪𝘵𝘩 𝘪𝘯 𝘵𝘩𝘦 𝘎𝘰𝘥𝘥𝘦𝘴𝘴 𝘵𝘩𝘢𝘵 𝘵𝘩𝘦 𝘳𝘦𝘴𝘱𝘰𝘯𝘴𝘪𝘣𝘪𝘭𝘪𝘵𝘺 𝘰𝘧 𝘱𝘳𝘰𝘵𝘦𝘤𝘵𝘪𝘯𝘨 𝘶𝘴 𝘢𝘭𝘭 𝘭𝘪𝘦𝘴 𝘪𝘯 𝘩𝘦𝘳 𝘩𝘢𝘯𝘥𝘴. 𝘎𝘰𝘥𝘥𝘦𝘴𝘴 𝘸𝘩𝘰 𝘪𝘴 𝘢𝘭𝘴𝘰 𝘵𝘩𝘦 𝘭𝘰𝘳𝘥 𝘰𝘧 𝘵𝘩𝘪𝘴 𝘸𝘩𝘰𝘭𝘦 𝘶𝘯𝘪𝘷𝘦𝘳𝘴𝘦. 𝘓𝘦𝘵’𝘴 𝘥𝘦𝘥𝘪𝘤𝘢𝘵𝘦 𝘵𝘩𝘦 𝘙𝘢𝘯𝘨𝘢 𝘗𝘶𝘫𝘢 𝘢𝘯𝘥 𝘵𝘩𝘦 𝘋𝘪𝘱𝘢𝘳𝘢𝘥𝘩𝘢𝘯 𝘰𝘧 𝘔𝘢𝘩𝘢𝘯𝘢𝘷𝘢𝘮𝘪 𝘵𝘰 𝘩𝘦𝘳 𝘧𝘳𝘰𝘮 𝘵𝘩𝘦 𝘣𝘰𝘵𝘵𝘰𝘮 𝘰𝘧 𝘰𝘶𝘳 𝘩𝘦𝘢𝘳𝘵.🤩✨